For Quick Alerts
ALLOW NOTIFICATIONS  
For Daily Alerts

ಸಂಧಿವಾತ, ಉರಿಯೂತ ನಿವಾರಿಸುವ ಪವರ್ ಫುಲ್ ಜ್ಯೂಸ್

By Arshad
|

ಸಾಮಾನ್ಯವಾಗಿ ಮಾಂಸಖಂಡಗಳಲ್ಲಿ ಕಂಡುಬರುವ ನೋವು ಕೆಲವು ದಿನಗಳಲ್ಲಿ ಕಡಿಮೆಯಾಗುತ್ತದೆ. ಆದರೆ ಮೂಳೆಗಳ ಸಂಧುಗಳ ನೋವು ಬಹಳ ಸಮಯ ಕಾಡುತ್ತದೆ ಹಾಗೂ ನಿತ್ಯದ ಕೆಲಸಗಳನ್ನು ಮಾಡಲು ಅಡ್ಡಿಯಾಗುತ್ತದೆ. ಅದರಲ್ಲೂ ಅತೀವ ಹೆಚ್ಚಿನ ನೋವು ಕೊಡುವ ಸಂಧಿವಾತ ನಿತ್ಯದ ಚಲನವಲನಕ್ಕೇ ತಡೆಯೊಡ್ಡಬಹುದು. ನೋವು ತಡೆಯಲಾರದೇ ನೋವು ನಿವಾರಕ ಮಾತ್ರೆಗಳಿಗೆ ಶರಣಾಗಲು ಕಾರಣವಾಗಬಹುದು. ಸಂಧಿವಾತ ಸಮಸ್ಯೆಯ ಲಕ್ಷಣ ಮತ್ತು ಕಾರಣ

ಆದರೆ ಇದರ ಶಮನಕಾರಿ ಪರಿಣಾಮ ಕೇವಲ ತಾತ್ಕಾಲಿಕವಾಗಿದ್ದು ಹಲವು ಅಡ್ಡಪರಿಣಾಮಗಳನ್ನು ಎದುರಿಸಬೇಕಾಗಬಹುದು. ಅಲ್ಲದೆ ಸತತ ಮಾತ್ರೆಗಳ ಸೇವನೆ ಆ ಮಾತ್ರೆಯ ವ್ಯಸನಕ್ಕೂ ಕಾರಣವಾಗಬಹುದು. ಅಲ್ಲದೇ ಕೆಲವು ನೋವುನಿವಾರಕ ಮಾತ್ರೆಗಳು ಯಕೃತ್ ಗೆ ಮಾರಕ ಎಂದು ತಿಳಿದುಬಂದಿದೆ. ಆದ್ದರಿಂದ ಸಂಧಿವಾತಕ್ಕೆ ಸೂಕ್ತ ಆಹಾರಗಳನ್ನು ಸೇವಿಸುವ ಮೂಲಕ ನಿಧಾನವಾಗಿಯಾದರೂ ಸುರಕ್ಷಿತವಾಗಿ ಈ ನೋವಿನಿಂದ ಹೊರಬರಬಹುದು. ಈ ನಿಟ್ಟಿನಲ್ಲಿ ಕೆಲವೊಂದು ಬಗೆಯ ನೈಸರ್ಗಿಕ ಜ್ಯೂಸ್ ಅನ್ನು ನಿಮಗಾಗಿ ಪ್ರಸ್ತುತಪಡಿಸಿದ್ದು, ಇವು ಸಂಧಿವಾತದ ನೋವು ಕಡಿಮೆಯಾಗಿಸಿ ನಿಧಾನವಾಗಿ ಇಲ್ಲದಂತಾಗಿಸಲು ನೆರವಾಗುತ್ತದೆ, ಅವು ಯಾವುದು ಎಂಬುದನ್ನು ಸ್ಲೈಡ್ ಶೋ ಮೂಲಕ ನೋಡೋಣ...

ಲಿಂಬೆ, ಅರಿಶಿನ ಪುಡಿ, ಹಸಿಶುಂಠಿ, ಸೇಬು ಮತ್ತು ಕ್ಯಾರೆಟ್

ಲಿಂಬೆ, ಅರಿಶಿನ ಪುಡಿ, ಹಸಿಶುಂಠಿ, ಸೇಬು ಮತ್ತು ಕ್ಯಾರೆಟ್

ಒಂದು ಸೇಬು ಹಣ್ಣು, ಒಂದು ಕ್ಯಾರೆಟ್ ಮತ್ತು ಸುಮಾರು ಎರಡಿಂಚಿನ ಶುಂಠಿಯ ತುಂಡನ್ನು ಮಿಕ್ಸಿಯ ದೊಡ್ಡ ಜಾರಿನಲ್ಲಿ ಹಾಕಿ ಕಡೆಯಿರಿ. ಬಳಿಕ ಕೊಂಚ ಅರಿಶಿನ ಪುಡಿ ಸೇರಿಸಿ ಕಡೆಯಿರಿ. ನಂತರ ಒಂದು ಲಿಂಬೆಯ ರಸ ಸೇರಿಸಿ. ಈ ಮಿಶ್ರಣವನ್ನು ಹಿಂಡಿ ರಸ ಸಂಗ್ರಹಿಸಿ. ಈ ರಸವನ್ನು ನಿತ್ಯವೂ ಒಂದು ನಿಯಮಿತ ಹೊತ್ತಿನಲ್ಲಿ ಕುಡಿಯಿರಿ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ ಬಳಿಕ ಒಂದು ಘಂಟೆ ಏನೂ ತಿನ್ನದಿರುವುದು ಉತ್ತಮ. ನಿಧಾನವಾಗಿ ಸಂಧಿವಾತ ಕಡಿಮೆಯಾಗುತ್ತಾ ಬರುತ್ತದೆ ಹಾಗೂ ಶೀಘ್ರವೇ ಇಲ್ಲವಾಗುತ್ತದೆ.ಇದಕ್ಕೆ ಕಾರಣವಾದ ಆಹಾರವಸ್ತುಗಳ ಬಗ್ಗೆ ಕೆಲವು ವಿವರಗಳನ್ನು ನೀಡಲಾಗಿದೆ ಮುಂದಿನ ಸ್ಲೈಡ್ ಕ್ಲಿಕ್ ಮಾಡಿ...

ಲಿಂಬೆಹಣ್ಣು

ಲಿಂಬೆಹಣ್ಣು

ಇದರಲ್ಲಿರುವ ಸಿಟ್ರಿಕ್ ಆಮ್ಲದ ಪ್ರಮಾಣ ಹೊಟ್ಟೆಯಲ್ಲಿರುವ ಜೀರ್ಣರಸಗಳಲ್ಲಿರುವ ಕ್ಷಾರೀಯ ದ್ರವಗಳ ಪ್ರಭಾವವನ್ನು ತಗ್ಗಿಸುತ್ತದೆ. ಅಲ್ಲದೇ ಇದರಲ್ಲಿರುವ ಪೋಷಕಾಂಶಗಳು ಉರಿಯೂತ ಕಡಿಮೆಗೊಳಿಸಲು, ರಕನಾಳಗಳನ್ನು ಸಡಿಲಗೊಳಿಸಲು, ನೋವನ್ನು ಕಡಿಮೆಮಾಡಲು ನೆರವಾಗುವ ಮೂಲಕ ನಿಮ್ಮ ಜೀವನ ಸುಲಭವಾಗುವಂತೆ ಮಾಡುತ್ತದೆ.

ಕ್ಯಾರೆಟ್

ಕ್ಯಾರೆಟ್

ಇದರಲ್ಲಿರುವ ಕೆಲವು ಆಂಟಿ ಆಕ್ಸಿಡೆಂಟುಗಳು ಉರಿಯೂತ ನಿವಾರಕ ಗುಣವನ್ನು ಹೊಂದಿವೆ. ವಾಸ್ತವವಾಗಿ ಉರಿಯೂತಕ್ಕೆ ಔಷಧಿಗಳಲ್ಲಿರುವುದಕ್ಕಿಂತಲೂ ಉತ್ತಮವಾದ ಪೋಷಕಾಂಶಗಳು ಕ್ಯಾರೆಟ್ ನಲ್ಲಿವೆ.

ಸೇಬು

ಸೇಬು

ಸೇಬಿನಲ್ಲಿರುವ ಕ್ವೆರ್ಸೆಟಿನ್ (Quercetin) ಎಂಬ ಪೋಷಕಾಂಶ ಒಂದು ಉತ್ತಮ ಉರಿಯೂತ ನಿವಾರಕವಾಗಿದ್ದು ರಕ್ತನಾಳಗಳಿಗೂ ಉತ್ತಮವಗಿದೆ. ಅಲ್ಲದೇ ದೇಹದಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ ಮಟ್ಟ ಅಗತ್ಯಕ್ಕೆ ತಕ್ಕಂತೆ ಇರುವ ಮತ್ತು ರಕ್ತಪರಿಚಲನೆಯನ್ನು ಸುಗಮಗೊಳಿಸುವ ಮೂಲಕ ಆರೋಗ್ಯ ವೃದ್ದಿಸುತ್ತದೆ.

ಶುಂಠಿ

ಶುಂಠಿ

ಮೂಳೆಗಳು ಟೊಳ್ಳಾಗುವ ಓಸ್ಟಿಯೋಪೋರೋಸಿಸ್ (osteoporosis) ಎಂಬ ತೊಂದರೆಯಿಂದಲೂ ಬಳಲುವ ರೋಗಿಗಳಿಗೆ ಶುಂಠಿ ಉತ್ತಮವಾಗಿದೆ. ಅಲ್ಲದೇ ಇದರ ಉರಿಯೂತ ನಿವಾರಕ ಗುಣ ಸಂಧಿವಾತ ಕಡಿಮೆಗೊಳಿಸಲೂ ನೆರವಾಗುತ್ತದೆ.

ಅರಿಶಿನ ಪುಡಿ

ಅರಿಶಿನ ಪುಡಿ

ಇದೊಂದು ಉತ್ತಮ ನೋವು ನಿವಾರಕವಾಗಿದೆ. ಅಲ್ಲದೇ ವಿವಿಧ ಬ್ಯಾಕ್ಟೀರಿಯಾಗಳ ಮೂಲಕ ತಗಲುವ ಸೋಂಕು, ವಿವಿಧ ಕ್ಯಾನ್ಸರ್, ಸಂಧಿವಾತ, ಉರಿಯೂತ ಹಾಗೂ ಅಜೀರ್ಣ ಮೊದಲಾದ ಸಮಸ್ಯೆಗಳನ್ನು ನಿವಾರಿಸಲು ಉತ್ತಮವಾಗಿದೆ.

 ವಿಷಕಾರಿ ವಸ್ತುಗಳನ್ನು ನಿವಾರಿಸುವ ಪೇಯ

ವಿಷಕಾರಿ ವಸ್ತುಗಳನ್ನು ನಿವಾರಿಸುವ ಪೇಯ

ಈ ಪೇಯವನ್ನು ನಿತ್ಯವೂ ಕುಡಿಯುವ ಮೂಲಕ ದೇಹದಲ್ಲಿ ಸಂಗ್ರಹವಾಗಿದ್ದ ವಿಷಕಾರಿ ವಸ್ತುಗಳನ್ನು ನಿವಾರಿಸಲು ಸಾಧ್ಯವಾಗುತ್ತದೆ. ಅಲ್ಲದೇ ಸಂಧಿವಾತದ ಮೂಲಕ ಮೂಳೆಸಂದುಗಳಲ್ಲಿ ಉಂಟಾದ ನೋವನ್ನು ಕಡಿಮೆಗೊಳಿಸಲು ನೆರವಾಗುತ್ತದೆ.

English summary

This Drink Kills Pain And Inflammation

Joint pains or other types of pains tend to make life difficult. In fact, severe joint pains can affect your mobility too. That is when you are forced to use pain killers. But the problem is that the usage of painkillers may cause several other complications like addiction. And in fact, some medicines do burden the liver. A better way out is relying more on foods that heal your pain and inflammation.
X
Desktop Bottom Promotion