For Quick Alerts
ALLOW NOTIFICATIONS  
For Daily Alerts

ಸರಳ ರೆಸಿಪಿ: ರಾತ್ರಿ ಬೆಳಗಾಗುವುದರೊಳಗೆ 'ಒಣ ಕೆಮ್ಮು' ಮಾಯ!

ಬೇಸಿಗೆಕಾಲದಲ್ಲಿ ಹೆಚ್ಚಿನವರಿಗೆ ಒಣ ಕೆಮ್ಮಿನ ಸಮಸ್ಯೆ ಕಂಡು ಬರುತ್ತದೆ. ದೂಳಿನ ಅಲರ್ಜಿ ಇರುವವರೆಗೆ ಈ ರೀತಿಯ ಕೆಮ್ಮು ಕಂಡು ಬರುತ್ತದೆ.... ಚಿಂತಿಸದಿರಿ ಅದಕ್ಕೆಂದೇ ಸಿಂಪಲ್ ಮನೆಮದ್ದು ನೀಡಿದ್ದೇವೆ, ಪ್ರಯತ್ನಿಸಿ ನೋಡಿ..

By Arshad
|

ಕೆಮ್ಮಿದವರಿಗೂ ಸುತ್ತಮುತ್ತಲಿನವರಿಗೂ ಕಿರಿಕಿರಿ ಮಾಡುವ ಒಣಕೆಮ್ಮು ಸುಲಭವಾಗಿ ಹೋಗುವುದಿಲ್ಲ. ಏಕೆಂದರೆ ಗಂಟಲ ಒಳಭಾಗ, ಎದೆಯ ಮೇಲ್ಭಾಗದಲ್ಲಿ ಸಂಗ್ರಹವಾಗಿರುವ ಸೋಂಕು ಅತಿ ಹೆಚ್ಚು ಸಾಂದ್ರತೆ ಹೊಂದಿರುವ ಕಾರಣ ಗಟ್ಟಿಯಾಗಿ ಅಂಟಿಕೊಂಡಿದ್ದು ತುರಿಕೆ ಮೂಡಿಸುತ್ತದೆ. ಎಷ್ಟು ಕೆಮ್ಮಿದರೂ ಕಫ ಬರದೇ ಇರುವುದಕ್ಕೇ 'ಒಣ'ಎಂಬ ಪದವನ್ನು ಬಳಸಲಾಗಿದೆ. ಬಹುತೇಕ ಎಲ್ಲರೂ ಈ ಒಣಕೆಮ್ಮನ್ನು ಒಮ್ಮೆಯಾದರೂ ಅನುಭವಿಸಿಯೇ ಇರುತ್ತಾರೆ. ಮಧ್ಯರಾತ್ರಿ ಕಾಡುವ ಕೆಮ್ಮು, ಏನು ಮಾಡಬೇಕು?

ಒಣಕೆಮ್ಮು ಪ್ರಾರಂಭವಾದ ಬಳಿಕ ಇದನ್ನು ನಿಲ್ಲಿಸಲು ಮತ್ತು ಇದರಿಂದ ಬಿಡುಗಡೆ ಪಡೆಯಲು ಎಲ್ಲರೂ ಯತ್ನಿಸುತ್ತಾರೆ. ಆದರೆ ಇವೆರಡೂ ಅಷ್ಟು ಸುಲಭವಲ್ಲ. ನೂರು ಜನರಿರುವ ನಡುವೆ ಕೆಲವರಾದರೂ ನಡುನಡುವೆ ಒಣಕೆಮ್ಮನ್ನು ಕೆಮ್ಮುತ್ತಾ ಇರುವುದನ್ನು ಖಂಡಿತಾ ಗಮನಿಸಬಹುದು. ಇದರ ನಿವಾರಣೆಗೆ ಸುಲಭವಾದ ನೈಸರ್ಗಿಕ ಮನೆಮದ್ದೊಂದು ಲಭ್ಯವಿದೆ. ಹತ್ತೇ ಹತ್ತು ನಿಮಿಷದಲ್ಲಿ ಜ್ವರ, ಶೀತ, ಕೆಮ್ಮು-ಮಂಗಮಾಯ!

ಒಣಕೆಮ್ಮಿಗೆ ಕೆಲವಾರು ಕಾರಣಗಳಿವೆ. ವೈರಸ್ಸುಗಳ ಸೋಂಕು ಹೆಚ್ಚಾದಾಗ ಹೆಚ್ಚಿನ ಕಫವನ್ನು ದೇಹದ ರೋಗ ನಿರೋಧಕ ವ್ಯವಸ್ಥೆ ಮಾಡಿರುತ್ತದೆ. ಈ ಕಫದಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಬಿಳಿರಕ್ತಕಣಗಳು ಸತ್ತು ಒಣಗುವುದೇ ಕಫ ಗಟ್ಟಿಯಾಗಲು ಪ್ರಮುಖ ಕಾರಣ. ಈ ಕಫವನ್ನು ನಿವಾರಿಸಲು ದೇಹ ಯತ್ನಿಸುವುದೇ ಒಣಕೆಮ್ಮಿಗೆ ಮೂಲ. ಒಂದು ವೇಳೆ ವೈರಸ್ ಧಾಳಿ ಅಥವಾ ಫ್ಲೂ ಜ್ವರದ ಪರಿಣಾಮವಾಗಿ ಒಣಕಫವಾಗಿದ್ದರೆ ಒಂದೇ ರಾತ್ರಿಯಲ್ಲಿ ನಿವಾರಿಸಲು ಈ ಮನೆಮದ್ದು ಅತ್ಯಂತ ಸಮರ್ಥವಾಗಿದೆ....

ಬೇಕಾಗುವ ಸಾಮಾಗ್ರಿಗಳು

ಬೇಕಾಗುವ ಸಾಮಾಗ್ರಿಗಳು

#1. ಆರು ಒಣ ಖರ್ಜೂರಗಳನ್ನು ತೆಗೆದುಕೊಳ್ಳಿ

ಬೇಕಾಗುವ ಸಾಮಾಗ್ರಿಗಳು

ಬೇಕಾಗುವ ಸಾಮಾಗ್ರಿಗಳು

#2. ಅರ್ಧ ಲೀಟರ್ ಹಾಲನ್ನು ಪಾತ್ರೆಯಲ್ಲಿ ಸಂಗ್ರಹಿಸಿ

ಬೇಕಾಗುವ ಸಾಮಾಗ್ರಿಗಳು

ಬೇಕಾಗುವ ಸಾಮಾಗ್ರಿಗಳು

#3. ಹಾಲನ್ನು ಕುದಿಸಿ. ಖರ್ಜೂರಗಳನ್ನು ತೆರೆದು ಬೀಜ ನಿವಾರಿಸಿ ಕುದಿಯಲು ಪ್ರಾರಂಭವಾದ ಹಾಲಿಗೆ ಬೆರೆಸಿ

ಬೇಕಾಗುವ ಸಾಮಾಗ್ರಿಗಳು

ಬೇಕಾಗುವ ಸಾಮಾಗ್ರಿಗಳು

#4 ಹಾಲು ಉಕ್ಕಿಹೋಗದಂತೆ ಉರಿಯನ್ನು ಅತಿ ಚಿಕ್ಕದಾಗಿಸಿ ಮುಂದಿನ ಇಪ್ಪತ್ತರಿಂದ ಮೂವತ್ತು ನಿಮಿಷಗಳವರೆಗೆ ಬಿಸಿ ಮಾಡಿ

ಬೇಕಾಗುವ ಸಾಮಾಗ್ರಿಗಳು

ಬೇಕಾಗುವ ಸಾಮಾಗ್ರಿಗಳು

#5 ಬಳಿಕ ಈ ಹಾಲನ್ನು ಕುಡಿಯಲು ಸಾಧ್ಯವಾಗುವಷ್ಟು ತಣಿಸಿ ಒಂದು ಕಪ್ ಕುಡಿಯಿರಿ. ಒಣಕೆಮ್ಮು ಕಡಿಮೆಯಾಗುವವರೆಗೆ ದಿನಕ್ಕೆ ಮೂರು ಬಾರಿ ಪುನರಾವರ್ತಿಸಿ.

English summary

Get Rid of Dry Cough Overnight- Simple recipe

There are several causes for a dry cough. But you generally get dry cough when there is a blockage in your throat and this sends you coughing. Hence, if dry cough is related to viral infection or flu then here is this one super recipe to cure dry cough...
X
Desktop Bottom Promotion