For Quick Alerts
ALLOW NOTIFICATIONS  
For Daily Alerts

ಆಗಾಗ್ಗೆ ಮೂತ್ರ ವಿಸರ್ಜನೆ ಮಾಡಬೇಕಾದ ಅನಿವಾರ್ಯತೆಯೇ?

By Manu
|

ದೇಹವು ಸದಾಕಾಲ ಆರೋಗ್ಯಪೂರ್ಣವಾಗಿಡಬೇಕಾದ ಜವಾಬ್ದಾರಿ ಎಲ್ಲರ ಮೇಲಿದೆ. ಆರೋಗ್ಯದಲ್ಲಿ ವ್ಯತ್ಯಾಸಗಳಾದರೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಹೆಚ್ಚು ಘಾಸಿಗೊಳಿಸುತ್ತದೆ. ಈ ರೀತಿಯ ವ್ಯತ್ಯಾಸಗಳ ಪಟ್ಟಿಗೆ ಮೂತ್ರವಿಸರ್ಜನೆಯ ಸಮಸ್ಯೆಯೂ ಸಹ ಸೇರುತ್ತದೆ. ಹೌದು! ಸಕಾಲದಲ್ಲಿ ಮೂತ್ರವಿಸರ್ಜನೆ ಮಾಡುವುದು ಪ್ರಕೃತಿಯ ನಿಯಮ. ಇದಕ್ಕೆ ಅದರದ್ದೇ ಆದ ಕೆಲವು ದೈಹಿಕ ಕ್ರಮಗಳಿದ್ದು, ಜೀರ್ಣಕ್ರಿಯೆ ಹಾಗೂ ಮೂತ್ರಪಿಂಡದ ಸಮರ್ಪಕ ನಿರ್ವಹಣೆಯ ಮೇಲೆ ಮೂತ್ರ ವಿಸರ್ಜನೆಯ ಪ್ರಮಾಣ ನಿರ್ಧರಿತವಾಗಿರುತ್ತದೆ. ಕೆಲವರಿಗೆ ನೀರು ಹೆಚ್ಚು ಕುಡಿದರೆ ಹೆಚ್ಚು ಮೂತ್ರ ವಿಸರ್ಜನೆಯಾಗುತ್ತದೆ. ಕೆಲವರಿಗೆ ಆಗುವುದಿಲ್ಲ. ಇದೂ ಅವರವರ ದೇಹ ಸ್ಥಿತಿಯ ಮೇಲೆ ಅವಲಂಬಿತವಾಗಿರುತ್ತದೆ. ಎಚ್ಚರ: ಮೂತ್ರದ ಬಣ್ಣದಲ್ಲಿ ಏರುಪೇರಾದರೆ ಅಪಾಯ ಕಟ್ಟಿಟ್ಟ ಬುತ್ತಿ..!

ಆದರೆ ಈಗ ನಾವು ಮಾತನಾಡುತ್ತಿರುವ ವಿಚಾರವೇನೆಂದರೆ ಕೆಲವರು ಆಗಾಗ್ಗೆ ಪದೇ ಪದೇ ಮೂತ್ರ ವಿಸರ್ಜನೆಯಾಗುವ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಇದೊಂದು ನಿರ್ಲಕ್ಷಿಸುವ ಸಮಸ್ಯೆಯಾದರೂ ಸಮರ್ಪಕ ಆರೈಕೆ ಅತ್ಯಗತ್ಯ. ಕೆಲವರು ಈ ಸಮಸ್ಯೆಯನ್ನು ಉದಾಸೀನ ಮಾಡಿ ನಂತರ ಅಪಾಯಕಾರಿ ಸ್ಥಿತಿಗೆ ತಲುಪಿರುವ ಅನೇಕ ಪ್ರಕರಣಗಳನ್ನು ನಾವು ನೋಡಿದ್ದೇವೆ. ಮೂತ್ರ ವಿಸರ್ಜನೆಯು ಪದೇ ಪದೇ ಆಗುತ್ತಿದ್ದರೆ

ಇದು ನಿಮ್ಮನ್ನು ಮಾನಸಿಕವಾಗಿ ಕಿರಿಕಿರಿಯನ್ನುಂಟು ಮಾಡಿ ನಿಮ್ಮನ್ನು ಆರಾಮವಾಗಿರಲು ಬಿಡುವುದಿಲ್ಲ. ಅಲ್ಲದೇ ಈ ಸಮಸ್ಯೆಯಿಂದ ರಾತ್ರಿ ಹೊತ್ತು ಪದೇ ಪದೇ ಏಳುವಂತೆ ಮಾಡಿ ಪೂರ್ಣವಾಗಿ ನಿದ್ರಿಸಲು ಸಾಧ್ಯವಾಗುವುದಿಲ್ಲ. ಮತ್ತೊಂದು ಅಂಶವೆಂದರೆ ನಿಮಗಿರುವ ಆಪಾಯಕಾರಿ ಸಮಸ್ಯೆಯ ಬಗ್ಗೆ ಇದು ಒಂದು ರೀತಿಯ ಸುಳಿವೂ ಆಗಿರಬಹುದು. ಅದರ ಮೂಲವನ್ನು ಪತ್ತೆಹಚ್ಚಿ ಸೂಕ್ತ ಚಿಕಿತ್ಸೆ ಕೊಡುವುದು ಮುಖ್ಯವಾದ ಅಂಶ. ಪದೇ ಪದೇ ಮೂತ್ರವಿಸರ್ಜನೆ ಆಗಲು ಅನೇಕ ಕಾರಣಗಳಿದ್ದು, ಈ ಲೇಖನದಲ್ಲಿ ನಿಮಗಾಗಿ ಕೆಲವು ಕಾರಣಗಳನ್ನು ನೀಡಲಾಗಿದ್ದು, ಈ ಸಮಸ್ಯೆಯಿಂದ ಪರಿಹಾರ ಕಂಡುಕೊಳ್ಳಿ...

ಮಧುಮೇಹ

ಮಧುಮೇಹ

ಪುರುಷರು ಆಗಾಗ್ಗೆ ಮೂತ್ರ ವಿಸರ್ಜನೆ ಮಾಡುವುದಕ್ಕೆ ಸಾಮಾನ್ಯ ಕಾರಣವೆಂದರೆ ಮಧುಮೇಹದ ಸಮಸ್ಯೆ. ಇದಕ್ಕೆ ಮುಖ್ಯ ಕಾರಣವೆಂದರೆ ನಿಮ್ಮ ರಕ್ತದಲ್ಲಿರುವ ಹೆಚ್ಚುವರಿ ಗ್ಲೂಕೊಸ್ ಅಂಶವನ್ನು ದೇಹದಿಂದ ಮೂತ್ರದ ರೂಪದಲ್ಲಿ ಹೊರಹಾಕಲು ಪ್ರಯತ್ನಿಸುತ್ತದೆ. ಆದ್ದರಿಂದ ಮಧುಮೇಹಿಕ ರೋಗಿಗಳಲ್ಲಿ ಹೆಚ್ಚು ಬಾಯಾರಿಕೆ ಮತ್ತು ಆಗಾಗ್ಗೆ ಪದೇ ಪದೇ ಮೂತ್ರ ವಿಸರ್ಜನೆ ಆಗುವುದನ್ನು ಕಾಣಬಹುದು.

ಮೂತ್ರವರ್ಧಕಗಳು

ಮೂತ್ರವರ್ಧಕಗಳು

ನೀವು ನಿಮ್ಮ ಆಹಾರ ಶೈಲಿಯನ್ನು ಅಥವಾ ಔಷಧೀಯ ವಿಧಾನವನ್ನು ಬದಲಾವಣೆ ಮಾಡಿಕೊಂಡಿದ್ದರೆ ಈ ಸಮಸ್ಯೆಯು ಬರುವ ಸಾಧ್ಯತೆ ಇರುತ್ತದೆ. ಅನೇಕ ಔಷಧ ವಿಧಗಳ ಸೇವನೆಯಿಂದಲೂ ಸಹ ಆಗಾಗ್ಗೆ ಮೂತ್ರವಿಸರ್ಜನೆಯಾಗುವ ಅಡ್ಡಪರಿಣಾಮಗಳು ಉಂಟಾಗುತ್ತದೆ. ನಿಮಗೇ ಇದೇ ಸಮಸ್ಯೆಯಿದ್ದರೆ ವೈದ್ಯರ ಬಳಿ ತೆರೆಳಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಿ. ಮೂತ್ರವರ್ಧಕಗಳಲ್ಲಿ ಕಾಫಿ ಮತ್ತು ಮದ್ಯಗಳೂ ಕೂಡ ಒಳಗೊಂಡಿವೆ.

ಮೂತ್ರಕೋಶದ ಕ್ಯಾನ್ಸರ್

ಮೂತ್ರಕೋಶದ ಕ್ಯಾನ್ಸರ್

ಆಗಾಗ್ಗೆ ಮೂತ್ರವಿಸರ್ಜನೆ ಮಾಡುವುದಕ್ಕೆ ಮೂತ್ರಕೋಶದ ಕ್ಯಾನ್ಸರ್ ಸಹ ಒಂದು. ಈ ಸಮಸ್ಯೆಯಿದ್ದಲ್ಲಿ ತಕ್ಷಣಕ್ಕೆ ಮೂತ್ರವಿಸರ್ಜನೆ ಆಗುವ ಸಂಭವವಿರುತ್ತದೆ. ಮೂತ್ರ ವಿಸರ್ಜಿಸುವಾಗ ನೋವುಂಟು ಮಾಡುತ್ತದೆ ಮತ್ತು ಮೂತ್ರದಲ್ಲಿ ಕೆಲ ರಕ್ತದ ಕಣಗಳು ಸಹ ಕಂಡುಬರುತ್ತವೆ.

ಪ್ರೊಸ್ಟೇಟ್ ಗ್ರಂಥಿಯ ಗಾತ್ರ ಹೆಚ್ಚುತ್ತದೆ

ಪ್ರೊಸ್ಟೇಟ್ ಗ್ರಂಥಿಯ ಗಾತ್ರ ಹೆಚ್ಚುತ್ತದೆ

ಪ್ರೊಸ್ಟೇಟ್ ಗ್ರಂಥಿಯ ಗಾತ್ರ ಹೆಚ್ಚುವಿಕೆಯಿಂದ ಮೂತ್ರವಿಸರ್ಜನೆಯು ಅವಶ್ಯವುಂಟಾಗುತ್ತದೆ. ಅದರ ಸ್ಥಳವು ಯುರೇತ್ರಾದ ಭಾಗದ ಕೆಳಗಿದೆ. ಯುರೇತ್ರಾದ ಮೇಲೆ ಒತ್ತಡ ಹೇರುವುದರಿಂದ ಮೂತ್ರವಿಸರ್ಜನೆಯು ಅನಿವಾರ್ಯವಾಗುತ್ತದೆ. ಇದನ್ನು ಗಮನಿಸುವುದು ಕಷ್ಟವಾಗಿದ್ದು, ಇದು ನೀವು ಇನ್ನೂ ಮೂತ್ರ ವಿಸರ್ಜನೆಯನ್ನು ಪೂರ್ಣಗೊಳಿಸಿಲ್ಲವೆಂಬ ಅನುಭವವುಂಟಾಗುವಂತೆ ಮಾಡುತ್ತದೆ. ಕೆಲವೊಂದು ಬಾರಿ ಮೂತ್ರ ವಿಸರ್ಜಸಲು ಕಷ್ಟವೂ ಸಹ ಆಗುತ್ತದೆ.

ಪ್ರೊಸ್ಟೇಟ್ ಗ್ರಂಥಿಯ ಕ್ಯಾನ್ಸರ್

ಪ್ರೊಸ್ಟೇಟ್ ಗ್ರಂಥಿಯ ಕ್ಯಾನ್ಸರ್

ಕೆಲವೊಂದು ಬಾರಿ ದಪ್ಪವಾಗುವ ಪ್ರೊಸ್ಟೇಟ್ ಗ್ರಂಥಿಯ ರೂಪವು ಅದರ ಕ್ಯಾನ್ಸರ್ ಎಂದು ತಿಳಿಯಬಹುದಾಗಿದೆ. ಇದೂ ಸಹ ಯುರೇತ್ರಾದ ಮೇಲೆ ಅದೇ ರೀತಿಯ ಒತ್ತಡ ಹೇರುತ್ತದೆ. ಪೆಲ್ವಿಕ್ ಸ್ಥಳದ ಸುತ್ತ ಯಾವುದೇ ಗೆಡ್ಡೆಯುಂಟಾದಲ್ಲಿ ಈ ಸಮಸ್ಯೆಯು ಉಂಟಾಗುತ್ತದೆ.

ಮಾನಸಿಕ ಅಸಮತೋಲನ

ಮಾನಸಿಕ ಅಸಮತೋಲನ

ತಮ್ಮ ಮಾನಸಿಕ ಅಸಮತೋಲನದಿಂದ ಅನೇಕರು ಮೂತ್ರವಿಸರ್ಜನೆಯ ಸ್ಥಳವನ್ನು ಆಗಾಗ ಬಯಸುತ್ತಾರೆ. ಕೆಲವು ನರಗಳು ನಮಗೆ ಆ ರೀತಿಯಲ್ಲಿ ಯೋಚಿಸುವಂತೆ ಪ್ರೇರೇಪಿಸುತ್ತವೆ ಮತ್ತು ಕೆಲವು ಮನೋವೈಜ್ಞಾನಿಕ ಅಂಶಗಳು ಸಹ ಈ ರೀತಿಯ ಅಭ್ಯಾಸ ಮತ್ತು ಮೂತ್ರ ವಿಸರ್ಜಿಸಬೇಕಾದ ಭಾವನೆಯನ್ನುಂಟು ಮಾಡಿ ಶೌಚಾಲಯದ ದಾರಿಯನ್ನು ಹುಡುಕುವಂತೆ ಮಾಡುತ್ತದೆ.

English summary

Causes of Frequent Urination in Men

Frequent urination can be more of an unpleasant and debilitating condition than you might think and can leave you unable to relax and even having difficulty sleeping if it causes you to wake up constantly throughout the night. At the same time it can also be a sign of a range of serious conditions that need looking into, so it's important to get to the bottom of what's causing it and to treat it if possible. Here we will look into some of the possible causes of frequent urination for men.
X
Desktop Bottom Promotion