For Quick Alerts
ALLOW NOTIFICATIONS  
For Daily Alerts

  ಟೀ ಕಾಫಿ ಬದಲಿಗೆ, ಬೀಟ್‌ರೂಟ್‌-ಕಿತ್ತಳೆ ಜ್ಯೂಸ್‌ ಕುಡಿಯಿರಿ

  By
  |

  ನಿಮ್ಮ ನಿತ್ಯದ ಪ್ರಥಮ ಆಹಾರ ಯಾವುದು? ಹೆಚ್ಚಿನವರು ಇದಕ್ಕೆ ಕಾಫಿ ಅಥವಾ ಟೀ ಎಂಬ ಉತ್ತರ ನೀಡುತ್ತಾರೆ. ವಾಸ್ತವವಾಗಿ ಈ ಅಭ್ಯಾಸವನ್ನು ಬಲವಂತವಾಗಿ ಬ್ರಿಟಿಷರು ನಮಗೆ ಹಬ್ಬಿಸಿದ್ದೇ ಹೊರತು ಭಾರತೀಯರು ಹಿಂದೆ ಹಣ್ಣು ಮತ್ತು ತರಕಾರಿಗಳ ರಸವನ್ನೇ ದಿನದ ಪ್ರಥಮ ಆಹಾರವಾಗಿ ಸೇವಿಸ್ತುತಿದ್ದರು. ಹೌದು, ದಿನದ ಪ್ರಥಮ ಆಹಾರವಾಗಿ ಹಣ್ಣು ಮತ್ತು ತರಕಾರಿಗಳು ಅಥವಾ ಇವುಗಳ ರಸವನ್ನು ಸೇವಿಸುವುದರಲ್ಲಿ ಹಲವಾರು ಆರೋಗ್ಯಕರ ಪ್ರಯೋಜನಗಳಿವೆ ಎಂಬುದನ್ನು ಸಂಶೋಧನೆಗಳು ದೃಢೀಕರಿಸಿದ್ದು ಹಲವಾರು ರೋಗಗಳಿಂದ ದೂರವಿರಬಹುದಾಗಿದೆ.  ಬೀಟ್‌ರೂಟ್ ಜ್ಯೂಸ್, ಎಂದಾಕ್ಷಣ ಮುಖಸಿಂಡರಿಸಬೇಡಿ...

  ಇಂದಿನವರಿಗೆ ಹೋಲಿಸಿದರೆ ನಮ್ಮ ಹಿರಿಯರು ಹೆಚ್ಚು ಆರೋಗ್ಯವಂತರಾಗಿರುವ ರಹಸ್ಯವೆಂದರೆ ಅವರ ಆಹಾರ ಸೇವನೆಯ ಕ್ರಮ ಮತ್ತು ಶ್ರಮಜೀವನ. ಚಿಕ್ಕಪುಟ್ಟ ತೊಂದರೆಗಳಿಗೆಲ್ಲಾ ಆಗ ವೈದ್ಯರ ಸಹಾಯ ಪಡೆಯುತ್ತಲೇ ಇರಲಿಲ್ಲ, ಬದಲಿಗೆ ಹಿತ್ತಲ ಗಿಡದ ಮದ್ದು ಮತ್ತು ಹತ್ತು ಹಲವು ಹಣ್ಣು ತರಕಾರಿಗಳ ಸೇವನೆಯ ಮೂಲಕವೇ ಉಪಶಮನ ಪಡೆಯಲಾಗುತ್ತಿತ್ತು.   ಕಿತ್ತಳೆ- ಬಾಳೆಹಣ್ಣಿನ ಸಿಪ್ಪೆಯ ಪವರ್‌ಗೆ ಬೆರಗಾಗಲೇಬೇಕು..!

  ಇಂತಹ ಒಂದು ಅತ್ಯುತ್ತಮ ಆಹಾರವೆಂದರೆ ಬೀಟ್‌ರೂಟ್‌ ಮತ್ತು ಕಿತ್ತಳೆ ಹಣ್ಣಿನ ಜ್ಯೂಸ್‌ನ ಸೇವನೆ. ಪ್ರತಿದಿನ ಒಂದು ಲೋಟ ಈ ಜ್ಯೂಸ್ ಅನ್ನು ಪ್ರಥಮ ಆಹಾರವಾಗಿ ಸೇವಿಸಿದರೆ ಎಷ್ಟೋ ಪ್ರಯೋಜನಗಳಿವೆ. ಬನ್ನಿ, ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೋಡೋಣ....

  ಬೀಟ್‌ರೂಟ್‌ ಮತ್ತು ಕಿತ್ತಳೆ ಹಣ್ಣಿನ ಜ್ಯೂಸ್ ತಯಾರಿಸುವ ವಿಧಾನ

  ಬೀಟ್‌ರೂಟ್‌ ಮತ್ತು ಕಿತ್ತಳೆ ಹಣ್ಣಿನ ಜ್ಯೂಸ್ ತಯಾರಿಸುವ ವಿಧಾನ

  *ಬೀಟ್‌ರೂಟ್‌ - ಮಧ್ಯಮ ಗಾತ್ರದ ಅರ್ಧ ಭಾಗ

  *ಕಿತ್ತಳೆ ಹಣ್ಣಿನ ಜ್ಯೂಸ್ - ಅರ್ಧ ಕಪ್

  *ಮೊದಲು ಇವೆರಡನ್ನೂ ಮಿಕ್ಸಿಯ ಬ್ಲೆಂಡರಿನಲ್ಲಿ ಹಾಕಿ ಚೆನ್ನಾಗಿ ಅರೆಯಿರಿ. ಈ ರಸವನ್ನು ಸೋಸದೇ ಹಾಗೇ ಕುಡಿಯಿರಿ.

  ಸೇವನೆಯ ವಿಧಾನ

  ಸೇವನೆಯ ವಿಧಾನ

  ಪ್ರತಿದಿನ ಮುಂಜಾನೆ ಎದ್ದು ಪ್ರಾತಃವಿಧಿಗಳನ್ನು ಪೂರೈಸಿದ ಬಳಿಕ ಒಂದು ಲೋಟ ಈ ಮಿಶ್ರಣವನ್ನು ನೇರವಾಗಿ ಕುಡಿದುಬಿಡಿ. ಬಳಿಕ ಕನಿಷ್ಠ ಮುಕ್ಕಾಲು ಗಂಟೆ ಏನನ್ನೂ ಸೇವಿಸದಿರಿ. ಬದಲಿಗೆ ಸಾಕಷ್ಟು ವ್ಯಾಯಾಮ ಅನುಸರಿಸಿ. ಇದರಿಂದ ಹಲವಾರು ಪ್ರಯೋಜನಗಳಿವೆ. ಇವುಗಳಲ್ಲಿ ಮುಖ್ಯವಾದವುಗಳನ್ನು ಮುಂದಿನ ಸ್ಲೈಡ್ ನಲ್ಲಿ ನೀಡಿದ್ದೇವೆ ಮುಂದೆ ಓದಿ...

  ಅಧಿಕ ರಕ್ತದೊತ್ತಡವನ್ನು ನಿವಾರಿಸುತ್ತದೆ

  ಅಧಿಕ ರಕ್ತದೊತ್ತಡವನ್ನು ನಿವಾರಿಸುತ್ತದೆ

  ಈ ಮಿಶ್ರಣದಲ್ಲಿರುವ ನೈಟ್ರಿಕ್ ಆಮ್ಲ ಮತ್ತು ವಿಟಮಿನ್ ಸಿ ಪೆಡಸಾಗಿದ್ದ ರಕ್ತನಾಳಗಳನ್ನು ಸಡಿಲಿಸಿ ರಕ್ತಪರಿಚಲನೆ ಸುಗಮಗೊಳ್ಳಲು ನೆರವಾಗುತ್ತದೆ. ಇದರಿಂದ ಅಧಿಕ ರಕ್ತದೊತ್ತಡ ಕಡಿಮೆಯಾಗುತ್ತದೆ.

  ಕೆಲವು ವಿಧದ ಕ್ಯಾನ್ಸರ್ ಬರುವುದರಿಂದ ತಪ್ಪಿಸುತ್ತದೆ

  ಕೆಲವು ವಿಧದ ಕ್ಯಾನ್ಸರ್ ಬರುವುದರಿಂದ ತಪ್ಪಿಸುತ್ತದೆ

  ಕೆಲವು ಅಧ್ಯಯನಗಳಲ್ಲಿ ಈ ಮಿಶ್ರಣದಲ್ಲಿ ಪ್ರಬಲ ಫೈಟ್ರೋ ನ್ಯೂಟ್ರಿಯೆಂಟುಗಳಿದ್ದು ಇವು ಹಲವು ವಿಧದ ಕ್ಯಾನ್ಸರ್ ವಿರುದ್ದ ಹೋರಾಡುವ ಗುಣ ಹೊಂದಿದೆ ಎಂದು ಕಂಡುಕೊಳ್ಳಲಾಗಿದೆ. ವಿಶೇಷವಾಗಿ ಪ್ರಾಸ್ಟೇಟ್ ಗ್ರಂಥಿ, ಸ್ತನ ಮತ್ತು ಮೇದೋಜೀರಕ ಗ್ರಂಥಿಯ ಕ್ಯಾನ್ಸರ್ ನಿಂದ ರಕ್ಷಣೆ ನೀಡುತ್ತದೆ.

   ಹುಟ್ಟಲಿರುವ ಮಗುವಿನಲ್ಲಿ ಊನಗಳ ಸಾಧ್ಯತೆ ಕಡಿಮೆ ಮಾಡುತ್ತದೆ

  ಹುಟ್ಟಲಿರುವ ಮಗುವಿನಲ್ಲಿ ಊನಗಳ ಸಾಧ್ಯತೆ ಕಡಿಮೆ ಮಾಡುತ್ತದೆ

  ಈ ಅದ್ಭುತ ರಸವನ್ನು ಗರ್ಭಿಣಿಯರು ನಿಯಮಿತವಾಗಿ ಸೇವಿಸಿದರೆ ಹುಟ್ಟಲಿರುವ ಮಗು ಪರಿಪೂರ್ಣ ಆರೋಗ್ಯವನ್ನು ಪಡೆಯಲು ಸಾಧ್ಯವಾಗುತ್ತದೆ. ಈ ರಸದಲ್ಲಿರುವ ವಿಟಮಿನ್ ಬಿ, ಸಿ ಮತ್ತು ಫೋಲೇಟ್ ಗರ್ಭದಲ್ಲಿರುವ ಮಗುವಿಗೆ ಹೆಚ್ಚಿನ ಪೋಷಣೆ ನೀಡುತ್ತದೆ.

  ಕರುಳ ಹುಣ್ಣುಗಳನ್ನು ಮಾಗಿಸುತ್ತದೆ

  ಕರುಳ ಹುಣ್ಣುಗಳನ್ನು ಮಾಗಿಸುತ್ತದೆ

  ಈ ರಸದಲ್ಲಿರುವ ಉರಿಯೂತ ನಿವಾರಕ ಗುಣ ಕರುಳು, ಜಠರಗಳಲ್ಲಿ ಆಗಿದ್ದ ಹುಣ್ಣುಗಳನ್ನು ಮಾಗಿಸುವ ಗುಣ ಹೊಂದಿದೆ. ಅಷ್ಟೇ ಅಲ್ಲ, ಜೀರ್ಣಕ್ರಿಯೆ ಸುಲಭಗೊಂಡು ಒಂದು ವೇಳೆ ಜೀರ್ಣಾಂಗಗಳ ಒಳಭಾಗದಲ್ಲಿ ಸೂಕ್ಷ್ಮಗೀರುಗಳಾಗಿದ್ದರೆ ವಾಸಿಯಾಗಲು ನೆರವಾಗುತ್ತದೆ.

  ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ

  ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ

  ಈ ದ್ರವದಲ್ಲಿ ಅತಿಹೆಚ್ಚಿನ ಪ್ರಮಾಣದಲ್ಲಿ ವಿಟಮಿನ್ ಸಿ, ಮ್ಯಾಂಗನೀಸ್ ಮತ್ತು ಇತರ ಪೋಷಕಾಂಶಗಳಿರುವ ಕಾರಣ ದೇಹದ ಪ್ರತಿ ಜೀವಕೋಶವೂ ಹೆಚ್ಚಿನ ಪೋಷಣೆ ಪಡೆಯುತ್ತದೆ. ಅಲ್ಲದೇ ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತದೆ. ಇದು ಒಟ್ಟಾರೆ ಆರೋಗ್ಯಕ್ಕೆ ಪೂರಕವಾಗಿದೆ.

  ರಕ್ತಹೀನತೆಯನ್ನು ನಿವಾರಿಸುತ್ತದೆ

  ರಕ್ತಹೀನತೆಯನ್ನು ನಿವಾರಿಸುತ್ತದೆ

  ಈ ದ್ರವದಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಪೋಷಕಾಂಶಗಳು ಆಹಾರದ ಮೂಲಕ ಲಭಿಸುವ ಕಬ್ಬಿಣದ ಅಂಶವನ್ನು ಹೆಚ್ಚಾಗಿ ಹೀರಿಕೊಳ್ಳಲು ನೆರವಾಗುತ್ತದೆ. ತನ್ಮೂಲಕ ರಕ್ತಹೀನತೆಯನ್ನು ನಿವಾರಿಸಲು ಸಾಧ್ಯವಾಗುತ್ತದೆ.

   

  English summary

  Why You Should Drink Beetroot And Orange Juice Every Day?

  Have you ever wondered what people of the ancient eras did when they were affected by ailments? Well, they depended on herbal medication which were made from vegetable and fruit extracts! Did you know that the juice made from beetroot and orange can treat a number of ailments? Well, learn how to prepare the juice, here.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more