Just In
Don't Miss
- Automobiles
ಅರೆನಾ ಕಾರು ಮಾದರಿಗಳ ಬೆಲೆ ಹೆಚ್ಚಳ ಮಾಡಿದ ಮಾರುತಿ ಸುಜುಕಿ
- Movies
ಗಾಜನೂರು ಸಿನಿಮಾ: ಇದು ಅಣ್ಣಾವ್ರ ಗಾಜನೂರು ಅಲ್ಲ, ಶಿವಮೊಗ್ಗದ ಗಾಜನೂರಿನ ಕಥೆ
- News
ಸಿದ್ದರಾಮಯ್ಯ ಜ್ಯೋತಿಷ್ಯ ಕಲಿಯುತ್ತಿರಬೇಕು; ಎಸ್. ಟಿ. ಸೋಮಶೇಖರ್
- Finance
ಸಾರ್ವಕಾಲಿಕ ದಾಖಲೆ ಬರೆದ ಪೆಟ್ರೋಲ್: ಬೆಂಗಳೂರಲ್ಲಿ ಡೀಸೆಲ್ ರು. 79.94
- Sports
ಗಾಬಾ ಕೋಟೆ ಬೇಧಿಸಿ ಆಸ್ಟ್ರೇಲಿಯಾ ವಿರುದ್ಧ ಐತಿಹಾಸಿಕ ಜಯ ಸಾಧಿಸಿದ ಟೀಮ್ ಇಂಡಿಯಾ
- Education
Indian Forest Service Recruitment 2021: 70 ಡಿಐಜಿಎಫ್/ಎಐಜಿಎಫ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಆರೋಗ್ಯಕರ ಜೀವನಕ್ಕೆ ಹಸಿರು ಸೊಪ್ಪು ತರಕಾರಿಗಳನ್ನು ಸೇವಿಸಿ
ಆಹಾರ ಜೀವಿಯ ಜೀವನದ ಪ್ರಧಾನ ಅಂಗ ಉದಾರ ತೃಪ್ತಿಯಿಂದ ಪ್ರಾರಂಭಿಸಿ ಮೋಕ್ಷ ಪ್ರಾಪ್ತಿಯವರೆಗೆ ಅದರ ವ್ಯಾಪ್ತಿಯು ವಿಸ್ತಾರವಾದದ್ದು. ಇದು ಶಾರೀರದ ಒಳ ಪ್ರವೇಶಸಿ ನಮ್ಮಲ್ಲಿ ಕರಗಿ ಒಂದಾಗಿ ನಮ್ಮ ಸ್ವರೂಪ ನಿರ್ಮಾಣಕ್ಕೆ ಕಾರಣವಾಗುತ್ತದೆ. ಆಹಾರದ ಸೂಕ್ಷ್ಮ ಭಾಗದಿಂದ ನಿರ್ಮಿತಿಯಾಗುತ್ತದೆ.
ಭಗವಂತನ ಸೃಷ್ಟಿಯಲ್ಲಿ ಅಸಂಖ್ಯಾತವಾದ ಆಹಾರ ಪದಾರ್ಥಗಳು ಇರಬಹುದಾದರೂ ಅವೆಲ್ಲವೂ ಮನುಷ್ಯನಿಗೆ ಅಗತ್ಯವೆಂಬುದಾಗಲಿ ಇರುವುದಿಲ್ಲ. ಆಹಾರಗಳಲ್ಲಿ ಸಾತ್ವಿಕ, ರಾಜಸಿಕ, ತಾಮಸಿಕ ಎಂಬ ಮೂರು ವಿಧಗಳು. ನಮ್ಮ ದಿನ ನಿತ್ಯದ ಹಸನಾದ ಬಾಳಿಗೆ ಬೇಕಾದ ಈ ಮೂಲಭೂತ ತಿಳುವಳಿಕೆ ಇಲ್ಲದ ಜೀವನ ಅಷ್ಟು ಶುಭ ಲಕ್ಷಣವಲ್ಲ. ಅದಕ್ಕಾಗಿ ಪ್ರತಿಯೊಬ್ಬರಿಗೂ ಆಹಾರಗಳ ಬಗ್ಗೆ ಸಾಮಾನ್ಯ ಜ್ಞಾನವಾದರೂ ಇರಲೇಬೇಕು. ಇಂತಹ ಆಹಾರಗಳಲ್ಲಿ ನಮಗೆ ದೊರೆಯುವ ಎಲ್ಲಾ ತರಕಾರಿಗಳಲ್ಲಿ ಹಸಿರು ಸೊಪ್ಪು, ತರಕಾರಿಗಳು ಆರೋಗ್ಯಕ್ಕೆ ವಿಶೇಷವಾದವುಗಳು. ಇವು ಅತೀ ಪ್ರಾಮುಖ್ಯವೂ ಅತ್ಯಮೂಲ್ಯವೂ ಆಗಿವೆ.
ಹಸಿರು ಸೊಪ್ಪು, ತರಕಾರಿಗಳನ್ನು ಸೇವಿಸುವುದರಿಂದ ಸಸ್ಯ ಮೂಲ ಪ್ರೋಟಿನ್‌ಗಳು ಹೇರಳವಾಗಿ ಶರೀರಕ್ಕೆ ಅವಶ್ಯಕವಿರುವ ಹಾಗೂ ಆಯುಷ್ಯವನ್ನು ವೃದ್ಧಿಗೊಳಿಸುವ ಹಲವಾರು ಜೀವ ಸತ್ವಗಳು, ನಾರಿನಾಂಶಗಳು ದೊರೆಯುತ್ತವೆ. ಸೊಪ್ಪು, ತರಕಾರಿ ಸೇವನೆಯಿಂದ ನಮ್ಮಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿ ಆರೋಗ್ಯಯುತವಾಗಿ ಬಾಳಬಹುದು.
ಸೊಪ್ಪು, ತರಕಾರಿಗಳನ್ನು ಸೇವನೆ ಮಾಡದೇ ಇರುವುದರಿಂದ ನಮ್ಮಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಗೊಂಡು ಇದರಿಂದ ಬರುವ ಅಲರ್ಜಿ, ಇನ್ಫೆಕ್ಷನ್, ಹಾಗೂ ಮಧುಮೇಹ, ಸಂಧಿವಾತ ಮುಂತಾದ ಮಾರಕ ಕಾಯಿಲೆಗಳಿಗೆ ಗುರಿಯಾಗುತ್ತಿದ್ದೇವೆ. ಹಸಿರು ಸೊಪ್ಪು ತರಕಾರಿಗಳು ದೀರ್ಘಾಯುಷ್ಯಕ್ಕೆ ಬೇಕಾದ ಅವಶ್ಯಕ ಸೇವನೆಯಿಂದ ಬೇಗ ತೂಕ ಕಡಿಮೆ ಮಾಡಿಕೊಳ‍್ಳಬಹುದು. ತರಕಾರಿ ಹಣ‍್ಣುಗಳ ಸಲಾಡ್‌ಗಳನ್ನು ಮಧ್ಯಾಹ್ನ ಹಾಗೂ ರಾತ್ರಿ ಊಟದ ಮೊದಲು ಸೇವಿಸುವುದು ಒಳ‍್ಳೆಯದು.
ಟೊಮೆಟೊ, ಸೌತೆಕಾಯಿ, ದಾಳಿಂಬೆ, ಬೀನ್ಸ್, ಕ್ಯಾಬೇಜ್, ಕ್ಯಾರೆಟ್ ಇತ್ಯಾದಿ ಹಾಗೂ ಮೊಳಕೆ ಬಂದ ಹಸಿರುಕಾಳು ದ್ವಿದಳ ಧಾನ್ಯಗಳಿಂದ ಸಲಾಡ್ ತಯಾರಿಸಿ ಊಟ ಮಾಡಿದಲ್ಲಿ ಬಾಯಿಗೂ ರುಚಿ, ದೇಹಕ್ಕೂ ಒಳ‍್ಳೆಯದು. ಈಗಾಗಲೇ ತುಂಬಾ ಜನರು ಹಸಿರು ತರಕಾರಿಗಳನ್ನು ತಿನ್ನುವುದನ್ನು ಕಡಿಮೆ ಮಾಡಿ ಆರೋಗ್ಯದಲ್ಲಿ ಜೀವಸತ್ವಗಳ ಕೊರತೆಗಳನ್ನು ಅನುಭವಿಸುತ್ತಿದ್ದಾರೆ ನಮಗೆ ತಿಳಿದಂತೆ ಮಾಂಸಹಾರ ಪದಾರ್ಥಗಳಲ್ಲಿ ತುಂಬಾ ವಿಟಮಿನ್‌ಗಳು ಇರುವಂತೆಯೇ ಹಸಿರು ತರಕಾರಿಗಳಲ್ಲಿ ಬಹಳಷ್ಟು ವಿಟಮಿನ್‌ಗಳು ಇದೆ.
ನಾವು ಸೇವಿಸುವ ಆಹಾರ ಪದ್ಧತಿಗಳನ್ನು ಸರಿಯಾಗಿ ಬದಲಾಯಿಸದೆ ಅಥವಾ ಸರಿಯಾಗಿ ಯೋಚನೆ ಮಾಡದೆ ಸ್ವೀಕರಿಸುತ್ತಾ ಬಂದಲ್ಲಿ ಅನಾರೋಗ್ಯಕ್ಕೆ ಗುರಿಯಾಗಿ ತುಂಬಾ ಹಣವನ್ನು ನಾವು ವೈದ್ಯಕೀಯಕ್ಕೆ ಖರ್ಚು ಮಾಡಬೇಕಾಗುತ್ತದೆ. ಈಗಿನ ಜನರ ಸಮಸ್ಯೆಗಳೇನೆಂದರೆ ತುಂಬಾ ದಪ್ಪ ಶರೀರ, ಹೃದಯ ಕಾಯಿಲೆ, ಸಂದು ನೋವು, ಸಿಹಿ ಮೂತ್ರ, ಜೀರ್ಣಾಂಗ ಸಮಸ್ಯೆಗಳು ಹೀಗೆ ಪಟ್ಟಿ ಮಾಡುತ್ತಾ ಹೋದಲ್ಲಿ ಹಲವಾರು ಕಾಯಿಲೆಗಳು ಆವರಿಸುತ್ತಾ ಹೋಗುತ್ತದೆ.
ಆದುದರಿಂದ ನಮ್ಮ ಆಹಾರ ಪದ್ಧತಿಯಲ್ಲಿ ಹಿತ ಮಿತವಾಗಿ ಬಳಸಿಕೊಂಡು ಖಾದ್ಯ ತೈಲ, ದೂರವಿಟ್ಟು ನಮ್ಮ ಶರೀರದ ತೂಕವನ್ನು ಸಮತೋಲನದಲ್ಲಿಡಲು ಯೋಗ, ಲಘು ವ್ಯಾಯಾಮ, ವಾಕಿಂಗ್, ಈಜು ಮಾಡುತ್ತಾ ಬಂದಲ್ಲಿ ದೀರ್ಘ ಆಯುಷ್ಯವನ್ನು ಪಡೆಯುವ ಗುಟ್ಟೇ ಇದು. ಕೆಲವೊಂದು ಹಸಿರು ತರಕಾರಿಗಳನ್ನು ದಿನನಿತ್ಯ ಸೇವನೆ ಮಾಡಲು ಈ ರೀತಿ ಅನುಸರಿಸಬಹುದು. ಕ್ಯಾಬೇಜ್, ಬೀಟ್ ರೂಟ್, ನುಗ್ಗೆ, ಹರಿವೆ, ಇತ್ಯಾದಿಯನ್ನು ಆಲೀವ್ ಎಣ‍್ಣೆ ಮಿಶ್ರ ಮಾಡಿದ ಸಲಾಡ್ ನನ್ನು ದಿನ ನಿತ್ಯ ಅಡುಗೆ ಮನೆಯಲ್ಲಿ ಮಾಡುತ್ತಾ ಬಂದಲ್ಲಿ ಸಕ್ಕರೆ ಕಾಯಿಲೆ, ಮಲಬದ್ಧತೆ ಇತ್ಯಾದಿಗಳನ್ನು ತಡೆಗಟ್ಟಬಹುದು.
ಆಲೀವ್ ಎಣ‍್ಣೆಯ ಬಳಕೆಯಿಂದ ಕೊಲೆಸ್ಟ್ರಾಲ್ ಅಂಶ ಕಡಿಮೆಯಾಗಿ ಪಚನಕ್ರೀಯೆಗೆ ಸುಲಭವಾಗಿ ಮಲಬದ್ಧತೆಯನ್ನು ನಿವಾರಿಸಲು ಅನುಕೂಲಕರ. ಈ ರೀತಿ ಹಸಿರು ತರಕಾರಿಯನ್ನು ದಿನ ನಿತ್ಯ ಬಳಸುವುದರಿಂದ ಆರೋಗ್ಯಕರವಾಗಿರಬಹುದು ಮತ್ತು ನಮ್ಮ ಮನೆಯಲ್ಲೇ ಟೆರೆಸ್ ಮೇಲೆ, ಅಂಗಳದಲ್ಲಿ ಮಣ‍್ಣು ತುಂಬಿದ ಗೋಣಿ ಚೀಲ ಅಥವಾ ಪಾಟ್‌ಗಳಲ್ಲಿ ನಮಗೆ ದಿನ ನಿತ್ಯ ಬೇಕಾದ ಹಸಿರು ತರಕಾರಿಗಳನ್ನು ಬೆಳೆಸಬಹುದು. ಇದರಿಂದ ಜೇಬಿನ ಕಾಸಿಗೂ ಕತ್ತರಿಯಿಲ್ಲ. ಆರೋಗ್ಯಕ್ಕೂ ಕತ್ತರಿಯಿಲ್ಲ. ಹ್ಞಾಂ! ನಾವೆಲ್ಲಾ ಇವತ್ತಿನಿಂದಲೇ ಹಸಿರು ಸೊಪ್ಪು ತರಕಾರಿಗಳಿಂದ ತಯಾರಿಸಿದ ಪದಾರ್ಥಗಳನ್ನು ಸೇವಿಸೋಣವೇ?