For Quick Alerts
ALLOW NOTIFICATIONS  
For Daily Alerts

  ಸತತ ಒಂದು ವಾರ ಅನಾನಸ್ ತಿಂದರೆ, ಆರೋಗ್ಯ ವೃದ್ಧಿ!

  By Super
  |

  ಒಂದು ವೇಳೆ ನೀವು ತಾಜಾ ಹಣ್ಣುಗಳನ್ನು ತಿನ್ನುವ ಅಭ್ಯಾಸದವರಾಗಿದ್ದರೆ ಇತರರಿಗಿಂತ ಉತ್ತಮ ಆರೋಗ್ಯ ಹೊಂದಿರುವುದನ್ನು ಗಮನಿಸಿಯೇ ಇರುತ್ತೀರಿ. ಏಕೆಂದರೆ ತಾಜಾಹಣ್ಣುಗಳಲ್ಲಿ ಉತ್ತಮ ಆರೋಗ್ಯಕ್ಕೆ ಅಗತ್ಯವಾದ ಎಲ್ಲಾ ಪೋಷಕಾಂಶಗಳಿದ್ದು ತೂಕ ಏರದೇ ಇರಲು ಮತ್ತು ಚಟುವಟಿಕೆಯಿಂದಿರಲು ಸಾಧ್ಯವಾಗುತ್ತದೆ. ಕೇವಲ ಹಣ್ಣುಗಳು ಮಾತ್ರವಲ್ಲ, ಹಸಿಯಾಗಿ ತಿನ್ನಬಹುದಾದ ತರಕಾರಿ, ಸಲಾಡ್‌ಗಳನ್ನೂ ಸೇವಿಸುವುದರಿಂದ ಆರೋಗ್ಯವನ್ನು ಇನ್ನಷ್ಟು ಉತ್ತಮವಾಗಿರಿಸಿಕೊಳ್ಳಬಹುದು.

  ಇದರೊಂದಿಗೆ ಸಸ್ಯಗಳಲ್ಲಿ ದೊರಕದೇ ಇರುವ ಪೋಷಕಾಂಶಗಳನ್ನು ಮೀನಿನ ಮೂಲಕ ಪಡೆದು ದೇಹವನ್ನು ನಿರೋಗಿಯಾಗಿರಿಸಬಹುದು. ಹಿಂದೆ ವಾಸಪ್ರಸ್ತಾಶ್ರಮದಲ್ಲಿ ಹಣ್ಣು ಮತ್ತು ತರಕಾರಿಗಳೇ ಪ್ರಮುಖ ಆಹಾರವಾಗಿರುತ್ತಿತ್ತು. ಈ ಆಹಾರವನ್ನು ಸೇವಿಸಿದವರು ಸಾಮಾನ್ಯವಾಗಿ ಶತಾಯುಶಿಗಳಾಗಿರುತ್ತಿದ್ದರು. ಹುಳಿ ಮಿಶ್ರಿತ ಸಿಹಿಯಾದ ಅನಾನಸ್‌ ಜ್ಯೂಸ್‌‌ನ‌ ಮಹತ್ವ ಅರಿಯಿರಿ!

  ಪ್ರತಿ ಹಣ್ಣಿನಲ್ಲಿಯೂ ಇತರ ಹಣ್ಣಿನಲ್ಲಿ ಇರದ ಕೆಲವು ಪೋಷಕಾಂಶಗಳಿದ್ದು ಪೂರ್ಣಪ್ರಮಾಣದ ಪ್ರಯೋಜನ ಪಡೆಯಲು ಎಲ್ಲಾ ಹಣ್ಣುಗಳನ್ನು ಕೊಂಚಕೊಂಚವಾಗಿ ಸೇವಿಸುವುದು ಉತ್ತಮ. ಒಟ್ಟಾರೆಯಾಗಿ ಹಣ್ಣುಗಳಲ್ಲಿರುವ ಆಂಟಿಆಕ್ಸಿಡೆಂಟುಗಳು ಮತ್ತು ಇತರ ಖನಿಜಗಳು ದೇಹಕ್ಕೆ ಶಕ್ತಿ ನೀಡುವುದು ಮಾತ್ರವಲ್ಲದೇ ರೋಗ ನಿರೋಧಕ ಶಕ್ತಿಯನ್ನೂ ಬಲಪಡಿಸುವ ಮೂಲಕ ರೋಗರಹಿತ ಆರೋಗ್ಯವನ್ನು ನೀಡುತ್ತವೆ.

  ಹಿಂದೆಲ್ಲಾ ಚಿಕ್ಕಪುಟ್ಟ ಕಾಯಿಲೆಗಳಿಗೆಲ್ಲಾ ಯಾವುದಾದರೊಂದು ಹಣ್ಣನ್ನು ಹೆಚ್ಚು ತಿನ್ನುವ ಮೂಲಕ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಈ ಪರಿಯನ್ನು ಕೆಲವು ಪ್ರಾಣಿಗಳಲ್ಲಿಯೂ ಗಮನಿಸಬಹುದು. ಒಂದು ವೇಳೆ ನಾಯಿಗೆ ಹೊಟ್ಟೆ ಕೆಟ್ಟಿದ್ದರೆ ಹಸಿ ಹುಲ್ಲನ್ನು ತಿನ್ನುವುದನ್ನು ಗಮನಿಸಬಹುದು. ಅಂತೆಯೇ ದನಗಳು ಮಣ್ಣನ್ನು ನೆಕ್ಕುವುದು, ಸಾಮಾನ್ಯವಾಗಿ ತಿನ್ನದ ಸೊಪ್ಪುಗಳನ್ನು ತಿನ್ನುವುದು, ಮುಟ್ಟಲೂ ಸಾಧ್ಯವಾಗದ ಗರಿಕೆಸೊಪ್ಪನ್ನು ತಿನ್ನುವುದನ್ನೂ ಗಮನಿಸಬಹುದು. ಇನ್ನು ಅನಾನಸ್ ಹಣ್ಣಿನ ಒಳತಿರುಳನ್ನು ತಿಪ್ಪೆಗೆ ಎಸೆಯಬೇಡಿ..

  ಅಂತೆಯೇ ನಮ್ಮ ಕೆಲವು ಕಾಯಿಲೆಗಳಿಗೂ ನಿಸರ್ಗ ಹಣ್ಣುಗಳ ಮತ್ತು ಸೊಪ್ಪುಗಳ ರೂಪದಲ್ಲಿ ನೈಸರ್ಗಿಕ ಔಷಧಿಗಳನ್ನು ನೀಡಿದೆ. ಅನಾನಸ್ ಹಣ್ಣಿನಲ್ಲಿಯೂ ಉತ್ತಮವಾದ ಔಷಧೀಯ ಗುಣಗಳಿದ್ದು ಕೆಲವು ಕಾಯಿಲೆಗಳಿಗೆ ಸಿದ್ಧೌಷಧದಂತೆ ಕಾರ್ಯನಿರ್ವಹಿಸುತ್ತದೆ. ಈ ಬಗ್ಗೆ ನಡೆಸಿದ ಅಧ್ಯಯನ ಮತ್ತು ಪರೀಕ್ಷೆಗಳ ಮೂಲಕ ದಿನದ ಮೂರೂ ಹೊತ್ತು ನಾಲ್ಕು ದಿನಗಳವರೆಗೆ ಸತತವಾಗಿ ಕೇವಲ ಅನಾನಸ್ ಒಂದನ್ನೇ ತಿನ್ನುತ್ತಾ ಬಂದರೆ ಆರೋಗ್ಯದ ಮೇಲೆ ಗಮನಾರ್ಹ ಪರಿಣಾಮವಾಗುತ್ತದೆ ಎಂದು ಕಂಡುಬಂದಿದೆ.

  ಈ ಅಭ್ಯಾಸವನ್ನು ಇನ್ನೂ ಮೂರು ದಿನ ಮುಂದುವರೆಸಿದರೆ ಏನಾಗುತ್ತದೆ ಎಂಬ ಕುತೂಹಲವನ್ನು ಮೂಡಿಸಿಕೊಂಡು ಸಂಶೋಧನೆ ನಡೆಸಿದ ತಜ್ಞರಿಗೆ ದಕ್ಕ ಉತ್ತರಗಳು ಕುತೂಹಲಕಾರಿಯಾಗಿದ್ದು ಇವುಗಳ ಮುಖ್ಯಾಂಶಗಳನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲಾಗಿದೆ, ಮುಂದೆ ಓದಿ... 

  ತೂಕ ಇಳಿಸುವಲ್ಲಿ ನೆರವಾಗುತ್ತದೆ

  ತೂಕ ಇಳಿಸುವಲ್ಲಿ ನೆರವಾಗುತ್ತದೆ

  ತೂಕ ಇಳಿಯದೇ ಇರಲು ಮುಖ್ಯ ಕಾರಣ ಆಹಾರವನ್ನು ಸೇವಿಸದೇ ಇರಲಾಗದ ನಮ್ಮ ಚಡಪಡಿಕೆ. ಈ ಚಡಪಡಿಕೆಯನ್ನು ಅನಾನಸ್ ಹಣ್ಣನ್ನು ಸಮರ್ಥವಾಗಿ ಕಡಿಮೆ ಮಾಡುತ್ತದೆ. ಅಂದರೆ ಕೊಂಚ ಅನಾನಸ್ ಹಣ್ಣು ತಿಂದ ಬಳಿಕ ಬೇರೇನೂ ತಿನ್ನಲು ಮನಸ್ಸಾಗುವುದೇ ಇಲ್ಲ. (ಮದ್ಯಪಾನದ ಚಟ ಬಿಡಿಸಲು ವ್ಯಸನಮುಕ್ತಿ ಕೇಂದ್ರಗಳಲ್ಲಿಯೂ ಇದೇ ವಿಧಾನವನ್ನು ಅನುಸರಿಸಲಾಗುತ್ತದೆ). ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

  ತೂಕ ಇಳಿಸುವಲ್ಲಿ ನೆರವಾಗುತ್ತದೆ

  ತೂಕ ಇಳಿಸುವಲ್ಲಿ ನೆರವಾಗುತ್ತದೆ

  ಪರಿಣಾಮವಾಗಿ ಒಂದು ವಾರದಲ್ಲಿ ಕನಿಷ್ಠ ಮೂರು ಕೇಜಿಯಾದರೂ ತೂಕ ಇಳಿಯುತ್ತದೆ. ಅಲ್ಲದೇ ಅನಾನಸ್ ಹಣ್ಣಿನ ತಿರುಳನ್ನು ಅರಗಿಸಿಕೊಳ್ಳಲು ಹೆಚ್ಚಿನ ಪ್ರಮಾಣದ ಕೊಬ್ಬು ಬೇಕಾಗುತ್ತದೆ. ಇವೆರಡೂ ಕಾರಣಗಳಿಂದ ದೇಹದ ತೂಕ ಆರೋಗ್ಯಕರವಾಗಿ ಇಳಿಯಲು ಸಾಧ್ಯವಾಗುತ್ತದೆ.

  ನೈಸರ್ಗಿಕ ವಿಧಾನದಲ್ಲಿ ವಿಷಕಾರಿ ವಸ್ತುಗಳು ನಿವಾರಣೆಯಾಗುತ್ತವೆ

  ನೈಸರ್ಗಿಕ ವಿಧಾನದಲ್ಲಿ ವಿಷಕಾರಿ ವಸ್ತುಗಳು ನಿವಾರಣೆಯಾಗುತ್ತವೆ

  ನಾವು ಸೇವಿಸುವ ಯಾವುದೇ ಆಹಾರ ಅತ್ಯಂತ ಪರಿಪೂರ್ಣವಲ್ಲ. ಇವುಗಳನ್ನು ಅರಗಿಸಿಕೊಳ್ಳುವಾಗ ಕೆಲವು ಕಲ್ಮಶ ಮತ್ತು ವಾಯುಗಳು ಉತ್ಪತ್ತಿಯಾಗುತ್ತಲೇ ಇರುತ್ತವೆ. ಕಾಲಕಾಲಕ್ಕೆ ಇವನ್ನು ನಿವಾರಿಸಿ ಸ್ವಚ್ಛಗೊಳಿಸುತ್ತಾ ಇರಬೇಕು. ಇದಕ್ಕೇ ವಾರಕ್ಕೊಂದು ಹೊತ್ತು ಅಥವಾ ದಿನ ಉಪವಾಸ ಇರಬೇಕು ಎಂದು ಹಿರಿಯರು ಹೇಳುತ್ತಾರೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

  ನೈಸರ್ಗಿಕ ವಿಧಾನದಲ್ಲಿ ವಿಷಕಾರಿ ವಸ್ತುಗಳು ನಿವಾರಣೆಯಾಗುತ್ತವೆ

  ನೈಸರ್ಗಿಕ ವಿಧಾನದಲ್ಲಿ ವಿಷಕಾರಿ ವಸ್ತುಗಳು ನಿವಾರಣೆಯಾಗುತ್ತವೆ

  ಆದರೆ ಉಪವಾಸ ಇರಲು ಒಪ್ಪದ ಇಂದಿನ ಜನತೆಗೆ ಅನಾನಸ್ ಹಣ್ಣಿನ ಸೇವನೆ ಉತ್ತಮ ಪರಿಹಾರವಾಗಿದೆ. ಇದರಿಂದ ದೇಹದಲ್ಲಿ ಸಂಗ್ರಹವಾಗಿದ್ದ ವಿಷಕಾರಿ ವಸ್ತುಗಳು ಮತ್ತು ಅನಿಲಗಳು ಸುಲಭವಾಗಿ ನಿವಾರಣೆಯಾಗುತ್ತವೆ. ತನ್ಮೂಲಕ ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತದೆ.

  ಸೆಲ್ಲ್ಯುಲೈಟ್ ಕೊಬ್ಬನ್ನು ಕರಗಿಸುತ್ತದೆ

  ಸೆಲ್ಲ್ಯುಲೈಟ್ ಕೊಬ್ಬನ್ನು ಕರಗಿಸುತ್ತದೆ

  ಸೆಲ್ಯುಲೈಟ್ ಎಂಬುದು ಚರ್ಮದ ಅಡಿಯಲ್ಲಿ ಸಂಗ್ರಹವಾಗುವ ಕೊಬ್ಬು ಆಗಿದ್ದು ಇದನ್ನು ಕರಗಿಸುವುದು ಬಹಳ ಕಷ್ಟದ ಕೆಲಸ. ಮಹಿಳೆಯರಲ್ಲಿ ವಿಶೇಷವಾಗಿ ಇದು ಸೊಂಟದ ಸುತ್ತಳತೆ ಹೆಚ್ಚಿಸುವ ಕೆಲಸ ಮಾಡುತ್ತದೆ. ಅನಾನಸು ಈ ಕೊಬ್ಬನ್ನು ಕರಗಿಸಲು ನೆರವಾಗುತ್ತದೆ. ಈ ಕೊಬ್ಬು ಕರಗಿದಂತೆ ಚರ್ಮವೂ ಸೆಳೆತ ಹೆಚ್ಚಿಸಿಕೊಳ್ಳುತ್ತದೆ. ಪರಿಣಾಮವಾಗಿ ತೂಕದಲ್ಲಿ ಇಳಿತ ಮತ್ತು ಸೌಂದರ್ಯದಲ್ಲಿಯೂ ವೃದ್ಧಿಯಾಗುತ್ತದೆ.

  ಜೀರ್ಣಶಕ್ತಿ ಹೆಚ್ಚಿಸುತ್ತದೆ

  ಜೀರ್ಣಶಕ್ತಿ ಹೆಚ್ಚಿಸುತ್ತದೆ

  ಈ ವಾರದಲ್ಲಿ ಮಾತ್ರವಲ್ಲ, ನಿತ್ಯವೂ ಕೊಂಚ ಅನಾನಸನ್ನು ಸೇವಿಸುತ್ತಾ ಬಂದರೆ ಜೀರ್ಣಶಕ್ತಿ ಉತ್ತಮಗೊಳ್ಳುತ್ತದೆ. ಜೀರ್ಣಾಂಗಗಳು ಸಮರ್ಥವಾಗಿ ಕೆಲಸ ಮಾಡುತ್ತವೆ. ಅನಾನಸಿನಲ್ಲಿರುವ ಅತಿ ಹೆಚ್ಚಿನ ಪ್ರಮಾಣದ ಕರಗದ ನಾರು ಇದಕ್ಕೆ ಕಾರಣ. ಇದು ಕರುಳುಗಳಲ್ಲಿ ಉಳಿದಿದ್ದ ತ್ಯಾಜ್ಯಗಳನ್ನು ಸುಲಭವಾಗಿ ಹೊರಹಾಕಲು ನೆರವಾಗುತ್ತದೆ. ಪರಿಣಾಮವಾಗಿ ಮಲಬದ್ಧತೆಯ ತೊಂದರೆ ಇಲ್ಲವಾಗುತ್ತದೆ.

  ಚರ್ಮದ ಬಣ್ಣ ಸಹಜವರ್ಣದತ್ತ ತಿರುಗುತ್ತದೆ

  ಚರ್ಮದ ಬಣ್ಣ ಸಹಜವರ್ಣದತ್ತ ತಿರುಗುತ್ತದೆ

  ಅನಾನಸಿನಲ್ಲಿ ವಿಟಮಿನ್ ಸಿ ಉತ್ತಮ ಪ್ರಮಾಣದಲ್ಲಿದೆ. ಇದು ಚರ್ಮದ ಸೆಳೆತ ಹೆಚ್ಚಿಸುವ ಮತ್ತು ಚರ್ಮದ ದೃಢತೆಗೆ ಅಗತ್ಯವಾದ ಕೊಲಾಜೆನ್ ಎಂಬ ವಸ್ತುವನ್ನು ಹೆಚ್ಚು ಉತ್ಪಾದಿಸುವ ಮೂಲಕ ಬಿಸಿಲು ಮೊದಲಾದ ಕಾರಣದಿಂದ ಗಾಢಗೊಂಡಿದ್ದ ಚರ್ಮದ ಬಣ್ಣ ಸಹಜವರ್ಣದತ್ತ ತಿರುಗಲು ನೆರವಾಗುತ್ತದೆ. ಪರಿಣಾಮವಾಗಿ ಚರ್ಮದಲ್ಲಿ ಕಾಂತಿ ಮತ್ತು ನವತಾರುಣ್ಯ ಕಂಡುಬರುತ್ತದೆ.

  ದೇಹದ ಜೀವಕೋಶಗಳು ಕಳೆಯಿಂದ ತುಂಬಿಕೊಳ್ಳುತ್ತವೆ

  ದೇಹದ ಜೀವಕೋಶಗಳು ಕಳೆಯಿಂದ ತುಂಬಿಕೊಳ್ಳುತ್ತವೆ

  ನಿತ್ಯವೂ ಕೊಂಚ ಅನಾನಸನ್ನು ಸೇವಿಸುತ್ತಾ ಬಂದರೆ ರಕ್ತದ ಕೆಂಪುಕಣಗಳು ಉತ್ತಮಗೊಳ್ಳುತ್ತವೆ. ಇದರಿಂದ ರಕ್ತ ಪರಿಚಲನೆ ಮತ್ತು ಕ್ಷಮತೆ ಹೆಚ್ಚುತ್ತದೆ. ಕೆಂಪುರಕ್ತಕಣಗಳ ಸಂಖ್ಯೆಯೂ ಹೆಚ್ಚುವ ಕಾರಣ ಹೆಚ್ಚು ಆಮ್ಲಜನಕವನ್ನು ಪ್ರತಿ ಜೀವಕೋಶವೂ ಪಡೆಯುವಂತಾಗಿ ಕಳೆಯಿಂದ ತುಂಬಿಕೊಳ್ಳುತ್ತವೆ. ಇದು ಒಟ್ಟಾರೆಯಾಗಿ ಆರೋಗ್ಯವನ್ನು ಇನ್ನಷ್ಟು ಉತ್ತಮಗೊಳಿಸುತ್ತವೆ.

  ಜೀವರಾಸಾಯನಿಕ ಕ್ರಿಯೆಯನ್ನು ಉತ್ತಮಗೊಳಿಸುತ್ತದೆ

  ಜೀವರಾಸಾಯನಿಕ ಕ್ರಿಯೆಯನ್ನು ಉತ್ತಮಗೊಳಿಸುತ್ತದೆ

  ಅನಾನಸಿನಲ್ಲಿ ದೇಹದ ಜೀವರಾಸಾಯನಿಕ ಕ್ರಿಯೆಯನ್ನು ಉತ್ತಮಗೊಳಿಸುವ ಶಕ್ತಿಯಿದೆ. ಇದು ಒಟ್ಟಾರೆಯಾಗಿ ಆರೋಗ್ಯವನ್ನು ಉತ್ತಮಗೊಳಿಸುತ್ತದೆ ಹಾಗೂ ದೇಹದಿಂದ ಕಾಯಿಲೆಗಳನ್ನು ದೂರವಿರಿಸುತ್ತದೆ.

  ನೋವುಗಳನ್ನು ಕಡಿಮೆಗೊಳಿಸುತ್ತದೆ

  ನೋವುಗಳನ್ನು ಕಡಿಮೆಗೊಳಿಸುತ್ತದೆ

  ಇದರ ಉರಿಯೂತ ನಿವಾರಕ ಗುಣ ಹಲವು ರೀತಿಯಲ್ಲಿ ದೇಹಕ್ಕೆ ಪೂರಕವಾಗಿದೆ. ವಿಶೇಷವಾಗಿ ಮೂಳೆಸಂದುಗಳಲ್ಲಿ ನೋವು, ಸ್ನಾಯುಗಳಲ್ಲಿ ನೋವು, ತಲೆನೋವು ಮೊದಲಾದವುಗಳಿಂದ ಶರೀರವನ್ನು ಕಾಪಾಡುತ್ತದೆ.

  English summary

  What Happens To Your Body When You Eat Pineapple For A Week?

  Have you ever wondered what the health benefits of pineapple are? Well, it is a fruit which comes with numerous health benefits...
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more