Latest Updates
-
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ -
ಹಬ್ಬದ ಸೀಸನ್: ಕಲಬೆರಕೆ ಆಹಾರದಿಂದ ಎಚ್ಚರ! ಮಹಾರಾಷ್ಟ್ರ FDA ಕಠಿಣ ತಪಾಸಣೆ ಆರಂಭ -
ಶಿಕ್ಷಕರ ದಿನಾಚರಣೆ 2026: ನಿಮ್ಮ ಪೋಸ್ಟ್ ಟ್ರೆಂಡ್ ಆಗಲು ಬೆಸ್ಟ್ ಕ್ಯಾಪ್ಷನ್ಸ್ ಮತ್ತು ಗಿಫ್ಟ್ ಐಡಿಯಾಗಳು! -
ಮಳೆಗಾಲದ ಎಚ್ಚರಿಕೆ: ಹೊರಗೆ ವಾಕಿಂಗ್ ಹೋಗುವ ಮುನ್ನ ಈ ವಿಷಯ ಗಮನಿಸಿ, ಮನೆಯಲ್ಲೇ ಫಿಟ್ ಆಗಿರಿ -
ಗೃಹಹಿಂಸೆಯ ಸುಳಿಯಲ್ಲಿ ಸಿಲುಕಿದ್ದೀರಾ? ಸುರಕ್ಷಿತವಾಗಿ ಪಾರಾಗಲು ಈ ಮಾರ್ಗದರ್ಶಿ ಮತ್ತು ತುರ್ತು ಸಹಾಯವಾಣಿಗಳು ನಿಮಗೆ ನೆರವಾಗಲಿವೆ -
ಗಣೇಶ ಹಬ್ಬ 2026: ಬೆಂಗಳೂರಿನಲ್ಲಿ PoP ಮೂರ್ತಿಗಳ ಮೇಲೆ ಕಠಿಣ ನಿಷೇಧ, ಪರಿಸರ ಸ್ನೇಹಿ ಗಣಪತಿಯನ್ನು ಪತ್ತೆ ಹಚ್ಚುವುದು ಹೇಗೆ?
ನಿಮ್ಮ ಹಳೆಯ ಬ್ರಶ್‌ನ 8 ಪವಾಡ ಸದೃಶ ಕಾರ್ಯಗಳು
ಕೆಲವೊಮ್ಮೆ ನಾವು ಅಪ್ರಯೋಜಕ ಎಂದು ಕಡೆಗಣಿಸುವ ಎಷ್ಟೋ ವಸ್ತುಗಳು ನಮ್ಮ ಉಪಯೋಗಕ್ಕೆ ಬರುತ್ತವೆ. ಅವುಗಳು ನಮ್ಮ ಕಣ್ಣಿನಲ್ಲಿ ನಿರುಪಯೋಗಿಯಾಗಿರುತ್ತವೆ ಆದರೆ ಅವುಗಳು ಮಾಡುವ ಕಾರ್ಯ ಮಾತ್ರ ಪರ್ಫೆಕ್ಟ್ ಹಾಗೂ ನೀಟಾಗಿರುತ್ತವೆ.
ಆರಾಮದಾಯಕ ಮನೆಗಳಿಗೆ ಐದು ಹಂತಗಳು
ಉದಾಹರಣೆಗೆ ನಮ್ಮ ಹಳೆಯ ಹಲ್ಲು ತಿಕ್ಕುವ ಬ್ರಶ್ ಅನ್ನು ಒಂದೆರಡು ತಿಂಗಳು ಮಾತ್ರ ಬಳಸಬಹುದು ಅದರ ನಂತರ ಅದರಿಂದ ಏನೂ ಪ್ರಯೋಜನವಿಲ್ಲವೆಂದು ನಾವದನ್ನು ಬಿಸಾಡುತ್ತೇವೆ. ಆದರೆ ಇದೇ ಹಲ್ಲುಜ್ಜುವ ಬ್ರಶ್ ನಿಮ್ಮ ದೈನಂದಿನ ಜೀವನದಲ್ಲಿ ಮಾಡುವ ಕೆಲವೊಂದು ಅದ್ಭುತ ಕೆಲಸಗಳ ಬಗ್ಗೆ ತಿಳಿದಿದೆಯೇ? ನಿಮ್ಮ ಬ್ರಶ್ ಹಳತಾಗಿ ಉಪಯೋಗಕ್ಕೆ ಬರಲಿಲ್ಲವೆಂದಲ್ಲಿ ಅದನ್ನು ಬಿಸಡದಿರಿ ಅದರಿಂದ ಏನೆಲ್ಲಾ ಮಾಡಬಹುದು ಎಂಬುದನ್ನು ಈ ಲೇಖನದಲ್ಲಿ ನಿಮಗಿಂದು ತಿಳಿಸಿಕೊಡುತ್ತಿದ್ದೇವೆ.
ಹಳೆಯ ಟೂತ್‌ಬ್ರಶ್‌ನಿಂದ ನಿಮ್ಮ ಪಾದರಕ್ಷೆಗಳು, ಗ್ಯಾಸ್ ಸ್ಟವ್ ಮತ್ತು ಬಾಚಣಿಗೆಯನ್ನು ಸ್ವಚ್ಛ ಮಾಡಬಹುದು. ಗಟ್ಟಿಯಾದ ಬ್ರಶ್‌ನ ಹಲ್ಲುಗಳು ಇವುಗಳನ್ನು ಸ್ವಚ್ಛ ಮಾಡಲು ಪರಿಣಾಮಕಾರಿಯಾಗಿರುತ್ತವೆ. ನಿಮ್ಮ ಮನೆಯ ಕೆಲವಸ್ತುಗಳನ್ನು ಈ ಬ್ರಶ್‌ನಿಂದ ಸ್ವಚ್ಛಗೊಳಿಸಿ ಮತ್ತು ಪರಿಮಳಕ್ಕಾಗಿ ಲಿಂಬೆಯನ್ನು ಬಳಸಿ.
ಹಾಗಿದ್ದರೆ ನಿಮ್ಮ ಹಳೆಯ ಹಲ್ಲುಜ್ಜುವ ಬ್ರಶ್ ಅನ್ನು ಬಳಸಿ ಮಾಡಬಹುದಾದ ಕಾರ್ಯಗಳನ್ನು ಈ ಲೇಖನದಲ್ಲಿ ನಾವು ನೀಡುತ್ತಿದ್ದೇವೆ. ಅವುಗಳತ್ತ ನೋಟ ಹರಿಸಿ.
ಬಟ್ಟೆಯಿಂದ ಇಂಕ್ ಕಲೆಯನ್ನು ಹೋಗಲಾಡಿಸಲು ಸರಳ ವಿಧಾನಗಳು

ಕೊಳೆಯಾದ ಶೂಗಳು
ನಿಮ್ಮ ಹಳೆಯ ಶೂವನ್ನು ಬ್ರಶ್‌ನಿಂದ ಸ್ವಚ್ಛಗೊಳಿಸಿ. ಇದು ತುಂಬಾ ಸುಲಭವಾದ ವಿಧಾನವಾಗಿದೆ. ಡಿಟರ್ಜೆಂಟ್ ನೀರಿನಲ್ಲಿ ಬ್ರಶ್ ಅನ್ನು ಮುಳುಗಿಸಿ ಶೂನಲ್ಲಿ ಮೆತ್ತಿಕೊಂಡಿರುವ ಕೊಳೆಯನ್ನು ತೊಳೆಯಿರಿ.

ಕಿಚನ್ ಸ್ಟವ್
ಕಿಚನ್ ಸ್ಟವ್ ಅನ್ನು ಕೂಡ ಬ್ರಶ್ ಬಳಸಿ ಸುಲಭವಾಗಿ ತೊಳೆಯಬಹುದು. ಸೋಪು ನೀರು ಮತ್ತು ಬ್ರಶ್ ಬಳಸಿ ಸ್ಟವ್‌ನಲ್ಲಿ ಮೆತ್ತಿಕೊಂಡಿರುವ ಕೊಳಕನ್ನು ನಿವಾರಿಸಿ.

ಕಲೆಯಾದ ಬಟ್ಟೆಗಳು
ನಿಮ್ಮ ವಾಶಿಂಗ್ ಮೆಶಿನ್‌ನಲ್ಲಿ ಬಟ್ಟೆಗಳನ್ನು ತೊಳೆದೂ ಕೂಡ ಕಲೆ ಹಾಗೆಯೇ ಇದ್ದಲ್ಲಿ ಹಳೆಯ ಬ್ರಶ್ ಅನ್ನು ಬಳಸಿ ಈ ಕಲೆಯನ್ನು ನೀಗಿಸಬಹುದು. ಕಲೆಯಾದ ಜಾಗದಲ್ಲಿ ಬ್ರಶ್ ಅನ್ನು ಬಳಸಿ ವೃತ್ತಾಕಾರವಾಗಿ ತೊಳೆಯಿರಿ. ಇದರಿಂದ ಕಲೆ ಮಂಗ ಮಾಯವಾಗುತ್ತದೆ.

ಬಾಚಣಿಗೆ
ನಿಮ್ಮ ಬಾಚಣಿಗೆಯನ್ನು ಹಳೆಯ ಹಲ್ಲು ತಿಕ್ಕುವ ಬ್ರಶ್ ಅನ್ನು ಬಳಸಿ ಸ್ವಚ್ಛ ಮಾಡಬಹುದು. ನಿಮ್ಮ ಮನೆಯನ್ನು ಬ್ರಶ್‌ನಿಂದ ಸ್ವಚ್ಛಗೊಳಿಸುವ ಕಾರ್ಯ ಬಾಚಣಿಗೆಯಿಂದಲೇ ಪ್ರಾರಂಭಗೊಳ್ಳಲಿ.

ಕಾಫಿ ಮೇಕರ್
ಕಾಫಿ ಮೇಕರ್ ಲಿಡ್ ತೆರೆಯಿರಿ ಮತ್ತು ವಿನೇಗರ್ ಹಾಗೂ ಸ್ವಲ್ಪ ನೀರನ್ನು ಬಳಸಿ ಕಾಫಿ ಮೇಕರ್‌ನ ಕಲೆಯನ್ನು ನಿವಾರಿಸಿ.

ಬಾತ್‌ರೂಮ್ ಟೈಲ್ಸ್
ಡಿಟರ್ಜೆಂಟ್ ನೀರು ಮತ್ತು ಲಿಂಬೆಯನ್ನು ಬಳಸಿ ನಿಮ್ಮ ಬಾತ್‌ರೂಮ್ ನೆಲವನ್ನು ಸ್ವಚ್ಛಗೊಳಿಸಬಹುದು. ಇದು ಸುಲಭವಾಗಿ ನೆಲದ ಕೊಳೆಯನ್ನು ನಿವಾರಿಸುತ್ತದೆ.

ಸಿಂಕ್ ಹಾಗೂ ಬಾತ್‌ರೂಮ್ ಹೊರವಲಯಗಳು
ನಿಮ್ಮ ಹಳೆಯ ಬ್ರಶ್ ಅನ್ನು ಬಳಸಿ ಸಿಂಕ್ ಮತ್ತು ಬಾತ್‌ರೂಮ್ ಹೊರವಲಯಗಳನ್ನು ಚೆನ್ನಾಗಿ ಸ್ವಚ್ಛಗೊಳಿಸಬಹುದು.

ಕೊಳೆಯಾದ ಲ್ಯಾಂಪ್‌ಗಳು
ನಿಮ್ಮ ಬೆಡ್‌ಲ್ಯಾಂಪ್ ಕೊಳೆಯಾಗಿದ್ದಲ್ಲಿ, ಟೂತ್‌ಬ್ರಶ್ ಅನ್ನು ಬಳಸಿ ಅವುಗಳನ್ನು ಸ್ವಚ್ಛಗೊಳಿಸಬಹುದು. ನಿಮ್ಮ ಬ್ರಶ್‌ನಿಂದ ಮಾಡಬಹುದಾದ ಒಂದು ಉತ್ತಮ ಹಾಗೂ ಸರಳ ಕೆಲಸ ಇದಾಗಿದೆ.



Click it and Unblock the Notifications