For Quick Alerts
ALLOW NOTIFICATIONS  
For Daily Alerts

ನೀರಿನ ರುಚಿ ಹೆಚ್ಚಿಸಲು ಈ ವಿಧಾನಗಳನ್ನು ಬಳಸಿ

By Su.Ra
|

ಶುದ್ಧ ಕುಡಿಯುವ ನೀರು ಈಗೊಂದು ಚಾಲೆಂಜ್ ನಂತಾಗಿದೆ. ಶುದ್ಧ ಕುಡಿಯುವ ನೀರಿಗೂ ಕಾಸು ಕೊಡಬೇಕಾಗಿರುವ ಪರಿಸ್ಥಿತಿ ಸಿಟಿ ಮಂದಿಯದ್ದು. ಅಯ್ಯೋ ಸರಿಯಾಗಿ ನೀರೇ ಬರಲ್ಲ ಕಣ್ರೀ, ನಮ್ ಮನೆಲಿ ಕುಡಿಯೋ ನೀರನ್ನು ವಾರಕ್ಕೊಮ್ಮೆ ತರಿಸಿಕೊಳ್ತೀವಿ. ನೀರಿಗೂ ದುಡ್ಡು ಕೊಡಬೇಕಾದ್ರೆ ಬೇಜಾರಾಗುತ್ತೆ ಅಂತ ಹೆಂಗಸರು ಯಾರೋ ಆಪ್ತರ ಬಳಿ ಹೇಳಿಕೊಳ್ತಾ ಇರುತ್ತಾರೆ.. ಶುದ್ಧ ಕುಡಿಯೋ ನೀರು ಅಂತ ಯಾವುದೋ ಬಾಟಲಿಯಲ್ಲಿ ಶರಾ ಬರೆದಿದ್ರೆ, ಅದನ್ನೇ ಹೌದು ಅಂತ ನಂಬಿ ಕೊಂಡುಕೊಳ್ಳುವವರಿದ್ದಾರೆ.

ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನೀರಿನ ರುಚಿಯ ಬಗ್ಗೆ ತಲೆ ಕೆಡಿಸಿಕೊಳ್ಳುವವರು ಕಡಿಮೆ ಮಂದಿಯೇ. ಆದ್ರೆ ಹೆಲ್ತ್ ಕಾನ್ಶಿಯಸ್ ಆಗಿರುವವರು ಸ್ವಲ್ಪ ಕುಡಿಯೋ ನೀರಿನ ಬಗ್ಗೆ ತಲೆಕೆಡಿಸಿಕೊಂಡಿರುತ್ತಾರೆ. ಕೆಲವರಿಗೆ ಕುಡಿಯೋ ನೀರು ಎಷ್ಟು ರುಚಿಯಾಗಿರುತ್ತೆ ಅನ್ನೋದೇ ತಿಳಿದಿರಲಿಕ್ಕಿಲ್ಲ. ನೀರು ಬಣ್ಣವಿಲ್ಲದ್ದು, ರುಚಿ ಇಲ್ಲದ್ದು ಅಂತಲೇ ಭಾವಿಸಿರ್ತಾರೆ. ಆದ್ರೆ ನೀರಿಗೂ ಒಂದು ರುಚಿಯಿರುತ್ತೆ. ಆದ್ರೆ ಈಗಿನ ಕುಡಿಯೋ ನೀರು ಸತ್ವವನ್ನು

ಮಾತ್ರವಲ್ಲ, ರುಚಿಯನ್ನೂ ಕಳೆದುಕೊಂಡು ಬಿಟ್ಟಿದೆ. ಹಾಗಾಗಿ ವಾಟರ್ ಪ್ಯೂರಿಫೈಯರ್ ಬೇಕೇಬೇಕು ಅನ್ನುವಂತಾಗಿದೆ. ವಾಟರ್ ಪ್ಯೂರಿಫೈಯರ್ ಇಲ್ಲದೇ ಇದ್ರೆ ಕಾಯಿಲೆ ಗ್ಯಾರೆಂಟಿ ಅನ್ನುವ ನಂಬಿಕೆ ಹಲವರದ್ದು. ಆದ್ರೆ ಖಂಡಿತ ಒಂದಷ್ಟು ನೀರಿನ ರುಚಿ ಹೆಚ್ಚಿಸುವ ಮಾರ್ಗಗಳಿವೆ. ಕೇವಲ ರುಚಿ ಮಾತ್ರ ಅಲ್ಲ ಈ ಮಾರ್ಗಗಳು ನಿಮ್ಮ ಆರೋಗ್ಯವನ್ನು ಹೆಚ್ಚಿಸುತ್ತೆ. ಹಾಗಾದ್ರೆ ನೀರಿನ ರುಚಿ ಹೆಚ್ಚಿಸಲು ಏನು ಮಾಡಬೇಕು. ಮುಂದೆ ಓದಿ..

ಲಾವಂಚದ ಬೇರು
ಕುಡಿಯುವ ನೀರಿಗೆ ನಾಲ್ಕೈದು ಬೇರು ಲಾವಂಚವನ್ನು ಹಾಕಿಡಿ. ಲಾವಂಚದ ಬೇರು ಆಯುರ್ವೇದಿಯ ಸತ್ವಗಳನ್ನು ಒಳಗೊಂಡಿದ್ದು ನೀರಿನ ರುಚಿ ಹೆಚ್ಚಿಸೋದು ಮಾತ್ರವಲ್ಲ. ಲಾವಂಚದ ಬೇರಿನ ಸತ್ವಗಳು ನೀರಿನಲ್ಲಿ ಸೇರಿ, ಅವು ನಿಮ್ಮ ದೇಹದ ಹಲವು ಕಾಯಿಲೆಗಳಿಗೆ ಪರಿಹಾರ ನೀಡಬಲ್ಲದು. ಲಾವಂಚದ ಬೇರು ಬೆರೆಸಿದ ನೀರು ಕುಡಿಯಲು ಶುದ್ಧವಾಗಿರುವುದು ಮಾತ್ರವಲ್ಲ, ದೇಹಕ್ಕೆ ತಂಪು ಫೀಲ್ ನೀಡುತ್ತೆ. ಜೊತೆಗೆ ಜಂತುಹುಳುವಿನ ಸಮಸ್ಯೆಯಿಂದ ಹೊಟ್ಟೆ ಕೆಟ್ಟಿದ್ದರೆ ಲಾವಂಚದ ಬೇರು ಸೇರಿಸಿದ ನೀರು ಸೇವಿಸೋದ್ರಿಂದ ಆ ಸಮಸ್ಯೆ ನಿವಾರಣೆಯಾಗಲಿದೆ.

Ways to Make Water Taste Better

ತುಳಸಿ ದಳ
ನೀರು ಕುದಿಸಿ ಆರಿಸುವ ಸಂದರ್ಭದಲ್ಲಿ ಒಂದೆರಡು ತುಳಸಿ ದಳಗಳನ್ನು ಹಾಕಿಡಿ. ತುಳಸಿ ನೀರಿನಲ್ಲಿರುವ ಕೀಟಾಣುಗಳನ್ನು ಕೊಲ್ಲುತ್ತೆ ಮತ್ತು ನಿಮ್ಮ ದೇಹಕ್ಕೂ ಉತ್ತಮ ಪರಿಣಾಮಗಳನ್ನು ಒದಗಿಸಲಿದೆ. ತುಳಸಿಯ ಸತ್ವದಿಂದಾಗಿ ನೀರು ಕೂಡ ರುಚಿಯಾಗುತ್ತೆ. ಯಾವ ಪ್ಯೂರಿಫೈಯರ್ ಕಡಿಮೆ ಏನಿಲ್ಲ ಅನ್ನುತ್ತೆ ನೀರನ್ನು ಶುದ್ಧೀಕರಿಸುವ ತಾಕತ್ತು ತುಳಸಿ ದಳಗಳಿಗಿದೆ. ಅದೇ ಕಾರಣಕ್ಕೆ ಅಲ್ಲವೇ ತುಳಿಸಿಗೆ ದೇವರ ಸ್ಥಾನದಲ್ಲಿಟ್ಟು ಪೂಜಿಸೋದು.

ತಾಮ್ರದ ಪಾತ್ರೆಯಲ್ಲಿಡಿ

ನೀರನ್ನು ಪ್ಲಾಸ್ಟಿಕ್ ಬಾಟಲ್, ಇತ್ಯಾದಿ ಪಾತ್ರೆಗಳಲ್ಲಿ ಇಡುವುದಕ್ಕಿಂತ ಶುದ್ಧ ಕುಡಿಯೋ ನೀರು ಬೇಕೆನ್ನುವವರು ಕುಡಿಯೋ ನೀರಿಗಾಗಿ ತಾಮ್ರದ ಪಾತ್ರೆಯನ್ನು ಬಳಕೆ ಮಾಡಿ. ತಾಮ್ರದ ಪಾತ್ರೆಯಲ್ಲಿಟ್ಟಿರುವ ನೀರು ಕುಡಿಯಲು ಯೋಗ್ಯವಾಗುತ್ತೆ ಮತ್ತು ಅದರ ರುಚಿಯೂ ತಾಮ್ರದೊಂದಿಗೆ ಬೆರೆತು ಹೆಚ್ಚಾಗಿರುತ್ತೆ. ತಾಮ್ರದ ಪಾತ್ರೆಯಲ್ಲಿಟ್ಟು ಕುಡಿಯುವ ನೀರು ದೇಹಕ್ಕೂ ಉತ್ತಮ ಪರಿಣಾಮಗಳನ್ನು ಉಂಟು ಮಾಡಲಿದೆ ಅನ್ನೋದು ಸಂಶೋಧನೆಗಳಿಂದಲೇ ಬಹಿರಂಗಗೊಂಡಿದೆ. ದೇಹವನ್ನು ತಂಪಾಗಿಡಲು ತಾಮ್ರದ ಪಾತ್ರೆಯ ನೀರು ಹೆಚ್ಚು ಪರಿಣಾಮಕಾರಿಯಾಗಿರುತ್ತೆ.

ಹಣ್ಣಿನ ರಸ ಸೇರಿಸಿ ಸೇವಿಸಿ
ನೀರು ತುಂಬಾ ಸಪ್ಪೆ ಅನ್ನಿಸುತ್ತಿದೆ. ಕುಡಿಯೋಕೆ ಮನಸ್ಸಾಗಲ್ಲ ಅನ್ನುವವರು ಯಾವುದಾದ್ರೂ ಹಣ್ಣಿನ ರಸವನ್ನು ನೀರಿನೊಂದಿಗೆ ಬೆರಿಸಿ ಸೇವಿಸಿ. ಒಂದು ರೀತಿ ಜ್ಯೂಸ್ ಅಂತ ಹೇಳಿದ್ರೂ ತಪ್ಪಾಗಲಿಕ್ಕಿಲ್ಲ. ಫ್ಲೇವರ್ ಗಾಗಿ ಸೇರಿಸುವ ಹಣ್ಣಿನ ರಸ, ನಿಮ್ಮ ಆರೋಗ್ಯದ ದಷ್ಟಿಯಿಂದಲೂ ಒಳ್ಳೆಯದು. ಉದಾಹರಣೆಗೆ ಲಿಂಬೆಹಣ್ಣಿನ ರಸವನ್ನು ಸೇರಿಸಿ ಶರಬತ್ತಿನ ರೀತಿಯಲ್ಲಿ ನೀರನ್ನು ಸೇವಿಸಬಹುದು. ಸಿಟ್ರಸ್ ಫ್ರೂಟ್ ಗಳು ಮಾತ್ರವಲ್ಲ ಇತರೆ ಯಾವುದೇ ಹಣ್ಣುಗಳನ್ನು ಕೂಡ ಬಳಕೆ ಮಾಡಬಹುದು. ಆದ್ರೆ ಹಣ್ಣಿನ ರಸ ಸೇರಿಸುವ ನೆಪದಲ್ಲಿ ಹೆಚ್ಚು ಸಕ್ಕರೆಯ ಅಂಶ ನಿಮ್ಮ ದೇಹಕ್ಕೆ ಸೇರದಂತೆ ನೋಡಿಕೊಳ್ಳಿ. ಹೆಚ್ಚು ಸಕ್ಕರೆ ಸೇವಿಸೋದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮಗಳನ್ನು ಉಂಟು ಮಾಡುವ ಸಾಧ್ಯತೆಗಳು ಹೆಚ್ಚಿರುತ್ತೆ.

ಪುದೀನಾ ದಳಗಳನ್ನು ಸೇರಿಸಿ

ನಮ್ ಮನೆಯ ಕುಡಿಯೋ ನೀರು ರುಚಿಯೇ ಇರೋದಿಲ್ಲ ಅಂತ ಹೇಳುವವರು ಒಮ್ಮೆ ಪುದೀನಾ ಎಲೆಗಳ ಕಡೆ ಕಣ್ಣಾಯಿಸೋದು ಒಳಿತು. ಯಾಕಂದ್ರೆ ಒಂದೆರಡು ಪುದೀನಾ ಎಲೆಗಳನ್ನು ಕುಡಿಯೋ ನೀರಿಗೆ ಹಾಕಿ ಕುದಿಸಿ, ಆರಿಸಿ ಇಟ್ರೆ, ಕುಡಿಯೋ ನೀರು ಶುದ್ಧವಾಗಿ ಆರೋಗ್ಯಪೂರ್ಣವಾಗುವುದು ಮಾತ್ರವಲ್ಲ, ಅದರಲ್ಲಿರುವ ಕೀಟಾಣುಗಳು ಸರ್ವನಾಶವಾಗಿ ಕುಡಿಯೋ ನೀರಿನ ರುಚಿಯೂ ಅಧಿಕವಾಗಿರುತ್ತೆ. ಜೊತೆಗೆ ಸತ್ವಪೂರ್ಣವಾಗಿರುತ್ತೆ.ಟ್ರೈ ಮಾಡಿ ನೋಡಿ..
English summary

Ways to Make Water Taste Better

Many people want to know innovative ways to drink more water. This is because most of us do not make the conscious effort to drink enough water. However, no one can deny that water has innumerable health benefits. So you must try ways to make water taste better so that you can reap its benefits. So here are some of the ways to make water taste better and drink more of it.
Story first published: Thursday, January 28, 2016, 18:30 [IST]
X
Desktop Bottom Promotion