For Quick Alerts
ALLOW NOTIFICATIONS  
For Daily Alerts

ಆರೋಗ್ಯದ ಖಜಾನೆ ಮೊಳಕೆ ಕಟ್ಟಿದ ಕಾಳುಗಳು

By Jaya
|

ನಮ್ಮ ದೈನಂದಿನ ಚಟುವಟಿಕೆಗಳಲ್ಲಿ ನಾವು ಸೇವಿಸುವ ಆಹಾರ ಪ್ರಮುಖ ಪಾತ್ರ ವಹಿಸುತ್ತದೆ. ಪೋಷಕಾಂಶವುಳ್ಳ ಆರೋಗ್ಯಕರ ಆಹಾರವನ್ನು ನಾವು ಸೇವಿಸುತ್ತಿದ್ದಲ್ಲಿ ರೋಗ ರುಜಿನಗಳೊಂದಿಗೆ ಹೋರಾಡುವ ಶಕ್ತಿಯನ್ನು ನಾವು ಪಡೆದುಕೊಳ್ಳುತ್ತೇವೆ ಅಂತೆಯೇ ಸುಸ್ತು ಬಳಲಿಕೆ ನಮ್ಮನ್ನು ಹಿಂಬಾಲಿಸುವುದಿಲ್ಲ. ಅದರಲ್ಲೂ ಸಂಸ್ಕರಿಸಿದ ಆಹಾರಕ್ಕಿಂತ ಪುರಾತನ ಆರೋಗ್ಯ ಪದ್ಧತಿಗಳನ್ನು ನಾವು ಅನುಸರಿಸಿದಲ್ಲಿ ಉತ್ತಮ ಆರೋಗ್ಯವನ್ನು ನಾವು ಪಡೆದುಕೊಳ್ಳಬಹುದಾಗಿದೆ. ಅನಾದಿ ಕಾಲದಿಂದಲೂ ನಮ್ಮ ಹಿರಿಯರು ಬಳಸುತ್ತಿದ್ದ ಆಹಾರಗಳೇ ಅವರ ಆರೋಗ್ಯದ ಗುಟ್ಟಾಗಿತ್ತು. ಮೊಳಕೆ ಕಟ್ಟಿದ ಕಾಳುಗಳು ಆರೋಗ್ಯಕ್ಕೆ ಉತ್ತಮ

ಮಾರುಕಟ್ಟೆಯ ಆಹಾರ ಪದಾರ್ಥಗಳಿಗಿಂತಲೂ ತಾವು ಬೆಳೆದ ತರಕಾರಿ ಹಣ್ಣು, ಸೊಪ್ಪುಗಳನ್ನು ನಿತ್ಯದ ಬಳಕೆಗೆ ಬಳಸುತ್ತಿದ್ದರು ಅಂತೆಯೇ ನೆನೆಸಯಿಸಿದ ಕಾಳುಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಿದ್ದರು. ಹೆಚ್ಚಿನ ಪೋಷಕಾಂಶ ಮತ್ತು ವಿಟಮಿನ್ ಅಂಶಗಳನ್ನು ಹೊಂದಿರುವ ಮೊಳಕೆ ಬರಿಸಿದ ಕಾಳುಗಳು ದೈಹಿಕ ಆರೋಗ್ಯವನ್ನು ವೃದ್ಧಿಸುವುದರ ಜೊತೆಗೆ ದೇಹದ ಆಕಾರವನ್ನು ಸುಂದರಗೊಳಿಸುತ್ತದೆ. ಆಹಾ ನಾಲಿಗೆಯ ಸ್ವಾದವನ್ನು ಹೆಚ್ಚಿಸುವ ಮೊಳಕೆ ಕಾಳು ರೆಸಿಪಿ

ಹೆಸರುಕಾಳು, ಮೆಂತೆ, ಹುರುಳಿ, ಕಡಲೆಯನ್ನು ನೆನೆಸಿಟ್ಟು ಅದನ್ನು ಸೇವಿಸುವುದರಿಂದ ದೇಹವು ಉತ್ತಮ ಚೈತನ್ಯವನ್ನು ಪಡೆದುಕೊಂಡು ಶಕ್ತಿಯನ್ನು ಪಡೆದುಕೊಳ್ಳಲಿದೆ. ಇಂದಿನ ಲೇಖನದಲ್ಲಿ ಮೊಳೆಕೆ ಕಾಳುಗಳ ಇನ್ನಷ್ಟು ಆರೋಗ್ಯ ಪ್ರಯೋಜನಗಳನ್ನು ನಾವು ತಿಳಿಸುತ್ತಿದ್ದು ಈ ಅಂಶಗಳನ್ನು ಕಂಡು ನೀವು ಬೆರಗಾಗುವುದು ಖಂಡಿತ ಮತ್ತು ಇಂದಿನಿಂದಲೇ ಇದರ ಸೇವನೆಯನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳುತ್ತೀರಿ ಕೂಡ. ಆಹಾರದಲ್ಲಿ ಇರಲಿ ಮೊಳಕೆ ಕಾಳುಗಳ ಸತ್ವ!

ಕೂದಲಿಗೆ ಅತ್ಯುತ್ತಮ

ಕೂದಲಿಗೆ ಅತ್ಯುತ್ತಮ

ನಿಮ್ಮ ಕೂದಲಿನ ಆರೋಗ್ಯಕ್ಕೆ ಮೊಳಕೆ ಕಾಳುಗಳು ಅತ್ಯುತ್ತಮವಾಗಿದೆ. ವಿಟಮಿನ್ ಸಿ ಅಂಶವನ್ನು ಇದು ಒಳಗೊಂಡಿದ್ದು, ಕೂದಲನ್ನು ಉದ್ದ ಮತ್ತು ದಟ್ಟವಾಗಿಸುತ್ತದೆ. ಮುಕ್ತ ರಾಡಿಕಲ್‎ಗಳ ಸಮಸ್ಯೆಯಿಂದ ಮುಕ್ತಿಗೊಳಿಸಿ ಕೂದಲನ್ನು ತೆಳ್ಳಗಾಗಿಸುವ ಅಂಶವನ್ನು ಕಡಿಮೆ ಮಾಡುತ್ತದೆ. ಅಲ್ಲದೆ ಬಿಳಿ ಕೂದಲಿನ ಸಮಸ್ಯೆಯನ್ನು ದೂರಗೊಳಿಸುತ್ತದೆ.

ವಿಟಮಿನ್ ಹೇರಳವಾಗಿದೆ

ವಿಟಮಿನ್ ಹೇರಳವಾಗಿದೆ

ವಿಟಮಿನ್‎ಗಳಾದ ಎ,ಬಿ,ಸಿ ಮತ್ತು ಇ ಮೊಳಕೆ ಕಾಳುಗಳಲ್ಲಿದ್ದು ಕಾಳುಗಳಲ್ಲಿ ಕೆಲವೇ ದಿನಗಳಲ್ಲಿ ಹುಟ್ಟಿಕೊಳ್ಳುವ ಮೊಳೆಕಯು 20% ದಷ್ಟು ಪೋಷಕಾಂಶಗಳನ್ನು ಒಳಗೊಂಡಿರುತ್ತದೆ. ಬೀನ್ಸ್ ಕಾಳು 285% ದಷ್ಟು ವಿಟಮಿನ್ ಬಿ1 ಅನ್ನು ಒಳಗೊಂಡಿದೆ ಎಂಬುದಾಗಿ ಅಧ್ಯಯನವು ತಿಳಿಸಿದೆ.

 ತೂಕ ಇಳಿಕೆಯಲ್ಲಿ ಸಹಾಯಕ

ತೂಕ ಇಳಿಕೆಯಲ್ಲಿ ಸಹಾಯಕ

ಫೈಬರ್ ಅಂಶವು ಮೊಳಕೆ ಕಾಳುಗಳಲ್ಲಿದ್ದು, ತೂಕ ಇಳಿಸುವುದರಲ್ಲಿ ಇದು ಗಮನಾರ್ಹ ಪಾತ್ರ ವಹಿಸುತ್ತದೆ. ದೇಹದಲ್ಲಿ ಚಯಾಪಚಯ ಕ್ರಿಯೆಯನ್ನು ಇದು ವೃದ್ಧಿಸಿ ದೇಹದಲ್ಲಿನ ವಿಷಕಾರಿ ಅಂಶಗಳನ್ನು ಹೊರಹಾಕುತ್ತದೆ.

ಫ್ಯಾಟಿ ಆಸಿಡ್ ಅಧಿಕವಾಗಿದೆ‎

ಫ್ಯಾಟಿ ಆಸಿಡ್ ಅಧಿಕವಾಗಿದೆ‎

ಮೊಳಕೆ ಕಾಳುಗಳಲ್ಲಿ ಫ್ಯಾಟಿ ಆಸಿಡ್‎ಗಳು ಹೇರಳವಾಗಿದೆ. ನಾವು ಸೇವಿಸುವ ಆಹಾರದಲ್ಲಿ ಈ ಫ್ಯಾಟಿ ಆಸಿಡ್‎ಗಳು ಇರುವುದಿಲ್ಲ. ಮೊಳಕೆ ಕಾಳುಗಳನ್ನು ಸೇವಿಸಿ ದೇಹಕ್ಕೆ ಬೇಕಾಗಿರುವ ಈ ಪೋಷಕಾಂಶಗಳನ್ನು ನಾವು ಒದಗಿಸಬೇಕು.

ದೇಹದ ಕ್ಷಾರೀಕರಣವನ್ನು ಮಾಡುತ್ತದೆ

ದೇಹದ ಕ್ಷಾರೀಕರಣವನ್ನು ಮಾಡುತ್ತದೆ

ದೇಹವನ್ನು ಕ್ಷಾರೀಕರಣ ಮಾಡುವುದರಲ್ಲಿ ಮೊಳಕೆ ಕಾಳುಗಳ ಪಾತ್ರ ಹಿರಿದು. ಕ್ಯಾನ್ಸರ್‎ನಂತಹ ಪ್ರಾಣಾಂತಿಕ ಕಾಯಿಲೆಗಳೊಂದಿಗೆ ಇದು ಹೋರಾಡಿ ದೇಹದಲ್ಲಿ ಆಮ್ಲತೆಯನ್ನು ತಡೆಯುತ್ತದೆ.

ಕಬ್ಬಿಣದ ಅಂಶ

ಕಬ್ಬಿಣದ ಅಂಶ

ದೇಹಕ್ಕೆ ಆಮ್ಲಜನಕವನ್ನು ಪೂರೈಸುವ ಕಬ್ಬಿಣದ ಅಂಶವನ್ನು ಮೊಳಕೆ ಕಾಳುಗಳು ಒಳಗೊಂಡಿವೆ. ಮಾನವನ ದೇಹಕ್ಕೆ ಅಗತ್ಯವಾಗಿರುವ ಕಬ್ಬಿಣದ ಅಂಶವು ಮೊಳಕೆ ಕಾಳುಗಳಿಂದ ದೊರೆಯಲಿದ್ದು ದೇಹಕ್ಕೆ ಸಾಮರ್ಥ್ಯವನ್ನು ಒದಗಿಸುತ್ತದೆ.

ಉತ್ಕರ್ಷಣ ನಿರೋಧಿ ಅಂಶಗಳು

ಉತ್ಕರ್ಷಣ ನಿರೋಧಿ ಅಂಶಗಳು

ಮೊಳಕೆ ಕಾಳುಗಳಲ್ಲಿ ಉತ್ಕರ್ಷಣ ನಿರೋಧಿ ಅಂಶಗಳು ಹೇರಳವಾಗಿದ್ದು ನಮ್ಮ ಆರೋಗ್ಯ ಮತ್ತು ಕೂದಲು, ಉಗುರು, ತ್ವಚೆಯ ಅಭಿವೃದ್ಧಿಗೆ ಇದು ಅತಿ ಮುಖ್ಯವಾದುದು.

English summary

Why Sprouts Are Essential For Our Health

Due To Its High Nutritional Value, It Will Not Be Inappropriate If We Call Sprouts A Wonder Food. Thus The Importance Of Sprouts On Our Health Should Never Be Underestimated. To Those Who Are Not Very Familiar With Sprouts, Let Me Inform You That Sprouts Are Nothing But Germinated Seeds Of Certain Grains And Legumes.
X
Desktop Bottom Promotion