For Quick Alerts
ALLOW NOTIFICATIONS  
For Daily Alerts

ನೆಮ್ಮದಿಯ ಸುಖನಿದ್ದೆ ಬೇಕೇ? ಗುಲಾಬಿದಳಗಳನ್ನು ಪ್ರಯತ್ನಿಸಿ

By Arshad
|

ಸುಖವಾದ ನಿದ್ದೆ, ಅಂದರೆ ತಡೆರಹಿತವಾದ ಎಂಟು ಗಂಟೆಗಳ ನಿದ್ದೆಯಿಂದಲೇ ಉತ್ತಮ ಆರೋಗ್ಯ ಪಡೆಯಲು ಸಾಧ್ಯ. ಇದಕ್ಕೂ ಕಡಿಮೆ ಅಥವಾ ತಡೆತಡೆದು ಬರುವ ನಿದ್ದೆಯಿಂದ ವಿಶ್ರಾಂತಿಯೂ ಅರೆಬರೆಯಾಗಿ ಮರುದಿನ ಎದ್ದ ಬಳಿಕ ಮಂಪರು ಆವರಿಸಿರುತ್ತದೆ. ತಡೆ ತಡೆಯಾಗಿ ಬರುವ ನಿದ್ದೆಗೆ ಹಲವು ಕಾರಣಗಳಿವೆ. ಮುಖ್ಯವಾಗಿ ನಿಮ್ಮ ಯಾವುದೋ ಒಂದು ಅಭ್ಯಾಸ ಅಥವಾ ಮಲಗುವ ಮುನ್ನ ಸೇವಿಸಿದ್ದ ಆಹಾರಗಳು.

ಮಾನಸಿಕ ಕ್ಷೋಭೆ, ಒತ್ತಡ, ದುಃಖ, ಖಿನ್ನತೆಗಳೂ ನಿದ್ರಾರಾಹಿತ್ಯಕ್ಕೆ ಕಾರಣವಾಗುತ್ತವೆ. ಕೆಲವರಿಗೆ ಅವರ ರೋಗದಿಂದ ಎದುರಾಗುವ ನೋವು ಸುಖನಿದ್ದೆಗೆ ಅಡ್ಡಿಪಡಿಸುತ್ತದೆ. ನಿದ್ದೆ ಸುಖಕರವಾಗಿರಲು ಲಾಲಿ ಹಾಡುವುದರ ಜೊತೆಗೆ ಹಲವುಮನೆಮದ್ದುಗಳೂ ಇವೆ. ಮಲಗುವ ಮುನ್ನ ಒಂದು ಲೋಟ ಬಿಸಿ ಹಾಲು ಕುಡಿಯುವುದು, ಪಾದಗಳಿಗೆ ಮಸಾಜ್ ಮಾಡುವುದು ಮೊದಲಾದವು ಪರಿಣಾಮಕಾರಿ ವಿಧಾನಗಳು.

Use rose petals to get a good night’s sleep!

ನಿದ್ದೆಗೆ ನಮ್ಮ ಘ್ರಾಣಶಕ್ತಿಯೂ ಪೂರಕ ಎಂದು ಇತ್ತೀಚೆಗೆ ಕಂಡುಕೊಳ್ಳಲಾಗಿದೆ. ಅಂದರೆ ಕೆಲವು ಸುವಾಸನೆಗಳು ಮೆದುಳಿಗೆ ಅಹ್ಲಾದಕರ ಅನುಭವ ನೀಡಿ ಉತ್ತಮ ನಿದ್ದೆ ಹಾಗೂ ಕೆಲವು ರೋಗಗಳಿಗೆ ಶಮನವನ್ನೂ ನೀಡುತ್ತವೆ. ವಿಶ್ವದ ಕೆಲವೆಡೆಗಳಲ್ಲಿ ಇದನ್ನು ಬಹಳ ಹಿಂದಿನಿಂದಲೇ ಒಂದು ಚಿಕಿತ್ಸಾ ವಿಧಾನವಾಗಿ ನಡೆಸಿಕೊಂಡು ಬರಲಾಗುತ್ತಿದೆ. ಇತ್ತೀಚೆಗೆ ವೈದ್ಯವಿಜ್ಞಾನವೂ ಇದನ್ನು ಒಂದು ಪರಿಣಾಮಕಾರಿ ಪದ್ದರಿ ಎಂದು ಒಪ್ಪಿಕೊಂಡು ಅರೋಮಾಥೆರಪಿ ಎಂಬ ವಿಭಾವನ್ನು ಪ್ರಾರಂಭಿಸಿದೆ. ಗುಲಾಬಿ ಹೂವಿನ ದಳಗಳು ನಿದ್ದೆ ಬರಿಸಲು ಸಮರ್ಥವಾಗಿವೆ. ಸರಿಯಾಗಿ ನಿದ್ದೆ ಬರುತ್ತಿಲ್ಲವೇ? ಕಾರಣ ತಿಳಿದುಕೊಳ್ಳಿ

ಇದರ ಸುವಾಸನೆಗೆ ಒತ್ತಡವನ್ನು ನಿವಾರಿಸುವ, ಸ್ನಾಯುಗಳ ಸೆಡೆತವನ್ನು ನಿವಾರಿಸುವ, ಕಾಮೋತ್ತೇಜಕ, ಕಲ್ಮಶ ನಿವಾರಕ ಮತ್ತು ವಿಶೇಷವಾಗಿ ಸಮ್ಮೋಹನಗೊಳಿಸುವ ಶಕ್ತಿ ಇದೆ. ಇದರ ದಳಗಳನ್ನು ಭಟ್ಟಿ ಇಳಿಸಿ ಪಡೆಯುವ ಸುವಾಸನಾ ದ್ರವವನ್ನು ಮೆದುಳಿಗೆ ಸಾಂತ್ವಾನಗೊಳಿಸುವ ಔಷಧದ ರೂಪದಲ್ಲಿಯೂ ಬಳಸಬಹುದು. ಪ್ರಸ್ತುತ ನಿದ್ದೆ ಸರಿಯಾಗಿ ಬರದೇ ಇದ್ದರೆ ವೈದ್ಯರು diazepam ಎಂಬ ಔಷಧಿಯನ್ನು ನೀಡುತ್ತಿದ್ದರು.

ಇದು ಸ್ನಾಯುಗಳನ್ನು ಸಡಿಲಗೊಳಿಸಿ ಒತ್ತಡ ನಿವಾರಿಸುವ ಗುಣದಿಂದ ನಿದ್ದೆ ಬರಿಸಲು ಸಾಧ್ಯವಾಗುತ್ತಿತ್ತು. ಆದರೆ ಗುಲಾಬಿಯ ಸುವಾಸನೆಗೆ ಇದಕ್ಕಿಂತಲೂ ಉತ್ತಮ ಗುಣಗಳಿದ್ದು ಯಾವುದೇ ಅಡ್ಡಪರಿಣಾಮವಿಲ್ಲದೇ ಸುಖನಿದ್ದೆಗೆ ಜಾರಲು ಸಾಧ್ಯ. ಇದರ ಸುವಾಸನೆಯಲ್ಲಿರುವ ಕಣಗಳಲ್ಲಿ ಆತಂಕ ಕಡಿಮೆಗೊಳಿಸುವ ಶಕ್ತಿಯಿದೆ. ಅಷ್ಟೇ ಅಲ್ಲ, ದಳಗಳನ್ನು ಹಸಿಯಾಗಿ ಸೇವಿಸಿ ನಿದ್ದೆಗೆ ಜಾರಿದಾದ ಸುಖನಿದ್ದೆ ಮತ್ತು ಕನಸುಗಳು ಬೀಳುತ್ತವೆ ಎಂದು ಹಿಂದಿನಿಂದಲೂ ನಂಬಿಕೊಂಡು ಬರಲಾಗಿದೆ. ನಿದ್ದೆಯೆಂಬ ಅಮೂಲ್ಯ ವರಕ್ಕಿರುವ ಕರಾಮತ್ತೇನು?

ಗುಲಾಬಿ ದಳಗಳನ್ನು ಬಳಸುವ ಬಗೆ ಹೇಗೆ?
ಗುಲಾಬಿ ಹೂವಿನ ದಳಗಳನ್ನು ಪ್ರತ್ಯೇಕಿಸಿ ಇಡಿ. ನಿದ್ದೆಯ ಸಮಯಕ್ಕೂ ಕೊಂಚ ಹೊತ್ತಿನ ಮುನ್ನ ಇದನ್ನು ಕುದಿಯುತ್ತಿರುವ ನೀರಿಗೆ ಹಾಕಿ ಬರುವ ಸುವಾಸನೆಯನ್ನು ಆಘ್ರಾಣಿಸಿ. ಈ ನೀರು ಮಂಚದ ಪಕ್ಕದಲ್ಲಿಯೇ ಇದ್ದು ಸುವಾಸನೆ ಬೀರುತ್ತಿರಲಿ. ಇನ್ನೂ ಹೆಚ್ಚಿನ ಪರಿಣಾಮಕ್ಕಾಗಿ ಗುಲಾಬಿ ಟೀ ಸೇವಿಸಿ ಅಥವಾ ಗುಲಾಬಿ ಹೂವಿನ ಒಣದಳಗಳನ್ನು ಬಿಸಿಹಾಲಿನಲ್ಲಿ ಬೆರೆಸಿ ಕುಡಿದು ಕೊಂಚ ಹೊತ್ತಿನ ಬಳಿಕ ಮಲಗಿ. ಒಂದು ವೇಳೆ ಮಾನಸಿಕ ಒತ್ತಡ, ತಲೆನೋವು ಮೊದಲಾದ ತೊಂದರೆಯಿಂದ ನಿದ್ದೆ ಬರುತ್ತಿಲ್ಲವಾದರೆ ಮಾರುಕಟ್ಟೆಯಲ್ಲಿ ದೊರಕುವ ಗುಲಾಬಿ ಹೂವಿನ ಅವಶ್ಯಕ ತೈಲದ ಕೆಲವು ಹನಿಗಳನ್ನು ಹಣೆಯ ಪಕ್ಕ ಮತ್ತು ಹಣೆಯ ಮೇಲೆ ಹಚ್ಚಿ ಮಲಗಿ, ಸುಖನಿದ್ದೆ ಪಡೆಯಿರಿ.

English summary

Use rose petals to get a good night’s sleep!

Having sleepless nights? Try rose petals and see how they help you fall in deep slumber. Not being able to sleep well can be attributed to several reasons. Often, foods you eat before bedtime or some daily habit may be interfering with your sleep pattern. There is also a list of foods and herbs that can assist in sound sleep. Then there are the traditional home remedies like a glass of warm milk or a foot massage. All these aim to relax the body and mind so you can sleep better.
X
Desktop Bottom Promotion