For Quick Alerts
ALLOW NOTIFICATIONS  
For Daily Alerts

  ಕಾಯಿ ಕಾಯಿ ನುಗ್ಗೆಕಾಯಿಯ ಪವರ್‌ಗೆ ತಲೆಬಾಗಲೇಬೇಕು!

  By Arshad
  |

  ಹೆಚ್ಚಿನ ಜನರು ಇಷ್ಟಪಡದ, ಟಿಂಬರ್, ದಿಮ್ಮಿ, ಕೊರಡು ಮೊದಲಾದ ವಿಶೇಷಣಗಳನ್ನು ಉಪಯೋಗಿಸುವ ಈ ನುಗ್ಗೇಕಾಯಿ ಪ್ರತಿಮನೆಯಲ್ಲಿಯೂ ಸಾಂಬಾರಿನಲ್ಲಿ ಕಡ್ಡಾಯವಾಗಿ ಉಪಯೋಗಿಸಲ್ಪಡುವ ತರಕಾರಿಯಾಗಿದೆ. ಇದರಲ್ಲಿ ಆರೋಗ್ಯವನ್ನು ಹೆಚ್ಚಿಸುವ ಹಲವಾರು ಪೋಷಕಾಂಶಗಳಿದ್ದು ವಾರದಲ್ಲಿ ಹಲವು ಬಾರಿಯಾದರೂ ಸಾಂಬಾರಿನಲ್ಲಿ ಉಪಯೋಗಿಸಬೇಕಾದ ತರಕಾರಿಯಾಗಿದೆ. ಒಂದು ವೇಳೆ ಇದನ್ನು ನೋಡಲು ಇಷ್ಟಪಡದೆ ಇದುವರೆಗೆ ನಿಮ್ಮ ಆಹಾರದಲ್ಲಿ ಸೇರಿಸದೇ ಇದ್ದರೆ ಇದರಿಂದ ದೊರಕಬಹುದಾಗಿದ್ದ ಹಲವಾರು ಪ್ರಯೋಜನಗಳಿಂದ ವಂಚಿತರಾಗಿದ್ದೀರಿ ಎಂದೇ ಹೇಳಬಹುದು.  ನುಗ್ಗೆಕಾಯಿ ಎಲೆಗಳ ಸೌಂದರ್ಯವರ್ಧಕ ಗುಣಗಳು

  ಇದರಲ್ಲಿ ಆರೋಗ್ಯಕ್ಕೆ ಅಗತ್ಯವಾದ ಹಲವಾರು ಖನಿಜಗಳು, ಪ್ರೋಟೀನುಗಳು, ವಿಟಮಿನ್‌ಗಳು ಮತ್ತು ಕರಗುವ ನಾರು ಇದೆ. "Moringa Oleifera" ಎಂಬ ವೈಜ್ಞಾನಿಕ ಹೆಸರು ಹೊಂದಿರುವ ಈ ನುಗ್ಗೆಕಾಯಿಯನ್ನು ಹಿಂದಿಯಲ್ಲಿ ಷಾಜಾನ್ ಎಂದೂ ಕರೆಯುತ್ತಾರೆ. ಇಂಗ್ಲಿಷಿನ ಮೋರಿಂಗಾ ಎಂಬ ಹೆಸರು ತಮಿಳಿನ ಮುರುಂಗಾಯಿ ಎಂಬ ಪದದಿಂದ ಬಂದಿದೆ. ಆದರೆ ನುಗ್ಗೆಕಾಯಿ ಮೊದಲು ತಮಿಳುನಾಡಿನಲ್ಲಲ್ಲ, ಭಾರತದ ನೈರುತ್ಯ ಭಾಗದಲ್ಲಿ ಮೊದಲು ಬೆಳೆಯಲಾಯಿತು.  ನುಗ್ಗೆ ಸೊಪ್ಪಿನ ರೆಸಿಪಿ: ಸರ್ವ ರೋಗಕ್ಕೂ ರಾಮಬಾಣ

  ಭಾರತದಲ್ಲಿ ಎರಡು ಸಾವಿರ ವರ್ಷಗಳಿಂದಲೂ ಬೆಳೆಯಲಾಗುತ್ತಿದ್ದು ಮುನ್ನೂರು ವಿಧದ ಕಾಯಿಲೆಗಳಿಗೆ ಔಷಧದ ರೂಪದಲ್ಲಿ ಆಯುರ್ವೇದದಲ್ಲಿ ವಿವರಿಸಲಾಗಿದೆ. ಸರಿಸುಮಾರು ಇಷ್ಟೇ ವರ್ಷದ ಹಿಂದಿನ ಈಜಿಪ್ಟಿನ ಇತಿಹಾಸದಲ್ಲಿಯೂ ಇದರ ಉಲ್ಲೇಖವಿರುವ ಕಾರಣ ಇದರ ಮೂಲ ಯಾವುದು ಎಂದು ಸ್ಪಷ್ಟವಾಗಿ ಹೇಳಲಾಗುವುದಿಲ್ಲ. ನುಗ್ಗೆಯ ಕಾಯಿ, ಹೂವು, ಬೀಜ ಮತ್ತು ಎಲೆಗಳು ಸೇವನೆಗೆ ಅರ್ಹವಾಗಿದ್ದು ಫೈಟೋ ನ್ಯೂಟ್ರಿಯೆಂಟುಗಳೆಂಬ ಪೋಷಕಾಂಶಗಳು ಹೆಚ್ಚಿನ ಪ್ರಮಾಣದಲ್ಲಿವೆ. ಬನ್ನಿ ಈ ಬಳಕುವ ನುಗ್ಗೇಕಾಯಿ ಎಷ್ಟರ ಮಟ್ಟಿಗೆ ನಮ್ಮ ಆರೋಗ್ಯಕ್ಕೆ ಉತ್ತಮವಾಗಿದೆ ಎಂಬುದನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೋಡೋಣ...

  ಫ್ಲೂ ಜ್ವರ ಮತ್ತು ಶೀತವನ್ನು ಕಡಿಮೆಗೊಳಿಸುತ್ತದೆ

  ಫ್ಲೂ ಜ್ವರ ಮತ್ತು ಶೀತವನ್ನು ಕಡಿಮೆಗೊಳಿಸುತ್ತದೆ

  ನುಗ್ಗೇಕಾಯಿಯಲ್ಲಿ ವಿಟಮಿನ್ ಸಿ ಉತ್ತಮ ಪ್ರಮಾಣದಲ್ಲಿರುವ ಕಾರಣ ಇದು ಸಾಮಾನ್ಯ ಫ್ಲೂ ಜ್ವರ, ಗಂಟಲ ಬೇನೆ, ಕೆರೆತ, ಶೀತ ಮೊದಲಾದ ವೈರಸ್ ಆಧಾರಿತ ಕಾಯಿಲೆಗಳನ್ನು ಹತ್ತಿಕ್ಕಲು ನೆರವಾಗುತ್ತದೆ. ಇದಕ್ಕಾಗಿ ನುಗ್ಗೇಕಾಯಿಯ ಸೂಪ್ ಅಥವಾ ರಸಂ ಮಾಡಿ ಬಿಸಿಬಿಸಿಯಾಗಿ ಸೇವಿಸಿ.

  ರಕ್ತವನ್ನು ಶುದ್ಧೀಕರಿಸುತ್ತದೆ

  ರಕ್ತವನ್ನು ಶುದ್ಧೀಕರಿಸುತ್ತದೆ

  ನುಗ್ಗೆಯ ಎಲೆಗಳು ಮತ್ತು ಬೀಜಗಳಲ್ಲಿ ರಕ್ತವನ್ನು ಶುದ್ದೀಕರಿಸುವ ಗುಣಗಳಿವೆ. ಅಲ್ಲದೇ ಇದರ ಸೇವನೆಯಿಂದ ದೇಹದಲ್ಲಿ ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡುವ ಶಕ್ತಿಯೂ ಹೆಚ್ಚುತ್ತದೆ. ನಿಮ್ಮ ನಿತ್ಯದ ಆಹಾರದಲ್ಲಿ ನುಗ್ಗೇಕಾಯಿ ಇರುವಂತೆ ನೋಡಿಕೊಳ್ಳುವ ಮೂಲಕ ರಕ್ತ ನಿಯಮಿತವಾಗಿ ಶುದ್ದೀಕರಣಗೊಳ್ಳುತ್ತಿರುವಂತೆ ನೋಡಿಕೊಳ್ಳಬಹುದು.

  Most Read:ಮೊಡವೆಯ ಸಮಸ್ಯೆ-ನಿವಾರಣೆಗೆ ಬರೀ ಒಂದೇ-ಒಂದು ಚಮಚ ಹರಳೆಣ್ಣೆ ಸಾಕು!

  ಗರ್ಭವತಿಯರಿಗೆ ಅತ್ಯುತ್ತಮ ಆಹಾರವಾಗಿದೆ

  ಗರ್ಭವತಿಯರಿಗೆ ಅತ್ಯುತ್ತಮ ಆಹಾರವಾಗಿದೆ

  ಗರ್ಭವತಿಯರಿಗೆ ಹೆಚ್ಚಿನ ಪೋಷಕಾಂಶಗಳ ಅಗತ್ಯವಿದ್ದು ನುಗ್ಗೇಕಾಯಿಯ ಪೋಷಕಾಂಶಗಳು ಇದನ್ನು ಉತ್ತಮ ಆಯ್ಕೆಯನ್ನಾಗಿಸುತ್ತವೆ. ಅಲ್ಲದೇ ಗರ್ಭಿಣಿಯರು ಪ್ರಥಮ ತ್ರೈಮಾಸಿಕ ಅವಧಿಯಲ್ಲಿ ಎದುರಿಸುವ ವಾಂತಿ, ವಾಕರಿಕೆ, ಸುಸ್ತು, ತಲೆಸುತ್ತುವುದು ಮೊದಲಾದವುಗಳ ತೊಂದರೆಗೆ ನುಗ್ಗೇಕಾಯಿಯ ಸೂಪ್ ಉತ್ತಮ ಪರಿಹಾರ ನೀಡುತ್ತದೆ. ಅಲ್ಲದೇ ಹೆರಿಗೆಗೂ ಮುನ್ನ ಮತ್ತು ಹೆರಿಗೆಯ ನಂತರ ಎದುರಾಗುವ ಸಂಗ್ದಿಗ್ಧತೆಗಳನ್ನೂ ಎದುರಿಸಲು ನೆರವಾಗುತ್ತದೆ. ಅಲ್ಲದೇ ಹೆರಿಗೆಯ ಬಳಿಕ ತಾಯಿಯ ದೇಹದಲ್ಲಿ ಹೆಚ್ಚಿನ ಹಾಲು ಉತ್ಪತ್ತಿಯಾಗಲು ಸಹಕರಿಸಿ ಕಂದನ ಉತ್ತಮ ಬೆಳವಣಿಗೆಗೂ ನೆರವಾಗುತ್ತದೆ.

  ಹೊಟ್ಟೆಯ ತೊಂದರೆಗಳನ್ನು ನಿವಾರಿಸುತ್ತದೆ

  ಹೊಟ್ಟೆಯ ತೊಂದರೆಗಳನ್ನು ನಿವಾರಿಸುತ್ತದೆ

  ನುಗ್ಗೆಯ ಎಲೆಗಳನ್ನು ಅರೆದು ಕೊಂಚ ಜೇನಿನಲ್ಲಿ ಮಿಶ್ರಣ ಮಾಡಿ ಇದನ್ನು ಎಳನೀರಿನೊಂದಿಗೆ ಸೇವಿಸುವ ಮೂಲಕ ಹೊಟ್ಟೆಯಲ್ಲಿ ಉರಿ ಕಡಿಮೆಯಾಗುತ್ತದೆ. ಅಲ್ಲದೇ ಅತಿಸಾರ, ಕಾಲರಾ, ಜಾಂಡೀಸ್ ಮೊದಲಾದ ಕಾಯಿಲೆಗಳೂ ಶೀಘ್ರವಾಗಿ ಗುಣವಾಗುತ್ತವೆ.

  ಮೂಳೆಗಳು ದೃಢವಾಗುವ ಗತಿಯನ್ನು ತೀವ್ರಗೊಳಿಸುತ್ತದೆ

  ಮೂಳೆಗಳು ದೃಢವಾಗುವ ಗತಿಯನ್ನು ತೀವ್ರಗೊಳಿಸುತ್ತದೆ

  ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಕ್ಯಾಲ್ಸಿಯಂ, ಕಬ್ಬಿಣ ಮತ್ತು ವಿಟಮಿನ್ನುಗಳ ಕಾರಣ ದೇಹದ ಮೂಳೆಗಳು ಇನ್ನೂ ಹೆಚ್ಚಾಗಿ ದೃಢಗೊಳ್ಳಲು ಸಾಧ್ಯವಾಗುತ್ತದೆ. ನಿಯಮಿತವಾಗಿ ಸೇವಿಸುತ್ತಾ ಬಂದರೆ ಕ್ರಮೇಣ ಮೂಳೆಗಳ ದೃಢತೆ ಹೆಚ್ಚುತ್ತಾ ಹೋಗುತ್ತದೆ.

  ಜೀರ್ಣಕ್ರಿಯೆಯಲ್ಲಿ ಸಹಕರಿಸುತ್ತದೆ

  ಜೀರ್ಣಕ್ರಿಯೆಯಲ್ಲಿ ಸಹಕರಿಸುತ್ತದೆ

  ನುಗ್ಗೆಯ ಎಲೆ ಮತ್ತು ಬೀಜಗಳಲ್ಲಿ ವಿಟಮಿನ್ ಬಿ ಕಾಂಪ್ಲೆಕ್ಸ್ ಗಳು (ನಿಯಾಸಿನ್, ರೈಬೋಫ್ಲೇವಿನ್, ಫೋಲಿಕ್ ಆಮ್ಲ ಮತ್ತು ಪೈರಿಡಾಕ್ಸಿನ್ ಇತ್ಯಾದಿ) ಹೆಚ್ಚಿನ ಪ್ರಮಾಣದಲ್ಲಿದ್ದು ಜೀರ್ಣಕ್ರಿಯೆಯಲ್ಲಿ ವಿಶಿಷ್ಟ ಪಾತ್ರ ವಹಿಸುತ್ತವೆ.

  Most Read:'S'ಅಕ್ಷರದಿಂದ ಪ್ರಾರಂಭವಾಗುವ ಹೆಸರಿನವರು, ಕಠಿಣ ಪರಿಶ್ರಮಿ ಹಾಗೂ ಮಗುವಿನಂತ ಮನಸ್ಸು...

  ಜೀರ್ಣಕ್ರಿಯೆಯಲ್ಲಿ ಸಹಕರಿಸುತ್ತದೆ

  ಜೀರ್ಣಕ್ರಿಯೆಯಲ್ಲಿ ಸಹಕರಿಸುತ್ತದೆ

  ಇವು ಜಠರದಲ್ಲಿ ಕರಗಲು ಹೆಚ್ಚು ಕಷ್ಟಕರವಾಗಿರುವ ಆಹಾರ ಕಣಗಳನ್ನು ಒಡೆದು ಜೀರ್ಣಕ್ರಿಯೆ ಸುಲಭವಾಗಲು ನೆರವಾಗುತ್ತದೆ. ಸಂಕೀರ್ಣ ಕಾರ್ಬೋಹೈಡ್ರೇಟುಗಳು, ಪ್ರೋಟೀನುಗಳು ಮತ್ತು ಕೊಬ್ಬುಗಳನ್ನು ತುಂಡರಿಸಿ ಚಿಕ್ಕ ಕಣಗಳನ್ನಾಗಿಸುವ ಮೂಲಕ ಜೀರ್ಣಕ್ರಿಯೆ ಸುಲಭವಾಗಲು ಸಾಧ್ಯವಾಗುತ್ತದೆ.

  ಹಲವಾರು ಸೋಂಕುಗಳಿಂದ ರಕ್ಷಿಸುತ್ತದೆ

  ಹಲವಾರು ಸೋಂಕುಗಳಿಂದ ರಕ್ಷಿಸುತ್ತದೆ

  ಇದರ ಎಲೆ ಮತ್ತು ಹೂವುಗಳಲ್ಲಿ ಬ್ಯಾಕ್ಟೀರಿಯಾ ನಿವಾರಕ ಗುಣಗಳಿದ್ದು ಹಲವಾರು ವಿವಿಧ ರೀತಿಯ ಸೋಂಕುಗಳಿಂದ ರಕ್ಷಿಸುತ್ತದೆ. ವಿಶೇಷವಾಗಿ ಗಂಟಲು ಮತ್ತು ಚರ್ಮದ ಸೋಂಕುಗಳಿಂದ ಗರಿಷ್ಟ ರಕ್ಷಣೆ ಪಡೆದಂತಾಗುತ್ತದೆ. ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ವಿಟಮಿನ್ ಸಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ದೇಹದಲ್ಲಿ ಕ್ಯಾನ್ಸರ್ ಉಂಟುಮಾಡಲು ಕಾರಣವಾಗಿರುವ ಫ್ರೀ ರ್‍ಯಾಡಿಕಲ್ ಎಂಬ ಕಣಗಳ ಪ್ರಭಾವದಿಂದಲೂ ರಕ್ಷಿಸುತ್ತದೆ.

  Most Read:ಅಕ್ಟೋಬರ್ 2018ರ ತಿಂಗಳ ಭವಿಷ್ಯ-ನಿಮ್ಮದೂ ಪರಿಶೀಲಿಸಿಕೊಳ್ಳಿ

  ಉಸಿರಾಟದ ತೊಂದರೆಗಳನ್ನು ನಿವಾರಿಸುತ್ತದೆ

  ಉಸಿರಾಟದ ತೊಂದರೆಗಳನ್ನು ನಿವಾರಿಸುತ್ತದೆ

  ಒಂದು ವೇಳೆ ಗಂಟಲಲ್ಲಿ ಕೆರೆತ, ಶೀತ ಅಥವಾ ಕಫ ಕಟ್ಟಿಕೊಂಡಿದ್ದರೆ ಇದಕ್ಕೆ ನುಗ್ಗೇಕಾಯಿಯ ಸೂಪ್ ಉತ್ತಮ ಪರಿಹಾರವಾಗಿದೆ. ಇದರ ಉರಿಯೂತ ನಿವಾರಕ ಗುಣಗಳು ವಿಶೇಷವಾಗಿ ಶ್ವಾಸ ಸಂಬಂಧಿ ಸೋಂಕುಗಳಿಂದ ರಕ್ಷಿಸಲು ನೆರವಾಗುತ್ತದೆ.

  ಉಸಿರಾಟದ ತೊಂದರೆಗಳನ್ನು ನಿವಾರಿಸುತ್ತದೆ

  ಉಸಿರಾಟದ ತೊಂದರೆಗಳನ್ನು ನಿವಾರಿಸುತ್ತದೆ

  ಅಲ್ಲದೇ ಶ್ವಾಸ ಸಂಬಂಧಿ ತೊಂದರೆಗಳಾದ ಅಸ್ತಮಾ, ಬ್ರಾಂಕೈಟಿಸ್ ಮತ್ತು ಕ್ಷಯದಂತಹ ರೋಗಗಳ ವಿರುದ್ದ ಹೋರಾಡುವ ಒಂದು ನೈಸರ್ಗಿಕ ವಿಧಾನವೂ ಆಗಿದೆ.

  ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ತಗ್ಗಿಸುತ್ತದೆ

  ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ತಗ್ಗಿಸುತ್ತದೆ

  ರಕ್ತ ಶುದ್ಧೀಕರಣಗೊಳಿಸುವ ಗುಣವಿರುವ ನುಗ್ಗೇಕಾಯಿಗೆ ರಕ್ತದಲ್ಲಿ ಹೆಚ್ಚಾಗಿರುವ ಸಕ್ಕರೆಯನ್ನು ಇಳಿಸಿ ಆರೋಗ್ಯಕರ ಮಟ್ಟಕ್ಕೆ ಇಳಿಸಲೂ ನುಗ್ಗೇಕಾಯಿ ಸಮರ್ಥವಾಗಿದೆ. ಇದರ ಪೋಷಕಾಂಶಗಳು ಪಿತ್ತಕೋಶದ ಕ್ಷಮತೆಯನ್ನು ಹೆಚ್ಚಿಸುವುದನ್ನು ಸಂಶೋಧನೆಗಳ ಮೂಲಕ ಕಂಡುಕೊಳ್ಳಲಾಗಿದೆ. ಇದರ ಪರಿಣಾಮವಾಗಿ ರಕ್ತದಲ್ಲಿ ಸಕ್ಕರೆಯ ಪ್ರಮಾಣವೂ ಕಡಿಮೆಯಾಗಿ ಆರೋಗ್ಯಕರ ಜೀವನ ನಡೆಸಲು ಸಾಧ್ಯವಾಗುತ್ತದೆ.

  ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ

  ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ

  ನುಗ್ಗೇಕಾಯಿಯ ಸೇವನೆಯಿಂದ ಚರ್ಮಕ್ಕೆ ನೇರವಾಗಿ ಲಾಭ ಇಲ್ಲದಿದ್ದರೂ ಇದರೊಂದಿಗೆ ಬೇರೆ ಆಹಾರಗಳನ್ನು ಸೇವಿಸುವ ಮೂಲಕ ಖಂಡಿತಾ ಲಾಭವಿದೆ. ನುಗ್ಗೆರಸ ಮತ್ತು ಲಿಂಬೆರಸವನ್ನು ಸಮಪ್ರಮಾಣದಲ್ಲಿ ಬೆರೆಸಿ ಚರ್ಮಕ್ಕೆ ಹಚ್ಚಿಕೊಳ್ಳುವ ಮೂಲಕ ಬ್ಲಾಕ್ ಹೆಡ್, ಮೊಡವೆ ಮತ್ತು ಚರ್ಮ ಕೆಂಪಗಾಗುವ ತೊಂದರೆಗಳನ್ನು ನಿವಾರಿಸಬಹುದು.

  Most Read:ಸಾಲ ಮಾಡಿಯಾದ್ರೂ ತುಪ್ಪ ತಿನ್ನಿ! ಇದು ಆರೋಗ್ಯಕ್ಕೆ ಬಹಳ ಒಳ್ಳೆಯದು

  ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ

  ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ

  ಅಲ್ಲದೇ ಈ ರಸವನ್ನು ತೆಳ್ಳಗೆ ಹಚ್ಚಿ ಕೊಂಚ ಹೊತ್ತಿನ ಬಳಿಕ ತಣ್ಣೀರಿನಿಂದ ತೊಳೆದುಕೊಂಡರೆ ಚರ್ಮದ ಕಾಂತಿಯೂ ಹೆಚ್ಚುತ್ತದೆ.

  ಮಧುಮೇಹವನ್ನು ನಿಯಂತ್ರಿಸುತ್ತದೆ

  ಮಧುಮೇಹವನ್ನು ನಿಯಂತ್ರಿಸುತ್ತದೆ

  ನುಗ್ಗೇಕಾಯಿ ಮಧುಮೇಹಿಗಳೂ ಸುರಕ್ಷಿತವಾಗಿ ಸೇವಿಸಬಹುದಾದ ಆಹಾರವಾಗಿದ್ದು ರಕ್ತದಲ್ಲಿನ ಸಕ್ಕರೆಯ ಅಂಶವನ್ನು ಕಡಿಮೆಗೊಳಿಸಲು ಸಹಕರಿಸುತ್ತದೆ.

  ಕಣ್ಣಿನ ದೃಷ್ಟಿಯನ್ನು ಉತ್ತಮಗೊಳಿಸುತ್ತದೆ

  ಕಣ್ಣಿನ ದೃಷ್ಟಿಯನ್ನು ಉತ್ತಮಗೊಳಿಸುತ್ತದೆ

  ವಯಸ್ಸಾದಂತೆ ಕಣ್ಣಿನ ದೃಷ್ಟಿ ಕುಂದಲು ಕಣ್ಣಿನ ಅಕ್ಷಿಪಟಲದ ಸೋಂಕು ಸಹಾ ಒಂದು ಕಾರಣ. ನುಗ್ಗೇಕಾಯಿಯನ್ನು ನಿಯಮಿತವಾಗಿ ಸೇವಿಸುತ್ತಾ ಬಂದರೆ ಈ ಸೋಂಕು ತಗಲುವ ಸಂಭವ ಕಡಿಮೆಯಾಗಿ ಅಕ್ಷಿಪಟಲದ ಕ್ಷಮತೆಯನ್ನು ಉಳಿಸಿಕೊಳ್ಳುತ್ತದೆ. ಪರಿಣಾಮವಾಗಿ ಬಹಳ ವರ್ಷಗಳವರೆಗೆ ಕನ್ನಡಕ ಉಪಯೋಗಿಸುವ ಸಾಧ್ಯತೆಯನ್ನು ಮುಂದೆ ಹಾಕಬಹುದು.

  ವಿವಿಧ ಸೋಂಕುಗಳಿಂದ ರಕ್ಷಿಸುತ್ತದೆ

  ವಿವಿಧ ಸೋಂಕುಗಳಿಂದ ರಕ್ಷಿಸುತ್ತದೆ

  ನುಗ್ಗೇಕಾಯಿ ಒಂದು ಉತ್ತಮ ಬ್ಯಾಕ್ಟೀರಿಯಾ ನಿರೋಧಕವಾಗಿದ್ದು ವಿವಿಧ ಬಗೆಯ ಸೋಂಕುಗಳಿಂದ ರಕ್ಷಣೆ ನೀಡುತ್ತದೆ. ವಿಶೇಷವಾಗಿ ಗಂಟಲ ಮೇಲ್ಭಾಗ, ಎದೆ ಮತ್ತು ಚರ್ಮದ ಸೋಂಕುಗಳಿಂದ ರಕ್ಷಣೆ ನೀಡುತ್ತದೆ.

  ವಿವಿಧ ಸೋಂಕುಗಳಿಂದ ರಕ್ಷಿಸುತ್ತದೆ

  ವಿವಿಧ ಸೋಂಕುಗಳಿಂದ ರಕ್ಷಿಸುತ್ತದೆ

  ಇದರ ಎಲೆ ಮತ್ತು ಹೂವುಗಳ ಸೂಪ್ ಮಾಡಿಕೊಂಡು ಕುಡಿಯುವ ಮೂಲಕ ಈ ಸೋಂಕುಗಳನ್ನು ಕಡಿಮೆ ಮಾಡಬಹುದು. ಅಲ್ಲದೇ ಇದೊಂದು ಉತ್ತಮ ಶಿಲೀಂಧ್ರ ನಿವಾರಕವೂ ಆಗಿದ್ದು ಈ ಮೂಲಕ ಬರಬಹುದಾಗಿದ್ದ ವಿವಿಧ ಕಾಯಿಲೆಗಳಿಂದ ರಕ್ಷಿಸುತ್ತದೆ.

  English summary

  Top health health benefits of drumsticks

  People remember drumsticks as a vegetable used in the popular south Indian curry, 'sambar'. Drumstick is a green vegetable and like many other green vegetables, it is loaded with a number of nutrients that can benefit you. If you haven't included this vegetable in your diet yet, here are a few health benefits of drumsticks that will change your mind.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more