For Quick Alerts
ALLOW NOTIFICATIONS  
For Daily Alerts

ವೈದ್ಯಲೋಕಕ್ಕೇ ಸವಾಲು: ಡೆಂಗ್ಯೂ ಜ್ವರದ ವಿರುದ್ಧ ಹೋರಾಡುವ ಆಹಾರಗಳಿವು!

By Deepu
|

ಡೆಂಗ್ಯೂ ಜ್ವರ ಒಂದು ಮರುಕಳಿಸುವ ರೋಗವಾಗಿದ್ದು ಪ್ರಾರಂಭದಲ್ಲಿ ಗೊತ್ತೇ ಆಗದೇ ಉಲ್ಬಣವಾದ ಬಳಿಕವೇ ಪ್ರಕಟಗೊಳ್ಳುವ ಒಂದು ವ್ಯಾಧಿಯಾಗಿದೆ. ಮಲೇರಿಯಾದಂತೆಯೇ ಡೆಂಗ್ಯೂ ಸಹಾ ಸೊಳ್ಳೆಗಳ ಕಡಿತದಿಂದ ರಕ್ತಕ್ಕೆ ಒಂದು ವೈರಸ್ ಸೇರಿಕೊಂಡ ಮೂಲಕ ಪ್ರಾರಂಭವಾಗುತ್ತದೆ. ಮಲೇರಿಯಾವನ್ನು ಹತ್ತಿಕ್ಕಿದಂತೆಯೇ ಡೆಂಗ್ಯೂವನ್ನೂ ಹತ್ತಿಕ್ಕಲು ಈಗ ಪ್ರಯತ್ನಗಳು ವಿಶ್ವದಾದ್ಯಂತ ಜಾರಿಯಲ್ಲಿವೆ

ಡೆಂಗ್ಯೂ ಜ್ವರದ ಲಕ್ಷಣಗಳೆಂದರೆ ಥಟ್ಟನೇ ಮೈಬಿಸಿಯಾಗಿ ತೀವ್ರ ತಾಪಮಾನವನ್ನು ಪಡೆಯುವುದು, ಕಣ್ಣುಗಳ ಹಿಂಭಾಗದಲ್ಲಿ ನೋವು, ತಲೆನೋವು, ವಾಕರಿಕೆ, ವಾಂತಿ ಮೊದಲಾದವು. ಇದುವರೆಗೆ ಡೆಂಗಿ ಜ್ವರಕ್ಕೆ ಸಿದ್ಧ ಔಷಧವನ್ನು ಕಂಡುಹಿಡಿಯಲಾಗಿಲ್ಲ, ಆದರೆ ಸಂಶೋಧನೆಗಳು ಮುಂದುವರೆಯುತ್ತಿವೆ. ಈ ಸಂದರ್ಭದಲ್ಲಿ ವೈದ್ಯರು ಲಭ್ಯವಿರುವ ಪ್ಯಾರಾಸೆಟಮಾಲ್, ಅನಾಲ್ಜೆಸಿಕ್ ಮೊದಲಾದ ಔಷಧಿಗಳಿಂದಲೇ ಜ್ವರ ಕಡಿಮೆಯಾಗಿಸಲು ಯತ್ನಿಸುತ್ತಾರೆ. ಈ ಜ್ವರವಿದ್ದವರು ಹೆಚ್ಚಿನ ದ್ರವಾಹಾರಗಳನ್ನು, ಹಸಿರು ತರಕಾರಿ, ಸೊಪ್ಪು ಮತ್ತು ಪ್ರೋಟೀನ್ ಇರುವ ಆಹಾರಗಳನ್ನು ಸೇವಿಸುವುದರಿಂದ ದೇಹ ಕಳೆದುಕೊಂಡಿದ್ದ ತ್ರಾಣವನ್ನು ಬೇಗನೇ ಪಡೆಯಬಹುದು. ಇಂತಹ ಆಹಾರಗಳ ಬಗ್ಗೆ ಕೆಳಗಿನ ಮಹತ್ವದ ಮಾಹಿತಿಗಳನ್ನು ನೀಡಲಾಗಿದೆ..

ದಾಳಿಂಬೆ

ದಾಳಿಂಬೆ

ಎಲ್ಲಾ ಕೆಂಪು ಹಣ್ಣುಗಳಲ್ಲಿ ಕಬ್ಬಿಣಾಂಶವು ಹೆಚ್ಚಾಗಿರುತ್ತದೆ. ಇವುಗಳೆಲ್ಲವು ಪ್ಲೇಟ್‍ಲೆಟ್‍ಗಳನ್ನು ಹೆಚ್ಚು ಮಾಡಲು ನೆರವಾಗುತ್ತವೆ. ದಾಳಿಂಬೆಗಳಲ್ಲಿ ವಿಟಮಿನ್‍ಗಳ ಪ್ರಮಾಣವು ಕಡಿಮೆಯಿರುತ್ತದೆ. ಇವುಗಳು ಡೆಂಗ್ಯೂ ಜ್ವರದ ಮೇಲೆ ಹೋರಾಡಲು ಬೇಕಾದ ಶಕ್ತಿಯನ್ನು ನೀಡುತ್ತವೆ.

ಹಸಿರು ಸೊಪ್ಪುಗಳು

ಹಸಿರು ಸೊಪ್ಪುಗಳು

ಹಸಿರು ಸೊಪ್ಪುಗಳಲ್ಲಿ ವಿಟಮಿನ್ ಕೆ ಅಧಿಕ ಪ್ರಮಾಣದಲ್ಲಿರುತ್ತದೆ. ಹಸಿರು ಸೊಪ್ಪುಗಳನ್ನು ಸೇವಿಸುವುದರಿಂದ ಪ್ಲೇಟ್‍ಲೆಟ್‍ಗಳನ್ನು ಹೆಚ್ಚಿಸಿಕೊಳ್ಳಬಹುದು. ಪಾಲಕ್ ಸೊಪ್ಪು, ಕೇಲ್ ಮತ್ತು ಇನ್ನಿತರ ಹಸಿರು ಸೊಪ್ಪುಗಳನ್ನು ನೀವು ಈ ಉದ್ದೇಶಕ್ಕಾಗಿ ಸೇವಿಸಬಹುದು.

ವೋಲ್ ಗ್ರೇನ್ ಆಹಾರಗಳು

ವೋಲ್ ಗ್ರೇನ್ ಆಹಾರಗಳು

ನಿಮಗೆ ಕಾಯಿಲೆ ಬಂದಾಗ ನೀವು ಸೇವಿಸಬಹುದಾದ ಅತ್ಯುತ್ತಮ ಆಹಾರವೆಂದರೆ, ಅದು ವೋಲ್ ಗ್ರೇನ್ ಆಹಾರಗಳಾಗಿರುತ್ತವೆ. ಇವುಗಳಲ್ಲಿ ನಾರಿನಂಶ, ಪೋಷಕಾಂಶಗಳು, ಖನಿಜಾಂಶಗಳು ಮತ್ತು ಇತ್ಯಾದಿಗಳು ಇರುತ್ತವೆ. ಇವು ಸ್ವಯಂಚಾಲಿತವಾಗಿ ಪ್ಲೇಟ್‍ಲೆಟ್‍ಗಳ ಪ್ರಮಾಣವನ್ನು ಹತೋಟಿಯಲ್ಲಿಡುತ್ತವೆ.

ಹೆಚ್ಚಿನ ದ್ರವಾಹಾರಗಳನ್ನು ಸೇವಿಸಿ

ಹೆಚ್ಚಿನ ದ್ರವಾಹಾರಗಳನ್ನು ಸೇವಿಸಿ

ಡೆಂಗ್ಯೂ ಜ್ವರ ಎಂದು ಗೊತ್ತಾದ ಕ್ಷಣದಿಂದ ನಿಮ್ಮ ಆಹಾರದಲ್ಲಿ ದ್ರವಗಳು ಹೆಚ್ಚಿರುವಂತೆ ನೋಡಿಕೊಳ್ಳಿ. ಔಷಧಿ ಅಂಗಡಿಯಲ್ಲಿ ದೊರಕುವ ಓಆರ್ ಎಸ್ (ORS), ಕಬ್ಬಿನ ಹಾಲು, ಎಳನೀರು, ಲಿಂಬೆಹಣ್ಣಿನ ಶರಬತ್ತು, ಈಗತಾನೇ ಹಿಂಡಿದ ಕಿತ್ತಳೆಯ ರಸ, ವಿವಿಧ ತಾಜಾ ಹಣ್ಣುಗಳ ರಸಗಳನ್ನು ಸಾಧ್ಯವಾದಷ್ಟು ಹೆಚ್ಚಿನ ಪ್ರಮಾಣದಲ್ಲಿ ಮತ್ತು ನಿಯಮಿತವಾಗಿ ಅಂದರೆ ಗಂಟೆಗೊಂದು ಲೋಟ ಕುಡಿಯುತ್ತಲೇ ಇರುವುದರಿಂದ ದೇಹದಲ್ಲಿರುವ ವಿಷಕಾರಿ ವಸ್ತುಗಳನ್ನು ಹೊರಹಾಕಲು ನೆರವಾಗುತ್ತದೆ. ವಿವಿಧ ಹಣ್ಣುಗಳ ರಸದ ಮೂಲಕ ಲಭ್ಯವಾದ ವಿಟಮಿನ್ ಸಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಡೆಂಗಿ ವೈರಸ್ಸುಗಳನ್ನು ಸದೆಬಡಿಯಲು ಸಕ್ಷಮವಾಗುತ್ತದೆ.

ಪ್ರೋಟೀನ್ ಹೆಚ್ಚಿರುವ ಆಹಾರಗಳನ್ನು ಸೇವಿಸಿ

ಪ್ರೋಟೀನ್ ಹೆಚ್ಚಿರುವ ಆಹಾರಗಳನ್ನು ಸೇವಿಸಿ

ಹಾಲಿನ ಉತ್ಪನ್ನಗಳು, ಮೊಟ್ಟೆ, ಕೋಳಿಮಾಂಸ ಮತ್ತು ಮೀನುಗಳಲ್ಲಿ ಪ್ರೋಟೀನುಗಳು ಯಥೇಚ್ಛವಾಗಿದ್ದು ಡೆಂಗ್ಯೂ ಜ್ವರ ಪೀಡಿತರಿಗೆ ಉತ್ತಮ ನೆರವು ನೀಡಬಲ್ಲುದು. ಜ್ವರ ನಿಧಾನವಾಗಿ ಇಳಿಯುತ್ತಾ ಬಂದ ಬಳಿಕವೂ ಪ್ರೋಟೀನುಗಳ ಸೇವನೆಯನ್ನು ಮುಂದುವರೆಸುವುದು ಅಗತ್ಯ. ಏಕೆಂದರ್ ಜ್ವರವಿದ್ದಾಗ ದೇಹ ಕಳೆದುಕೊಂಡ ಪೋಷಕಾಂಶ ಮತ್ತು ತ್ರಾಣವನ್ನು ಮರುತುಂಬಿಸಲು ಈ ಪ್ರೋಟೀನುಗಳು ನೆರವಾಗುತ್ತವೆ.

ಮಸಾಲೆ ಮತ್ತು ಎಣ್ಣೆಯ ತಿಂಡಿಗಳನ್ನು ತ್ಯಜಿಸಿ

ಮಸಾಲೆ ಮತ್ತು ಎಣ್ಣೆಯ ತಿಂಡಿಗಳನ್ನು ತ್ಯಜಿಸಿ

ಈ ಜ್ವರವಿದ್ದಾಗ ಮತ್ತು ಜ್ವರ ಬಿಟ್ಟ ಕೆಲವು ದಿನಗಳವರೆಗೆ ಮಸಾಲೆಯುಕ್ತ ಮತ್ತು ಎಣ್ಣೆಯಲ್ಲಿ ಕರಿದ, ಹುರಿದ ತಿಂಡಿಗಳಿಗೆ ವಿದಾಯ ಹೇಳಿ.ಇವುಗಳನ್ನು ಜೀರ್ಣಿಸಿಕೊಳ್ಳುವುದು ರೋಗಿಗಳಿಗೆ ಕಷ್ಟ. ಅಲ್ಲದೇ ಇವುಗಳನ್ನು ಜೀರ್ಣಿಸಿಕೊಳ್ಳಲು ದೇಹ ಅಧಿಕ ಶಕ್ತಿಯನ್ನು ಬಳಸಬೇಕಾದುದರಿಂದ ಅತ್ತ ದೇಹದ ರೋಗ ನಿರೋಧಕ ಶಕ್ತಿಯ ಹಿಡಿತ ತಪ್ಪಿದ ವೈರಸ್ಸುಗಳು ಮತ್ತೆ ತಮ್ಮ ಬಲವೃದ್ಧಿಸಿಕೊಂಡು ಜ್ವರವನ್ನು ಇನ್ನಷ್ಟು ಉಲ್ಬಣಗೊಳಿಸಬಹುದು.

ಎಳನೀರು, ತಾಜಾ ಹಣ್ಣಿನ ರಸ ಹೆಚ್ಚು ಹೆಚ್ಚು ಸೇವಿಸಿ

ಎಳನೀರು, ತಾಜಾ ಹಣ್ಣಿನ ರಸ ಹೆಚ್ಚು ಹೆಚ್ಚು ಸೇವಿಸಿ

ಡೆಂಗ್ಯೂ ಜ್ವರ ಎಂದು ಗೊತ್ತಾದ ಬಳಿಕ ದಿನವಿಡೀ ಸಾಕಷ್ಟು ಪ್ರಮಾಣದಲ್ಲಿ ದ್ರವಾಹಾರವನ್ನು ಸೇವಿಸಬೇಕು. ಎಳನೀರು, ತಾಜಾ ಹಣ್ಣಿನ ರಸ, ಓ ಆರ್ ಎಸ್ (oral rehydration solution) ಮೊದಲಾದವು ನಿಮ್ಮ ದೇಹ ಕಳೆದುಕೊಂಡಿದ್ದ ನೀರಿನ ಅಂಶವನ್ನು ಮರುತುಂಬಿಸಲು ನೆರವಾಗುತ್ತವೆ.ದೇಹದಲ್ಲಿ ನೀರಿನ ಅಂಶ ಹೆಚ್ಚಿದ್ದಷ್ಟೂ ಶರೀರದಿಂದ ಕಲ್ಮಶಗಳನ್ನು ಹೊರಹಾಕುವ ಗತಿಯೂ ತೀವ್ರಗೊಳ್ಳುತ್ತದೆ ಹಾಗೂ ಈ ಮೂಲಕ ವೈರಸ್ಸುಗಳನ್ನು ಮೂತ್ರದ ಮೂಲಕ ಹೊರಹಾಕಲು ನೆರವಾಗುತ್ತದೆ. ಈ ಮೂಲಕ ದೇಹದ ರೋಗ ನಿರೋಧಕ ಶಕ್ತಿ ಈ ವೈರಸ್ಸುಗಳನ್ನು ನಿಗ್ರಹಿಸಲು ಸಾಧ್ಯವಾಗಿ ಜ್ವರ ಶೀಘ್ರವೇ ಕಡಿಮೆಯಾಗುತ್ತದೆ.

ಸೂಕ್ತ ಆಹಾರವನ್ನು ಸೇವಿಸಿ

ಸೂಕ್ತ ಆಹಾರವನ್ನು ಸೇವಿಸಿ

ಡೆಂಗ್ಯೂ ಜ್ವರ ಆವರಿಸಿದಾಗ ದೇಹದಲ್ಲಿ ಶಕ್ತಿ ತುಂಬಾ ಕಡಿಮೆಯಾಗುತ್ತದೆ. ಈ ಶಕ್ತಿಯನ್ನು ಮತ್ತೆ ಪಡೆಯಬೇಕಾದರೆ ಶರೀರಕ್ಕೆ ಹೆಚ್ಚಿನ ಪೌಷ್ಟಿಕಾಂಶಗಳ ಅಗತ್ಯವಿದೆ. ನಿಮ್ಮ ಊಟದಲ್ಲಿ ಕೊಂಚ ವೈವಿಧ್ಯತೆಯನ್ನು ಅನುಸರಿಸುವ ಮೂಲಕ ಜ್ವರದ ಕಾರಣ ನಾಲಿಗೆಯ ರುಚಿ ಕಳೆದುಕೊಂಡಿರುವುದನ್ನು ಕೊಂಚ ಮಟ್ಟಿಗೆ ಸರಿಪಡಿಸಬಹುದು.ಉತ್ತಮ ಆಯ್ಕೆ ಎಂದರೆ ಒಣಫಲಗಳು, ಸೂಪ್, ಸೇಬುಹಣ್ಣು, ಬಾಳೆಹಣ್ಣು, ಬೇಯಿಸಿದ ತರಕಾರಿ ಮೊದಲಾದವು. ರೋಗಿ ಬಯಸಿದ ಆಹಾರವನ್ನು ಕೊಂಚ ಹೆಚ್ಚೇ ಪ್ರಮಾಣದಲ್ಲಿ ಸೇವಿಸುವ ಮೂಲಕದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳು ಲಭಿಸುತ್ತದೆ ಹಾಗೂ ಜ್ವರದಿಂದ ಶೀಘ್ರವೇ ಗುಣಮುಖರಾಗಲು ನೆರವಾಗುತ್ತದೆ.

ಬೇವಿನ ಎಲೆ

ಬೇವಿನ ಎಲೆ

ಡೆಂಗ್ಯೂ ಜ್ವರಕ್ಕೆ ನೈಸರ್ಗಿಕ ಚಿಕಿತ್ಸೆ ಪಡೆಯುವುದು ಉತ್ತಮ ಆಯ್ಕೆಯಾಗಿದೆ. ನಮಗೆಲ್ಲಾ ಗೊತ್ತಿರುವಂತೆ ಬೇವಿನ ಎಲೆಗಳಲ್ಲಿ ಪ್ರಬಲವಾದ ಔಷಧೀಯ ಗುಣಗಳಿವೆ ಹಾಗೂ ವಿಶೇಷವಾಗಿ ವೈರಸ್ಸುಗಳನ್ನು ಕೊಲ್ಲಲು, ದೇಹದಲ್ಲಿ ವೃದ್ಧಿಗೊಳಿಸುವುದನ್ನು ತಡೆಯಲು ಹಾಗೂ ಸೋಂಕಿನಿಂದ ರಕ್ಷಿಸಲು ನೆರವಾಗುತ್ತದೆ. ಬೇವಿನ ಎಲೆಗಳ ಪ್ರಯೋಜನ ಪಡೆಯಬೇಕಾದರೆ ಮೊದಲು ಒಂದು ಪಾತ್ರೆಯಲ್ಲಿ ಕೊಂಚ ಬೇವಿನ ಎಲೆಗಳನ್ನು ತೋಯಿಸಿಟ್ಟು ಬಳಿಕ ಚೆನ್ನಾಗಿ ಕುದಿಸಬೇಕು. ಈ ನೀರನ್ನು ತಣಿಸಿ ಉಗುರುಬೆಚ್ಚಗಾದ ಬಳಿಕ ಕುಡಿಯುವ ಮೂಲಕ ರಕ್ತದಲ್ಲಿ ಕಿರುಬಿಲ್ಲೆಗಳ ಸಂಖ್ಯೆಗಳನ್ನು ಹೆಚ್ಚಿಸುತ್ತದೆ. ಪರಿಣಾಮವಾಗಿ ಡೆಂಘಿ ಜ್ವರದ ಪರಿಣಾಮಗಳನ್ನೂ ಕಡಿಮೆ ಮಾಡುತ್ತದೆ.

ಬೇವಿನ ಎಲೆಗಳ ಹೊರತಾಗಿ ಇನ್ನೂ ಕೆಲವು ನೈಸರ್ಗಿಕ ವಿಧಾನಗಳಿವೆ. ಪಪ್ಪಾಯಿ ಎಲೆಗಳು, ಕೊತ್ತಂಬರಿ ಸೊಪ್ಪು, ಮೆಂತೆ ಸೊಪ್ಪು, ತುಳಸಿ ಎಲೆಗಳು ಮೊದಲಾದವು ಸಹಾ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮೂಲಕ ಡೆಂಘಿ ಜ್ವರವನ್ನು ಕಡಿಮೆ ಮಾಡಲು ನೆರವಾಗುತ್ತವೆ. ಆದ್ದರಿಂದ ಜ್ವರ ಬಂದರೆ ಭಯಪಡದೇ ಮೊದಲಾಗಿ ವೈದ್ಯರ ಬಳಿ ತೆರಲಿ ಸೂಕ್ತ ಔಷಧಿಗಳನ್ನೂ ಹಾಗೂ ಮುನ್ನಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು. ವೈದ್ಯರು ನೀಡುವ ಸಲಹೆಗಳನ್ನು ತಪ್ಪದೇ ಪಾಲಿಸಬೇಕು. ಈ ಮೇಲೆ ವಿವರಿಸಿದ ಸಲಹೆಗಳೆಲ್ಲವೂ ವೈದ್ಯರು ಸೂಚಿಸಿದ್ದವೇ ಆಗಿರುವುದರಿಂದ ಎಲ್ಲವನ್ನೂ ಪಾಲಿಸುವ ಮೂಲಕ ಈ ಜ್ವರದಿಂದ ಶೀಘ್ರವೇ ಗುಣಮುಖರಾಗಬಹುದು.

ಹಲ್ಲುಜ್ಜುವುದನ್ನೂ ತಡೆಯಬೇಕು

ಹಲ್ಲುಜ್ಜುವುದನ್ನೂ ತಡೆಯಬೇಕು

ಡೆಂಗ್ಯೂ ಜ್ವರದ ಸಮಯದಲ್ಲಿ ರೋಗಿಯ ಒಸಡುಗಳು ಸಹಾ ದುರ್ಬಲವಾಗುತ್ತವೆ. ಈ ಸಮಯದಲ್ಲಿ ಹಲ್ಲುಜ್ಜುವ ಸಮಯದಲ್ಲಿ ಅತಿ ಹೆಚ್ಚಿನ ಕಾಳಜಿ ವಹಿಸಬೇಕು. ಏಕೆಂದರೆ ರೋಗಿಯ ರಕ್ತದಲ್ಲಿ ಪ್ಲೇಟ್ಲೆಟ್ ಅಥವಾ ರಕ್ತದ ಕಿರುಬಿಲ್ಲೆಗಳ ಸಂಖ್ಯೆ ತೀರಾ ಕಡಿಮೆಯಾಗುತ್ತದೆ. ಈ ಕಿರುಬಿಲ್ಲೆಗಳ ಕೆಲಸವೇನೆಂದರೆ ಗಾಯವಾದಾಗ ಹೊರಬರುವ ರಕ್ತದೊಂದಿಗೆ ಗಾಳಿಯ ಸಂಪರ್ಕ ಪಡೆಯುತ್ತಲೇ ಒಂದಕ್ಕೊಂದು ಅಂಟಿಕೊಂಡು ಗಡ್ಡೆಯಾಗಿಸಿ ಮತ್ತಷ್ಟು ರಕ್ತಸ್ರಾವವನ್ನು ತಡೆಗಟ್ಟುವುದು. ಇದನ್ನೇ ರಕ್ತ ಹೆಪ್ಪುಗಟ್ಟುವುದು ಎನ್ನುತ್ತೇವೆ.

ಈ ಕಿರುಬಿಲ್ಲೆಗಳ ಸಂಖ್ಯೆ ಕಡಿಮೆಯಾದರೆ ರಕ್ತಹೆಪ್ಪುಗಟ್ಟದೇ ಅಪಾಯಕಾರಿಯಾಗಬಹುದು. ಸಾಮಾನ್ಯವಾಗಿ ಹಲ್ಲುಜ್ಜುವಾಗ ಎಷ್ಟು ಎಚ್ಚರಿಕೆ ವಹಿಸಿದರೂ ಒಸಡುಗಳಿಂದ ರಕ್ತ ಒಸರುವ ಸಾಧ್ಯತೆ ಹೆಚ್ಚು. ಆದ್ದರಿಂದ ಜ್ವರ ಬಿಡುವವರೆಗೂ ಬ್ರಶ್ ಬಳಸದೇ ಕೇವಲ ಬೆರಳುಗಳಿಂದ ಮತ್ತು ಮುಕ್ಕಳಿಸುವ ಮೂಲಕ ಹಲ್ಲುಜ್ಜಿದರೆ ಸಾಕು. ಒಂದು ವೇಳೆ ಒಸಡುಗಳಿಂದ ರಕ್ತ ಒಸರಲು ಪ್ರಾರಂಭವಾದರೆ ನಿಲ್ಲಲು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ ಹಾಗೂ ಈಗಾಗಲೇ ಶಕ್ತಿಹೀನನಾಗಿರುವ ರೋಗಿ ಮತ್ತಷ್ಟು ಬಳಲುತ್ತಾನೆ.

ಬೇವು ಬೇಯಿಸಿದ ನೀರು ಕುಡಿಯಿರಿ

ಬೇವು ಬೇಯಿಸಿದ ನೀರು ಕುಡಿಯಿರಿ

ಕೊಂಚ ಬೇವಿನ ಎಲೆಗಳನ್ನು ನೀರಿನಲ್ಲಿ ಚೆನ್ನಾಗಿ ಕುದಿಸಿ ಸೋಸಿ ಒಂದು ಬಾಟಲಿಯಲ್ಲಿ ಸಂಗ್ರಹಿಸಿ. ದಿನಕ್ಕೆ ಎರಡರಿಂದ ಮೂರು ಬಾರಿ ಈ ನೀರನ್ನು ಕುಡಿಯಿರಿ. ಸಂಶೋಧನೆಗಳ ಮೂಲಕ ಈ ನೀರನ್ನು ನಿಯಮಿತವಾಗಿ ಕುಡಿದ ಡೆಂಘಿ ರೋಗಪೀಡಿತರ ರಕ್ತದಲ್ಲಿನ ಪ್ಲೇಟ್ಲೆಟ್ ಹಾಗೂ ಬಿಳಿರಕ್ತಕಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದು ರೋಗ ನಿರೋಧಕ ಶಕ್ತಿ ಹೆಚ್ಚಿದ್ದುದು ಕಂಡುಬಂದಿದೆ.

ಪಪ್ಪಾಯಿ ಎಲೆಗಳೇ ಬೆಸ್ಟ್

ಪಪ್ಪಾಯಿ ಎಲೆಗಳೇ ಬೆಸ್ಟ್

ಸ್ವಲ್ಪ ಪಪ್ಪಾಯಿ ಎಲೆಗಳನ್ನು ಸಂಗ್ರಹಿಸಿ ಇದನ್ನು ಚೆನ್ನಾಗಿ ತೊಳೆದು ಧೂಳು, ಕೊಳೆಯನ್ನು ನಿವಾರಿಸಿ ಈ ಎಲೆಗಳಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ವಿಟಮಿನ್ ಸಿ ಇದ್ದು ರೋಗ ನಿರೋಧಕ ವ್ಯವಸ್ಥೆ ಉತ್ತಮಗೊಳ್ಳಲು ನೆರವಾಗುತ್ತದೆ. ಅಲ್ಲದೇ ಇದರಲ್ಲಿ ಕಾರ್ಪೇಯ್ನ್ (Carpaine) ಎಂಬ ಪೋಷಕಾಂಶವಿದ್ದು ಇದು ರಕ್ತದ ಶುದ್ಧೀಕರಣ ಮತ್ತು ಪ್ಲೇಟ್ಲೆಟ್ ಸಂಖ್ಯೆಯಲ್ಲಿ ವೃದ್ಧಿಯಾಗಲು ನೆರವಾಗುತ್ತದೆ

*ಬಳಿಕ ಈ ಎಲೆಗಳನ್ನು ಚಿಕ್ಕದಾಗಿ ಹೆಚ್ಚಿ ಮಿಕ್ಸಿಯಲ್ಲಿ ನುಣ್ಣಗೆ ಅರೆಯಿರಿ. ನೀರು ಸೇರಿಸಬೇಡಿ. ಬಳಿಕ ತೆಳುವಾದ ಬಟ್ಟೆಯಲ್ಲಿ ಹಿಂಡಿ ರಸವನ್ನು ಸಂಗ್ರಹಿಸಿ. ಈ ರಸದಲ್ಲಿ ಸುಮಾರು ಎಂಟರಿಂದ ಹತ್ತು ಮಿ.ಲೀ ದ್ರವವನ್ನು ಪ್ರತಿದಿನ ಎರಡು ಬಾರಿ ಸೇವಿಸಿ. ಇದರಿಂದ ವಿಶೇಷವಾಗಿ ರಕ್ತದಲ್ಲಿನ ಪ್ಲೇಟ್ಲೆಟ್ ಸಂಖ್ಯೆ ಹೆಚ್ಚುತ್ತದೆ. ತನ್ಮೂಲಕ ಡೆಂಗ್ಯೂ ಜ್ವರವನ್ನು ನಿಗ್ರಹಿಸಲು ನೆರವಾಗುತ್ತದೆ.

*ಈ ರಸ ಅತಿ ಕಹಿಯಾಗಿದ್ದು ಯಾರಿಗೂ ಇಷ್ಟವಾಗುವುದಿಲ್ಲ. ಆದ್ದರಿಂದ ಇದನ್ನು ಸೇವಿಸುವ ಮುನ್ನ ಕೊಂಚ ಬೆಲ್ಲ ಸೇರಿಸಿ ತಿನ್ನಬಹುದು. ಆದರೆ ಈ ರಸವನ್ನು ಸೇವಿಸಿದ ತಕ್ಷಣವೇ ನೀರು ಕುಡಿಯಬಾರದು. ಇದರಿಂದ ಈ ರಸದ ಪೂರ್ಣವಾದ ಫಲವನ್ನು ಪಡೆಯಲು ಸಾಧ್ಯವಾಗುತ್ತದೆ.

English summary

Foods For Dengue Patients To Help Recover Fast

Dengue fever falls under chronic illness category. Patients diagnosed with dengue, if left untreated or lately diagnosed, can lose their life. It is a viral infection caused due to mosquito bite. As per global statistics, dengue fever is prevalent worldwide but highest number of dengue cases is recorded in
X
Desktop Bottom Promotion