ರಕ್ತದೊತ್ತಡ ನಿಯಂತ್ರಿಸುತ್ತೆ, ಅಡುಗೆಮನೆಯ ಸಣ್ಣ ತುಂಡು 'ಶುಂಠಿ'!

By: Hemanth
Subscribe to Boldsky

ಒತ್ತಡದ ಜೀವನಶೈಲಿ, ತಿನ್ನುವ ಆಹಾರ ಮತ್ತು ನಿದ್ರಾಹೀನತೆಯಿಂದಾಗಿ ಇಂದಿನ ದಿನಗಳಲ್ಲಿ ಹೆಚ್ಚಿನ ಜನರು ಅಧಿಕ ರಕ್ತದೊತ್ತಡದ ಸಮಸ್ಯೆಗೆ ಸಿಲುಕಿಕೊಳ್ಳುತ್ತಾರೆ. ಹಿಂದೆ ಸುಮಾರು 50 ದಾಟಿದವರಲ್ಲಿ ಮಾತ್ರ ಇಂತಹ ಸಮಸ್ಯೆ ಕಾಣಸಿಗುತ್ತಾ ಇತ್ತು. ಕಾಲ ಬದಲಾದಂತೆ ಕಾಯಿಲೆಗಳು ಕೂಡ ಬೇಗನೆ ಆವರಿಸಿಕೊಳ್ಳಲು ಆರಂಭಿಸುತ್ತದೆ. ಅಧಿಕ ರಕ್ತದೊತ್ತಡಕ್ಕೆ ಪ್ರಮುಖ ಕಾರಣವೆಂದರೆ ಒತ್ತಡ, ನಿದ್ರಾ ಕ್ರಮದಲ್ಲಿ ಅನಿಯಮಿತ ಬದಲಾವಣೆ ಮತ್ತು ಉಪ್ಪು ಹೆಚ್ಚಿಗೆ ಇರುವಂತಹ ಆಹಾರ ಸೇವನೆ. ರಕ್ತನಾಳಗಳಿಗೆ ಅತಿಯಾದ ರಕ್ತವು ಸರಬರಾಜು ಆದಾಗ ರಕ್ತದೊತ್ತಡ ಸಂಭವಿಸುತ್ತದೆ.

ರಕ್ತದೊತ್ತಡ ನಿವಾರಣೆಗೆ ಬೆಳ್ಳುಳ್ಳಿಯ ಹಲವು ಅವತಾರಗಳು 

ಅಧಿಕ ರಕ್ತದೊತ್ತಡವು ತುಂಬಾ ಅಪಾಯಕಾರಿ. ಹೃದಯವು ಬೇಗನೆ ರಕ್ತವನ್ನು ಪಂಪ್ ಮಾಡುವಂತಾಗುತ್ತದೆ. ಹೀಗೆ ಆಗುವುದರಿಂದ ಅಪಧಮನಿಗಳಿಗೆ ತುಂಬಾ ಭಾರ ಬೀಳುವುದು. ಇದರಿಂದ ಪಾರ್ಶ್ವವಾಯು, ಕಿಡ್ನಿ ತೊಂದರೆ ಅಥವಾ ಹೃದಯಾಘಾತವಾಗಬಹುದು. ರಕ್ತದೊತ್ತಡಕ್ಕೆ ಪ್ರಮುಖವಾಗಿ ಧೂಮಪಾನ, ಬೊಜ್ಜು, ಅತಿಯಾಗಿ ಉಪ್ಪಿನಾಂಶವಿರುವ ಆಹಾರ ಸೇವನೆ, ಆಲ್ಕೋಹಾಲ್ ಸೇವನೆ, ಒತ್ತಡ ಮತ್ತು ನಿದ್ರಾಹೀನತೆ ಪ್ರಮುಖ ಕಾರಣವಾಗಿದೆ.

ರಕ್ತದೊತ್ತಡವು ಇಂದು ಸಾಮಾನ್ಯ ಸಮಸ್ಯೆಯಾಗಿದೆ. ಇದನ್ನು ಹೋಗಲಾಡಿಸಲು ಹಲವಾರು ವಿಧಾನಗಳಿವೆ. ರಕ್ತದೊತ್ತಡ ನಿವಾರಣೆ ಮಾಡಲು ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು ಮತ್ತು ನಿಯಮಿತವಾಗಿ ಔಷಧಿ ಸೇವಿಸಬೇಕು. ಕೆಲವೊಂದು ಗಿಡಮೂಲಿಕೆಗಳು ರಕ್ತದೊತ್ತಡ ನಿವಾರಣೆ ಮಾಡುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಅದರಲ್ಲೂ ನಾವು ದಿನನಿತ್ಯವು ಬಳಸುವಂತಹ ಶುಂಠಿ ತುಂಬಾ ಪರಿಣಾಮಕಾರಿ. ಶುಂಠಿಯನ್ನು ಯಾವ ರೀತಿ ಬಳಸಿಕೊಂಡರೆ ರಕ್ತದೊತ್ತಡ ನಿಯಂತ್ರಿಸಬಹುದು ಮತ್ತು ಯಾವುದೇ ಅಡ್ಡಪರಿಣಾಮವಿಲ್ಲದ ಈ ಮದ್ದನ್ನು ತಯಾರಿಸುವುದು ಹಾಗೂ ಬಳಸುವುದು ಹೇಗೆ ಎಂದು ಬೋಲ್ಡ್ ಸ್ಕೈ ನಿಮಗೆ ಹೇಳಿಕೊಡಲಿದೆ....

ಶುಂಠಿ ಮತ್ತು ಅರಿಶಿನ ಚಹಾ

ಶುಂಠಿ ಮತ್ತು ಅರಿಶಿನ ಚಹಾ

ಅರಿಶಿನದಲ್ಲಿ ಇರುವಂತಹ ಕುರ್ಕ್ಯುಮಿನ್ ರಕ್ತನಾಳಗಳನ್ನು ಶಮನಗೊಳಿಸುವುದು ಮತ್ತು ಹೃದಯಕ್ಕೆ ಅಧಿಕ ರಕ್ತದೊತ್ತಡದಿಂದ ಆಗುವಂತಹ ಹಾನಿಯಿಂದ ಕಾಪಾಡುವುದು.

ಬೇಕಾಗುವ ಸಾಮಗ್ರಿಗಳು

ಬೇಕಾಗುವ ಸಾಮಗ್ರಿಗಳು

*1 ಗ್ರೀನ್ ಟೀ ಬ್ಯಾಗ್

*1 ಚಮಚ ಶುಂಠಿ ರಸ

*¼ ಚಮಚ ಅರಿಶಿನ ಹುಡಿ

*1 ಚಮಚ ಜೇನುತುಪ್ಪ

ವಿಧಾನ

ವಿಧಾನ

*ಸಾಮಾನ್ಯವಾಗಿ ತಯಾರಿಸುವಂತೆ ಗ್ರೀನ್ ಟೀ ತಯಾರಿಸಿ.

*ಇದಕ್ಕೆ ಶುಂಠಿ ರಸ ಮತ್ತು ಅರಿಶಿನ ಹಾಕಿಕೊಳ್ಳಿ.

*ರುಚಿಗೆ ಜೇನುತುಪ್ಪ ಹಾಕಿ ಮತ್ತು ಪ್ರತಿನಿತ್ಯ ಸೇವಿಸಿ.

ಶುಂಠಿ ಮತ್ತು ಏಲಕ್ಕಿ

ಶುಂಠಿ ಮತ್ತು ಏಲಕ್ಕಿ

ಏಲಕ್ಕಿಯಲ್ಲಿ ಅಧಿಕ ರಕ್ತದೊತ್ತಡ ನಿವಾರಣೆ ಮಾಡುವ ಗುಣಗಳು ಇವೆ ಎಂದು ಅಧ್ಯಯನಗಳು ಹೇಳಿವೆ. ಶುಂಠಿ ಜತೆಗೆ ಇದನ್ನು ಸೇರಿಸಿದಾಗ ಅದು ವೇಗ ಹಾಗೂ ತುಂಬಾ ಪರಿಣಾಮಕಾರಿಯಾಗಿರುವುದು.

ಬೇಕಾಗುವ ಸಾಮಗ್ರಿಗಳು

ಬೇಕಾಗುವ ಸಾಮಗ್ರಿಗಳು

*1 ಚಮಚ ಜಜ್ಜಿರುವ ಏಲಕ್ಕಿ

*2-3 ಚಮಚ ತಾಜಾ ಶುಂಠಿ

*1 ಚಮಚ ಬ್ಲ್ಯಾಕ್ ಟೀ

*1 ಕಪ್ ನೀರು

ವಿಧಾನ

ವಿಧಾನ

*ಒಂದು ಕಪ್ ನೀರಿಗೆ ಎಲ್ಲಾ ಸಾಮಗ್ರಿಗಳನ್ನು ಹಾಕಿಕೊಂಡು ಮಿಶ್ರಣ ಮಾಡಿ.

*ಚಹಾವನ್ನು ಸೋಸಿಕೊಳ್ಳಿ ಮತ್ತು ಶಮನಕಾರಿ ಗುಣ ಪಡೆಯಿರಿ.

*ಚಹಾಗೆ ಒಂದು ಚಮಚ ಜೇನುತುಪ್ಪ ಹಾಕಿಕೊಂಡು ಸಿಹಿ ಮಾಡಿಕೊಳ್ಳಬಹುದು.

English summary

Different Ways To Use Ginger To Control High Blood Pressure

High blood pressure is also called hypertension. It is very common in today's generation because of stress, irregular sleeping patterns and consuming sodium-rich foods. Blood pressure is the measure of force of blood pushing against the blood vessel walls. The heart pumps blood into the blood vessels which carry the blood throughout the body. High blood pressure can be dangerous because it results in the heart working faster to pump out blood.
Story first published: Friday, July 7, 2017, 7:02 [IST]
Subscribe Newsletter