Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ಮುಟ್ಟು ಹಿಂದೂಡಿಕೊಳ್ಳಬೇಕಾ..? ಹಾಗಾದ್ರೆ ಹೀಗೆ ಮಾಡಿ
ತಿಂಗಳ ಸಮಸ್ಯೆ ಎಷ್ಟೋ ಸಂದರ್ಭದಲ್ಲಿ ಮಹಿಳೆಯರಿಗೆ ಕಿರಿಕಿರಿಯನ್ನುಂಟು ಮಾಡುತ್ತೆ. ಅದ್ರಲ್ಲೂ ಮನೆಯಲ್ಲಿ ಯಾವುದೋ ಫಂಕ್ಷನ್ ಇದೆ, ಸಮಾರಂಭ ಇದೆ ಅಂದಾಗ ಪೀರೆಡ್ಸ್ ಪ್ರಾಬ್ಲಮ್ ಇದ್ರೆ ಕೆಲವರು ಮೆಡಿಸಿನ್ ಗಳ ಮೊರೆ ಹೋಗ್ತಾರೆ. ಆದ್ರೆ ಹಾಗೆ ತೆಗೆದುಕೊಳ್ಳುವ ಮಾತ್ರೆಗಳು ನಿಮ್ಮ ಆರೋಗ್ಯದ ಮೇಲೆ ಯಾವ ರೀತಿ ವ್ಯತಿರಿಕ್ತ ಪರಿಣಾಮಗಳನ್ನು ಉಂಟುಮಾಡುತ್ತೆ. ಯಮಯಾತನೆ ನೀಡುವ ಮುಟ್ಟಿನ ನೋವಿಗೆ ಪರಿಹಾರವೇನು?
ಅಷ್ಟಕ್ಕೂ ಮೀರಿ ನೀವು ಪೀರೆಡ್ಸ್ ಪ್ರೀಪೋನ್ ಮಾಡ್ಕೊಬೇಕು ಅಂದ್ರೆ ಕೆಲವು ಮನೆಮದ್ದುಗಳೇ ಇವೆ. ಯಾವುದೇ ಸೈಡ್ ಎಫೆಕ್ಟ್ ಮಾಡದೇ ಇವು ನಿಮ್ಮ ಡೇಟ್ ಬೇಗನೆ ಆಗುವಂತೆ ಮಾಡಿಕೊಳ್ಳಬಹುದು. ಬನ್ನಿ ಅಂತಹ ಮನೆಮದ್ದನ್ನು ಸ್ಲೈಡ್ ಶೋ ಮೂಲಕ ಓದಿ..

ಪಪ್ಪಾಯ
ನಿಮ್ಮ ಅಜ್ಜಿಯನ್ನು ಅಮ್ಮನನ್ನೋ ಕೇಳಿದ್ರೆ ಪಿರೇಡ್ಸ್ ಬೇಗ ಆಗುವಂತೆ ಮಾಡಲು ಏನ್ ತಿನ್ನಬೇಕು ಅಂತ ಕೇಳಿದ್ರೆ ಮೊದಲು ಹೇಳೋದೇ ಪಪ್ಪಾಯ ತಿನ್ನು ಅಂತ. ಖಂಡಿತ ಇದು ವರ್ಕೌಟ್ ಆಗುತ್ತೆ. ಪಪ್ಪಾಯ ಕೆರೋಟಿನ್ ಅಂಶಗಳನ್ನು ಒಳಗೊಂಡಿದ್ದು ಮುಟ್ಟಿಗೆ ಕಾರಣವಾಗುವ ಇಸ್ಟ್ರೋಜನ್ ಹಾರ್ಮೋನ್ ಇಂಬ್ಯಾಲೆನ್ಸ್ ಮಾಡುತ್ತೆ. ಪಪ್ಪಾಯ ದೇಹವನ್ನು ಹೀಟ್ ಮಾಡಿ ಪೀರೆಡ್ಸ್ ಬೇಗ ಆಗುವಂತೆ ಮಾಡುತ್ತೆ.

ಸೇಸಮೆ ಕಾಳುಗಳು
ಒಂದು ಚಮಚದಷ್ಟು ಸೇಸಮೆ ಕಾಳುಗಳು ಇಲ್ಲವೇ ಅದ್ರ ಪೌಡರ್ಗೆ ಒಂದು ಚಮಚ ಬೆಲ್ಲ ಇಲ್ಲವೇ ಜೇನುತುಪ್ಪ ಸೇರಿಸಿ ಸೇವಿಸೋದ್ರಿಂದ ಪೀರೆಡ್ಸ್ ಬೇಗ ಆಗುವಂತೆ ಮಾಡ್ಕೊಳ್ಳಬಹುದು.

ಖರ್ಜೂರ
ನಿಮ್ಮ ಡೇಟಿಗಿಂತ ಪೀರೆಡ್ಸ್ ಬೇಗನೆ ಆಗ್ಬೇಕು ಅಂದ್ರೆ ಪ್ರತಿದಿನ ಸ್ವಲ್ಪ ಖರ್ಜೂರ ಸೇವಿಸಿ. ಎಲ್ಲಿಗೋ ಟ್ರಾವೆಲ್ ಮಾಡ್ಬೇಕು, ಫಂಕ್ಷನ್ ಇದೆ ಅಂತ ಪೀರೇಡ್ಸ್ ಬೇಗ ಆಗ್ಬೇಕು ಅಂತ ಚಿಂತಿಸುವವರಿಗೆ ಖರ್ಜೂರ ಸೇವನೆಯಿಂದ ದೇಹದ ಉಷ್ಣತೆ ಹೆಚ್ಚಾಗಿ ಬೇಗನೆ ಪೀರೆಡ್ಸ್ ಆಗುತ್ತೆ.

ದಾಳಿಂಬೆ ಜ್ಯೂಸ್
ದಾಳಿಂಬೆ ಹಣ್ಣುಗಳ ಜ್ಯೂಸ್ ಅನ್ನು ದಿನಕ್ಕೆ 2 ರಿಂದ ಮೂರು ಬಾರಿ ಕುಡಿಯುತ್ತಾ ಬಂದ್ರೆ ಪೀರೆಡ್ಸ್ ಬೇಗ ಆಗಲು ಸಹಕಾರಿಯಾಗುತ್ತೆ. ದಾಳಿಂಬೆ ದೇಹದಲ್ಲಿ ರಕ್ತಕಣಗಳನ್ನು ಹೆಚ್ಚಿಸುತ್ತೆ.

ಕಬ್ಬಿನ ಹಾಲು
ನಿಮ್ಮ ಪೀರೆಡ್ಸ್ ಡೇಟ್ಸ್‌ಗೂ ಎರಡು ಅಥ್ವಾ ಮೂರು ವಾರ ಮುಂಚೆಯಿಂದ ಕಬ್ಬಿನ ಹಾಲು ಸೇವಿಸಿದ್ರೆ ಸ್ವಲ್ಪ ಬೇಗ ಪೀರೆಡ್ಸ್ ಆಗಲು ಸಹಕಾರಿಯಾಗುತ್ತೆ. ಹಿಂದಿನ ಕಾಲದಲ್ಲಿ ಕಾಮನ್ ಆಗಿ ಬಳಸ್ತಾ ಇದ್ದ ಮೆಥೆಡ್‌ಗಳಿವು. ಬಟ್ ಎಲ್ಲರಿಗೂ ವರ್ಕ್ ಆಗ್ಬೇಕು ಅಂತೇನೂ ಇಲ್ಲ. ಬಟ್ ಟ್ರೈ ಮಾಡಿ ನೋಡ್ಬಹುದು. ಟ್ಯಾಬ್ಲೆಟ್ ತೆಗೆದುಕೊಂಡು ತೊಂದರೆ ಅನುಭವಿಸೋದಕ್ಕಿಂತ ಇದು ಸುರಕ್ಷಿತ ಮೆಥೆಡ್ ಅನ್ನೋದು ನೆನಪಿರಲಿ..



Click it and Unblock the Notifications
