For Quick Alerts
ALLOW NOTIFICATIONS  
For Daily Alerts

ಮೂತ್ರದ ಬಗ್ಗೆ ನೀವೂ ತಿಳಿದಿರದ ಅಚ್ಚರಿಯ ಸಂಗತಿ!

By Manu
|

ನಮ್ಮ ದೇಹದ ವ್ಯವಸ್ಥೆ ಸರಿಯಾಗಿ ನಡಿಯುತ್ತಿರಲು ಸತತವಾಗಿ ನೀರು ಕುಡಿಯುತ್ತಲೇ ಇರಬೇಕು. ಅಂತೆಯೇ ಕಲ್ಮಶಗಳನ್ನು ಸೋಸಿ ಹೊರಹಾಕುತ್ತಲೂ ಇರಬೇಕು. ಪ್ರತಿ ಎರಡು ಮೂರು ಗಂಟೆಗಳಿಗೊಮ್ಮೆಯಾದರೂ ಮೂತ್ರ ವಿಸರ್ಜಿಸುವುದು ಆರೋಗ್ಯಕರ.

ಆದರೆ ಎಲ್ಲಾ ಸಮಯದಲ್ಲಿ ಅಥವಾ ಸಂದರ್ಭಗಳಲ್ಲಿ ಮೂತ್ರಕ್ಕೆ ಅವಸರವಾದರೂ ತಕ್ಷಣ ಹೋಗಲು ಸಾಧ್ಯವಾಗುವುದಿಲ್ಲ. ಆಗ ಮೂತ್ರಕೋಶದ ಸಾಮರ್ಥ್ಯ ಮೀರಿ ಮೂತ್ರ ಸಂಗ್ರಹವಾಗುತ್ತಾ ಹೋಗುತ್ತದೆ ಹಾಗೂ ಪೂರ್ಣ ಪ್ರಮಾಣದಲ್ಲಿ ಕಲ್ಮಶಗಳನ್ನು ನಿವಾರಿಸಲು ಸಾಧ್ಯವಾಗುವುದಿಲ್ಲ. ಮೂತ್ರದಲ್ಲಿ ವಿಷಕಾರಿ ಅಂಶಗಳ ಸಾಂದ್ರತೆ ತೀರಾ ಹೆಚ್ಚಾಗಿ ಗಾಢ ಹಳದಿ ಬಣ್ಣ ಪಡೆಯುತ್ತದೆ. ಪದೇ-ಪದೇ ಮೂತ್ರ ವಿಸರ್ಜನೆ ಅಪಾಯದ ಸೂಚನೆ

ಮೂತ್ರದಲ್ಲಿ ಪ್ರಮುಖವಾಗಿ ಯೂರಿಕ್ ಆಮ್ಲ, ಸೋಡಿಯಂ ಕ್ಲೋರೈಡ್ ಅಥವಾ ಉಪ್ಪು ಮತ್ತು ಸಂಗ್ರಹವಾದ ಇತರ ವಿಷಕಾರಿ ವಸ್ತುಗಳು ನೀರಿನಲ್ಲಿ ಕರಗಿರುತ್ತವೆ. ಕೆಲವೊಮ್ಮೆ ನಾವು ಸೇವಿಸಿದ ಆಹಾರವನ್ನು ಅನುಸರಿಸಿ ಮೂತ್ರದ ಬಣ್ಣ ಬದಲಾಗುತ್ತದೆ ಹಾಗೂ ಕೆಟ್ಟ ವಾಸನೆಯೂ ಬರುತ್ತದೆ. ಕೆಲವು ಔಷಧಿಗಳ ಸೇವನೆಯ ಪರಿಣಾಮದಿಂದಲೂ ಹೀಗಾಗಬಹುದು. ಆದರೆ ಎಷ್ಟೋ ಸಂದರ್ಭಗಳಲ್ಲಿ ಇದು ದೇಹದ ಆರೋಗ್ಯದ ಸ್ಥಿತಿಯನ್ನು ತಿಳಿಸಬಹುದು. ಆಗಾಗ್ಗೆ ಮೂತ್ರ ವಿಸರ್ಜನೆ ಮಾಡಬೇಕಾದ ಅನಿವಾರ್ಯತೆಯೇ?

ದೇಹದಲ್ಲಿ ಆಶ್ರಯ ಪಡೆದಿದ್ದ ವೈರಸ್ಸು, ಬ್ಯಾಕ್ಟೀರಿಯಾಗಳನ್ನು ನಮ್ಮ ಜೀವ ನಿರೋಧಕ ವ್ಯವಸ್ಥೆ ಒದ್ದು ಹೊರಹಾಕಿದ ಪರಿಣಾಮವಾಗಿಯೂ ಈ ವಾಸನೆ ಬರುತ್ತಿರಬಹುದು. ಬನ್ನಿ ಮೂತ್ರದ ಬಗ್ಗೆ ಕೆಲವು ಅಚ್ಚರಿಯ ಸಂಗತಿಗಳನ್ನು ಈಗ ನೋಡೋಣ......

ಮಾಹಿತಿ #1

ಮಾಹಿತಿ #1

ಮೂತ್ರದಲ್ಲಿ ಪ್ರಮುಖವಾಗಿ ಕ್ರಿಯಾಟಿನಿನ್, ಯೂರಿಕ್ ಆಮ್ಲ ಮತ್ತು ರಕ್ತ ಶೋಧಿಸಿದ ಬಳಿಕ ಉಳಿದುಕೊಂಡ ಕಲ್ಮಶಗಳಿರುತ್ತವೆ.

ಮಾಹಿತಿ #2

ಮಾಹಿತಿ #2

ನಮ್ಮ ಮೂತ್ರಕೋಶದಲ್ಲಿ ಪ್ರತಿ ಎರಡು ಗಂಟೆಗಳಲ್ಲಿ ಎರಡು ಕಪ್ ಮೂತ್ರ ಸಂಗ್ರಹವಾಗುತ್ತದೆ. ಈ ಪ್ರಮಾಣ ಹೆಚ್ಚುತ್ತ ಹೋದಂತೆ ಹೆಚ್ಚಿನ ದ್ರವ ಮೂತ್ರಕೋಶದ ಗೋಡೆಗಳ ಮೇಲೆ ಒತ್ತಡ ಹೇರುತ್ತದೆ. ಇದು ಮೆದುಳಿಗೆ ಮೂತ್ರ ವಿಸರ್ಜನೆಗೆ ಸಂಕೇತವನ್ನು ತಿಳಿಸುತ್ತದೆ. ಆಗ ಮೂತ್ರಕ್ಕೆ ಅವಸರವಾಗುತ್ತದೆ.

ಮಾಹಿತಿ #3

ಮಾಹಿತಿ #3

ಒಂದು ವೇಳೆ ಮೂತ್ರದ ವಾಸನೆ ಅಮೋನಿಯಾದಂತೆ ಇದ್ದರೆ ಇದು ವ್ಯಕ್ತಿಯ ದೇಹದಲ್ಲಿ ನೀರಿನ ಕೊರತೆಯನ್ನು ತಿಳಿಸುತ್ತದೆ. ಈ ವಾಸನೆ ಅಸಹ್ಯಕರವಾಗಿದ್ದು ಮೂತ್ರಕೋಶದ ಸೋಂಕಿಗೆ ಒಳಗಾಗಿರಬಹುದು. ಅಲ್ಲದೇ ಯಕೃತ್ ನಲ್ಲಿ ಸೋಂಕಿರುವ ವ್ಯಕ್ತಿಗಳ ಮೂತ್ರವೂ ಇದೇ ರೀತಿಯ ವಾಸನೆ ಸೂಸುತ್ತದೆ.

ಮಾಹಿತಿ #4

ಮಾಹಿತಿ #4

ಸಾಮಾನ್ಯ ಮೈಕಟ್ಟಿನ ವ್ಯಕ್ತಿ ಒಂದು ದಿನಕ್ಕೆ ಎಂಟುನೂರು ಮಿಲಿಲೀಟರ್ ನಿಂದ ಎರಡು ಲೀಟರ್ ವರೆಗೂ ಮೂತ್ರ ವಿಸರ್ಜಿಸುತ್ತಾನೆ. ಆದರೆ ಸತತವಾಗಿ ನೀರು ಕುಡಿಯುತ್ತಲೇ ಇದ್ದಾಗ ಈ ಪ್ರಮಾಣ ಆರು ಲೀಟರ್ ವರೆಗೂ ಹೆಚ್ಚಬಹುದು.

ಮಾಹಿತಿ #5

ಮಾಹಿತಿ #5

ನೀವು ಯಾವುದೇ ಬಗೆಯ ದ್ರವಾಹಾರ ಮತ್ತು ನೀರನ್ನು ಸೇವಿಸಿದರೂ ಮೂತ್ರಕೋಶದಲ್ಲಿ ಸಂಗ್ರಹವಾಗಲುತೊಡಗಿದ ಬಳಿಕ ಎರಡರಿಂದ ಮೂರು ಗಂಟೆಗಳಲ್ಲಿ ಮೂತ್ರಕ್ಕೆ ಅವಸರವಾಗಿಯೇ ಆಗುತ್ತದೆ.

ಮಾಹಿತಿ #5

ಮಾಹಿತಿ #5

ಆದರೆ ಸಂದರ್ಭ ಸೂಕ್ತವಾಗಿಲ್ಲದೇ ಮೂತ್ರ ವಿಸರ್ಜಿಸಲು ಸಾಧ್ಯವಾಗದೇ ಇದ್ದರೆ ಮೂರರಿಂದ ಐದು ಗಂಟೆಗಳ ಕಾಲ ತಡೆದುಕೊಂಡಿರಬಹುದು. ಆ ಬಳಿಕ ಒತ್ತಡ ಸಹಿಸಲು ಸಾಧ್ಯವಾಗದೇ ನೋವು ಪ್ರಾರಂಭವಾಗುತ್ತದೆ.

ಮಾಹಿತಿ #6

ಮಾಹಿತಿ #6

ಮೂತ್ರಕೋಶ ತುಂಬಿದಾಕ್ಷಣ ಮೆದುಳಿಗೆ ಈ ಬಗ್ಗೆ ಸೂಚನೆ ಹೋಗುತ್ತದೆ. ಆಗಲೇ ಮೂತ್ರಕ್ಕೆ ಅವಸರ ಮಾಡುವಂತೆ ಮೆದುಳಿನಿಂದ ಸೂಚನೆ ಬರುತ್ತದೆ. ಆದರೆ ಯಾವುದಾದರೊಂದು ವಿಷಯದಲ್ಲಿ ತೀರಾ ಮಗ್ನರಾಗಿದ್ದರೆ ಮೆದುಳು ಈ ಸಂಕೇತವನ್ನು ತಿರಸ್ಕರಿಸುತ್ತದೆ. ಆದ್ದರಿಂದ ಈ ಸಂದರ್ಭದಲ್ಲಿ ಮೂತ್ರಕ್ಕೆ ಅವಸರವಾಗಿರುವುದು ಗೊತ್ತೇ ಆಗುವುದಿಲ್ಲ. (ಅತಿ ಕುತೂಹಲಭರಿತ ಚಲನಚಿತ್ರ ನೋಡುವಾಗ ನಿಮಗೆ ಮೂತ್ರಕ್ಕೆ ಅವಸರವಾಗಿತ್ತೇ?)

ಮಾಹಿತಿ #7

ಮಾಹಿತಿ #7

ಸಾಮಾನ್ಯ ಜನರು ದಿನಕ್ಕೆ ಆರರಿಂದ ಎಂಟು ಬಾರಿ ಮೂತ್ರ ವಿಸರ್ಜಿಸಬೇಕು.

ಮಾಹಿತಿ #8

ಮಾಹಿತಿ #8

ವಯಸ್ಸಾಗುತ್ತಾ ಹೋದಂತೆ ಮೂತ್ರಕ್ಕೆ ಅವಸರವಾಗುವ ಸಮಯವೂ ಹೆಚ್ಚಾಗುತ್ತಾ ಹೋಗುತ್ತದೆ. ಏಕೆಂದರೆ ಮಹಿಳೆಯರಲ್ಲಿ ಈಸ್ಟ್ರೋಜೆನ್ ಮತ್ತು ಪುರುಷರಲ್ಲಿ ಟೆಸ್ಟೋಸ್ಟೆರೋನ್ ಹಾರ್ಮೋನುಗಳ ಪ್ರಮಾಣ ಇಳಿಮುಖವಾಗುತ್ತಾ ಬರುತ್ತದೆ. ಇವುಗಳ ಪ್ರಮಾಣಕ್ಕೂ ಮೂತ್ರದ ಸಮಯಕ್ಕೂ ನೇರವಾದ ಸಂಬಂಧವಿದೆ.

English summary

Interesting Facts About Urine

We all visit the wash room several times a day. Sometimes, we also struggle to control the urge to urinate when we are busy with something else. By the way, what is urine composed of? Have you every wondered about this question?
Story first published: Thursday, September 8, 2016, 11:26 [IST]
X
Desktop Bottom Promotion