ಇದೆಲ್ಲಾ ಖತರ್ನಾಕ್ 'ಕ್ಯಾನ್ಸರ್' ರೋಗದ ಲಕ್ಷಣಗಳು! ನಿರ್ಲಕ್ಷಿಸಬೇಡಿ

By: manu
Subscribe to Boldsky

ಕ್ಯಾನ್ಸರ್ ತುಂಬಾ ಅಪಾಯಕಾರಿ ಕಾಯಿಲೆ ಎನ್ನುವುದು ಪ್ರತಿಯೊಬ್ಬರಿಗೂ ತಿಳಿದಿರುವ ವಿಚಾರ. ಇದನ್ನು ಆರಂಭದಲ್ಲಿಯೇ ಪತ್ತೆ ಹಚ್ಚಿದರೆ ಅದಕ್ಕೆ ಸೂಕ್ತ ಚಿಕಿತ್ಸೆ ನೀಡಬಹುದು. ಇಲ್ಲವಾದಲ್ಲಿ ಇದು ಪ್ರಾಣಕ್ಕೆ ಕುತ್ತು ತರಬಹುದು. ನಿಮ್ಮ ಕುಟುಂಬದಲ್ಲಿ ಯಾರಿಗಾದರೂ ಮೊದಲು ಕ್ಯಾನ್ಸರ್ ಬಂದಿದ್ದರೆ ಆಗ ನೀವು ಕ್ಯಾನ್ಸರ್ ನ ಕೆಲವೊಂದು ಲಕ್ಷಣಗಳನ್ನು ಕಡೆಗಣಿಸಬಾರದು.

ದೇಹದಲ್ಲಿ ಕೆಲವೊಂದು ಬದಲಾವಣೆಗಳು ಹಾಗೂ ತೊಂದರೆಗಳು ಕ್ಯಾನ್ಸರ್‌ನ ಲಕ್ಷಣವಾಗಿರಬಹುದು. ಕೆಲವು ಜನರು ಇದನ್ನು ಸಾಮಾನ್ಯವೆಂದು ಪರಿಗಣಿಸಿ ನಿರ್ಲಕ್ಷ್ಯ ಮಾಡುವರು. ಇದು ತುಂಬಾ ಅಪಾಯಕಾರಿ. ಮುಂದೆ ಇದು ನಿಮ್ಮ ಪ್ರಾಣವನ್ನೇ ಬಲಿ ಪಡೆಯಬಹುದು. ಆರಂಭದಲ್ಲೇ ಕ್ಯಾನ್ಸರ್‌ನ್ನು ಪತ್ತೆ ಹಚ್ಚಿದರೆ ಅದಕ್ಕೆ ಚಿಕಿತ್ಸೆ ಕಷ್ಟವೇನಲ್ಲ.

ಸೈಲೆಂಟಾಗಿ ಕಾಡುವ ಭಯಾನಕ ಚರ್ಮದ ಕ್ಯಾನ್ಸರ್‌ನ ಲಕ್ಷಣಗಳು

ಪ್ರತಿಯೊಂದು ಕ್ಯಾನ್ಸರ್‌ಗೆ ಕೂಡ ಭಿನ್ನ ರೀತಿಯ ಲಕ್ಷಣಗಳು ಇರುವುದು. ಯಾವ ಭಾಗದಲ್ಲಿ ಕ್ಯಾನ್ಸರ್ ಗಡ್ಡೆ ಬೆಳೆಯುತ್ತಿದೆ ಮತ್ತು ಎಷ್ಟು ದೊಡ್ಡದಾಗಿ ಬೆಳೆಯುತ್ತಿದೆ ಎನ್ನುವುದನ್ನು ಇದು ಅವಲಂಬಿಸಿರುವುದು. ಕ್ಯಾನ್ಸರ್ ನ ಕೆಲವೊಂದು ಲಕ್ಷಣಗಳು ನಮ್ಮ ದೇಹದಲ್ಲಿ ಕಾಣಿಸಿಕೊಳ್ಳುವುದು. ಇದನ್ನು ನಿರ್ಲಕ್ಷ್ಯ ಮಾಡಬಾರದು. ಈ ಲೇಖನದಲ್ಲಿ ಕ್ಯಾನ್ಸರ್‌ನಿಂದ ದೇಹದಲ್ಲಿ ಆಗುವ ಕೆಲವು ಬದಲಾವಣೆಗಳ ಬಗ್ಗೆ ತಿಳಿಸಿದ್ದೇವೆ. ಇದನ್ನು ಗಮನಿಸಿ, ನಿಮ್ಮ ದೇಹವನ್ನು ಕ್ಯಾನ್ಸರ್‌ನಿಂದ ರಕ್ಷಿಸಿ....

ಮಲದಲ್ಲಿ ಬದಲಾವಣೆ

ಮಲದಲ್ಲಿ ಬದಲಾವಣೆ

ಮಲದ ಗಾತ್ರದಲ್ಲಿ ಬದಲಾವಣೆ, ಆಗಾಗ ಭೇದಿ ಮತ್ತು ಕ್ರಮಬದ್ಧವಾಗಿರದೇ ಇರುವುದು ಜೀರ್ಣಕ್ರಿಯೆಯಲ್ಲಿನ ಕ್ಯಾನ್ಸರ್ ನ ಲಕ್ಷಣಗಳಾಗಿದೆ. ಹೊಟ್ಟೆಯ ಭಾಗದಲ್ಲಿ ಯಾವಾಗಲೂ ಸಮಸ್ಯೆಯಾಗುತ್ತಾ ಇದ್ದರೆ ಇದು ಖಂಡಿತವಾಗಿಯೂ ಕ್ಯಾನ್ಸರ್ ಲಕ್ಷಣ. ಇದು ಕ್ಯಾನ್ಸರ್ ನ ಎಚ್ಚರಿಕೆಯ ಸಂಕೇತವಾಗಿದೆ.

ಮೂತ್ರದಲ್ಲಿ ಬದಲಾವಣೆ

ಮೂತ್ರದಲ್ಲಿ ಬದಲಾವಣೆ

ಪದೇ ಪದೇ ನೀವು ಮೂತ್ರ ಮಾಡಲು ಹೋಗುತ್ತಾ ಇದ್ದರೆ ಅಥವಾ ಮೂತ್ರ ಮಾಡುವಾಗ ತೊಂದರೆಯಾಗುತ್ತಿದ್ದರೆ ಇದು ಕ್ಯಾನ್ಸರ್ ನ ಲಕ್ಷಣವಾಗಿದೆ. ಇದು ಜನನಾಂಗ ಅಥವಾ ಮೂತ್ರಕೋಶದ ಕ್ಯಾನ್ಸರ್ ಆಗಿರಬಹುದು.

ಗುಳ್ಳೆಗಳು

ಗುಳ್ಳೆಗಳು

ಗುಳ್ಳೆಗಳು ಬಾಯಿ, ಚರ್ಮದ ಕ್ಯಾನ್ಸರ್‌ನ ಲಕ್ಷಣವಾಗಿರಬಹುದು ಮತ್ತು ಇದು ಜನನಾಂಗಕ್ಕೆ ಕ್ಯಾನ್ಸರ್ ತಾಗಿರುವ ಲಕ್ಷಣವಾಗಿರಬಹುದು. ಗುಳ್ಳೆಗಳು ಕಾಣಿಸಿಕೊಂಡರೆ ತಕ್ಷಣ ವೈದ್ಯರನ್ನು ಭೇಟಿಯಾಗಿ. ಇದು ಕ್ಯಾನ್ಸರ್ ನ ಲಕ್ಷಣಗಳಲ್ಲಿ ಮೊದಲ ಸ್ಥಾನದಲ್ಲಿದೆ.

ರಕ್ತಸ್ರಾವ

ರಕ್ತಸ್ರಾವ

ಮಲದಲ್ಲಿ ರಕ್ತ, ಕಫದಲ್ಲಿ ರಕ್ತ, ಕೆಮ್ಮುವಾಗ ರಕ್ತ ಬರುವುದು ಮತ್ತು ರಕ್ತಸ್ರಾವವಾಗುವುದು ಕೆಲವು ವಿಧದ ಕ್ಯಾನ್ಸರ್ ನ ಲಕ್ಷಣವಾಗಿರಬಹುದು. ಆದಷ್ಟು ಬೇಗ ನೀವು ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು.

ಗಂಟು

ಗಂಟು

ದೇಹದಲ್ಲಿ ಯಾವುದೇ ರೀತಿಯ ಗಂಟು ಕಾಣಿಸಿಕೊಂಡರೆ ಅಥವಾ ದೇಹದಲ್ಲಿ ಹಿಂದೆ ಇದ್ದ ಗಂಟು ತನ್ನ ಆಕಾರ ಬದಾಯಿಸುತ್ತಾ ಇದ್ದರೆ ನೀವು ತಕ್ಷಣ ವೈದ್ಯರನ್ನು ಭೇಟಿಯಾಗಬೇಕು.

ಅಜೀರ್ಣ

ಅಜೀರ್ಣ

ಅಜೀರ್ಣವು ಸಾಮಾನ್ಯ ಪ್ರಕ್ರಿಯೆಯಾಗಿರುವ ಕಾರಣದಿಂದಾಗಿ ಇದನ್ನು ಕಡೆಗಣಿಸಲ್ಪಡುವುದು ಹೆಚ್ಚು. ಇದು ಜಠರದ ಮೇಲ್ಭಾಗದ ಕ್ಯಾನ್ಸರ್ ನ ಲಕ್ಷಣವಾಗಿರಬಹುದು. ಅಜೀರ್ಣದೊಂದಿಗೆ ಹೊಟ್ಟೆಯಲ್ಲಿ ತಳಮಳವಾಗುತ್ತಾ ಇದ್ದರೆ ಇದು ಕ್ಯಾನ್ಸರ್ ಲಕ್ಷಣವಾಗಿರಬಹುದು.

ಅಸಾಮಾನ್ಯ ಕೂದಲು ಬರುವುದು

ಅಸಾಮಾನ್ಯ ಕೂದಲು ಬರುವುದು

ಅಸಾಮಾನ್ಯ ಕೂದಲು ಬೆಳವಣಿಗೆಯು ಕ್ಯಾನ್ಸರ್ ನ ಲಕ್ಷಣವಾಗಿದೆ. ಆದರೆ ಕೆಲವು ಸಲ ಇದು ಯಾವುದೇ ರೀತಿಯ ಲಕ್ಷಣವಾಗದೇ ಇರಬಹುದು. ಅಸಾಮಾನ್ಯ ಕೂದಲು ಬೆಳೆಯುತ್ತಾ ಇದ್ದರೆ ವೈದ್ಯರನ್ನು ಭೇಟಿಯಾಗುವುದು ಒಳ್ಳೆಯದು.

ನಿಯಮಿತ ಜ್ವರ

ನಿಯಮಿತ ಜ್ವರ

ನಿಯಮಿತವಾಗಿ ಜ್ವರ ಬರುವುದು ಕೂಡ ಕ್ಯಾನ್ಸರ್‌ನ ಲಕ್ಷಣಗಳಲ್ಲಿ ಒಂದಾಗಿದೆ. ಯಾವುದೇ ರೀತಿಯ ಕ್ಯಾನ್ಸರ್ ದೇಹದ ಇತರ ಭಾಗಗಳ ಮೇಲೆ ಪರಿಣಾಮ ಬೀರುವ ಲಕ್ಷಣವಾಗಿರಬಹುದು. ಇದು ಕ್ಯಾನ್ಸರ್‪ನ ಅಗ್ರ ಲಕ್ಷಣಗಳಲ್ಲಿ ಒಂದಾಗಿದೆ.

English summary

Cancer Warning Signs That People Ignore Until It Is Too Late

Every cancer type has a different sign considering that it also depends on the place of the cancer cells and how extensive is its growth. Many of them are related to how the body reacts to unwanted organisms. There are many signs that the body can throw, but we disregard them thinking they are harmless. In this article, we have listed some of the unknown cancer warning signs. Read further to know more about the top early warning signs of cancer.
Subscribe Newsletter