For Quick Alerts
ALLOW NOTIFICATIONS  
For Daily Alerts

ಚಳಿಗಾಲದ ಅತಿಥಿ 'ಶೀತಕ್ಕೆ' ಕಡಿವಾಣ ಹಾಕುವ ಮನೆಮದ್ದು

ಚಳಿಗಾಲದಲ್ಲಿ ಕಾಡುವ ಶೀತದ ಸಮಸ್ಯೆಯಿಂದ ಪಾರಾಗಲು ಯಾವಾಗಲೂ ಮಾತ್ರೆಗಳನ್ನು ಸೇವಿಸುವುದು ಒಳ್ಳೆಯದಲ್ಲ, ಅದಕ್ಕೆಂದೇ ಪವರ್ ಫುಲ್ ಮನೆಮದ್ದನ್ನು ನೀಡಿದ್ದೇವೆ ಪ್ರಯತ್ನಿಸಿ ನೋಡಿ....

By Hemanth
|

ಪ್ರತಿಯೊಂದು ಋತುವಿನಲ್ಲೂ ಏನಾದರೊಂದು ಆರೋಗ್ಯ ಸಮಸ್ಯೆಗಳು ಕಾಡುತ್ತಲೇ ಇರುತ್ತದೆ. ಹವಾಮಾನ ಬದಲಾವಣೆಗೆ ದೇಹ ಹೊಂದಿಕೊಳ್ಳಲು ಸಮಯ ತೆಗೆದುಕೊಳ್ಳುವುದು ಮತ್ತು ಹಲವಾರು ರೀತಿಯ ವೈರಲ್ ಸೋಂಕುಗಳು ಕಾಣಿಸಿಕೊಳ್ಳುವುದು ಇದಕ್ಕೆ ಕಾರಣ. ಶೀತ, ಕೆಮ್ಮು ಉಪಟಳ ತಡೆಯುವ ಮನೆಮದ್ದು

ಅದರಲ್ಲೂ ಚಳಿಗಾಲದಲ್ಲಿ ಶೀತ, ಕೆಮ್ಮು ಹಾಗೂ ಜ್ವರ ಬಿಡದೆ ಕಾಡುತ್ತದೆ. ಅದರಲ್ಲೂ ಶೀತ ಮತ್ತು ಕೆಮ್ಮು ಚಳಿಗಾಲದಲ್ಲಿ ಸರ್ವೇ ಸಾಮಾನ್ಯ. ಶೀತವೆಂದರೆ ಗಂಟಲು ನೋವು ಹಾಗೂ ಉಸಿರಾಟದ ಸಮಸ್ಯೆಗಳು. ತಾಪಮಾನ ಕಡಿಮೆಯಾಗುತ್ತಾ ಸಾಗಿದಂತೆ ಸಮಸ್ಯೆ ಹೆಚ್ಚಾಗುತ್ತಾ ಹೋಗುತ್ತದೆ. ಶೀತ ಆದಾಗ ಏನು ಮಾಡಬೇಕು, ಏನು ಮಾಡಬಾರದು?

ಹವಾಮಾನದಲ್ಲಿ ಬದಲಾವಣೆಗಳು ಆದಾಗ ದೇಹದಲ್ಲಿನ ಪ್ರತಿರೋಧಕ ಶಕ್ತಿ ಕಡಿಮೆ ಇರುವವರು ಇಂತಹ ಸಮಸ್ಯೆಗೆ ಗುರಿಯಾಗುತ್ತಾರೆ. ದೇಹದಲ್ಲಿ ಪ್ರತಿರೋಧಕ ಶಕ್ತಿ ಕಡಿಮೆ ಇರುವವರು ಚಳಿಯ ವಾತಾವರಣದಲ್ಲಿ ಸೋಂಕಿಗೆ ತುತ್ತಾಗುತ್ತಾರೆ. ಮೂಗಿನಲ್ಲಿ ಸಿಂಬಳ ಬರುವುದು, ಗಂಟಲು ನೋವು, ಸೀನು ಮತ್ತು ಉಸಿರಾಡಲು ಕಷ್ಟಪಡುವುದು ಚಳಿಗಾಲದಲ್ಲಿ ಶೀತದಿಂದ ಎದುರಿಸುವಂತಹ ಸಾಮಾನ್ಯ ಸಮಸ್ಯೆಗಳು.

ಚಳಿಗಾಲದಲ್ಲಿ ಶೀತವನ್ನು ಕಡಿಮೆ ಮಾಡಬೇಕೆಂದರೆ ಅದಕ್ಕೆ ಮನೆಯಲ್ಲಿ ತಯಾರಿಸುವಂತಹ ಒಂದು ನೈಸರ್ಗಿಕವಾದ ಜ್ಯೂಸ್ ಅನ್ನು ಕುಡಿಯಬೇಕು. ಈ ಜ್ಯೂಸ್ ತಯಾರಿಸಲು ಶುಂಠಿ, ಬೆಳ್ಳುಳ್ಳಿ, ಕ್ಯಾರೆಟ್ ಮತ್ತು ಅನಾನಸು ಬೇಕು. ಚಳಿಗಾಲದಲ್ಲಿ ಶೀತ ಕಾಡಿದರೆ ಚಿಂತಿಸದೆ ಜ್ಯೂಸ್ ಮಾಡಿಕೊಂಡು ಕುಡಿದು ಪರಿಹಾರ ಪಡೆಯಿರಿ....

ಶುಂಠಿ

ಶುಂಠಿ

ಶುಂಠಿಯಲ್ಲಿ ಜಿಂಜರೊಲ್ಸ್ ಮತ್ತು ಶಾಯೊಗಾಲ್ಸ್ ಎನ್ನುವ ಎರಡು ಪ್ರಮುಖ ಅಂಶವಿದೆ. ಇದು ಉರಿಯೂತ ಶಮನಕಾರಿ. ಶೀತ ಹಾಗೂ ಗಂಟಲು ಕೆರೆತ ಉಂಟುಮಾಡುವ ಹಲವಾರು ರೀತಿಯ ವೈರಸ್ ನಿಂದ ಶುಂಠಿಯು ಉಪಶಮನ ನೀಡುವುದು.

ಬೆಳ್ಳುಳ್ಳಿ

ಬೆಳ್ಳುಳ್ಳಿ

ಪ್ರತಿಯೊಂದು ಅಡುಗೆ ಮನೆಯಲ್ಲಿ ಸಿಗುವಂತಹ ಬೆಳ್ಳುಳ್ಳಿಯಲ್ಲಿ ಬ್ಯಾಕ್ಟೀರಿಯಾ ವಿರೋಧಿ, ವೈರಲ್ ವಿರೋಧಿ ಮತ್ತು ಉರಿಯೂತ ಶಮನಕಾರಿ ಗುಣಗಳು ಇವೆ. ಇದು ಶೀತವನ್ನು ಉಂಟುಮಾಡುವಂತ ಹಲವಾರು ರೀತಿಯ ವೈರಸ್ ನಿಂದ ದೇಹವನ್ನು ಕಾಪಾಡುತ್ತದೆ ಮತ್ತು ಸೋಂಕನ್ನು ತಡೆಯುತ್ತದೆ. ಬೆಳ್ಳುಳ್ಳಿಯಲ್ಲಿರುವ ಅಲಿಸಿನ್ ಎನ್ನುವ ಅಂಶವು ದೇಹದಲ್ಲಿ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸಿ ಯಾವುದೇ ಸೋಂಕು ಕಾಡದಂತೆ ತಡೆಯುತ್ತದೆ.

ಕ್ಯಾರೆಟ್

ಕ್ಯಾರೆಟ್

ದೇಹದಲ್ಲಿ ಪ್ರತಿರೋಧಕ ಶಕ್ತಿಯನ್ನು ಕಾಪಾಡುವ ಪ್ರಮುಖ ತರಕಾರಿಯೆಂದರೆ ಅದು ಕ್ಯಾರೆಟ್. ಇದರಲ್ಲಿರುವ ವಿಟಮಿನ್ ಸಿ ಮತ್ತು ಬಿ1, ಬ್ಯಾಕ್ಟೀರಿಯಾ ಮತ್ತು ವೈರಸ್ ವಿರುದ್ಧ ಹೋರಾಡಿ ದೇಹಕ್ಕೆ ಶೀತ ಸಹಿತ ಯಾವುದೇ ರೀತಿಯ ಸೋಂಕು ಬರದಂತೆ ತಡೆಯುತ್ತದೆ.

ಅನಾನಸು

ಅನಾನಸು

ಸ್ವಲ್ಪ ಹುಳಿ ಹಾಗೂ ಸಿಹಿಯಾಗಿರುವ ಅನಾನಸಿನಲ್ಲಿರುವ ಉರಿಯೂತ ಶಮನಕಾರಿ ಗುಣ, ಆ್ಯಂಟಿಆಕ್ಸಿಡೆಂಟ್ ಮತ್ತು ವಿಟಮಿನ್ ಸಿ ದೇಹದಲ್ಲಿ ಪ್ರತಿರೋಧಕ ಶಕ್ತಿಯ ಮಟ್ಟವನ್ನು ಕಾಪಾಡಿ ದೇಹಕ್ಕೆ ಭಾದಿಸುವಂತಹ ಸಾಮಾನ್ಯ ಸೋಂಕನ್ನು ತಡೆಯುತ್ತದೆ. ಅನಾನಸ್ ಹಣ್ಣು ನೆನೆಸಿದ ನೀರು ಕುಡಿಯಿರಿ, ಆರೋಗ್ಯ ಪಡೆಯಿರಿ

ಜ್ಯೂಸ್ ತಯಾರಿಸುವ ವಿಧಾನ

ಜ್ಯೂಸ್ ತಯಾರಿಸುವ ವಿಧಾನ

1.ಒಂದು ಸಣ್ಣ ಶುಂಠಿ ತೆಗೆದುಕೊಂಡು ಅದರ ಸಿಪ್ಪೆ ತೆಗೆದು ಅದನ್ನು ಸಣ್ಣಸಣ್ಣ ತುಂಡುಗಳನ್ನಾಗಿ

ಮಾಡಿಕೊಳ್ಳಿ.

2.ಬೆಳ್ಳುಳ್ಳಿಯ ಕೆಲವು ಎಸಲುಗಳನ್ನು ತೆಗೆದುಕೊಂಡು ಅದನ್ನು ಸಣ್ಣಸಣ್ಣ ತುಂಡುಗಳನ್ನಾಗಿ ಮಾಡಿ.

3.ಒಂದೆರಡು ತುಂಡು ಅನಾನಸನ್ನು ಸಣ್ಣ ಸಣ್ಣ ತುಂಡುಗಳನ್ನಾಗಿ ಮಾಡಿಕೊಳ್ಳಿ.

4.ಒಂದು ಅಥವಾ ಎರಡು ಕ್ಯಾರೆಟ್ ನ್ನು ತುಂಡು ಮಾಡಿಟ್ಟುಕೊಳ್ಳಿ.

5.ಎಲ್ಲವನ್ನು ಒಂದು ಜ್ಯೂಸರ್ ಗೆ ಹಾಕಿಕೊಂಡು ಜ್ಯೂಸ್ ಮಾಡಿ. ದಿನದಲ್ಲಿ ಒಂದು ಲೋಟ ಈ ಜ್ಯೂಸ್ ಕುಡಿಯಿರಿ.

English summary

Suffering From Cold? Try This One Juice For Instant Relief

Winter is here and the weather makes it perfect for many of the viral infections to thrive. So if you are caught up with a bad cold then here is this one natural remedy that will help to get rid of cold instantly. Cold, associated with throat pain and respiratory problems, is common during the winter season. As the temperature drops and there is a change in the weather condition, this is the time when people get affected.
X
Desktop Bottom Promotion