For Quick Alerts
ALLOW NOTIFICATIONS  
For Daily Alerts

ನಿದ್ದೆಯಲ್ಲಿಯೂ ಬೆವರುವ ಸಮಸ್ಯೆಯೇ? ಕಾರಣ ತಿಳಿದುಕೊಳ್ಳಿ

By Deepu
|

ಬೆವರಿಗು ನಮಗೂ ಅವಿನಾಭಾವ ಸಂಬಂಧ. ಓಡಿದಾಗ, ನಡೆದಾಗ, ಕೆಲಸ ಮಾಡುತ್ತಿದ್ದಾಗ, ಆಯಾಸಗೊಂಡಾಗ, ಜ್ವರ ಬಂದು ಬಿಟ್ಟಾಗ ಹೀಗೆ ನಾನಾ ಸಮಯದಲ್ಲಿ ಬೆವರು ನಮ್ಮ ಸಂಗಾತಿ,ಕೆಲವೊಮ್ಮೆ ಬೇಡದ ಅತಿಥಿ...! ಅದರಲ್ಲೂ ಊಟ ಮಾಡುವಾಗ ಸಹ ಬೆವರುವವರು ಇದ್ದಾರೆ. ಬೆವರು ಹೀಗೆ ನಮ್ಮನ್ನು ಎಲ್ಲಾ ಕಡೆ ಬಿಡದೆ ಹಿಂಬಾಲಿಸುತ್ತದೆ. ನೀರಿನಲ್ಲಿ ಈಜಾಡಿದರು ಸಹ ಬೆವರು ಬರುತ್ತದೆ ಎಂದರೆ ನೀವು ನಂಬಲೇಬೇಕು. ಅದು ಬೆವರಿನ ಮಹಿಮೆ.

ಆದರೆ ಮಲಗಿರುವಾಗ ಸಹ ಬೆವರು ಬರುತ್ತದೆಯೆಂದರೆ...ನಾವು ಹೇಳುತ್ತಿರುವುದು ಬೇಸಿಗೆ ಅಥವಾ ಉಷ್ಣಾಂಶವು ಅಧಿಕವಾಗಿರುವ ದಿನಗಳಲ್ಲಿ ಬರುವ ಬೆವರನ್ನಲ್ಲ. ಸಾಮಾನ್ಯವಾದ ದಿನದಂದು, ಚಳಿಗಾಲದಲ್ಲಿ ಮಲಗಿರುವಾಗಲು ಸಹ ಬರುವ ಬೆವರಿನ ಕುರಿತು ಇಂದು ಕಾರಣವನ್ನು ತಿಳಿದುಕೊಳ್ಳೋಣ.....

ಹಾರ್ಮೋನ್‌ಗಳು
ಮುಟ್ಟು ನಿಲ್ಲುವ ಅವಧಿ ಮತ್ತು ಪಿಎಮ್‌ಎಸ್ ನಂತರ ಈ ಬೆವರು ಕಾಣಿಸಿಕೊಳ್ಳುವಿಕೆ ಸಾಮಾನ್ಯವಾಗಿ ಕಂಡು ಬರುವ ಸಮಸ್ಯೆಯಾಗಿದೆ. ಇದಕ್ಕೆ ಹಾರ್ಮೋನ್‌ಗಳಲ್ಲಿ ಉಂಟಾಗುವ ಏರುಪೇರುಗಳೇ ಕಾರಣ. ಹಾರ್ಮೋನ್‌ಗಳ ಬದಲಾವಣೆ, ಅಸಮತೋಲನ ಅಥವಾ ಕೊರತೆಯು ಈ ಬೆವರನ್ನು ಉಂಟು ಮಾಡುತ್ತವೆ. ಇದು ಕೇವಲ ಮಹಿಳೆಯರಿಗಷ್ಟೇ ಅಲ್ಲದೆ ಹಾರ್ಮೋನ್ ಬದಲಾವಣೆಗಳು ಗಂಡಸರಲ್ಲಿ ಸಹ ಉಂಟಾಗುತ್ತದೆ. ಇದನ್ನು ಪರೀಕ್ಷೆ ಮಾಡುವ ಮೂಲಕ ಹಾರ್ಮೋನ್‌ಗಳೇ ಇದಕ್ಕೆ ಕಾರಣ ಎಂದು ಗುರುತಿಸಬಹುದು. ಒಂದು ವೇಳೆ ಇದೇ ಸಮಸ್ಯೆಯಿಂದ ನಿಮಗೆ ಬೆವರು ಬರುತ್ತಿದ್ದಲ್ಲಿ, ಮುಟ್ಟಿನ ನಂತರ ಅಥವಾ ಅಂಡ್ರೊಪಾಸ್ ಅವಧಿಯಲ್ಲಿ ನಿಮ್ಮನ್ನು ಈ ಸಮಸ್ಯೆಯಿಂದ ಪಾರು ಮಾಡಲು ಹಲವಾರು ಸ್ವಾಭಾವಿಕ ಮಾರ್ಗಗಳು ಇವೆ.

What Causes Night Sweats?

ಯಾವುದೇ ವಯಸ್ಸಿನಲ್ಲಿ ಗಂಡು ಅಥವಾ ಹೆಣ್ಣಿನಲ್ಲಿ ಹಾರ್ಮೋನ್‌ಗಳನ್ನು ನಿಯಂತ್ರಿಸುವ ಗ್ರಂಥಿಗಳು ( ಕರುಳು, ಅಡ್ರೆನಲ್‌ಗಳು, ಗರ್ಭಾಶಯಗಳು/ಪರೀಕ್ಷೆಗಳು ಮತ್ತು ಥೈರಾಯ್ಡ್‌ಗಳು) ಉತ್ತಮ ಆಹಾರ ಸೇವನೆಯ ಅಭ್ಯಾಸ, ವಿಟಮಿನ್‌ಗಳು, ಖನಿಜಾಂಶಗಳು, ಗಿಡಮೂಲಿಕೆಗಳು ಮತ್ತು ಇತರೆ ಪೋಷಕಾಂಶಗಳ ಮೂಲಕ ಸರಿಯಾಗಿ ಕಾರ್ಯನಿರ್ವಹಿಸುತ್ತವೆಯಂತೆ. ಇವುಗಳು ಮುಟ್ಟು ನಿಂತ ನಂತರ/ಆಂಡ್ರೊಪಾಸ್ ನಂತರ ಸಹ ನಿಮ್ಮ ದೇಹದಲ್ಲಿ ಹಾರ್ಮೋನ್‌ಗಳನ್ನು ಸುಸ್ಥಿತಿಯಲ್ಲಿಡುತ್ತವೆ.

ಬ್ಯಾಕ್ಟೀರಿಯಾಗಳ ಅಥವಾ ವೈರಸ್‌ಗಳ ಇನ್‌ಫೆಕ್ಷನ್‌ಗಳು
ಒಂದು ಪರಿಪೂರ್ಣ ರಕ್ತದ ಕೋಶವು ಯಾವುದಾದರು ಬ್ಯಾಕ್ಟೀರಿಯಾಗಳ ಅಥವಾ ವೈರಸ್‌ಗಳ ಇನ್‌ಫೆಕ್ಷನ್‌ಗಳು ಇವೆಯೇ ಎಂಬುದರ ಕುರಿತು ಖಚಿತ ಮಾಹಿತಿಯನ್ನು ನೀಡುತ್ತವೆ. ಬಿಳಿ ರಕ್ತ ಕಣಗಳು ಅಥವಾ ಲಿಂಫೊಸೈಟ್‌ಗಳು ಎಂದು ಕರೆಯಲಾಗುವ ಕೋಶಗಳು ವೈರಸ್ ಇನ್‌ಫೆಕ್ಷನ್ ಇದ್ದಲ್ಲಿ, ಹೆಚ್ಚಾಗುತ್ತವೆ. ಬ್ಯಾಕ್ಟೀರಿಯಾಗಳ ಇನ್‌ಫೆಕ್ಷನ್‌ನಿಂದಾಗಿ ನ್ಯೂಟ್ರೊಫಿಲ್‌ಗಳ ಸಂಖ್ಯೆ ಹೆಚ್ಚಾಗುತ್ತವೆ.

ಔಷಧಿಯ ಅಡ್ಡಪರಿಣಾಮಗಳು
ರಾತ್ರಿ ಹೊತ್ತು ಬರುವ ಬೆವರಿಗೆ ಔಷಧಿಯಅಡ್ಡಪರಿಣಾಮಗಳು ಸಹ ಕಾರಣವಾಗಿರುತ್ತವೆ ಕೆಲವೊಮ್ಮೆ. ಖಿನ್ನತೆಯನ್ನು ನಿವಾರಿಸುವ ಔಷಧಿಗಳು, ಮಧುಮೇಹ ನಿವಾರಕ ಔಷಧಿಗಳು ಇಂತಹ ಸಮಸ್ಯೆಯನ್ನು ಉಂಟು ಮಾಡುತ್ತವೆ. ಆದ್ದರಿಂದ ಇವುಗಳನ್ನು ಸೇವಿಸುವಾಗ ವೈದ್ಯರು ತಿಳಿಸಿರುವ ಪ್ರಮಾಣದಷ್ಟು ಮಾತ್ರ ಸೇವಿಸಿ. ಸೇವಿಸುವ ಪ್ರಮಾಣವನ್ನು ಸರಿಪಡಿಸಿಕೊಳ್ಳಿ. ಇದರಿಂದ ನಿಮಗೆ ರಾತ್ರಿ ಬೆವರು ಬರುವುದು ತಪ್ಪುತ್ತದೆ.

ಕ್ಯಾನ್ಸರ್
ರಾತ್ರಿ ಹೊತ್ತು ಬರುವ ಬೆವರಿಗೆ ಕ್ಯಾನ್ಸರ್ ಸಹ ಕಾರಣವಾಗಿರಬಹುದು. ಆದರೆ ಇದರ ಜೊತೆಗೆ ಅಸಾಧ್ಯವಾದ ಆಯಾಸ, ವಿವರಿಸಲಾಗದಂತಹ ತೂಕ ಕಳೆದುಕೊಳ್ಳುವಿಕೆ, ಊದಿಕೊಂಡ ದುಗ್ಧರಸ ಗ್ರಂಥಿಗಳು ಸಹ ಜೊತೆಗೂಡಿ, ನಿಮಗೆ ಬೆವರನ್ನುಂಟು ಮಾಡುತ್ತವೆ.

English summary

What Causes Night Sweats?

Night sweating is referred to as excess sweating during sleep. In case your room is unusually hot or you’re wearing too many warm clothes, this may be normal. In order to distinguish between night sweats that may be medical concerns and those that are normal, it is described as severe hot flashes that occur in the night and is unrelated to an heated or humid environment.
Story first published: Tuesday, January 19, 2016, 20:20 [IST]
X
Desktop Bottom Promotion