Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಪುದೀನ ಚಟ್ನಿಪುಡಿ ತಿನ್ನಲು ಇಂದೇ ಸುದಿನ!
ಪುದೀನ ಚಟ್ನಿ ಪುಡಿಯನ್ನು ಎಲ್ಲ ತರಹದ ತಿಂಡಿಗಳ ಜೊತೆ ನೆಂಜಿಕೊಂಡು ತಿನ್ನಬಹುದು. ಮಾಡಿಕೊಳ್ಳುವುದೂ ಬಲು ಸುಲಭ. ಆಹಾರ ಪಚನವಾಗಲು ಪುದೀನ ಸಹಕರಿಸುತ್ತದೆ. ಬಿಸಿ ಅನ್ನದೊಂದಿಗೆ ತುಪ್ಪ ಸೇರಿಸಿ ಪುದೀನ ಚಟ್ಣಿ ಪುಡಿಯನ್ನು ಕಲಸಿ ತಿನ್ನಲು ರುಚಿಯಾಗಿರುತ್ತದೆ.
ಬೇಕಾಗುವ ಪದಾರ್ಥಗಳು :
ತಾಜಾ ಪುದೀನ ಸೊಪ್ಪು : 2ಕಟ್ಟು
ಕಡಲೆ ಬೇಳೆ : 100ಗ್ರಾಂ
ಉದ್ದಿನ ಬೇಳೆ : 75ಗ್ರಾಂ
ಒಣ ಮೆಣಸಿನ ಕಾಯಿ : 75ಗ್ರಾಂ
ತುರಿದ ಒಣ ಕೊತ್ತಂಬರಿ : 2ಹಿಡಿ
ಬೆಲ್ಲ : ಅರ್ಧ ಅಚ್ಚು
ಹುಣಸೆಹಣ್ಣು : ರುಚಿಗೆ ತಕ್ಕಷ್ಟು
ಉಪ್ಪು : ರುಚಿಗೆ ತಕ್ಕಷ್ಟು
ಎಣ್ಣೆ : 1 ಟೀ ಚಮಚ
ತಯಾರಿಸುವ ವಿಧಾನ :
ಪುದೀನ ಸೊಪ್ಪಿನ ಎಲೆಗಳನ್ನು ಬಿಡಿಸಿ, ಚೆನ್ನಾಗಿ ತೊಳೆದಿಡಿ. ತೇವ ಹೋಗುವಂತೆ ಒಣಗಿಸಿ. ಏಕೆಂದರೆ ಕಾದ ಎಣ್ಣೆಗೆ ಹಾಕಿದಾಗ ಎಣ್ಣೆ ಸಿಡಿಯುವುದಿಲ್ಲ. ಒಣಗಿಸಿದ ಪುದೀನ ಎಲೆಗಳನ್ನು ಕಾದ ಬಾಣಲೆಗೆ ಹಾಕಿ ಸ್ವಲ್ಪ ತುಪ್ಪದೊಂದಿಗೆ ಹುರಿಯಿರಿ. ಹಾಗೆಯೇ ಕಡಲೆ ಬೇಳೆ, ಉದ್ದಿನ ಬೇಳೆ, ಒಣ ಮೆಣಸಿನ ಕಾಯಿಯನ್ನು ಹದವಾಗಿ ಹುರಿಯಿರಿ. ತುರಿದ ಒಣ ಕೊತ್ತಂಬರಿ, ಹುಣಸೆಹಣ್ಣನ್ನು ಸ್ವಲ್ಪ ಬೆಚ್ಚಗೆ ಮಾಡಿಕೊಳ್ಳಿ. ಈಗ ಎಲ್ಲವನ್ನೂ ಮಿಕ್ಸಿಗೆ ಹಾಕಿ ಚೆನ್ನಾಗಿ ಪುಡಿ ಮಾಡಿಕೊಳ್ಳಿ. ನಿಮ್ಮ ನೆಚ್ಚಿನ ಪುದೀನ ಚಟ್ನಿ ಪುಡಿ ರೆಡಿ.



Click it and Unblock the Notifications
