Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಆ ದಿನಗಳಲ್ಲಿ ಸಿಕ್ಕಾಪಟ್ಟೆ ಹೊಟ್ಟೆ ನೋವಾಗುತ್ತದೆಯೇ?
ಹೊಟ್ಟೆ ನೋವು ಮಹಿಳೆಯರನ್ನು ಕಾಡುವ ದೊಡ್ಡ ಸಮಸ್ಯೆ. ತಿಂಗಳಿಗೊಮ್ಮೆ ಮುಟ್ಟಿನ ಸಮಯದಲ್ಲಿ ಕಾಣಿಸಿಕೊಳ್ಳುವ ಈ ನೋವಿಗೆ ಪರಿಹಾರ ಹುಡುಕುವುದು ಮಹಿಳೆಯರಿಗೆ ಸಾಧ್ಯವಾಗಿರುವುದಿಲ್ಲ. ಆದರೆ ಕೆಲವೊಂದು ವಿಧಾನವನ್ನು ಅನುಸರಿಸಿದರೆ ನೋವನ್ನು ನಿಯಂತ್ರಿಸ
ಮಹಿಳೆಯರಿಗೆ ಪ್ರತಿ ತಿಂಗಳೂ ಕಾಡುವ ಮಾಸಿಕ ದಿನಗಳ (ಋತುಚಕ್ರದ ಅವಧಿಯಲ್ಲಿ) ಕೆಳಹೊಟ್ಟೆಯ ನೋವು ಸಾಕಪ್ಪಾ ಸಾಕು ಎನ್ನಿಸುವಷ್ಟು ಹೈರಾಣಾಗಿಸುತ್ತದೆ. ಕೆಲವರಿಗೆ ಹೆಚ್ಚು ಕಾಡದೇ ಇದ್ದರೂ ಉಳಿದವರಿಗೆ ದೈಹಿಕವಾಗಿಯೂ ಮಾನಸಿಕವಾಗಿಯೂ ಹಿಂಡಿ ಬಿಡುತ್ತದೆ. ಈ ಸಮಯದಲ್ಲಿ ಮೈಮುದುಡಿ ಮಲಗುವುದೊಂದೇ ಇವರಿಗೆ ಉಳಿದ ಮಾರ್ಗ. ಮುಟ್ಟು ಹಿಂದೂಡಿಕೊಳ್ಳಬೇಕಾ..? ಹಾಗಾದ್ರೆ ಹೀಗೆ ಮಾಡಿ
ಈ ನೋವಿನಿಂದ ಪಾರಾಗಲು ಯಾವ ಉಪಾಯವೂ ಇಲ್ಲವೇ? ಅಥವಾ ನೋವು ನಿವಾರಕಗಳನ್ನು ನುಂಗಿದರೂ ಯಾವುದೇ ಪ್ರಯೋಜನ ಕಾಣುತ್ತಿಲ್ಲವೇ? ಯಮಯಾತನೆ ನೀಡುವ ಮುಟ್ಟಿನ ನೋವಿಗೆ ಪರಿಹಾರವೇನು?
ಆದರೆ ಪ್ರತಿಬಾರಿ ನೋವು ನಿವಾರಕಗಳಿಗೆ ಶರಣಾಗುವುದೂ ಆರೋಗ್ಯಕ್ಕೆ ಮಾರಕ. ಬನ್ನಿ, ನಿಸರ್ಗ ತನ್ನ ಮಕ್ಕಳ ನೋವನ್ನು ಕಡಿಮೆ ಮಾಡಲು ಏನು ನೀಡಿದೆ ಎಂಬುದನ್ನು ನೋಡೋಣ.....

ಹಸಿಶುಂಠಿ
ಈ ದಿನಗಳ ನೋವಿಗೆ ಅತ್ಯುತ್ತಮವಾದ ಶಮನ ನೀಡುವ ಮಸಾಲೆ ಎಂದರೆ ಹಸಿಶುಂಠಿ. ಇದರಲ್ಲಿರುವ ಜಿಂಜರಾಲ್ ಎಂಬ ಪೋಷಕಾಂಶ ಉತ್ತಮವಾದ ಉರಿಯೂತ ನಿವಾರಕವಾಗಿದೆ. ಅಲ್ಲದೇ ಶುಂಠಿಯಲ್ಲಿರುವ ಆಂಟಿ ಆಕ್ಸಿಡೆಂಟುಗಳು ಮತ್ತು ಇತರ ಪೋಷಕಾಂಶಗಳು ರಕ್ತಪರಿಚಲನೆಯನ್ನು ಉತ್ತಮಗೊಳಿಸಿ ನೋವನ್ನು ಕಡಿಮೆ ಮಾಡುತ್ತವೆ. ಬನ್ನಿ, ಶುಂಠಿಯನ್ನು ಕೆಳಹೊಟ್ಟೆನೋವಿನ ಶಮನಕ್ಕೆ ಹೇಗೆ ಉಪಯೋಗಿಸಬಹುದು ಎಂಬುದನ್ನು ಅರಿಯೋಣ.... ಶುಂಠಿ, ಅಜೀರ್ಣ ಪರಿಹಾರಕ್ಕೆ ಒಂದು ಒಳ್ಳೆಯ ಮನೆ ಮದ್ದು.

ಎರಡು ತುಂಡು ಹಸಿಶುಂಠಿಯನ್ನು ಕತ್ತರಿಸಿ
ಸುಮಾರು ಒಂದಿಂಚಿನ ಎರಡು ತುಂಡು ಹಸಿಶುಂಠಿಯನ್ನು ಕತ್ತರಿಸಿ ಸಿಪ್ಪೆ ಸುಲಿಯಿರಿ

ಚಿಕ್ಕದಾಗಿ ಕತ್ತರಿಸಿ ಜಜ್ಜಿ....
ಇನ್ನು ಇದನ್ನು ಚಿಕ್ಕದಾಗಿ ಕತ್ತರಿಸಿ ಜಜ್ಜಿ.....

ಚಿಕ್ಕದಾಗಿ ಕತ್ತರಿಸಿ ಜಜ್ಜಿ....
ಒಂದು ಪಾತ್ರೆಯಲ್ಲಿ ಎರಡು ಲೋಟ ನೀರು ಹಾಕಿ ಜಜ್ಜಿದ ಶುಂಠಿಯನ್ನು ಬೆರೆಸಿ

ಚಿಕ್ಕದಾಗಿ ಕತ್ತರಿಸಿ ಜಜ್ಜಿ....
ಈ ನೀರನ್ನು ಬಿಸಿಮಾಡಿ. ಕುದಿಯಲು ಆರಂಭಿಸಿದ ತಕ್ಷಣ ಉರಿಯನ್ನು ತಗ್ಗಿಸಿ ಸುಮಾರು ಹತ್ತು ನಿಮಿಷ ಚಿಕ್ಕ ಉರಿಯಲ್ಲಿ ಕುದಿಸಿ....

ಚಿಕ್ಕದಾಗಿ ಕತ್ತರಿಸಿ ಜಜ್ಜಿ....
ಬಳಿಕ ಉರಿಯನ್ನು ಆರಿಸಿ ಕೊಂಚ ಕಾಲ ಹಾಗೇ ಬಿಡಿ. ನಂತರ ತೆಳುವಾದ ಬಟ್ಟೆಯಲ್ಲಿ ಸೋಸಿ ಶುಂಠಿಯನ್ನು ಹಿಂಡಿ ನೀರನ್ನು ಇನ್ನೊಂದು ಲೋಟದಲ್ಲಿ ಸಂಗ್ರಹಿಸಿ.

ಚಿಕ್ಕದಾಗಿ ಕತ್ತರಿಸಿ ಜಜ್ಜಿ....
ಕೆಳಹೊಟ್ಟೆಯಲ್ಲಿ ನೋವು ಇರುವ ದಿನ ಈ ನೀರನ್ನು ಬಿಸಿಬಿಸಿ ಇದ್ದಂತೆಯೇ ದಿನಕ್ಕೆ ಎರಡು ಲೋಟ ಕುಡಿಯಿರಿ.

ಚಿಕ್ಕದಾಗಿ ಕತ್ತರಿಸಿ ಜಜ್ಜಿ....
ಒಂದು ವೇಳೆ ಈ ನೀರನ್ನು ಕುಡಿದ ಬಳಿಕವೂ ನೋವು ಇದ್ದರೆ ಇದಕ್ಕೆ endometriosis ಅಥವಾ ಗರ್ಭಾಶಯದ ಗಂಟುಗಳು ಕಾರಣವಿರಬಹುದು. ಆದ್ದರಿಂದ ನೋವು ಕಡಿಮೆಯಾಗದೇ ಇದ್ದರೆ ತಡಮಾಡದೇ ಸ್ತ್ರೀರೋಗ ತಜ್ಞರನ್ನು ಭೇಟಿಯಾಗಿ ಸಲಹೆ ಪಡೆಯಿರಿ. ಒಂದು ವೇಳೆ ನಿಮ್ಮ ವೈದ್ಯರು ರಕ್ತವನ್ನು ತೆಳುವಾಗಿಸುವ ಔಷಧಿಗಳನ್ನು ನೀಡಿದ್ದಲ್ಲಿ ಈ ವಿಧಾನವನ್ನು ವೈದ್ಯರ ಅನುಮತಿಯ ಹೊರತು ಅನುಸರಿಸಬೇಡಿ.



Click it and Unblock the Notifications
