ಮೂತ್ರದಲ್ಲಿ ರಕ್ತದ ಕಣಗಳು ಕಾಣುತ್ತಿವೆಯೇ? ಈ ಲೇಖನ ತಪ್ಪದೇ ಓದಿ

By: Arshad
Subscribe to Boldsky

ನಮ್ಮ ಆರೋಗ್ಯದ ಸ್ಥಿತಿಯನ್ನು ಅರಿಯಲು ರಕ್ತ ಮತ್ತು ಮೂತ್ರಗಳ ಪರೀಕ್ಷೆಯಿಂದ ಬಲು ಹೆಚ್ಚಿನ ಮಾಹಿತಿಗಳು ಲಭ್ಯವಾಗುತ್ತವೆ. ಆದರೆ ಕೆಲವು ತೊಂದರೆಗಳು ಉಲ್ಬಣಾವಸ್ಥೆಗೆ ಹೋಗುವವರೆಗೂ ನಾವಾರೂ ಈ ಬಗ್ಗೆ ಚಿಂತಿಸದೇ ಇರುವುದರಿಂದ ಪರೀಕ್ಷೆ ಮಾಡಿಸುವ ಪ್ರಮೇಯವೇ ಬರದೇ ಮುಂಚಿತವಾಗಿ ತಿಳಿಯಬಹುದಾಗಿದ್ದ ಸಾಧ್ಯತೆಯಿಂದ ವಂಚಿತರಾಗುತ್ತೇವೆ.

ಪ್ರತಿ ಎರಡು ಗಂಟೆಗಳಿಗೊಮ್ಮೆ ನಾವು ಮೂತ್ರ ವಿಸರ್ಜಿಸಬೇಕು. ಇದು ಸಾಧ್ಯವಾಗದೇ ಹೋದರೆ ತಡವಾದಷ್ಟೂ ಮೂತ್ರದ ಹಳದಿ ಬಣ್ಣ ಗಾಢವಾಗುತ್ತಾ ಹೋಗುತ್ತದೆ. ಸಾಮಾನ್ಯವಾಗಿ ಇದು ಕಣ್ಣಿಗೆ ಕಾಣಿಸುವ ಸ್ಪಷ್ಟ ಸೂಚನೆ. ಉಳಿದಂತೆ ಆರೋಗ್ಯದಲ್ಲಿ ಏರುಪೇರಾದಂತೆ ಈ ಬಣ್ಣ ಹಸಿರು, ನೀಲಿ, ಕೆಂಪು ಬಣ್ಣಗಳಿಗೂ ತಿರುಗುತ್ತದೆ. ಮೂತ್ರದಲ್ಲಿ ರಕ್ತ: ಅಪ್ಪಿ ತಪ್ಪಿಯೂ ನಿರ್ಲಕ್ಷ್ಯ ಮಾಡಬೇಡಿ

ಕೆಲವೊಮ್ಮೆ ಮೂತ್ರದಲ್ಲಿ ಚಿಕ್ಕ ಚಿಕ್ಕ ದಾರ ಅಥವಾ ಚುಕ್ಕೆಗಳ ರೂಪದಲ್ಲಿ ಗಾಢ ಕೆಂಪು ಅಥವಾ ಕಪ್ಪು ಬಣ್ಣಕ್ಕೆ ತಿರುಗಿದ ರಕ್ತದ ಕಲೆಗಳನ್ನು ಗಮನಿಸಬಹುದು. ಆದರೆ ಇದು ಮೂತ್ರದ ಧಾರೆ ನಿಂತು ತಿಳಿಯಾದ ಬಳಿಕವೇ ಸ್ಪಷ್ಟವಾಗಿ ಗೋಚರಿಸುವ ಕಾರಣ ಇಷ್ಟು ಹೊತ್ತು ಕಾಯುವ ತಾಳ್ಮೆ ಇಲ್ಲದೇ ಫ್ಲಶ್ ಮಾಡಿ ಬಿಡುವ ಕಾರಣ ಈ ಕಲೆಗಳನ್ನು ಗಮನಿಸದೇ ಹೋಗಬಹುದು. ಕೆಲವೊಮ್ಮೆ ಇವು ತೀರಾ ಚಿಕ್ಕದಾಗಿದ್ದು ಬರಿಗಣ್ಣಿಗೆ ಕಾಣದೇ ಇರಬಹುದು.    ಮೂತ್ರದ ಬಗ್ಗೆ ನೀವೂ ತಿಳಿದಿರದ ಅಚ್ಚರಿಯ ಸಂಗತಿ!

ಆದರೆ ಯಾವುದೇ ಹಂತದಲ್ಲಿ ಮೂತ್ರದಲ್ಲಿ ಈ ಚುಕ್ಕೆ ಅಥವಾ ದಾರಗಳು ಕಂಡುಬಂದರೆ ತಡಮಾಡದೇ ತಕ್ಷಣವೇ ವೈದ್ಯರಲ್ಲಿ ತಪಾಸಣೆಗೆ ಒಳಪಡಬೇಕು. ಏಕೆಂದರೆ ಪ್ರಾರಂಭಿಕ ಹಂತದಲ್ಲಿ ಇದು ನೋವು ಕೊಡದೇ ಹೋದರೂ ದಿನೇದಿನೇ ಇದು ಹೆಚ್ಚುತ್ತಾ ಹೋಗಿ ನೋವು ವಿಪರೀತವಾಗಬಹುದು.   ಆಗಾಗ್ಗೆ ಮೂತ್ರ ವಿಸರ್ಜನೆ ಮಾಡಬೇಕಾದ ಅನಿವಾರ್ಯತೆಯೇ?

ಏಕೆಂದರೆ ದೇಹದೊಳಗಿನ ಯಾವುದೋ ಅಂಗ ಅಥವಾ ರಕ್ತನಾಳದ ತೊಂದರೆಯಿಂದ ರಕ್ತ ಸ್ರವಿಸುತ್ತಿದ್ದು ಮೂತ್ರದ ಸಂಪರ್ಕಕ್ಕೆ ಬಂದ ತಕ್ಷಣ ಆಮ್ಲಜನಕದೊಡನೆ ಸಂಯೋಜನೆ ಹೊಂದಿ ಗಟ್ಟಿಯಾಗುತ್ತದೆ. ವಿಶೇಷವಾಗಿ ಮೂತ್ರಕೋಶ ಒಳಭಾಗದ ಸ್ರಾವ, ಮೂತ್ರಪಿಂಡಗಳ ಒಳಗೆ ಅಥವಾ ಮೂತ್ರನಾಳಗಳ ಒಳಗಿನ ಸೋಂಕು ಮೊದಲಾದವು ಇದಕ್ಕೆ ಕಾರಣವಿರಬಹುದು. ಬನ್ನಿ, ಈ ಬಗ್ಗೆ ಕೆಲವು ಮಾಹಿತಿಗಳನ್ನು ಅರಿಯೋಣ...

ಮಾಹಿತಿ #1

ಮಾಹಿತಿ #1

ಈ ಸ್ಥಿತಿಗೆ ಹೆಮಚ್ಯೂರಿಯಾ (hematuria) ಎಂದು ಕರೆಯುತ್ತಾರೆ. ಹೆಚ್ಚಿನ ಸಂದರ್ಭಗಳಲ್ಲಿ ಈ ಪ್ರಮಾಣ ತೀರಾ ಕಡಿಮೆಯಾಗಿದ್ದು ಬರಿಗಣ್ಣಿಗೆ ಗೋಚರಿಸುವುದಿಲ್ಲ. ಬರಿಗಣ್ಣಿಗೆ ಗೋಚರಿಸುವವರೆಗೂ ಈ ಸ್ಥಿತಿಯನ್ನು microscopic hematuria ಎಂದು ಕರೆಯುತ್ತಾರೆ. ಅಲ್ಲಿಯವರೆಗೆ ಈ ಕಣಗಳನ್ನು ಸೂಕ್ಷ್ಮದರ್ಶಕದಲ್ಲಿ ಮಾತ್ರ ಸ್ಪಷ್ಟವಾಗಿ ಕಾಣಲು ಸಾಧ್ಯ.

ಮಾಹಿತಿ #2

ಮಾಹಿತಿ #2

ಈ ಸ್ಥಿತಿಗೆ ಒಳಗಾಗುವವರಲ್ಲಿ ಧೂಮಪಾನಿಗಳೇ ಅತಿ ಹೆಚ್ಚಾಗಿದ್ದು ಈ ಸ್ಥಿತಿ ಆವರಿಸಿದ ಬಳಿಕ ಮೂತ್ರಪಿಂಡಗಳ ಕ್ಯಾನ್ಸರ್ ಆವರಿಸಿಕೊಳ್ಳುವ ಸಾಧ್ಯತೆ ಅತ್ಯಧಿಕವಾಗುತ್ತದೆ.

ಮಾಹಿತಿ #3

ಮಾಹಿತಿ #3

ಮೂತ್ರದಲ್ಲಿ ರಕ್ತದ ಕಲೆಗಳು ಗಡ್ಡೆಕಟ್ಟದೇ ದ್ರವರೂಪದಲ್ಲಿಯೇ ಇದ್ದಂತೆ ತೋರಿದರೆ (ಇದನ್ನೂ ಪರೀಕ್ಷೆಗಳಿಂದ ಮಾತ್ರ ಕಂಡುಕೊಳ್ಳಲು ಸಾಧ್ಯ) ಇದು ಮೂತ್ರಕೋಶ ಮತ್ತು ಮೂತ್ರನಾಳಗಳ ಒಳಗಣ ಸೋಂಕಿನ ಸಂಕೇತವಾಗಿದೆ. ಇದಕ್ಕೆ ಮದ್ಯಪಾನ ನೇರವಾಗಿ ಕಾರಣವಾಗಿದ್ದು ಈ ಸ್ಥಿತಿ ಬಂದ ತಕ್ಷಣ ಅನಿವಾರ್ಯವಾಗಿ ಮದ್ಯಪಾನವನ್ನು ನಿಲ್ಲಿಸಲೇಬೇಕಾಗುತ್ತದೆ. ಅಷ್ಟೇ ಅಲ್ಲ, ಆಮ್ಲೀಯವಾದ ಯಾವುದೇ ಪಾನೀಯವಾದ ಕಾಫಿ, ಟೀ, ಲಿಂಬೆ ಜಾತಿಯ ಹಣ್ಣುಗಳ ರಸ ಮೊದಲಾದವೆಲ್ಲಾ ವರ್ಜಿತವಾಗುತ್ತವೆ. ಕೇವಲ ನೀರು ಮಾತ್ರ ಈ ಸ್ಥಿತಿಯಿಂದ ಹೊರತರಬಲ್ಲುದು. ಆದರೂ ವೈದ್ಯರ ಬಳಿ ಸಲಹೆ ಪಡೆದು ಚಿಕಿತ್ಸೆ ಪಡೆಯುವುದು ಅನಿವಾರ್ಯ.

ಮಾಹಿತಿ #4

ಮಾಹಿತಿ #4

ಮೂತ್ರಕೋಶ, ಮೂತ್ರಪಿಂಡಗಳ ಕಾಯಿಲೆ, ಮೂತ್ರನಾಳಗಳ ಸೋಂಕು, ಪ್ರಾಸ್ಟೇಟ್ ಕ್ಯಾನ್ಸರ್, ಮೂತ್ರಪಿಂಡಗಳ ಕ್ಯಾನ್ಸರ್, ಮೂತ್ರಕೋಶದ ಕ್ಯಾನ್ಸರ್, ಪ್ರಾಸ್ಟೇಟ್ ಗ್ರಂಥಿಗಳು ಊದಿಕೊಂಡಿರುವುದು, ಮೂತ್ರ ಅಥವಾ ಮಲವನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಕಡಿಮೆಯಾಗುವುದು, ಕೆಲವು ಇತರ ಔಷಧಿಗಳ ಅಡ್ಡಪರಿಣಾಮಗಳು, ಆಂತರಿಕ ಗಾಯಗಳು, ಶಸ್ತ್ರಚಿಕಿತ್ಸೆಯ ಅಡ್ಡಪರಿಣಾಮ,ಮೂತ್ರಪಿಂಡದ ಬಯಾಪ್ಸಿ ಹಾಗೂ ಕೆಲವೊಮ್ಮೆ ಸುನ್ನತಿಯೂ ಈ ತೊಂದರೆಗೆ ಕಾರಣವಾಗಬಹುದು.

ಮಾಹಿತಿ #5

ಮಾಹಿತಿ #5

ಕೆಲವೊಮ್ಮೆ ರಕ್ತದ ಕಣಗಳ ಏರುಪೇರು ಸಹಾ ಈ ತೊಂದರೆಗೆ ಕಾರಣವಾಗಬಹುದು. ಉದಾಹರಣೆಗೆ ಪ್ಲೇಟ್ ಲೆಟ್ ಗಳ ಸಂಖ್ಯೆಯಲ್ಲಿ ಹೆಚ್ಚು ಕಡಿಮೆಯಾಗುವುದು, ಕುಡಗೋಲು ಕಣ ರೋಗ (sickle cell disease) ಮೊದಲಾದವೂ ಮೂತ್ರದಲ್ಲಿ ರಕ್ತವನ್ನು ಹೆಪ್ಪುಗಟ್ಟಿಸುತ್ತವೆ.

ಮಾಹಿತಿ #6

ಮಾಹಿತಿ #6

ಒಂದು ವೇಳೆ ಮೂತ್ರ ವಿಸರ್ಜಿಸುವ ವೇಳೆ ಉರಿ ಅಥವಾ ನೋವು ಕಂಡುಬರುವುದು, ವಾಕರಿಕೆ, ಜ್ವರ, ವಾಂತಿ, ತೂಕದಲ್ಲಿ ಇಳಿಕೆ, ಸಮಾಗಮದ ಸಮಯದಲ್ಲಿ ನೋವು, ಮೂತ್ರ ವಿಸರ್ಜಿಸಲು ಸುಲಭವಾಗಿ ಸಾಧ್ಯವಾಗದೇ ಹೆಚ್ಚಿನ ಒತ್ತಡ ಹೇರಬೇಕಾಗಿ ಬರುವುದು ಮೊದಲಾದವು ಮೂತ್ರದಲ್ಲಿ ರಕ್ತ ಹೆಪ್ಪುಗಟ್ಟಿರುವ ಸಂಕೇತಗಳನ್ನು ಸೂಚಿಸುತ್ತವೆ. ತಕ್ಷಣವೇ ವೈದ್ಯರನ್ನು ಕಂಡು ಪರೀಕ್ಷೆಗೆ ಒಳಪಡುವುದು ಅಗತ್ಯ.

ಮಾಹಿತಿ #7

ಮಾಹಿತಿ #7

ಈ ತೊಂದರೆಗೆ ಕಾರಣವನ್ನು ಮೂತ್ರಪರೀಕ್ಷೆಯಿಂದ ಮಾತ್ರವೇ ಕಂಡುಕೊಳ್ಳಲು ಸಾಧ್ಯ. ಇದಕ್ಕಾಗಿ ವೈದ್ಯರು ಇತರ ಪರೀಕ್ಷೆಗಳನ್ನೂ ಸೂಚಿಸಬಹುದು. ಆ ಬಳಿಕವೇ ನಿಜವಾದ ತೊಂದರೆ ಏನೆಂದು ಕಂಡುಕೊಂಡು ಅದರ ಪ್ರಕಾರವೇ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು. ಆದ್ದರಿಂದ ನೀರು ಕುಡಿದ ಬಳಿಕದ ಎರಡು ಘಂಟೆಗಳ ತರುವಾಯದ ಮೂತ್ರವನ್ನು ಆಗಾಗ ಗಮನಿಸುತ್ತಾ ಇರಬೇಕು. ಇದು ಬಣ್ಣವಿಲ್ಲದೇ ಇದ್ದಷ್ಟೂ ನಿಮ್ಮ ಆರೋಗ್ಯ ಸರಿ ಇದೆ ಎಂದು ಅರ್ಥೈಸಿಕೊಳ್ಳಬೇಕು. ಒಂದು ವೇಳೆ ಬಣ್ಣ ಕೊಂಚವೂ ಬದಲಾಗಿದ್ದರೆ ಮೂತ್ರವನ್ನು ಸಂಗ್ರಹಿಸಿ ಕೊಂಚಹೊತ್ತಿನ ಬಳಿಕ ಸೂಕ್ಷ್ಮವಾಗಿ ಗಮನಿಸಬೇಕು ಹಾಗೂ ಆದಷ್ಟು ಬೇಗನೇ ವೈದ್ಯರನ್ನು ಸಂಪರ್ಕಿಸಬೇಕು.

 
English summary

Blood Clots In Urine? Read This!!

If you see blood in urine, it could be a serious issue. It means you are bleeding from inside. Sometimes, blood in urine isn't even visible to naked eye. In such a case, only a lab test can confirm the same.
Please Wait while comments are loading...
Subscribe Newsletter