ಹಲ್ಲುಜ್ಜುವ ಬ್ರಷ್ ಕೂಡ ಆರೋಗ್ಯಕ್ಕೆ ಮಾರಕವಾಗಬಹುದು!

By: manu
Subscribe to Boldsky

ಜೈಲಿನಿಂದ ಪಾರಾಗಲು ಕೈದಿಗಳು ತಮ್ಮ ಹಲ್ಲುಜ್ಜುವ ಬ್ರಷ್, ಪೆನ್ನು ಪೆನ್ಸಿಲ್ಲುಗಳನ್ನೇ ಚೂಪಾಗಿಸಿ ಆಯುಧಗಳ ರೂಪದಲ್ಲಿ ಬಳಸಿರುವ ಕಥಾನಕಗಳನ್ನು ಓದಿಯೇ ಇರುತ್ತೀರಿ. ಇದು ಆ ಎಚ್ಚರಿಕೆ ಅಲ್ಲ! ಬದಲಿಗೆ ರೋಗಗಳಿಗೆ ಆಹ್ವಾನ ನೀಡುವ ಹಲವು ಕ್ರಿಮಿ ಮತ್ತು ಜಂತುಗಳನ್ನು ಸುಲಭವಾಗಿ ಶರೀರಕ್ಕೆ ಸೇರಿಸುವ ಸಾಧನವಾಗಿ ಬಳಕೆಯಾಗುತ್ತಿದೆ ಎಂದು ಇತ್ತೀಚಿನ ಸಂಶೋಧನೆಗಳು ಎಚ್ಚರಿಸಿವೆ. ಇದಕ್ಕೆ ಪ್ರಮುಖ ಕಾರಣ ಇದನ್ನು ನಾವು ಉಪಯೋಗಿಸುವ ಸ್ಥಳ ಅಂದರೆ ಶೌಚಾಲಯ.

ಇಲ್ಲಿ ತೆರೆದ ಸ್ಥಿತಿಯಲ್ಲಿಟ್ಟ ಬ್ರಷ್‌ನ ಕೂದಲುಗಳ ಮೇಲೆ ಗಾಳಿಯಲ್ಲಿ ತೇಲಾಡಿಕೊಂಡಿದ್ದ ವಿವಿಧ ಕ್ರಿಮಿ, ಬ್ಯಾಕ್ಟೀರಿಯಾಗಳು ಸುಲಭವಾಗಿ ಕುಳಿತು ಮುಂದಿನ ಬಾರಿ ಹಲ್ಲುಜ್ಜುವ ಬ್ರಷ್ ಬಾಯಿಯೊಳಗೆ ಕೊಂಡುಹೋಗುವ ಮೂಲಕ ಗಂಟಲಿಗೆ ಪ್ರವೇಶ ಪಡೆಯುತ್ತವೆ! ಟೂತ್ ಬ್ರಷ್ ನ ಬಗ್ಗೆ ತಿಳಿದಿರಲೇಬೇಕಾದ ಅಂಶಗಳು

ಅದರಲ್ಲೂ ಶೌಚಾಲಯವನ್ನು ಒಬ್ಬರಿಗಿಂತ ಹೆಚ್ಚು ಜನರು ಉಪಯೋಗಿಸುತ್ತಿದ್ದರೆ ಆ ಗಾಳಿಯಲ್ಲಿ ವಿವಿಧ ತರಹದ ಬ್ಯಾಕ್ಟೀರಿಯಾಗಳು ತೇಲಾಡಿಕೊಂಡಿರುತ್ತವೆ. ಇವು ಒಸಡು, ಗಂಟಲ ಒಳಭಾಗ, ಮೂಗು ಮೊದಲಾದ ತೇವವಿರುವ ಸ್ಥಳಗಳಲ್ಲೆಲ್ಲ ಅವಿತು ಕುಳಿತುಕೊಂಡು ವೃದ್ಧಿಸಿಕೊಳ್ಳುತ್ತಾ ಸೋಂಕು ಹರಡುತ್ತವೆ.

ಈ ಅಪಾಯವನ್ನು ಮನಗಂಡ ಕೆಲವು ಬ್ರಷ್ ಸಂಸ್ಥೆಗಳು ಇವುಗಳ ಕೂದಲುಗಳು ಮುಚ್ಚುವಂತೆ ಮುಚ್ಚಳವೊಂದನ್ನು ನೀಡುತ್ತಾರೆ. ಆದರೆ ಅಪ್ಪಟ ಸೋಮಾರಿಗಳಾದ ನಾವು ಆ ಮುಚ್ಚಳವನ್ನು ಹಾಕದೇ ಬ್ಯಾಕ್ಟೀರಿಯಾಗಳಿಗೆ ಮುಕ್ತ ಆಹ್ವಾನ ನೀಡುತ್ತೇವೆ.

ಆದರೆ ಮುಚ್ಚಳ ಮುಚ್ಚುವುದರಿಂದ ಗಾಳಿಯಲ್ಲಿ ತೇಲುವ ಬ್ಯಾಕ್ಟೀರಿಯಾಗಳ ಸಂಖ್ಯೆಯಲ್ಲಿ ಕೊಂಚ ಕಡಿಮೆಯಾಗಬಹುದೇ ವಿನ: ಮಲದ ಮೂಲಕ ಹೊರಬಂದ ಬ್ಯಾಕ್ಟೀರಿಯಾಗಳು ತೇವಾಂಶದಲ್ಲಿ ಅಡಗಿ ಕುಳಿತು ಮುಚ್ಚಳದೊಳಗೂ ಪ್ರವೇಶ ಪಡೆಯುವುದರಿಂದ ಅವನ್ನು ತಡೆಯಲು ಸಾಧ್ಯವಿಲ್ಲ. ನಿಮ್ಮ ಬ್ರಷ್ ನೀಡಬಹುದಾದ ತೊಂದರೆಗಳ ಬಗ್ಗೆ ಈ ಕೆಳಗಿನ ಸ್ಲೈಡ್ ಶೋ ಮೂಲಕ ಕೆಲವು ಅಮೂಲ್ಯ ಮಾಹಿತಿಗಳನ್ನು ನೀಡಲಾಗಿದೆ. ನಾಲಿಗೆ ಸ್ವಚ್ಛತೆಗೆ ಇಲ್ಲಿದೆ 10 ಸೂಪರ್ ಸಲಹೆಗಳು!

ಶೀತ ಮತ್ತು ಜ್ವರ ಎದುರಾಗಬಹುದು

ಶೀತ ಮತ್ತು ಜ್ವರ ಎದುರಾಗಬಹುದು

ಮನೆಯ ಸದಸ್ಯರೆಲ್ಲಾ ತಮ್ಮ ಬ್ರಷ್‍ಗಳನ್ನು ಒಂದೇ ಸ್ಥಾನದಲ್ಲಿಡುವುದರಿಂದ ಒಬ್ಬರ ಕ್ರಿಮಿಗಳು ಇನ್ನೊಬ್ಬರಿಗೆ ಈ ಬ್ರಷ್ ಗಳ ಮೂಲಕ ಹರಡಲು ಸುಲಭವಾಗುತ್ತದೆ. ಇದರಲ್ಲಿ ಶೀತ ಮತ್ತು ಫ್ಲೂ ಜ್ವರದ ಬ್ಯಾಕ್ಟೀರಿಯಾಗಳು ಅತ್ಯಂತ ಸಾಮಾನ್ಯವಾಗಿವೆ. ಮನೆಯ ಓರ್ವ ಸದಸ್ಯರಿಗೆ ಫ್ಲೂ ಎದುರಾಗಿದ್ದರೆ ಉಳಿದವರಿಗೂ ಹರಡುವ ಸಾಧ್ಯತೆ ಇದರಿಂದ ಹೆಚ್ಚುತ್ತದೆ. ಆದ್ದರಿಂದ ಶೀತ-ಜ್ವರದ ಬಾಧೆಗೊಳಗಾದ ಸದಸ್ಯರ ಎಲ್ಲಾ ವೈಯಕ್ತಿಯ ವಸ್ತುಗಳನ್ನು ಪ್ರತ್ಯೇಕಿಸುವುದು ಅಗತ್ಯವಾಗಿದೆ.

ಕೆಮ್ಮು

ಕೆಮ್ಮು

ಮನೆಯಲ್ಲೊಬ್ಬರಿಗೆ ಕೆಮ್ಮು ಇದ್ದರೆ ಇತರರಿಗೂ ಹರಡುವ ಸಂಭವ ಹೆಚ್ಚು. ಏಕೆಂದರೆ ಕೆಮ್ಮಿಗೆ ಕಾರಣವಾದ ವೈರಸ್ ಗಾಳಿಯಲ್ಲಿ ತೇಲಾಡುತ್ತಾ ತೇವವಿದ್ದೆಡೆ ಅಂಟಿಕೊಂಡುಬಿಡುತ್ತವೆ. ಬ್ರಷ್ ನ ಒದ್ದೆ ಕೂದಲುಗಳು ಇವುಗಳಿಗೆ ಮನೆ ಕಟ್ಟಿಕೊಳ್ಳಲು ಅತ್ಯಂತ ಸೂಕ್ತ ನಿವೇಶನಗಳಾಗಿವೆ. ಈ ಬ್ರಷ್ ಬಳಸಿದವರಿಗೂ ಶೀಘ್ರವೇ ಕೆಮ್ಮು ಆವರಿಸುವ ಸಾಧ್ಯತೆ ಹೆಚ್ಚುತ್ತದೆ.

ರಕ್ತದಿಂದ ಹರಡುವ ಕಾಯಿಲೆಗಳು

ರಕ್ತದಿಂದ ಹರಡುವ ಕಾಯಿಲೆಗಳು

ಒಂದು ವೇಳೆ ರಕ್ತದಿಂದ ಹರಡುವ ಕಾಯಿಲೆಗಳಾದ ಹೆಪಟೈಟಿಸ್ ಬಿ ಅಥವಾ ಹೆಪಟೈಟಿಸ್ ಸಿ ಬಾಧಿತ ರೋಗಿ ತನ್ನ ಬ್ರಷ್ ಅನ್ನು ಇತರರ ಬ್ರಷ್ ಗಳೊಂದಿಗಿಟ್ಟರೆ ಈ ರೋಗದ ವೈರಾಣುಗಳೂ ಆ ಬ್ರಷ್ ಗಳಿಗೆ ದಾಟಿಕೊಳ್ಳುವ ಸಾಧ್ಯತೆ ಹೆಚ್ಚುತ್ತದೆ. ಏಕೆಂದರೆ ರೋಗಿಯ ಒಸಡುಗಳಿಂದ ಒಸರುವ ಅತಿ ಕಡಿಮೆ ಪ್ರಮಾಣದ ರಕ್ತದ ಒಂದು ಕಣ ಬ್ರಷ್ ಮೇಲೆ ಉಳಿದರೂ ರೋಗ ಹರಡುವ ಸಾಧ್ಯತೆ ಇದೆ.

ಹಲ್ಲುಜ್ಜುವ ಪೇಸ್ಟ್ ಸಹಾ ರೋಗ ಹರಡಬಲ್ಲುದು!

ಹಲ್ಲುಜ್ಜುವ ಪೇಸ್ಟ್ ಸಹಾ ರೋಗ ಹರಡಬಲ್ಲುದು!

ಒಂದೇ ಟ್ಯೂಬ್ ನಿಂದ ಬೇರೆ ಬೇರೆ ಬ್ರಷ್ ಗಳಿಗೆ ಪೇಸ್ಟ್ ಹಚ್ಚಿಕೊಳ್ಳುವ ಮೂಲಕವೂ ಒಂದು ಬ್ರಷ್ ನಿಂದ ಮುಂದಿನ ಬ್ರಷ್ ಗೆ ವೈರಾಣುಗಳು ದಾಟಿಕೊಳ್ಳಬಹುದು ಎಂದು ವೈಜ್ಞಾನಿಕವಾಗಿ ಸಾಬೀತಾಗಿದೆ.

ಒದ್ದೆ ಬ್ರಷ್ ಅಪಾಯಕಾರಿ

ಒದ್ದೆ ಬ್ರಷ್ ಅಪಾಯಕಾರಿ

ಕೀಟಾಣುಗಳು ಹೆಚ್ಚಾಗಿ ಒದ್ದೆ ಅಥವಾ ತೇವವಿರುವ ಸ್ಥಳಗಳಲ್ಲಿಯೇ ಹೆಚ್ಚಾಗಿ ಅಂಟಿಕೊಳ್ಳುತ್ತವೆ. ಅದರಲ್ಲೂ ಶಿಲೀಂಧ್ರಗಳು (fungi) ತೇವದ ಮೇಲೆ ಕುಳಿತ ಬಳಿಕ ಅಲ್ಪಕಾಲದಲ್ಲಿಯೇ ಆಗಾಧವಾಗಿ ಬೆಳೆದು ಮುಂದಿನ ಬಾರಿ ಬ್ರಷ್ ಮಾಡುವಾಗ ಒಸಡುಗಳ ಮೂಲಕ ದೇಹ ಪ್ರವೇಶಿಸಿ ಹಲವು ತೊಂದರೆಗಳಿಗೆ ಕಾರಣವಾಗುತ್ತವೆ.

ಹಲ್ಲುಜ್ಜುವ ಬ್ರಷ್‌ಗಳನ್ನು ಸ್ವಚ್ಛವಾಗಿಡುವುದು ಹೇಗೆ?

ಹಲ್ಲುಜ್ಜುವ ಬ್ರಷ್‌ಗಳನ್ನು ಸ್ವಚ್ಛವಾಗಿಡುವುದು ಹೇಗೆ?

ಪ್ರತಿಬಾರಿ ಹಲ್ಲುಜ್ಜಿದ ಬಳಿಕ ಕೂದಲುಗಳನ್ನು ಕೊಂಚ ಬಿಸಿನೀರಿನಿಂದ ತೊಳೆದು ನೀರಿನ ಪಸೆ ಹಾರಿಹೋಗುವಂತೆ ಬೆರಳುಗಳಿಂದ ನಾಲ್ಕಾರು ಬಾರಿ ಮೀಟಬೇಕು. ಬಳಿಕ ತೇವಾಂಶವಿರದ ಸ್ಥಳದಲ್ಲಿ ಇರಿಸಬೇಕು. ಶೌಚಾಲಯದಲ್ಲಿ ಇರಿಸದೇ ಇದ್ದಷ್ಟೂ ಉತ್ತಮ.

ಎಂದಿಗೂ ಬ್ರಷ್‌ಗಳನ್ನು ಹಂಚಿಕೊಳ್ಳಬೇಡಿ

ಎಂದಿಗೂ ಬ್ರಷ್‌ಗಳನ್ನು ಹಂಚಿಕೊಳ್ಳಬೇಡಿ

ನಿಮ್ಮ ಯಾವುದೇ ವೈಯಕ್ತಿಕ ವಸ್ತುಗಳನ್ನು ಯಾರೊಂದಿಗೂ ಹಂಚಿಕೊಳ್ಳಬಾರದು, ನಿಮ್ಮ ಮನೆಯ ಸದಸ್ಯರೊಂದಿಗೂ ಸಹಾ! ಪ್ರತಿ ಮೂರು ತಿಂಗಳಿಗೊಮ್ಮೆ ನಿಮ್ಮ ಬ್ರಷ್ ಕಡ್ಡಾಯವಾಗಿ ಬದಲಿಸಲೇ ಬೇಕು. ಮೂರು ತಿಂಗಳಿಗೂ ಮೊದಲೇ ಬ್ರಷ್ ನ ಕೂದಲು ಬಾಗಿರುವುದು ಕಂಡುಬಂದರೆ ಕೂಡಲೇ ಬದಲಿಸುವುದು ಉತ್ತಮ. ಅದರಲ್ಲೂ ಶೀತ, ಕೆಮ್ಮು ಬಾಧಿಸಿ ಗುಣವಾದ ಬಳಿಕ ನಿಮ್ಮ ಬ್ರಷ್, ಸೋಪು, ಮೈಯುಜ್ಜುವ ಬ್ರಷ್ ಮೊದಲಾದವುಗಳನ್ನು ತ್ಯಜಿಸಿ ಹೊಸತನ್ನು ಬಳಸಲು ಪ್ರಾರಂಭಿಸುವ ಮೂಲಕ ಮನೆಯ ಇತರ ಸದಸ್ಯರನ್ನು ಈ ಕೀಟಾಣುಗಳಿಂದ ಕಾಪಾಡಿದಂತಾಗುತ್ತದೆ.

ಮನೆಯ ಸದಸ್ಯರಿಗೆ ಸೋಂಕು ಉಂಟಾಗಿದ್ದಲ್ಲಿ ಅವರಿಗೆ ಪ್ರತ್ಯೇಕ ವಸ್ತುಗಳನ್ನು ನೀಡಿ

ಮನೆಯ ಸದಸ್ಯರಿಗೆ ಸೋಂಕು ಉಂಟಾಗಿದ್ದಲ್ಲಿ ಅವರಿಗೆ ಪ್ರತ್ಯೇಕ ವಸ್ತುಗಳನ್ನು ನೀಡಿ

ಒಂದು ವೇಳೆ ನಿಮ್ಮ ಮನೆಯ ಯಾವುದೇ ಸದಸ್ಯರಿಗೆ ಸೋಂಕು ಉಂಟಾಗಿದ್ದರೆ ಅವರ ಎಲ್ಲಾ ವೈಯಕ್ತಿಯ ವಸ್ತುಗಳಾದ ಸೋಪು, ಹಲ್ಲುಜ್ಜುವ ಬ್ರಷ್, ಮೈಯುಜ್ಜುವ ಬ್ರಷ್, ಪೇಸ್ಟ್ ಇತ್ಯಾದಿಗಳನ್ನು ಪ್ರತ್ಯೇಕಿಸಿ ಬೇರೆಯೇ ಡಬ್ಬಿಯಲ್ಲಿ ಭದ್ರವಾಗಿ ಮುಚ್ಚಳ ಮುಚ್ಚಿಡಿ. ಪ್ರತಿಬಾರಿ ಉಪಯೋಗಿಸುವ ಮೊದಲು ಬ್ರಷ್‌ಗಳನ್ನು ಬಿಸಿನೀರಿನಲ್ಲಿ ತೊಳೆದ ಬಳಿಕವೇ ಉಪಯೋಗಿಸಲು ನೀಡಿ.

ಸಲಹೆ

ಸಲಹೆ

1) ದಂತವೈದ್ಯರ ಪ್ರಕಾರ ಬ್ರಷ್ ಉಪಯೋಗಿಸುವುದು ಮುಖ್ಯವೇ ಹೊರತು ದುಬಾರಿ ಬ್ರಷ್ ಅಲ್ಲ. ಸಾಮಾನ್ಯ ಬ್ರಷ್ ಸಹಾ ದಂತ ಮತ್ತು ಒಸಡುಗಳ ರಕ್ಷಣೆಯನ್ನು ಸಮರ್ಥವಾಗಿ ನೀಡಬಲ್ಲುದು.

2) ಪ್ರತಿ ಬಾರಿ ಊಟವಾದ ಬಳಿಕ ಬ್ರಷ್ ಮಾಡಿಕೊಳ್ಳುವುದು ಉತ್ತಮ. ಇದು ಸಾಧ್ಯವಾಗದಿದ್ದರೆ ಬೆರಳನ್ನು ಬ್ರಷ್ ನಂತೆ ಉಪಯೋಗಿಸಿ ತೊಳೆದುಕೊಳ್ಳಬೇಕು

ಸಲಹೆ

ಸಲಹೆ

3) ಪ್ರತಿ ಬಾರಿ ಸಾಫ್ಟ್ ಡ್ರಿಂಕ್ (ಲಘು ಪಾನೀಯ) ಕುಡಿದ ಬಳಿಕ ಬಾಯಿ ಮುಕ್ಕಳಿಸದೇ ಇದ್ದರೆ ಬ್ಯಾಕ್ಟೀರಿಯಾಗಳು ಧಾಳಿಯಿಡುವ ಸಾಧ್ಯತೆ ಸಾವಿರ, ಲಕ್ಷ ಪಟ್ಟು ಹೆಚ್ಚುತ್ತದೆ. ಈ ಪಾನೀಯಗಳಲ್ಲಿರುವ ಆಗಾಧ ಪ್ರಮಾಣದ ಸಕ್ಕರೆಯೇ ಇದಕ್ಕೆ ಕಾರಣ.

4) ಕಬ್ಬಿನಹಾಲು ಕುಡಿದ ಬಳಿಕವೂ ಬಾಯಿ ಮುಕ್ಕಳಿಸದೇ ಇದ್ದರೆ ಬ್ಯಾಕ್ಟೀರಿಯಾ ಹೆಚ್ಚುವ ಸಾಧ್ಯತೆ ಇದೆ.

English summary

Beware!!! Your Toothbrush Can Kill You!

Behold!! your toothbrush can cause your death.... According to a new research, it is stated that toothbrushes can serve as a vector for transmission of potentially pathogenic organisms. It is much more unhealthy when you are using a shared bathroom as your brush will carry the germs and bacteria of another being. Take a look at the diseases your toothbrush gives you:
Please Wait while comments are loading...
Subscribe Newsletter