For Quick Alerts
ALLOW NOTIFICATIONS  
For Daily Alerts

ಮಲಗುವ ಮುನ್ನ ಮದ್ಯ ಸೇವನೆ-ಅಪಾಯ ಕಟ್ಟಿಟ್ಟ ಬುತ್ತಿ

By Manu
|

ಮದ್ಯಪಾನವೇ ಆರೋಗ್ಯಕ್ಕೆ ಮಾರಕ ಎಂದಿರುವಾಗ ಹಗಲೇನು ಇರುಳೇನು, ಯಾವಾಗ ಸೇವಿಸಿದರೂ ಆರೋಗ್ಯಕ್ಕೆ ಮಾರಕವೇ. ವಾಸ್ತವವಾಗಿ ದೇಹವನ್ನು ಬೆಚ್ಚಗಿಡಲು ಕೊಂಚ ಪ್ರಮಾಣದಲ್ಲಿ ಮದ್ಯವನ್ನು ಸೇವಿಸುವ ಅಭ್ಯಾಸ ಮತ್ತೇರಿಸುವವರೆಗೆ ಮುಂದುವರೆದದ್ದು ಮಾತ್ರ ಅಭಾಸಕರವಾಗಿದೆ. ಈ ಬಗ್ಗೆ ವಿವಿಧ ಜನರಲ್ಲಿ ವಿವಿಧ ಅಭಿಪ್ರಾಯಗಳಿವೆ. ಕೆಲವರು ಕೊಂಚ ಸೇವಿಸಿದರೆ ತಪ್ಪಿಲ್ಲವೆಂದೂ, ಕೆಲವರು ಪಾನಮತ್ತರಾಗಿ ಪಡೆಯುವ ಕಿಕ್ ಸ್ವರ್ಗದ ಅನುಭವ ನೀಡುತ್ತದೆ ಎಂದೂ ತಿಳಿಸುತ್ತಾರೆ.

ಅತಿರೇಕವೆಂದರೆ ಬಹುದಿನದಗಳ ಕಾಲ ಕುಡಿಯದೇ ಬಳಿಕ ಕುಡಿದರೆ ಏರುವ ಮತ್ತು ಏಳು ಸ್ವರ್ಗಗಳಿಗೆ ಸಮಾನ ಎಂದು ಕೆಲವರು ತಿಳಿಸುತ್ತಾರೆ. ಇದನ್ನು ಅನುಭವಿಸಲೆಂದೇ ಶಬರಿಮಲೆ ಮೊದಲಾದ ಧಾರ್ಮಿಕ ಕಟ್ಟುಪಾಡುಗಳನ್ನು ಆಚರಿಸುವ ಕಪಟ ಭಕ್ತರೂ ಇದ್ದಾರೆ. ಇವರು ಶಬರಿಮಲೆಯ ವಿಧಿ ಮುಗಿದ ತಕ್ಷಣ ಹಿಂದಿರುಗುವ ದಾರಿಯಲ್ಲಿಯೇ ಸಮಾರಾಧನೆ ಮಾಡಿ ಎಸಗುವ ಅವಾಂತರಗಳಿಂದಲೇ ಇವರನ್ನು ಕೊಂಡೊಯ್ಯಲು ವಾಹನಗಳ ಚಾಲಕರು ಸಿದ್ಧರಾಗುತ್ತಾರಾದರೂ ಹಿಂದಿರುಗುವಾಗ ಅಲ್ಲ. ಪುರುಷರೇ ವಯಸ್ಸು ಮೂವತ್ತಾಯಿತೇ?, ಮದ್ಯಪಾನ ಬಿಟ್ಟು ಬಿಡಿ!

ಆದರೆ ಕೆಲವರು ಸುರಕ್ಷಿತರಾಗಿರಲು ಮಲಗುವ ಮುನ್ನ ಕೊಂಚ ಸೇವಿಸಿದರೆ ಉತ್ತಮ ಎಂಬ ಅಭಿಪ್ರಾಯ ಹೊಂದಿದ್ದಾರೆ. ಆದರೆ ವೈದ್ಯ ವಿಜ್ಞಾನದ ಪ್ರಕಾರ ಇದು ಅತ್ಯಂತ ಅಪಾಯಕರವಾಗಿದೆ. ಇದು ಮುಖ್ಯವಾಗಿ ನಿದ್ದೆಯನ್ನು ಕೆಡಿಸುತ್ತದೆ ಹಾಗೂ ಹಲವು ತರಹದಲ್ಲಿ ಆರೋಗ್ಯವನ್ನು ಕೆಡಿಸುತ್ತದೆ. ಮುಂಜಾನೆ ಎದ್ದಾಗ ತಲೆ ತಿರುಗುತ್ತಿರುವುದು, ನಿದ್ದೆ ಮುಗಿದಿಲ್ಲ ಎನಿಸುವುದು, ವಾಂತಿ ಬಂದಂತಾಗುವುದು ಮೊದಲಾದ ಅನುಭವವಾಗುತ್ತದೆ.

ಏಕೆಂದರೆ ನಿದ್ದೆಯ ಸಮಯದಲ್ಲಿ ದೇಹದಲ್ಲಿ ಹಲವಾರು ಅನೈಚ್ಛಿಕ ಕಾರ್ಯಗಳು ನಡೆಯುತ್ತವೆ. ಮದ್ಯ ಸೇವನೆಯಿಂದ ಈ ಕಾರ್ಯಗಳಲ್ಲಿ ಬಾಧೆಯುಂಟಾಗಿ ಹಲವು ರೀತಿಯಲ್ಲಿ ದೇಹ ಬಳಲುತ್ತದೆ. ರಾತ್ರಿ ಮಲಗಿದಾಗ ಅತಿ ವೇಗದಲ್ಲಿ ಕಣ್ಣುಗುಡ್ಡೆಗಳು ಚಲಿಸುವುದು (REM-Random Eye movement), ದೇಹ ಸರಿಯಾಗಿ ವಿಶ್ರಾಂತಿ ಪಡೆಯಲು ಅಸಮರ್ಥವಾಗುವುದು ಮೊದಲಾದ ತೊಂದರೆಗಳು ಎದುರಾಗುತ್ತವೆ. ಬನ್ನಿ ಕೆಳಗಿನ ಸ್ಲೈಡ್ ಶೋ ಮೂಲಕ ಹೆಚ್ಚಿನ ಮಾಹಿತಿಯನ್ನು ಪಡೆಯೋಣ...

ಮೆದುಳಿನ ಕ್ಷಮತೆ ಕಡಿಮೆಯಾಗುತ್ತದೆ

ಮೆದುಳಿನ ಕ್ಷಮತೆ ಕಡಿಮೆಯಾಗುತ್ತದೆ

ರಾತ್ರಿ ಮೆದುಳಿಗೆ ವಿಶ್ರಾಂತಿ ಬೇಕು. ಈ ಸಮಯದಲ್ಲಿ ಮೆದುಳಿಗೆ ರಕ್ತಸರಬರಾಜು ಕಡಿಮೆಯಾಗಿ ತಕ್ಷಣ ನಿದ್ದೆಗೆ ಜಾರುತ್ತೇವೆ. ಒಂದು ವೇಳೆ ರಾತ್ರಿ ಮಲಗುವ ಮುನ್ನ ಮದ್ಯಪಾನ ಮಾಡಿದರೆ ಇದು ಬಲವಂತವಾಗಿ ನರವ್ಯವಸ್ಥೆಯನ್ನು ಎಚ್ಚರಾಗಿರುವಂತೆ ಮಾಡಿ ನಿದ್ದೆ ಬರದಂತೆ ಮಾಡುತ್ತದೆ. ಮೆದುಳಿಗೆ ವಿಶ್ರಾಂತಿ ದೊರಕದ ಕಾರಣ ಅತಿ ಹೆಚ್ಚಿನ ಒತ್ತಡ ಎದುರಿಸಿ ಅತೀವವಾಗಿ ಬಳಲುತ್ತದೆ. ಇದು ಕ್ರಮೇಣ ಮೆದುಳಿನ ಕ್ಷಮತೆಯನ್ನು ಕುಗ್ಗಿಸುತ್ತಾ ಹೋಗುತ್ತದೆ.

ಹೃದಯ ಬಡಿತ ಹೆಚ್ಚುತ್ತದೆ

ಹೃದಯ ಬಡಿತ ಹೆಚ್ಚುತ್ತದೆ

ಮದ್ಯ ಸೇವನೆಯಿಂದ ತಕ್ಷಣವೇ ಹೊಟ್ಟೆಯಿಂದ ರಕ್ತಕ್ಕೆ ಮದ್ಯ ಸೇರುತ್ತದೆ. ಇದರಿಂದ ರಕ್ತದ ಒತ್ತಡ ಮತ್ತು ಹೃದಯ ಬಡಿತ ಹೆಚ್ಚುತ್ತದೆ, ಪರಿಣಾಮವಾಗಿ ಶರೀರ ಕೊಂಚ ಬೆಚ್ಚಗಾಗುತ್ತದೆ. ಶರೀರವನ್ನು ಬೆಚ್ಚಗಿಡಲು ಹಿಮಪ್ರದೇಶದಲ್ಲಿ ಮದ್ಯ ಕುಡಿಯುವ ಪ್ರಕ್ರಿಯೆ ಶುರುವಾಗಿದ್ದೇ ಹೀಗೆ. ರಾತ್ರಿ ಮಲಗುವ ಮುನ್ನ ಸೇವಿಸಿದ ಮದ್ಯವೂ ಶರೀರವನ್ನು ಬೆಚ್ಚಗಾಗಿಸಿ ಹೃದಯ ಬಡಿತವನ್ನು ಹೆಚ್ಚಿಸುತ್ತದೆ. ಇದು ಶರೀರ ಪೂರ್ಣವಾಗಿ ವಿಶ್ರಾಂತಿ ಪಡೆಯಲು ಅಡ್ಡಿಪಡಿಸುತ್ತದೆ.

ಅತಿ ವೇಗದಲ್ಲಿ ಕಣ್ಣುಗುಡ್ಡೆಗಳು ಚಲಿಸುತ್ತವೆ

ಅತಿ ವೇಗದಲ್ಲಿ ಕಣ್ಣುಗುಡ್ಡೆಗಳು ಚಲಿಸುತ್ತವೆ

ಮದ್ಯದ ಪರಿಣಾಮದಿಂದ ನಿದ್ದೆ ಸಹಾ ಬಾಧೆಗೊಳಗಾಗುತ್ತದೆ. ಕಣ್ಣುಗುಡ್ಡೆಗಳು ಅತಿವೇಗದಿಂದ ಚಲಿಸುವ (REM-Random Eye movement) ಕಾರಣ ಸರಿಯಾಗಿ ನಿದ್ದೆ ಬರದೇ ವಿಶ್ರಾಂತಿ ಬಾಧೆಗೊಳಗಾಗುತ್ತದೆ. ಮರುದಿನ ಎದ್ದಾಗ ತಾಜಾತನ ಇರುವುದಿಲ್ಲ.

ಕ್ಷೋಭೆಗೊಳ್ಳುವ ನಿದ್ದೆ

ಕ್ಷೋಭೆಗೊಳ್ಳುವ ನಿದ್ದೆ

ಮದ್ಯದ ಪ್ರಭಾವದಿಂದ ನರವ್ಯವಸ್ಥೆ ಜಾಗೃತಗೊಂಡಿದ್ದು ಸರಿಯಾಗಿ ನಿದ್ದೆ ಬರಲಿಕ್ಕೆ ಬಿಡುವುದಿಲ್ಲ. ಪರಿಣಾಮವಾಗಿ ನಿದ್ದೆ ಪೂರ್ಣವಾಗುವ ಮುನ್ನವೇ ಎಚ್ಚರಾಗಿ ಇಡಿಯ ದಿನ ಮಂಕು ಕವಿದಿರುತ್ತದೆ.

ಚಡಪಡಿಕೆ ವ್ಯಾಪಿಸುತ್ತದೆ

ಚಡಪಡಿಕೆ ವ್ಯಾಪಿಸುತ್ತದೆ

ನಿದ್ದೆಯಲ್ಲಿ ಚಡಪಡಿಕೆ ಬಾಧಿಸುತ್ತದೆ. ಇತ್ತ ಮಗ್ಗುಲಿಂದ ಅತ್ತ ಮಗ್ಗುಲಿಗೆ ಬದಲಿಸುವುದು ಅವ್ಯಾಹತವಾಗಿ ನಡೆಯುತ್ತದೆ. ಇನ್ನೂ ಮಲಗಬೇಕೇ, ಈಗ ಏಳಲೇ ಎಂಬ ದ್ವಂದ್ವ ಎದುರಾಗುತ್ತದೆ. ಈ ಸ್ಥಿತಿಯಲ್ಲಿ ಹೃದಯ ಬಡಿತ ಅಪಾಯಕಾರಿ ಮಟ್ಟಕ್ಕೇರುತ್ತದೆ.

ಇಡಿಯ ದಿನ ಸೋಮಾರಿತನ ಆವರಿಸುತ್ತದೆ

ಇಡಿಯ ದಿನ ಸೋಮಾರಿತನ ಆವರಿಸುತ್ತದೆ

ಬೆಳಿಗ್ಗೆ ಎದ್ದ ಬಳಿಕ ಅತ್ತ ಪೂರ್ಣ ಎಚ್ಚರವೂ ಅಲ್ಲದ, ಇತ್ತ ಪೂರ್ಣ ನಿದ್ದೆಯೂ ಅಲ್ಲದ ಸ್ಥಿತಿಯಲ್ಲಿ ಯಾವುದೇ ಕೆಲಸ ಮಾಡಲು ನರವ್ಯವಸ್ಥೆ ಸಿದ್ಧವಾಗುವುದೇ ಇಲ್ಲ. ಪರಿಣಾಮವಾಗಿ ಇಡಿಯ ದಿನ ಏನೂ ಮಾಡಲು ಮನಸ್ಸಾಗದೇ ಸೋಮಾರಿಯಾಗಿ ಕಾಲ ಕಳೆಯುವಂತಾಗುತ್ತದೆ.

ಸೊಕ್ಕು ಏರಿದ ಅನುಭವವಾಗುತ್ತದೆ

ಸೊಕ್ಕು ಏರಿದ ಅನುಭವವಾಗುತ್ತದೆ

ಸಾಮಾನ್ಯವಾಗಿ ಕುಡಿದಿದ್ದಾನೆ ಎಂದರೆ ಹೆಚ್ಚಿನವರು ಬೈಯಲು ಹೊಡೆಯಲು ಹೋಗುವುದಿಲ್ಲ. ಇದೇ ಸಮಾಜ ಮಾಡುವ ತಪ್ಪು. ಇದನ್ನು ಹೆಚ್ಚಿನವರು ತಮ್ಮ ಖದೀಮ ಕೆಲಸಕ್ಕೆ ಪ್ರೇರಣೆ ಎಂದೇ ತಿಳಿದುಕೊಳ್ಳುತ್ತಾರೆ. ರಾತ್ರಿಯ ಮದ್ಯದ ಪರಿಣಾಮ ಎಚ್ಚರಾದ ಬಳಿಕವೂ ಇಳಿಯದೇ ಇನ್ನೂ ಹೆಚ್ಚಿನ ಮದ್ಯಸೇವನೆಗೆ ಕುಮ್ಮಕ್ಕು ನೀಡುತ್ತದೆ. ಈ ಸ್ಥಿತಿಯಲ್ಲಿ ಎದುರಾಗುವ ಯಾವುದೇ ಸನ್ನಿವೇಶದಲ್ಲಿ ವಿವೇಕಕ್ಕಿಂತ ಹೆಚ್ಚಾಗಿ ಸೊಕ್ಕು ತನ್ನ ಆರ್ಭಟ ತೋರುತ್ತದೆ. ಇದರ ವಿಪರೀತ ಪರಿಣಾಮಗಳು ಏನಾಗಬಹುದು ಎಂಬುದನ್ನು ಊಹಿಸಲೂ ಸಾಧ್ಯವಿಲ್ಲ. ಆದ್ದರಿಂದ ನಿದ್ದೆಯ ವೈರಿ ಮದ್ಯವನ್ನು ಎಂದಿಗೂ ನೆನೆಪಿಸಿಕೊಳ್ಳದಿರುವುದೇ ಆರೋಗ್ಯಕ್ಕೆ ಉತ್ತಮ.

English summary

What Happens When You Drink Before Sleeping?

Why is it bad to drink until you are totally out? It is very unhealthy to drink till you fall asleep. It kills the quality of your sleep and this would cause many other complications as your health condition is linked with the quality of your sleep. Why is it bad to drink until you are totally out? It is very unhealthy to drink till you fall asleep. It kills the quality of your sleep and this would cause many other complications as your health condition is linked with the quality of your sleep.
Story first published: Tuesday, February 16, 2016, 18:16 [IST]
X
Desktop Bottom Promotion