ಪುದೀನ ಸೊಪ್ಪಿನ ಚಟ್ನಿ ಸೇವಿಸಿದರೆ-ಆರೋಗ್ಯಕ್ಕೆ ದುಪ್ಪಟ್ಟು ಲಾಭ

By Manu
Subscribe to Boldsky

ಸಮೋಸಾದ ಸ್ವಾದ ಅನುಭವಿಸಲು ಕೊಂಚ ಪುದೀನ ಮತ್ತು ಹುಣಸೆ ಹುಳಿಯ ಚಟ್ನಿ ಅಗತ್ಯ. ವಾಸ್ತವವಾಗಿ ಸಮೋಸಾಕ್ಕಿಂತಲೂ ಪುದೀನ ಚಟ್ನಿಯೇ ಹೆಚ್ಚು ಆರೋಗ್ಯಕರ. ಪುದೀನ ಚಟ್ನಿಯನ್ನು ತಯಾರಿಸಲು ಪುದೀನ ಎಲೆಗಳನ್ನು ಕಾಯಿತುರಿ, ಹಸಿಮೆಣಸು ಉಪ್ಪು ಸೇರಿಸಿ ದೊರಗಾಗಿ ಇರುವಂತೆ ರುಬ್ಬಿದರೆ ಸಾಕು. ಪುದೀನ ಚಟ್ನಿಪುಡಿ ತಿನ್ನಲು ಇಂದೇ ಸುದಿನ!

ಕೆಲವೇ ನಿಮಿಷಗಳಲ್ಲಿ ತಯಾರಾಗುತ್ತದೆ. ಈ ಚಟ್ನಿ ಭಾರತೀಯ ಅಡುಗೆಗಳಲ್ಲಿ ಸಾವಿರಾರು ವರ್ಷಗಳಿಂದ ಬಳಸಲ್ಪಡುತ್ತಾ ಬರಲಾಗಿದೆ. ಇದರ ಆರೋಗ್ಯಕರ ಗುಣವನ್ನು ಕಂಡುಕೊಂಡ ಔಷಧಿ ನಿರ್ಮಾತೃದಾರರು ಇಂದು ಪುದೀನದ ಔಷಧೀಯ ಅಂಶಗಳನ್ನು ಬೇರ್ಪಡಿಸಿ ಇದರಿಂದ ಸೌಂದರ್ಯವರ್ಧಕ ಪ್ರಸಾಧನಗಳು, ಸ್ವಚ್ಛತಾ ಸಾಮಾಗ್ರಿಗಳು, ಹಲ್ಲುಜ್ಜುವ ಪೇಸ್ಟ್, ಚ್ಯೂಯಿಂಗ್ ಗಮ್, ಎಣ್ಣೆ ಮೊದಲಾದ ಉತ್ಪನ್ನಗಳನ್ನು ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿವೆ. ಬಿಸಿಲಿನ ದಾಹಕ್ಕೆ-ತಂಪು ತಂಪು ಪುದೀನಾ ಮಸಾಲ ಮಜ್ಜಿಗೆ 

ಇಂದಿಗೂ ನಮ್ಮೆಲ್ಲರ ಮನೆಗಳಲ್ಲಿ ಹಿರಿಯರಿಂದ ಬಳುವಳಿಯಾಗಿ ಬಂದಿರುವ ಈ ಪುದೀನಾ ಚಟ್ನಿ ನಮ್ಮ ಉಪಾಹಾರ, ತಿಂಡಿಗಳನ್ನು ರುಚಿಕರವಾಸುತ್ತಿದೆ ಮಾತ್ರವಲ್ಲ, ಆರೋಗ್ಯವನ್ನೂ ಹೆಚ್ಚಿಸುತ್ತಿದೆ. ಬನ್ನಿ, ಈ ಚಟ್ನಿಯ ಸೇವನೆಯಿಂದ ಯಾವ ರೀತಿಯ ಪ್ರಯೋಜನಗಳಿವೆ ಎಂಬುದನ್ನು ನೋಡೋಣ.....

ಪ್ರಯೋಜನ #1

ಪ್ರಯೋಜನ #1

ಭಾರತೀಯರು ತಮ್ಮ ನೆಚ್ಚಿನ ತಿಂಡಿಗಳನ್ನು ಪುದೀನಾ ಚಟ್ನಿಯೊಂದಿಗೆ ಸೇವಿಸುವ ಪ್ರಮುಖ ಕಾರಣವೆಂದರೆ ಜೀರ್ಣಶಕ್ತಿಗೆ ನೆರವಾಗುವ ಗುಣ. ಪುದೀನ ಎಲೆಗಳನ್ನು ಸೇವಿಸುವ ಮೂಲಕ ಜೀರ್ಣಶಕ್ತಿ ಉತ್ತಮಗೊಳ್ಳುವುದು ಮಾತ್ರವಲ್ಲ, ಉರಿಯೂತ ಕಡಿಮೆಯಾಗುತ್ತದೆ ಮತ್ತು ಹೊಟ್ಟೆಯಲ್ಲಿ ಆಮ್ಲೀಯತೆಯನ್ನು ಕಡಿಮೆಗೊಳಿಸುತ್ತದೆ. ಅಲ್ಲದೇ ವಾಕರಿಕೆಯನ್ನೂ ಗುಣಪಡಿಸುತ್ತದೆ. ಅಲ್ಲದೆ ಪುದೀನಾ ಎಲೆಗಳ ಸೇವನೆಯಿಂದ ಹಸಿವು ಕೂಡ ಹೆಚ್ಚುತ್ತದೆ. ಸಮೋಸಾ, ಪಕೋಡಾ ಮೊದಲಾದವು ಎಣ್ಣೆಯಲ್ಲಿ ಹುರಿದಿರುವ ತಿಂಡಿಗಳಾಗಿದ್ದು ಆರೋಗ್ಯಕ್ಕೆ ಕೊಂಚ ಆಪಾಯಕರವೇ ಆಗಿವೆ.ಆದರೆ ಇವುಗಳ ರುಚಿಯನ್ನು ಬಿಡಲಾಗದೇ ಸೇವಿಸುವ ಮೂಲಕ ಎದುರಾಗುವ ದುಷ್ಪರಿಣಾಮಗಳನ್ನು ಪುದಿನಾ ಚಟ್ನಿಯನ್ನು ತಿನ್ನುವ ಮೂಲಕ ಸಮತೋಲನಗೊಳಿಸಬಹುದು.

ಪ್ರಯೋಜನ #2

ಪ್ರಯೋಜನ #2

ಪುದೀನ ಎಲೆಗಳನ್ನು ಜಜ್ಜಿದರೆ ನವಿರಾದ ಸುವಾಸನೆ ಬೀರುತ್ತದೆ. ಈ ಪರಿಮಳವನ್ನು ಸುಮ್ಮನೆ ಆಘ್ರಾಣಿಸಿದರೂ ಸಾಕು ಇದು ನಮ್ಮ ನರವ್ಯಸಸ್ಥೆಯನ್ನು ಸುಗಮಗೊಳಿಸುತ್ತದೆ. ಇದೇ ಕಾರಣಕ್ಕೆ ಪುದೀನ ಎಣ್ಣೆಯನ್ನು ತಲೆನೋವಿನ ಉಪಶಮನಕ್ಕಾಗಿ ಬಳಸಲಾಗುತ್ತದೆ. ಈ ಎಲೆಗಳ ವಾಸನೆ ಮೂಗು ಕಟ್ಟಿಕೊಂಡಿರುವುದನ್ನು ತೆರೆದು ಕಫವನ್ನು ಸಡಿಲಗೊಳಿಸಿ ನಿವಾರಿಸಲು ನೆರವಾಗುತ್ತದೆ. ಇದರಿಂದ ಗಂಟಲು, ಶ್ವಾಸನಾಳ ಮತ್ತು ಶ್ವಾಸಕೋಶಗಳು ಕಟ್ಟಿಕೊಂಡಿದ್ದುದು ತೆರೆದು ಉಸಿರಾಟ ನಿರಾಳವಾಗುತ್ತದೆ.

ಪ್ರಯೋಜನ #3

ಪ್ರಯೋಜನ #3

ಪುದೀನ ಚಟ್ನಿ ಹಲ್ಲುಗಳಿಗೂ ಉತ್ತಮವಾಗಿವೆ. ವಿಶೇಷವಾಗಿ ಇದರ ಪರಿಮಳ ಬಾಯಿಯ ದುರ್ವಾಸನೆಯನ್ನು ಇಲ್ಲವಾಗಿಸುವ ಮೂಲಕ ಬಾಯಿಯ ಒಳಭಾಗದಲ್ಲಿ ಸೋಂಕು ಉಂಟಾಗುವುದರಿಂದ ರಕ್ಷಿಸುತ್ತದೆ. ಪುದೀನ ಎಲೆಗಳಲ್ಲಿ ಉರಿಯೂತ ನಿವಾರಕ ಮತ್ತು ಬ್ಯಾಕ್ಟೀರಿಯಾ ನಿವಾರಕ ಗುಣಗಳಿವೆ. ಈ ಚಟ್ನಿಯ ಸೇವನೆಯಿಂದ ಹಲ್ಲುಗಳ ಸವಕಳಿ ಮತ್ತು ಒಸಡುಗಳ ನಡುವೆ ಆಹಾರ ಪದಾರ್ಥ ಕೊಳೆಯುವುದರಿಂದ ರಕ್ಷಣೆ ಪಡೆದಂತಾಗುತ್ತದೆ.

ಪ್ರಯೋಜನ #4

ಪ್ರಯೋಜನ #4

ಹಳ್ಳಿಗಳಲ್ಲಿ ಇಂದಿಗೂ ಏಸಿ ಅಥವಾ ತಂಪುಮಾಡಲು ಯಾವುದೇ ವ್ಯವಸ್ಥೆ ಇಲ್ಲದೇ ಇರುವ ಕಾರಣ ಪುದೀನವನ್ನು ದೇಹವನ್ನು ತಂಪಾಗಿರಿಸಿಕೊಳ್ಳಲು ಬಳಸಲಾಗುತ್ತದೆ. ಪುದೀನ ಚಟ್ನಿಯನ್ನು ಸೇವಿಸುವ ಮೂಲಕ ಬೇಸಿಗೆಯ ಬೇಗೆಯನ್ನು ಎದುರಿಸಲು ಸಾಧ್ಯವಾಗುತ್ತದೆ.

ಪ್ರಯೋಜನ #5

ಪ್ರಯೋಜನ #5

ಪುದೀನ ಒಂದು ಅತ್ಯುತ್ತಮ ಉತ್ತೇಜಕವಾಗಿದೆ. ಸುಸ್ತಾಗಿದ್ದಾಗ ಅಥವಾ ಮನಸ್ಸು ಜಡಗಟ್ಟಿದ್ದಾಗ ಮನವನ್ನು ನಿರಾಳವಾಗಿಸಿ ಕೆಲಸ ಅಥವಾ ಚಟುವಟಿಕೆಯನ್ನು ಪ್ರಾರಂಭಿಸಲು ಉತ್ತೇಜಿಸುವ ಮೂಲಕ ಜೀವನದಲ್ಲಿ ಹುರುಪು ಮೂಡಿಸುತ್ತದೆ.

ಪ್ರಯೋಜನ #6

ಪ್ರಯೋಜನ #6

ಪುದೀನ ಚಟ್ನಿಯ ಸೇವನೆಯಿಂದ ರಕ್ತ ಶುದ್ಧೀಕರಣಗೊಳ್ಳುತ್ತದೆ. ಇದು ಉತ್ತಮ ಸೆಳೆತ ನಿವಾರಕವೂ ಆಗಿದ್ದು ಸೆಳೆತಗೊಂಡಿರುವ ಸ್ನಾಯುಗಳನ್ನು ಸಡಿಲಿಸಿ ನಿರಾಳವಾಗಿಸಲು ನೆರವಾಗುತ್ತದೆ. ವಿಶೇಷವಾಗಿ ಮಹಿಳೆಯರಿಗೆ ಕಾಡುವ ಮಾಸಿಕ ದಿನಗಳ ನೋವನ್ನು ಕಡಿಮೆಗೊಳಿಸಲೂ ಪುದೀನಾ ನೆರವಾಗುತ್ತದೆ.

ಪ್ರಯೋಜನ #7

ಪ್ರಯೋಜನ #7

ಪುದೀನಾ ಚಟ್ನಿಯ ಅತ್ಯುತ್ತಮ ಪ್ರಯೋಜನವೆಂದರೆ ಇದರ ರೋಗ ನಿರೋಧಕ ವೃದ್ಧಿಸುವ ಗುಣ. ಇದರಲ್ಲಿರುವ ವಿಟಮಿನ್ C,B, E ಮತ್ತು D ಹಾಗೂ ಇತರ ಪೋಷಕಾಂಶಗಳು ಮತ್ತು ಆಂಟಿ ಆಕ್ಸಿಡೆಂಟುಗಳು ದೇಹವನ್ನು ಬಾಧಿಸುವ ಹಲವಾರು ಸೋಂಕು ರೋಗಗಳಿಂದ ರಕ್ಷಿಸುತ್ತದೆ.

 

For Quick Alerts
ALLOW NOTIFICATIONS
For Daily Alerts

    English summary

    Health Benefits Of Pudina Chutney

    Do you love pudina chutney in your samosa? Well, here are the health benefits of pudina chutney...
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more