ಇದೇ ಕಾರಣಕ್ಕೆ ಮೂತ್ರದಿಂದ ವಿಪರೀತ ವಾಸನೆ ಬರುವುದು!

By: manu
Subscribe to Boldsky

ಕೆಲವೊಮ್ಮೆ ಮೂತ್ರವಿಸರ್ಜಿಸಿದ ಬಳಿಕ, ಹೊರ ಹೊಮ್ಮುವ ಒಂದು ರೀತಿಯ ಕೆಟ್ಟ ವಾಸನೆ ನಿಮಗೆ ಅಸಹ್ಯ ತರಿಸಬಹುದು. ಇದಕ್ಕೆ ಕಾರಣವೇನಿರಬಹುದು? ಸಾಮಾನ್ಯವಾಗಿ ಮೂತ್ರವೆಂದರೆ ದೇಹದಿಂದ ವಿಸರ್ಜಿಲ್ಪಟ್ಟ ಕಲ್ಮಶ ಹಾಗೂ ವಿಷಕಾರಿ ವಸ್ತುಗಳೇ ಆಗಿರುವ ಕಾರಣ ಇದರಲ್ಲಿ ವಾಸನೆ ಇರುವುದು ಸಹಜ. ಆದರೆ ಈ ವಾಸನೆ ಕಟುವಾಗಿದ್ದು ಅಮೋನಿಯಾದಷ್ಟು ಪ್ರಬಲವಾಗಿದ್ದರೆ ಇದಕ್ಕೆ ನಿಮ್ಮ ಆಹಾರದ ಕ್ರಮ, ಕುಡಿಯುವ ದ್ರವಗಳು ಹಾಗೂ ಮೂತ್ರನಾಳದ ಸೋಂಕು ಕಾರಣವಾಗಿರಬಹುದು.

ಎಚ್ಚರ: ಮೂತ್ರದ ಬಣ್ಣದಲ್ಲಿ ಏರುಪೇರಾದರೆ ಅಪಾಯ ಕಟ್ಟಿಟ್ಟ ಬುತ್ತಿ..!

ಕೆಲವೊಮ್ಮೆ ಈ ವಾಸನೆ ತಾತ್ಕಾಲಿಕವಾಗಿದ್ದು ಹಿಂದಿನ ದಿನದಲ್ಲಿ ಸೇವಿಸಿದ್ದ ಯಾವುದೋ ಭಿನ್ನವಾದ ಆಹಾರ ಅಥವಾ ದ್ರವದ ಪ್ರಭಾವವಿರಬಹುದು. ಆದರೆ ಇದು ಎರಡು ದಿನಕ್ಕೂ ಹೆಚ್ಚು ಕಾಲ ಮುಂದುವರೆದರೆ ಮಾತ್ರ ವೈದ್ಯರಲ್ಲಿ ತಕ್ಷಣವೇ ತಪಾಸಣೆಗೊಳಪಡುವುದು ಅವಶ್ಯವಾಗಿದೆ. ಏಕೆಂದರೆ ಮೂತ್ರದ ಈ ವಾಸನೆಗೆ ಕೆಲವು ಆರೋಗ್ಯದ ಅಂಶಗಳು ಕಾರಣವಾಗಿರಬಹುದು. ಇವು ಎಷ್ಟು ಮಟ್ಟಿಗೆ ಅಪಾಯಕಾರಿ? ಬನ್ನಿ ನೋಡೋಣ:

ನಿರ್ಜಲೀಕರಣ

ನಿರ್ಜಲೀಕರಣ

ಕೆಲವು ಕಾರಣಗಳಿಂದ ದಿನದಲ್ಲಿ ಸಾಕಷ್ಟು ನೀರು ಕುಡಿಯದೇ ಇದ್ದರೆ ಇದರಿಂದಲೂ ಮೂತ್ರದಲ್ಲಿ ವಾಸನೆ ಬರಬಹುದು.ಏಕೆಂದರೆ ಹೆಚ್ಚಿನ ನೀರು ದೇಹದಲ್ಲಿದ್ದರೆ ಮೂತ್ರದ ಮೂಲಕ ಹೊರಹೋಗುವ ಕಲ್ಮಶಗಳು ಕರಗಿ ವಾಸನೆಯನ್ನು ಇಲ್ಲವಾಗಿಸುತ್ತದೆ. ಆದರೆ ನೀರೇ ಇಲ್ಲದಿದ್ದರೆ ಮೂತ್ರದಲ್ಲಿಯೂ ನೀರು ಕಡಿಮೆಯಾಗಿ ಮೂತ್ರ ಹೆಚ್ಚು ಸಾಂದ್ರೀಕೃತವಾಗುವ ಮೂಲಕ ಕೆಲವು ಲವಣ ಮತ್ತು ರಾಸಾಯನಿಕಗಳು ಅಮೋನಿಯಾದಂತೆ ವಾಸನೆ ಹೊಡೆಯತೊಡಗುತ್ತದೆ. ಅಲ್ಲದೇ ಮೂತ್ರದ ಬಣ್ಣವೂ ಗಾಢ ಹಳದಿ ಬಣ್ಣ ಪಡೆಯುತ್ತದೆ.

ಮಧುಮೇಹ

ಮಧುಮೇಹ

ಮಧುಮೇಹಿಗಳ ಮೂತ್ರವೂ ವಾಸನೆಯಿಂದ ಕೂಡಿರುತ್ತದೆ. ಇವರ ಯಕೃತ್‌ನಲ್ಲಿ ಹೆಚ್ಚಿನ ಪ್ರಮಾಣ ಕೀಟೋನುಗಳು (ketones) ಸಂಗ್ರಹಗೊಳ್ಳುವ ಕಾರಣ ಸಾಕಷ್ಟು ನೀರು ಕುಡಿದರೂ ಮೂತ್ರ ಅಮೋನಿಯಾ ವಾಸನೆಯಿಂದ ಕೂಡಿರುತ್ತದೆ. ಒಂದೇ ತಿಂಗಳಿನಲ್ಲಿ ಮಧುಮೇಹ ನಿಯಂತ್ರಣ-ಚಾಲೆಂಜ್‌ಗೆ ರೆಡಿನಾ?

ಮೂತ್ರಪಿಂಡದ ಕಲ್ಲುಗಳು

ಮೂತ್ರಪಿಂಡದ ಕಲ್ಲುಗಳು

ಮೂತ್ರಪಿಂಡದಲ್ಲಿ ಕಲ್ಲುಗಳಿದ್ದರೂ ಮೂತ್ರದಲ್ಲಿ ವಾಸನೆ ಇರುತ್ತದೆ. ಮೂತ್ರಕೋಶದಲ್ಲಿ ಕಲ್ಲುಗಳಿರುವ ರೋಗಿಗಳಿಗೂ ಈ ವಾಸನೆಯ ಅನುಭವ ನಿಯಮಿತವಾಗಿ ಆಗುತ್ತಿರುತ್ತದೆ.

ಕಿಡ್ನಿ ಕಲ್ಲು ಕರಗಿಸುವ, ಹಿತ್ತಲ ಗಿಡದ ಮದ್ದು

ಯಕೃತ್‌ನ ತೊಂದರೆ

ಯಕೃತ್‌ನ ತೊಂದರೆ

ಯಕೃತ್ ನಲ್ಲಿ ಸೋಂಕು ಇದ್ದರೂ ಮೂತ್ರದ ಬಣ್ಣ ಹಳದಿಯಾಗುವುದು ಹಾಗೂ ವಾಸನೆಯಿಂದ ಕೂಡಿರುತ್ತದೆ. ಏಕೆಂದರೆ ಸೋಂಕಿನ ಕಾರಣದಿಂದ ಯಕೃತ್ ದೇಹದಿಂದ ವಿಷಕಾರಿ ವಸ್ತುಗಳನ್ನು ನಿವಾರಿಸಲು ವಿಫಲಗೊಂಡರೆ ಅಮೋನಿಯಾ ಮಟ್ಟ ಮೂತ್ರದಲ್ಲಿ ಏರುತ್ತದೆ ಹಾಗೂ ಇದು ವಾಸನೆಯಿಂದ ಕೂಡಿರುತ್ತದೆ.

ದೇಹದ ಲಿವರ್ ಹಾನಿಯ ಚಿಹ್ನೆಗಳನ್ನು ಪತ್ತೆ ಹಚ್ಚುವುದು ಹೇಗೆ?

ತಪ್ಪಾದ ಆಹಾರ ಕ್ರಮ

ತಪ್ಪಾದ ಆಹಾರ ಕ್ರಮ

ಕೆಲವು ಆಹಾರಗಳು ಹಾಗೂ ಔಷಧಿಗಳಲ್ಲಿರುವ ಪೋಷಕಾಂಶಗಳಲ್ಲಿ ಮೂತ್ರಕ್ಕೆ ವಾಸನೆ ತರಿಸುವ ಗುಣವಿದ್ದು ಇವೂ ಮೂತ್ರದ ವಾಸನೆಗೆ ಕಾರಣವಾಗಿರಬಹುದು. ವಿಶೇಷವಾಗಿ ಕಳೆದ ಎರಡು ದಿನಗಳಲ್ಲಿ ಶತಾವರಿ ಅಥವಾ ಆಸ್ಪರಾಗಸ್ ಅನ್ನು ತಿನ್ನುತ್ತಿದ್ದರೆ ಇದು ಮೂತ್ರದ ವಾಸನೆಗೆ ಕಾರಣವಾಗಿರಬಹುದು. ಅಲ್ಲದೇ ನಿಮ್ಮ ಆಹಾರ ಅಥವಾ ಔಷಧಿಯಲ್ಲಿ ವಿಟಮಿನ್ B6 ಅಂಶವಿದ್ದರೂ ಮೂತ್ರ ವಾಸನೆಯಿಂದ ಕೂಡಿರುತ್ತದೆ. ಅಷ್ಟೇ ಅಲ್ಲ, ನಿಮ್ಮ ಆಹಾರದಲ್ಲಿ ಪ್ರೋಟೀನುಗಳು ಹೆಚ್ಚಿದ್ದರೂ ವಾಸನೆ ಮೂಡಬಹುದು.

ಮೂತ್ರಪಿಂಡಗಳ ತೊಂದರೆ

ಮೂತ್ರಪಿಂಡಗಳ ತೊಂದರೆ

ನಿಮ್ಮ ಮೂತ್ರದಲ್ಲಿ ಅಮೋನಿಯಾ ಮಟ್ಟವನ್ನು ನಿಯಂತ್ರಿಸಲು ಮೂತ್ರಪಿಂಡಗಳು ಸತತವಾಗಿ ಕಾರ್ಯನಿರ್ವಹಿಸುತ್ತಿರುತ್ತವೆ. ಒಂದು ವೇಳೆ ಮೂತ್ರಪಿಂಡಗಳ ಕ್ಷಮತೆ ಕ್ಷೀಣಿಸಿದ್ದರೆ ಅಥವಾ ಮೂತ್ರದಲ್ಲಿ ಅತಿ ಹೆಚ್ಚಿನ ಆಮ್ಲೀಯ ಅಂಶವಿದ್ದರೂ ಮೂತ್ರ ವಾಸನೆಯಿಂದ ಕೂಡಿರುತ್ತದೆ.

ಮೂತ್ರನಾಳದಲ್ಲಿನ ಸೋಂಕು

ಮೂತ್ರನಾಳದಲ್ಲಿನ ಸೋಂಕು

ಮೂತ್ರನಾಳದಲ್ಲಿ ಸೋಂಕು ಇದ್ದರೂ ಮೂತ್ರ ವಾಸನೆಯಿಂದ ಕೂಡಿರುತ್ತದೆ. ಏಕೆಂದರೆ ಈ ಸೋಂಕಿಗೆ ಕಾರಣವಾಗಿರುವ ಬ್ಯಾಕ್ಟೀರಿಯಾ ಮೂತ್ರದ ಮೂಲಕ ಹೊರಬರುವುದರಿಂದ ವಾಸನೆ ಇರುತ್ತದೆ. ಮೂತ್ರವ್ಯವಸ್ಥೆಯ ಯಾವುದೇ ಹಂತದಲ್ಲಿ ಬ್ಯಾಕ್ಟೀರಿಯಾ ಇದ್ದರೂ ಮೂತ್ರದಲ್ಲಿ ವಾಸನೆ ಇರುತ್ತದೆ.

ಗರ್ಭಾವಸ್ಥೆ

ಗರ್ಭಾವಸ್ಥೆ

ಕೆಲವು ಮಹಿಳೆಯರಲ್ಲಿ ಗರ್ಭಾವಸ್ಥೆಯ ಅವಧಿಯಲ್ಲಿ ಮೂತ್ರ ವಾಸನೆಯಿಂದ ಕೂಡಿರುತ್ತದೆ. ಏಕೆಂದರೆ ಈ ಅವಧಿಯಲ್ಲಿ ಮೂತ್ರನಾಳದಲ್ಲಿ ಸೋಂಕು ತಗಲುವ ಸಾಧ್ಯತೆ ಇತರ ಸಮಯಕ್ಕಿಂತಲೂ ಹೆಚ್ಚಾಗಿರುವ ಕಾರಣ ವಾಸನೆ ಉಂಟಾಗುವ ಸಾಧ್ಯತೆ ಹೆಚ್ಚು.

English summary

Does Your Urine Smell Like Ammonia? Here Are The Reasons!

At times, your urine may smell like ammonia. But why does that happen? Well, high levels of waste products and toxins in your urine is the major reason for that smell. Your diet, drinking habits and even infections could make your urine smell like ammonia. Of course, if it smells like that for a day or two, you don't need to lose your sleep over it. But if the smell doesn't go away, then rush to the doctor immediately.
Story first published: Friday, May 26, 2017, 23:41 [IST]
Subscribe Newsletter