ಅಧ್ಯಯನ ವರದಿ: ಮಾನಸಿಕ ಸಮಸ್ಯೆ ಮಹಿಳೆಯರ ಸಂಖ್ಯೆಯೇ ಜಾಸ್ತಿ!

By Jaya Subramanya
Subscribe to Boldsky

ಮಾನವರು ಎಂದಾಕ್ಷಣ ಒಂದಿಲ್ಲೊಂದು ರೋಗಗಳು ನಮ್ಮನ್ನು ಕಾಡುತ್ತಲೇ ಇರುತ್ತದೆ. ಅದು ದೈಹಿಕವಾಗಿರಬಹುದು ಇಲ್ಲವೇ ಮಾನಸಿಕವಾಗಿರಬಹುದು. ಸೂಕ್ತವಾದ ಪರಿಹಾರವನ್ನು ಇದೆರಡಕ್ಕೂ ತೆಗೆದುಕೊಳ್ಳುವುದು ಅತಿಮುಖ್ಯವಾಗಿದೆ. ಇಂದಿನ ಲೇಖನದಲ್ಲಿ ನಾವು ಚರ್ಚಿಸುತ್ತಿರುವ ವಿಷಯ ಆಘಾತಕಾರಿ ಒತ್ತಡ ಎಂಬ ಮಾನಸಿಕ ಕಾಯಿಲೆಯ ಬಗ್ಗೆಯಾಗಿದೆ. ಪುರುಷ ಮತ್ತು ಮಹಿಳೆಯರನ್ನು ಕಾಡುವ ಸಮಸ್ಯೆ ಇದಾಗಿದ್ದರೂ ಇಂತಹ ಕಾಯಿಲೆಗೆ ತೀವ್ರವಾಗಿ ತುತ್ತಾಗುವುದು ಮಹಿಳೆಯರೇ ಆಗಿದ್ದಾರೆ. ಮಾನಸಿಕ ಒತ್ತಡ ಕ್ಯಾನ್ಸರ್ ಗೆ ಒಂದು ಕಾರಣ    

Mental Health Issues
 

ಇದಕ್ಕೆ ತಕ್ಕಂತೆ ಈಗ ಸಂಶೋಧನೆಗಳು ಇದನ್ನೇ ಸಾಬೀತುಪಡಿಸಿದ್ದು ಈ ಮಾನಸಿಕ ಆರೋಗ್ಯ ಸಮಸ್ಯೆಯು ಪ್ಯಾನಿಕ್ ಅಥವಾ ಭಯ ಮತ್ತು ಬೇರ್ಪಡುವ ಆತಂಕವನ್ನು ಉಂಟುಮಾಡುತ್ತದೆ ಎನ್ನಲಾಗಿದೆ. ಪುರುಷರಿಗಿಂತ ಮಹಿಳೆಯರು ಎರಡು ಪಟ್ಟು ಅಧಿಕವಾಗಿ ಈ ಕಾಯಿಲೆಯಿಂದ ಬಳಲುತ್ತಾರೆ ಎನ್ನಲಾಗಿದೆ. ಲೈಂಗಿಕ ಕಿರುಕುಳವನ್ನು ಅನುಭವಿಸುವ ಮಹಿಳೆಯರು ಇಂತಹ ಮಾನಸಿಕ ಕಾಯಿಲೆಗೆ ತುತ್ತಾಗುತ್ತಾರೆ ಎಂದೆನ್ನಲಾಗಿದೆ.

ಮಹಿಳೆಯರು ಜೀವನದಾದ್ಯಂತ ಹಾರ್ಮೋನಲ್ ಏರಿಳಿತಗಳು ಮತ್ತು ಅಸಮತೋಲನಗಳಿಗೆ ಒಳಗಾಗುತ್ತಾರೆ ಇದು ಮುಟ್ಟಿನ ಸಂದರ್ಭದಲ್ಲಿ ಆಗಿರಬಹುದು ಇಲ್ಲವೇ ಗರ್ಭಧಾರಣೆಯ ಸಮಯದಲ್ಲೂ ಈ ಮಾನಸಿಕ ಅಸ್ವಸ್ಥತೆ ಅವರನ್ನು ಕಾಡುತ್ತದೆ. ಅವರಲ್ಲಿ ಉಂಟಾಗುವ ಮಾನಸಿಕ ಬದಲಾವಣೆಗಳು ಮಹಿಳೆಯರ ಜೀವನದಲ್ಲಿ ಖಿನ್ನತೆಯನ್ನು ಉಂಟುಮಾಡುತ್ತದೆ.

Mental Health Issues
 

ಮಗುವಿನ ಜನನ ಸಮಯದಲ್ಲಿ ಖಿನ್ನತೆಯಿಂದ ಮಹಿಳೆಯರು ಬಳಲುವುದು ತುಸು ಹೆಚ್ಚೇ ಆಗಿದೆ. ಪೂರ್ವ ಋತುಚಕ್ರದ ಅಸ್ವಸ್ಥತೆಯಿಂದ ಕೂಡ ಸ್ತ್ರೀಯರು ಬಳಲಲಿದ್ದು ಅವರು ಹೆಚ್ಚು ಭಾವುಕರಾಗಿದ್ದು ಜನರು ಮತ್ತು ಸಮಾಜ ಏನು ಹೇಳುತ್ತಾರೆ ಎಂಬುದಕ್ಕೆ ಹೆಚ್ಚು ಬಲಿಯಾಗುತ್ತಾರೆ. ಇದು ಖಿನ್ನತೆಯನ್ನು ಉಂಟುಮಾಡಲಿದೆ. ಮಾನಸಿಕ ಖಿನ್ನತೆಗೆ ಎದೆಗುಂದುವುದು ಸರಿಯೇ?

ಅಧ್ಯಯನದ  ಪ್ರಕಾರ, ಅಂತೆಯೇ ಅವರಲ್ಲಿ ಒತ್ತಡ, ಚಿಂತೆ, ಭಯ, ಖಿನ್ನತೆ ಪುರುಷರಿಗಿಂತಲೂ ಹೆಚ್ಚು ಮಹಿಳೆಯರಲ್ಲಿ ಉಂಟಾಗಲಿದೆ. ನಿರ್ದಿಷ್ಟ ಹಾರ್ಮೋನುಗಳಿದ್ದು ಇದು ಪುರುಷರಿಗಿಂತಲೂ ಮಹಿಳೆಯರಲ್ಲಿ ಆತಂಕವನ್ನು ಹೆಚ್ಚಿಸುತ್ತದೆ ಎಂಬುದಾಗಿ ವೈದ್ಯರು ತಿಳಿಸಿದ್ದಾರೆ.

Mental Health Issues
 

ಹೆಚ್ಚು ತಿನ್ನುವ ಅಭ್ಯಾಸ ಕೂಡ ಪುರುಷರಿಗಿಂತ ಮಹಿಳೆಯರಲ್ಲಿ ಹೆಚ್ಚು ಕಾಡಲಿದೆ. ಇದಕ್ಕೆ ಸರಿಯಾಗಿ ತಮ್ಮ ಆಕಾರ, ತೂಕ ಮತ್ತು ಸಂಪೂರ್ಣ ಗೋಚರತೆಯ ಬಗ್ಗೆ ಗೀಳನ್ನು ಅವರು ಹೊಂದಿರುತ್ತಾರೆ. ಅವರಲ್ಲಿ ಹಸಿವು ಮತ್ತು ಅನೋರೆಕ್ಸಿಯಾದಿಂದ ಕೂಡ ಹೆಚ್ಚು ಬಳಲುತ್ತಾರೆ ಎಂಬುದಾಗಿ ಸಾಬೀತಾಗಿದೆ.

For Quick Alerts
ALLOW NOTIFICATIONS
For Daily Alerts

    English summary

    Shocking Mental Health Issues That Are More Common In Women!

    Men and women both suffer from certain mental health issues. However, there are certain mental illnesses that women are more prone to suffer from than men. Let us discuss the health issues that women are more prone to suffer from than men. The first type of mental illness that women are more prone to suffer from than men is post traumatic stress disorder
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more