Latest Updates
-
ನಾಳೆ ಗಣೇಶ ವಿಸರ್ಜನೆ: ಬೆಂಗಳೂರಿನ ಈ ರಸ್ತೆಗಳಲ್ಲಿ ಸಂಚಾರ ಬಂದ್, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ -
ಸೇವಾ ಪಖ್ವಾಡ: ರಕ್ತದಾನಕ್ಕೆ ಹೋಗುವ ಮುನ್ನ ಈ ಸಿಂಪಲ್ ಪ್ಲಾನ್ ಮಿಸ್ ಮಾಡ್ಬೇಡಿ! -
ಪರಿಸರ ಸ್ನೇಹಿ ಡೇಟಿಂಗ್: ₹300 ರೊಳಗೆ ನಿಮ್ಮ ಪ್ರೀತಿಯನ್ನು ಹಸಿರಾಗಿಸುವ 12 ಅದ್ಭುತ ಐಡಿಯಾಗಳು! -
ಬೆಂಗಳೂರು ಮಳೆ: ಮನೆಯಲ್ಲಿ ನೀರು ನುಗ್ಗಿದೆಯೇ? ತೇವ ಮತ್ತು ದುರ್ವಾಸನೆ ಹೋಗಲಾಡಿಸಲು ಇಲ್ಲಿವೆ ಸರಳ ಟಿಪ್ಸ್! -
ಡೆಂಗ್ಯೂ ಆತಂಕ: ಮಧುಮೇಹಿಗಳು ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿದೆ ವಿಶೇಷ ಆಹಾರ ಪ್ಲಾನ್ -
iPhone 18 ಸೇಲ್: ನಿಮ್ಮ ಹೊಸ ಫೋನ್ ಪಡೆಯಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ದೆಹಲಿ-ಎನ್ಸಿಆರ್ ಮಳೆ ಎಚ್ಚರಿಕೆ: ಹೊರಗೆ ಹೋಗುವ ಬದಲು ಮನೆಯಲ್ಲೇ ಮಾಡಿ 12 ನಿಮಿಷದ ವರ್ಕೌಟ್! -
ಸೆಪ್ಟೆಂಬರ್ 15ರ ಲವ್ ರಾಶಿಫಲ: ನಿಮ್ಮ ಸಂಗಾತಿಯ ಮನ ಗೆಲ್ಲಲು ಈ 2 ನಿಮಿಷದ ಸೂತ್ರ ಬಳಸಿ! -
ಮಳೆಗಾಲದ ಎಚ್ಚರಿಕೆ: ಮುಂಬೈ-ಪುಣೆಯಲ್ಲಿ ಮನೆ ಸೋರಿಕೆ ತಡೆಯಲು 30 ನಿಮಿಷದ ಸಿಂಪಲ್ ಟಿಪ್ಸ್ -
ಅಡುಗೆಮನೆ ಬಜೆಟ್ ಏರಿಕೆ: ₹30 ಕ್ಕಿಂತ ಕಡಿಮೆ ವೆಚ್ಚದಲ್ಲಿ ಆರೋಗ್ಯಕರ ಪ್ರೋಟೀನ್ ಆಹಾರ ಪಡೆಯುವುದು ಹೇಗೆ?
ಹತ್ತೇ ಹತ್ತು ನಿಮಿಷದಲ್ಲಿ ಜ್ವರ, ಶೀತ, ಕೆಮ್ಮು-ಮಂಗಮಾಯ!
ಬರೀ ಹತ್ತೇ ನಿಮಿಷದಲ್ಲಿ ಜ್ವರ, ಶೀತ, ಕೆಮ್ಮಿನ ಸಮಸ್ಯೆಯನ್ನು ನಿಯಂತ್ರಿಸುವ ಸಿಂಪಲ್ ಮನೆಮದ್ದನ್ನು ನೀಡಿದ್ದೇವೆ, ನೀವೂ ಒಮ್ಮೆ ಪ್ರಯತ್ನಿಸಿ ನೋಡಿ....
ಚಳಿಗಾಲ ಬಂತೆಂದರೆ ಎಲ್ಲೆಡೆ ಫ್ಲೂ ಜ್ವರ, ಶೀತ, ಕೆಮ್ಮು ಆವರಿಸುತ್ತದೆ. ಇದನ್ನು ತಡೆಯಲು ಹಲವಾರು ಔಷಧಿ, ಮುನ್ನೆಚ್ಚರಿಕೆ, ದಪ್ಪನೆಯ ಉಣ್ಣೆಯ ಉಡುಪು ಮೊದಲಾದವುಗಳನ್ನೆಲ್ಲಾ ಅನುಸರಿಸಿದರೂ ಯಾವುದೋ ಮಾಯೆಯಲ್ಲಿ ಶೀತಕ್ಕ ಬಂದೇ ಬಿಡುತ್ತಾಳೆ.
ಇಂತಹ ಪರಿಸ್ಥಿತಿಯನ್ನು ಶೀಘ್ರವಾಗಿ ಕೊನೆಗಾಣಿಸಲು ನಮ್ಮ ಹಿರಿಯರು ಅನುಸರಿಸಿಕೊಂಡು ಬರುತ್ತಿದ್ದ ಮನೆಮದ್ದೊಂದಿದೆ. ಇದರ ಸಾಮರ್ಥ್ಯವೆಂದರೆ ಕೆಮ್ಮು ಶೀತವನ್ನು ಕೆಲವೇ ಕ್ಷಣಗಳಲ್ಲಿ ನಿವಾರಿಸುವುದು. ಅಲ್ಲದೇ ಈ ಪೇಯವನ್ನು ಕೆಲವೇ ನಿಮಿಷದಲ್ಲಿ ತಯಾರಿಸಲು ಸಾಧ್ಯವಾದುದರಿಂದ ಕೆಮ್ಮನ್ನು ಹೆಚ್ಚು ಬೆಳೆಯಲು ಬಿಡದೇ ತಕ್ಷಣವೇ ಶಮನಗೊಳಿಸಲು ಸಾಧ್ಯ.
ಇದಕ್ಕಾಗಿ ಮನೆಯಲ್ಲಿ ಸದಾ ಲಭ್ಯವಿರುವ ಸಾಮಾನ್ಯ ಪರಿಕರಳಾದ ಜೇನು, ಬೆಳ್ಳುಳ್ಳಿ, ಲಿಂಬೆ ಮತ್ತು ಸೇಬಿನ ಶಿರ್ಕಾ (Apple cider vinegar) ಮಾತ್ರ ಸಾಕು. ಇವುಗಳ ಸರಿಯಾದ ಪ್ರಮಾಣದ ಮಿಶ್ರಣ ಕೆಮ್ಮು ಶೀತಕ್ಕೆ ಸಮರ್ಥವಾದ ಮದ್ದು ಎಂದು ಈಗಾಗಲೇ ಸಾಬೀತಾಗಿದ್ದು ಹಲವಾರು ವರ್ಷಗಳಿಂದ ಇದನ್ನು ಬಳಸಲಾಗುತ್ತಾ ಬರಲಾಗಿದೆ. ಬನ್ನಿ, ಈ ಪೇಯವನ್ನು ಹೇಗೆ ಸಿದ್ಧ ಪಡಿಸುವುದು ಎಂಬುದನ್ನು ನೋಡೋಣ....

ಬೆಳ್ಳುಳ್ಳಿ
ಸುಮಾರು ಹತ್ತು ಎಸಳು ಬೆಳ್ಳುಳ್ಳಿಯನ್ನು ಸುಲಿದು ಜಜ್ಜಿ ನಯವಾಗಿಸಿ.

ಸೇಬಿನ ಶಿರ್ಕಾ
ಒಂದು ಚಿಕ್ಕ ಪಾತ್ರೆಯಲ್ಲಿ ಕಾಲು ಕಪ್‌ನಷ್ಟು ಸೇಬಿನ ಶಿರ್ಕಾ ಸೇರಿಸಿ.

ಲಿಂಬೆಹಣ್ಣಿನ ರಸ
ಒಂದು ದೊಡ್ಡ ಗಾತ್ರದ ಲಿಂಬೆಹಣ್ಣನ್ನು ಕತ್ತರಿಸಿ ರಸವನ್ನು ಹಿಂಡಿ ಒಂದು ಲೋಟದಲ್ಲಿ ಸಂಗ್ರಹಿಸಿ.

ಜೇನು
ಸುಮಾರು ಮುಕ್ಕಾಲು ಚಿಕ್ಕಚಮಚ ಜೇನನ್ನು ಇದಕ್ಕೆ ಬೆರೆಸಿ.

ಎರಡು ಕಪ್ ನೀರು
ಪಾತ್ರೆಯಲ್ಲಿ ಸುಮಾರು ಎರಡು ಕಪ್ ನೀರು ಸೇರಿಸಿ.

ಬೆಳ್ಳುಳ್ಳಿ
ಇದಕ್ಕೆ ಜಜ್ಜಿದ ಬೆಳ್ಳುಳ್ಳಿ ಸೇರಿಸಿ ಸುಮಾರು ಹತ್ತು ನಿಮಿಷಗಳವರೆಗೆ ಕುದಿಸಿ.

ಲಿಂಬೆರಸ ಸೇರಿಸಿ
ಬಳಿಕ ಈ ನೀರನ್ನು ಸೋಸಿ ಇದಕ್ಕೆ ಲಿಂಬೆರಸವನ್ನು ಸೇರಿಸಿ

ದಿನಕ್ಕೆ ಎರಡು ಬಾರಿ ಕುಡಿಯಿರಿ....
ಬಳಿಕ ಈ ನೀರನ್ನು ಸುಮಾರು ಉಗುರುಬೆಚ್ಚಗಾಗುವಷ್ಟು ತಣಿಸಿ ದಿನಕ್ಕೆ ಎರಡು ಬಾರಿ ಕುಡಿಯಿರಿ.

ದಿನಕ್ಕೆ ಎರಡು ಬಾರಿ ಕುಡಿಯಿರಿ....
ಈ ಪೇಯವನ್ನು ಕುಡಿದ ಕೆಲವೇ ಕ್ಷಣಗಳಲ್ಲಿ ಕೆಮ್ಮು ಶೀತ ಇಲ್ಲವಾಗುವುದನ್ನು ಕಾಣುತ್ತೀರಿ.



Click it and Unblock the Notifications
