For Quick Alerts
ALLOW NOTIFICATIONS  
For Daily Alerts

  ಪನ್ನೀರ್‌ನ ಜಬರ್ದಸ್ತ್ ಪವರ್‍‌ಗೆ ಭೇಷ್ ಎನ್ನಲೇಬೇಕು!

  By Deepak
  |

  ಹಾಲು ಮತ್ತು ಹಾಲಿನ ಉತ್ಪನ್ನಗಳು ಮನುಷ್ಯನ ಆಹಾರ ಪಟ್ಟಿಯಲ್ಲಿ ಅನಾದಿ ಕಾಲದಿಂದಲೂ ಸ್ಥಾನಪಡೆದಿರುವ ಅಂಶಗಳಾಗಿವೆ. ವಿಶ್ವದ ಎಲ್ಲಾ ಕಡೆ ಹಾಲನ್ನು ಸೇವಿಸುವ ಜನರು ಇದ್ದಾರೆ. ಹಲವರಿಗೆ ಹಾಲು ಬೇಕೇ ಬೇಕು ಎಂಬ ನಿಯಮ ಇರುತ್ತದೆ. ಕೆಲವರು ಹಾಲನ್ನು ಸೇವಿಸದಿದ್ದರು ಹಾಲಿನ ಉತ್ಪನ್ನಗಳನ್ನು ಸೇವಿಸುವ ಪರಿಪಾಠವನ್ನು ಇರಿಸಿಕೊಂಡಿರುತ್ತಾರೆ. ಹಾಲಿನ ಉತ್ಪನ್ನಗಳು ಅದನ್ನು ಸೇವಿಸಿದವರಿಗೆ ಹಲವಾರು ಪ್ರಯೋಜನಗಳನ್ನು ನೀಡುತ್ತದೆ ಎಂಬುದು ತಿಳಿದಿರುವ ವಿಚಾರವಾಗಿದೆ.

  ವಿಶ್ವದಾದ್ಯಂತ ಸಿಹಿ ತಿನಿಸು, ಮೊಸರು ಮತ್ತು ಐಸ್ ಕ್ರೀಮ್‌ಗಳು ಜನಪ್ರಿಯಗೊಂಡಿದ್ದರೆ, ಭಾರತೀಯರ ವಲಯದಲ್ಲಿ ಹಾಲನ್ನು ಮನೆಯಲ್ಲಿ ತಯಾರಿಸಿದ ಚೀಸ್ ಅಥವಾ ಪನ್ನೀರ್‌ ಆಗಿ ಬಳಸಲು ಇಷ್ಟಪಡುತ್ತಾರೆ. ಸಾಮಾನ್ಯವಾಗಿ ತುಂಬಾ ಜನರು ಕಚ್ಚಾ ರೂಪದಲ್ಲಿ ಪನ್ನೀರ್‌ ಸೇವಿಸಲು ಇಷ್ಟಪಡುತ್ತಾರೆ. ನಿಸ್ಸಂದೇಹವಾಗಿ, ಈ ಹಾಲಿನ ಉತ್ಪನ್ನವಾದ ಪನ್ನೀರ್‌ ಭಾರತದಾದ್ಯಂತ ಜನಪ್ರಿಯವಾಗಿದೆ.

  Wonderful Health Benefits of Paneer
   

  ಪನ್ನೀರ್‌ ಬಳಸಿಕೊಂಡು ಜನರು ಹಲವಾರು ಸಿಹಿ ತಿನಿಸುಗಳನ್ನು ಮಾಡುತ್ತಾರೆ. ಆದರೆ ಅತಿ ಹೆಚ್ಚು ಜನಪ್ರಿಯವಾಗಿರುವುದು ಇದರಿಂದ ತಯಾರಿಸಿದ ಕರಿಗಳು. ವಾಸ್ತವವಾಗಿ ಹೇಳಬೇಕೆಂದರೆ, ಈ ಹಾಲು ಉತ್ಪನ್ನವು ಕೆಲವು ಅಮೂಲ್ಯ ಪ್ರಯೋಜನಗಳನ್ನು ಒಳಗೊಂಡಿರುತ್ತದೆ. ಪನ್ನೀರ್‌ನಲ್ಲಿರುವ ಆರೋಗ್ಯಕಾರಿ ಪ್ರಯೋಜನಗಳು ಅದನ್ನು ಭಾರತೀಯ ಆಹಾರದ ಬಹುಮುಖ್ಯ ಅಂಶವನ್ನಾಗಿ ಮಾಡಿವೆ. ಬನ್ನಿ ಪನ್ನೀರ್‌ನಿಂದ ದೊರೆಯುವ ಅದ್ಭುತ ಪ್ರಯೋಜನಗಳನ್ನು ನೋಡೋಣ:

  Wonderful Health Benefits of Paneer
   

  ಮೂಳೆಗಳನ್ನು ಮತ್ತು ಹಲ್ಲುಗಳನ್ನು ಬಲಶಾಲಿಗೊಳಿಸುತ್ತದೆ

  ಇದು ಪನ್ನೀರ್‌ನ ಉತ್ತಮ ಪ್ರಯೋಜನಗಳಲ್ಲಿ ಒಂದು. ಇದರಲ್ಲಿ ಸಮೃದ್ಧವಾದ ಕ್ಯಾಲ್ಸಿಯಂ ಮತ್ತು ರಂಜಕ ಇರುತ್ತದೆ. ಇದು ಮೂಳೆಗಳನ್ನು ಮತ್ತು ಹಲ್ಲುಗಳನ್ನು ಬಲಶಾಲಿಗೊಳಿಸುತ್ತದೆ. ಪ್ರತಿ ನಿತ್ಯ ಪನ್ನೀರ್‌ ಸೇವಿಸಿದರೆ ಮೂಳೆಗಳ ಡಿಸಾರ್ಡರ್ ಬರುವುದಿಲ್ಲ. ಜೊತೆಗೆ ನೋವು ಸಹ ಕಡಿಮೆಯಾಗುತ್ತದೆ. ಕೀಲು ಮತ್ತು ಸ್ನಾಯುಗಳ ಸಮಸ್ಯೆಗಳು ಸಹ ಇದರಿಂದ ನಿವಾರಣೆಯಾಗುತ್ತದೆ. ಹಲ್ಲುಗಳು ಗಟ್ಟಿಯಾಗಿ ಬಹುಕಾಲ ಬಾಳಿಕೆ ಬರುತ್ತದೆ.

  Wonderful Health Benefits of Paneer
   

  ಪನ್ನೀರ್‌ ತಕ್ಷಣ ಚೈತನ್ಯ ನೀಡುತ್ತದೆ

  ಹೇಳಿ ಕೇಳಿ ಪನ್ನೀರ್‌ ಹಾಲಿನಿಂದ ತಯಾರಾಗಿರುತ್ತದೆ. ಇದರಲ್ಲಿ ಹಾಲಿನ ಎಲ್ಲಾ ಸ್ವಾಭಾವಿಕ ಅಂಶಗಳು ಇರುತ್ತವೆ. ಇದು ದೇಹಕ್ಕೆ ತಕ್ಷಣ ಚೈತನ್ಯ ನೀಡುತ್ತದೆ. ಅಂಗ ಕಸರತ್ತು ಮಾಡುವವರಿಗೆ ಪನ್ನೀರ್‌ ಹೇಳಿ ಮಾಡಿಸಿದ ಆಹಾರವಾಗಿರುತ್ತದೆ. ಅವರಿಗೆ ಅಗತ್ಯವಾದಷ್ಟು ಕ್ಯಾಲೋರಿಯನ್ನು ಪನ್ನೀರ್‌ ಒದಗಿಸುತ್ತದೆ.

  ಚಯಾಪಚಯ ಕ್ರಿಯೆಯನ್ನು ಸುಧಾರಿಸುತ್ತದೆ

  ನಮ್ಮ ಜೀರ್ಣಾಂಗ ವ್ಯವಸ್ಥೆ ಚೆನ್ನಾಗಿರಬೇಕು ಎಂದಾದಲ್ಲಿ ನಮ್ಮ ಚಯಾಪಚಯ ವ್ಯವಸ್ಥೆ ಚೆನ್ನಾಗಿರಬೇಕು. ಪನ್ನೀರ್‌ನಲ್ಲಿ ಡಯಟೆರಿ ಫೈಬರ್ ಇದ್ದು, ಅದು ಆಹಾರ ಜೀರ್ಣವಾಗಲು ನೆರವು ನೀಡುತ್ತದೆ. ಹೀಗೆ ಇದು ಜೀರ್ಣಾಂಗದ ಸರಾಗ ಕಾರ್ಯ ವೈಖರಿಗೆ ನೆರವಾಗುತ್ತದೆ.

  Wonderful Health Benefits of Paneer
   

  ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ

  ನಿಸ್ಸಂಶಯವಾಗಿ ಇದು ಒಂದು ಉತ್ತಮ ಪ್ರಯೋಜನವಾಗಿದೆ. ಪನ್ನೀರ್‌ ಕ್ಯಾನ್ಸರ್‌ನ ಅಪಾಯವನ್ನು ತಗ್ಗಿಸುತ್ತದೆ ಎಂಬ ಅಂಶಗಳನ್ನು ಇತ್ತೀಚಿನ ಅಧ್ಯಯನಗಳು ದೃಢಪಡಿಸಿವೆ. ಈ ಮಾರಕ ಕಾಯಿಲೆಯನ್ನು ನಿಯಂತ್ರಿಸುವ ಪ್ರಯತ್ನಗಳು ಇನ್ನೂ ಸಾಗುತ್ತಲೆ ಇದೆ. ಪನ್ನೀರ್‌ ಜಠರದ ಕ್ಯಾನ್ಸರ್, ಕೋಲನ್ ಕ್ಯಾನ್ಸರ್ ಮತ್ತು ಸ್ತನ ಕ್ಯಾನ್ಸರ್ ಸಮಸ್ಯೆಗಳಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂದು ತಿಳಿದುಬಂದಿದೆ.

  English summary

  Wonderful Health Benefits of Paneer

  Milk and milk products have been an essential part of the human diet for years. People from all over the world consume milk in one form or the other. Most of the milk products have the goodness of milk; and that is why, all the milk products bring some distinctive advantages for the users. Following description will describe about some of the most valuable benefits of paneer, have a look:
  Story first published: Wednesday, June 8, 2016, 7:02 [IST]
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more