For Quick Alerts
ALLOW NOTIFICATIONS  
For Daily Alerts

ಇನ್ನು ಸಣ್ಣ- ಪುಟ್ಟ ನೋವುಗಳಿಗೆ ವೈದ್ಯರ ಬಳಿ ಓಡಬೇಡಿ!

By Hemanth
|

ದೇಹವೆಂದ ಮೇಲೆ ಅದಕ್ಕೆ ಅನಾರೋಗ್ಯ, ನೋವು ಇತ್ಯಾದಿ ಇದ್ದೇ ಇರುತ್ತದೆ. ಇದನ್ನು ಸರಿಯಾಗಿ ನಿಭಾಯಿಸಿಕೊಂಡು ಹೋದರೆ ಆಗ ಎಲ್ಲವೂ ಬಗೆಹರಿಯುತ್ತದೆ. ಆದರೆ ದೇಹವನ್ನು ಕಾಡುವ ನೋವಿನಲ್ಲಿ ಹಲವಾರು ವಿಧಗಳಿವೆ. ಕೆಲವೊಂದು ತುಂಬಾ ಕಡಿಮೆ, ಮತ್ತೆ ಕೆಲವು ತುಂಬಾ ಗಂಭೀರ ನೋವಾಗಿರುತ್ತದೆ. ಸಣ್ಣ ನೋವುಗಳು ಕೂಡ ನಮ್ಮನ್ನು ತುಂಬಾ ತೊಂದರೆಗೆ ಸಿಲುಕಿಸಬಹುದು. ಉದಾಹರಣೆಗೆ ನಿಮ್ಮ ಮೆಚ್ಚಿನ ಸಾಕು ನಾಯಿಯನ್ನು ಮುದ್ದಿಸಲು ನೀವು ಬಗ್ಗಿದಾಗ ಹಠಾತ್ ಆಗಿ ಬೆನ್ನಿನಲ್ಲಿ ಸೆಳೆತ ಉಂಟಾಗಿ ನೋವು ಕಾಣಿಸಿಕೊಳ್ಳುವುದು.

ಇಂತಹ ಸಂದರ್ಭಗಳಲ್ಲಿ ನಾವು ನೇರವಾಗಿ ವೈದ್ಯರ ಬಳಿಗೆ ಹೋಗುವ ಬದಲು ಕೆಲವೊಂದು ಮನೆಮದ್ದನ್ನು ಪ್ರಯೋಗಿಸಿ ನೋಡಬಹುದಾಗಿದೆ. ನೋವು ಕಾಣಿಸಿದ ಜಾಗಕ್ಕೆ ಮಂಜುಗಡ್ಡೆಯನ್ನು ಇಟ್ಟರೆ ಆಗ ಸ್ವಲ್ಪ ಆರಾಮವಾಗಬಹುದು. ಇದು ನಿಮ್ಮ ನೋವನ್ನು ಕಡಿಮೆ ಮಾಡಿಲ್ಲವೆಂದು ನಿಮಗನಿಸುತ್ತಿದ್ದರೆ ಆಗ ವೈದ್ಯರನ್ನು ಭೇಟಿ ಮಾಡಿ ಪರೀಕ್ಷಿಸಿಕೊಳ್ಳಿ. ನಮಗೆ ಕಿರಿಕಿರಿಯನ್ನು ಉಂಟುಮಾಡುವ ಕೆಲವೊಂದು ಸಣ್ಣ ಪುಟ್ಟ ನೋವುಗಳಿಗೆ ಇಲ್ಲಿ ಕೆಲವೊಂದು ಮನೆಮದ್ದುಗಳ ಬಗ್ಗೆ ಹೇಳಲಾಗಿದೆ..

ಅರಿಶಿನ

ಅರಿಶಿನ

ಉರಿಯೂತ ನಿಮ್ಮ ನೋವಿಗೆ ಕಾರಣವಾಗಿದ್ದರೆ ಮತ್ತೆ ಎರಡು ಸಲ ಯೋಚಿಸಬೇಡಿ. ಆಹಾರದಲ್ಲಿ ಅರಿಶಿನವನ್ನು ಬಳಸಿ. ಅರಿಶಿನದಲ್ಲಿನ ಉರಿಯೂತ ನಿವಾರಣ ಗುಣಗಳು ಬಾತುಕೊಂಡಿರುವ ಭಾಗವನ್ನು ಸಹಜ ಸ್ಥಿತಿಗೆ ತರುವುದು. ಅರಿಶಿನವನ್ನು ಆಹಾರದಲ್ಲಿ ಅಥವಾ ಕಿತ್ತಳೆ ಜ್ಯೂಸ್ ನೊಂದಿಗೆ ಸೇವಿಸಿ.

ಪುದೀನ

ಪುದೀನ

ಹೊಟ್ಟೆ ನೋವಿಗೆ ಹೇಳಿ ಮಾಡಿಸಿದಂತಹ ಮನೆಮದ್ದು ಎಂದರೆ ಪುದೀನ. ಹೊಟ್ಟೆ ನೋವು ಕಾಣಿಸಿಕೊಂಡಾಗ ಕೆಲವು ಪುದೀನ ಎಲೆಗಳನ್ನು ಬಾಯಿಗೆ ಹಾಕಿ ಜಗಿದು ನೀರು ಕುಡಿದರೆ ನೋವು ನಿವಾರಣೆಯಾಗುವುದು.

ಲವಂಗ

ಲವಂಗ

ಲವಂಗವನ್ನು ಭಾರತೀಯರು ಅಡುಗೆಯಲ್ಲಿ ರುಚಿಗಾಗಿ ಬಳಸಿಕೊಳ್ಳುತ್ತಾರೆ. ಲವಂಗವು ಸಾಮಾನ್ಯ ಶೀತ, ತಲೆನೋವು, ವಾಕರಿಕೆ, ಉರಿಯೂತ ಮತ್ತು ಹಲ್ಲಿನ ಸಮಸ್ಯೆಗಳನ್ನು ನಿವಾರಿಸುತ್ತದೆ.

ಆಕ್ಯೂಪಂಕ್ಚರ್

ಆಕ್ಯೂಪಂಕ್ಚರ್

ಚೀನಾದ ಈ ಚಿಕಿತ್ಸೆಯು ದೇಹದಲ್ಲಿನ ಹಲವಾರು ನೋವುಗಳನ್ನು ನಿವಾರಿಸುತ್ತದೆ. ದೇಹದ ಕೆಲವೊಂದು ಭಾಗಕ್ಕೆ ಸೂಜಿಯನ್ನು ಚುಚ್ಚುವ ಮೂಲಕ ನೋವನ್ನು ಕಡಿಮೆ ಮಾಡುವ ಚಿಕಿತ್ಸೆ ಇದಾಗಿದೆ. ಇದನ್ನು ತಜ್ಞರು ಮಾತ್ರ ಮಾಡಬಹುದು. ನಿಮಗೆ ಇದರ ಬಗ್ಗೆ ಜ್ಞಾನವಿಲ್ಲದೆ ಇದ್ದರೆ ಪ್ರಯತ್ನಿಸಲು ಹೋಗಬೇಡಿ.

ನೀರು ಹಬ್ಬೆ ಗಿಡದ ತೊಗಟೆ

ನೀರು ಹಬ್ಬೆ ಗಿಡದ ತೊಗಟೆ

ಉರಿಯೂತದಿಂದಾಗಿ ಕೆಲವೊಂದು ನೋವುಗಳು ಕಾಣಿಸಿಕೊಳ್ಳುತ್ತದೆ. ಇದಕ್ಕೆ ನೀರು ಹಬ್ಬೆ ಗಿಡದ ತೊಗಟೆ ಒಳ್ಳೆಯ ಮದ್ದು. ಈ ಮರದ ತೊಗಟೆ ನಿಮಗೆ ಕಾಣಿಸಿದರೆ ಅದನ್ನು ಕುದಿಸಿ ಅದರ ನೀರನ್ನು ಕುಡಿಯಿರಿ. ಬೆನ್ನು ನೋವು ಮತ್ತು ತಲೆನೋವು ಬೇಗನೆ ನಿವಾರಣೆಯಾಗುವುದು.

ಹಾಗಲಕಾಯಿ

ಹಾಗಲಕಾಯಿ

ಭಾರತೀಯರು ಹಾಗಲಕಾಯಿಯನ್ನು ವಿವಿಧ ರೂಪದಲ್ಲಿ ತಮ್ಮ ಆಹಾರದಲ್ಲಿ ಬಳಸಿಕೊಳ್ಳುತ್ತಾರೆ. ಇದು ಸಕ್ಕರೆ ಪ್ರಮಾಣವನ್ನು ನಿಯಂತ್ರಿಸುವ ಕಾರಣ ಮಧುಮೇಹ ನಿಯಂತ್ರಣಕ್ಕೆ ಒಳ್ಳೆಯದು. ತ್ವಚ್ಛೆಯಲ್ಲಿನ ಗಾಯಗಳನ್ನು ನಿವಾರಿಸಲು ಇದನ್ನು ಬಳಸಬಹುದಾಗಿದೆ.

ಬಿಸಿ ಮತ್ತು ತಂಪು

ಬಿಸಿ ಮತ್ತು ತಂಪು

ಸ್ನಾಯುಗಳ ನೋವು ನಿವಾರಿಸಲು ಮಂಜುಗಡ್ಡೆಯನ್ನು ಪ್ರಮುಖವಾಗಿ ಬಳಸಲಾಗುತ್ತದೆ. ಅಲ್ಲದೆ ನೋವಿನ ಭಾಗಕ್ಕೆ ಬಿಸಿಯಾದ ವಸ್ತುವಿನಿಂದ ಮಸಾಜ್ ಮಾಡಿದರೆ ನೋವು ಮಾಯವಾಗುವುದು.

English summary

Simple treatment, when You’re Suffering From Pain

There are many types of pains. Some are simple whereas some are complex. But sometimes, even simple body pains cause lots of inconvenience. Imagine yourself bending all of a sudden to touch your pet dog. Your back suddenly aches and you scream with pain. So, here are some other simple remedies for various other minor pains which cause lots of inconvenience.
Story first published: Friday, April 22, 2016, 18:42 [IST]
X
Desktop Bottom Promotion