For Quick Alerts
ALLOW NOTIFICATIONS  
For Daily Alerts

ಹುಷಾರು! ಹಲ್ಲುಜ್ಜುವ ಬ್ರಶ್ ಕೂಡ ಅತ್ಯಂತ ಅಪಾಯಕಾರಿ

By Hemanth
|

ನಿತ್ಯವೂ ಹಲ್ಲುಜ್ಜಿದ ಬಳಿಕ ಟೂತ್ ಬ್ರಶ್‌ನ್ನು ಒಂದು ಮೂಲೆಯಲ್ಲಿ ಇಟ್ಟುಬಿಡುತ್ತೇವೆ. ಮರುದಿನ ಅದೇ ಬ್ರಶ್‌ಗೆ ಸ್ವಲ್ಪ ಟೂತ್ ಪೇಸ್ಟ್ ಹಾಕಿಕೊಂಡು ಹಲ್ಲುಜ್ಜುತ್ತೇವೆ. ರಾತ್ರಿ ಊಟವಾದ ಬಳಿಕ ಹಲ್ಲುಜ್ಜುವ ಅಭ್ಯಾಸ ಹೊಂದಿರುವವರು ದಿನದ ಎರಡು ಹೊತ್ತು ಬ್ರಶ್ ಬಳಕೆ ಮಾಡುತ್ತಾರೆ. ಆದರೆ ಬಳಸಿ ಇಡುವಂತಹ ಬ್ರಶ್‌ನಲ್ಲಿ ಹಲವಾರು ರೀತಿಯ ಕ್ರಿಮಿಕೀಟಗಳು ಇರುತ್ತದೆ ಎನ್ನುವುದು ನಮಗೆ ತಿಳಿದಿರುವುದಿಲ್ಲ. ಹಲ್ಲುಜ್ಜುವ ಬ್ರಷ್ ಕೂಡ ಆರೋಗ್ಯಕ್ಕೆ ಮಾರಕವಾಗಬಹುದು!

ಅದನ್ನೇ ಬಾಯಿಗೆ ಹಾಕಿಕೊಂಡು ಹಲ್ಲುಜ್ಜುತ್ತೇವೆ. ಬಳಸಿ ಇಡುವಂತಹ ಟೂತ್ ಬ್ರಶ್ ನಲ್ಲಿ ಬಾಯಿಯ ಸೂಕ್ಷ್ಮ ಕ್ರಿಮಿಗಳು, ವೈರಸ್‌ಗಳು ಮತ್ತು ಬ್ಯಾಕ್ಟೀರಿಯಾ ಇರುತ್ತದೆ. ಇದು ಸೋಂಕನ್ನು ಉಂಟು ಮಾಡುತ್ತದೆ. ಪ್ರತಿನಿತ್ಯವು ಬಳಸುವಂತಹ ಟೂತ್ ಬ್ರಶ್ ನಲ್ಲಿ ಹಲವಾರು ರೀತಿಯ ಕ್ರಿಮಿಕೀಟಗಳು ಶೇಖರಣೆಯಾಗಬಹುದು. ಇದು ತುಂಬಾ ಅಪಾಯಕಾರಿ.

The Ugly Truth About Your Toothbrush

ಆದರೆ ಟೂತ್ ಬ್ರಶ್ ಅನ್ನು ಸ್ವಚ್ಛಗೊಳಿಸಿ ಅದನ್ನು ಕ್ರಿಮಿಕೀಟಗಳಿಂದ ದೂರವಿಡಲು ಹಲವಾರು ವಿಧಾನಗಳಿವೆ. ಬ್ರಶ್ ಕೈಗೆತ್ತಿಕೊಳ್ಳುವ ಮೊದಲು ಕೈಯನ್ನು ಸಾಬೂನು ಹಾಕಿಕೊಂಡು ಬಿಸಿನೀರಿನಿಂದ ಚೆನ್ನಾಗಿ ತೊಳೆಯಿರಿ. ಹಲ್ಲುಜ್ಜುವ ಮೊದಲು ಮತ್ತು ಹಲ್ಲುಜ್ಜಿದ ಬಳಿಕ ಬಿಸಿ ನೀರಿನಿಂದ ಸ್ವಲ್ಪ ಕಾಲ ಬ್ರಶ್ ಅನ್ನು ತೊಳೆಯಿರಿ.

ಕ್ರಿಮಿಕೀಟಗಳಿಂದ ಮುಕ್ತವಾಗಿರುವ ಬ್ರಶ್ ಅನ್ನು ಬಳಸಬೇಕಾದರೆ ಒಂದು ಕಪ್ ನೀರಿಗೆ ಒಂದು ಚಮಚ ಹೈಡ್ರೋಜನ್ ಪೆರಾಕ್ಸೈಡ್ ಹಾಕಿಕೊಂಡು ಅದರಲ್ಲಿ 30 ಸೆಕೆಂಡುಗಳ ಕಾಲ ಬ್ರಶ್ ಅನ್ನು ಮುಳುಗಿಸಿಡಿ. ಬಳಿಕ ಬ್ರಶ್ ಅನ್ನು ಬಿಸಿ ನೀರಿನಿಂದ ತೊಳೆಯಿರಿ. ಆಲ್ಕೋಹಾಲ್ ಅನ್ನು ಒಳಗೊಂಡಿರುವ ಮೌಥ್ ವಾಶ್ ಅನ್ನು ಹೈಡ್ರೋಜನ್ ಪೆರಾಕ್ಸೈಡ್ ಬದಲಿಗೆ ಬಳಸಬಹುದು. ನಿಮ್ಮ ಹಳೆಯ ಬ್ರಶ್‌ನ 8 ಪವಾಡ ಸದೃಶ ಕಾರ್ಯಗಳು

ಬ್ರಶ್‌ನ್ನು ಸ್ವಚ್ಛವಾಗಿಡಬೇಕಾದರೆ ಸ್ವಲ್ಪ ವಿನೇಗರ್‌ನಲ್ಲಿ ಬ್ರಶ್‌ನ್ನು ಅದ್ದಿಡಿ. ವಿನೇಗರ್ ಬ್ರಶ್‌ನಲ್ಲಿರುವ ಕ್ರಿಮಿಕೀಟಗಳನ್ನು ಕೊಲ್ಲುತ್ತದೆ. ಬಿಸಿ ನೀರನ್ನು ಬ್ರಶ್ ಸ್ವಚಗೊಳಿಸಲು ಬಳಸಬಹುದು. ಸುಲಭವಾದ ವಿಧಾನವೆಂದರೆ ಒಂದು ಕಪ್ ಬಿಸಿ ನೀರಿನಲ್ಲಿ ಬ್ರಶ್‌ನ್ನು ಅದ್ದಿಡಿ. ಮೂರರಿಂದ ಐದು ನಿಮಿಷ ಕಾಲ ಬ್ರಶ್‌ನ್ನು ಬಿಸಿ ನೀರಿನಲ್ಲಿ ಅದ್ದಿಡಿ.

ಟೂತ್ ಬ್ರಶ್ ಕ್ರಿಮಿಕೀಟಗಳಿಂದ ಮುಕ್ತವಾಗಬೇಕೆಂದು ನೀವು ಬಯಸಿದರೆ ಅದಕ್ಕಾಗಿ ಬ್ಲೀಚ್ ಅನ್ನು ಬಳಸಬಹುದು. ಬ್ರಶ್ ನ್ನು ಸುಮಾರು 30 ನಿಮಿಷ ಕಾಲ ಬ್ಲೀಚ್‌ನಲ್ಲಿ ತಿರುಗಿಸಿ ಮತ್ತು ಬಳಸುವ ಮೊದಲು ಬ್ಲೀಚ್ ಅನ್ನು ಸರಿಯಾಗಿ ತೊಳೆಯಿರಿ.

ಟೂತ್ ಬ್ರಶ್ ಅನ್ನು ಸ್ವಚ್ಛವಾಗಿಡಬೇಕಾದರೆ ನೀವು ಡಿಶ್ ವಾಷರ್ ಬಳಸಬಹುದು. ಇದು ಸ್ವಲ್ಪ ವಿಚಿತ್ರವೆನಿಸಬಹುದು. ಆದರೆ ಡಿಶ್ ವಾಷರ್ ಬ್ರಶ್‌ನಲ್ಲಿರುವ ಕ್ರಿಮಿ ಕೀಟಗಳನ್ನು ತೆಗೆದುಹಾಕುತ್ತದೆ. ಬ್ರಶ್ ಬಿಸಿಗೆ ಕರಗದಂತೆ ಡಿಶ್ ವಾಷರ್ ನ ಮೇಲಿನ ರ್ಯಾಕ್ ನಲ್ಲಿಡಬೇಕು. ಡಿಶ್ ವಾಷರ್ ಬಳಸುವುದು ಪರಿಣಾಮಕಾರಿ ವಿಧಾನವಾಗಿದೆ. ಟೂತ್ ಬ್ರಶ್ ಸ್ವಚ್ಛ ಮಾಡಿಕೊಳ್ಳಲು ಹಲವಾರು ವಿಧಾನಗಳಿವೆ. ಆದರೆ ಪ್ರತೀ ಮೂರ್ನಾಲ್ಕು ತಿಂಗಳಿಗೊಮ್ಮೆ ಬ್ರಶ್ ಅನ್ನು ಬದಲಾಯಿಸುತ್ತಾ ಇರಿ.

English summary

The Ugly Truth About Your Toothbrush

When you reach out for your toothbrush early in the morning after you wake up or just before you go to bed at night, hardly do you realise that it could be full of germs. Used toothbrushes contain oral microbial organisms, viruses and bacteria that can cause infections.
X
Desktop Bottom Promotion