For Quick Alerts
ALLOW NOTIFICATIONS  
For Daily Alerts

ಮೆಟಬಾಲಿಕ್ ಸಿಂಡ್ರೋಮ್ ಸ್ತ್ರೀಯರಲ್ಲಿ ಲೈಂಗಿಕ ತೃಪ್ತಿ ಕಡಿಮೆಯಂತೆ!

By Jaya Subramanaya
|

ಒಂದು ವೇಳೆ ಮಹಿಳೆಯರು ಋತುಬಂಧಕ್ಕೊಳಗಾಗುವ ಸಂದರ್ಭದಲ್ಲಿ ಮೆಟಬಾಲಿಕ್ ಸಿಂಡ್ರೋಮ್ ಕಂಡು ಬಂದರೆ, ಅವರಲ್ಲಿ ಲೈಂಗಿಕ ಚಟುವಟಿಕೆ, ಲೈಂಗಿಕ ತೃಪ್ತಿ ಕಡಿಮೆ ಇರುತ್ತದೆ ಎಂಬುದಾಗಿ ಹೊಸ ವರದಿಯೊಂದು ತಿಳಿಸಿದೆ. ಅಮೇರಿಕನ್ ಜರ್ನಲ್ ಆಫ್ ಮೆಡಿಸಿನ್ ಎಂಬ ಮಾಸಪತ್ರಿಕೆಯಲ್ಲಿ ಈ ಸುದ್ದಿ ಪ್ರಕಟವಾಗಿದ್ದು, ಮೆಟಬಾಲಿಕ್ ಸಿಂಡ್ರೋಮ್ ಮತ್ತು ಹೃದಯ ರೋಗವು ಋತುಬಂಧಕ್ಕೊಳಗಾದ ಮಹಿಳೆಯರ ಲೈಂಗಿಕ ಜೀವನದಲ್ಲಿ ಬೀರುವ ಪಾತ್ರವನ್ನು ಅಧ್ಯಯನಕಾರರು ಪರೀಕ್ಷಿಸಿದ್ದಾರೆ.

ಕಡಿಮೆ ಲೈಂಗಿಕ ಚಟುವಟಿಕೆಯ ಕಾರಣದಿಂದಾಗಿ ಸ್ತ್ರೀಯರಲ್ಲಿ ತೀವ್ರತರ ಅಪಧಮನಿ ಕಾಯಿಲೆಗಳು ಹೆಚ್ಚು ಕಂಡುಬಂದಿದೆ. ಕ್ಯಾಲಿಫೋರ್ನಿಯಾದ ವಿಶ್ವವಿದ್ಯಾಲಯದ ಸಂಶೋಧಕರು ಲೈಂಗಿಕ ಕ್ರಿಯೆ ಸೂಚ್ಯಂಕ (FSFI) ಪ್ರಶ್ನಾವಳಿಯನ್ನು ಬಳಸಿಕೊಂಡು ಋತುಬಂಧಕ್ಕೊಳಗಾದ 376 ಮಹಿಳೆಯರನ್ನು ಪರೀಕ್ಷೆಗೆ ಒಳಪಡಿಸಿದ್ದಾರೆ.

Sexual Desire To Be Lower In Post Menopausal Women: Study Proves

ಸೊಂಟದ ಗಾತ್ರ, ಮಧುಮೇಹ ಮತ್ತು ರಕ್ತದೊತ್ತಡವು ಕಡಿಮೆಯಾಗಿರುವ ಲೈಂಗಿಕ ಚಟುವಟಿಕೆಗೆ ಸಂಬಂಧವನ್ನು ಹೊಂದಿದ್ದು ಉನ್ನತ ಟ್ರೈಗ್ಲಿಸರೈಡ್ ಮಟ್ಟಗಳು ಅಲ್ಪ ತೃಪ್ತಿಗೆ ಕಾರಣವಾಗಿದೆ ಎಂಬುದಾಗಿ ಅಧ್ಯಯನವು ತಿಳಿಸಿದೆ. ವಯಸ್ಸಾದ ಮಹಿಳೆಯರಿಗಿಂತಲೂ ಮೆಟಬಾಲಿಕ್ ಸಿಂಡ್ರೋಮ್ ಹೊಂದಿರುವ ಮಹಿಳೆಯರಲ್ಲಿ ಲೈಂಗಿಕ ತೃಪ್ತಿ ಕಡಿಮೆ ಇದೆ ಎಂಬುದಾಗಿ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಸುಸಾನ್ ಟ್ರಮ್ ಪೀಟರ್ ತಿಳಿಸಿದ್ದಾರೆ. ಮುಟ್ಟು ನಿಲ್ಲುವ ಸಮಯದಲ್ಲಿ ಹಾಟ್ ಫ್ಲಾಷ್ ಸಮಸ್ಯೆ

ಸಂಶೋಧಕರು ಬೇರೆ ಬೇರೆ ಹೃದಯ ರಕ್ತನಾಳಗಳು ಮತ್ತು ಅವುಗಳ ಪರಿಣಾಮಗಳನ್ನು ಲೈಂಗಿಕ ಆರೋಗ್ಯದ ಮೇಲೆ ಪರೀಕ್ಷಿಸಿದ್ದಾರೆ. ಹೃದಯಾಘಾತ, ಪರಿಧಮನಿ ಬೈಪಾಸ್ ಮತ್ತು ಗಂಟಲೂತ ಸಂಬಂಧಪಟ್ಟ ಕಾಯಿಲೆಗಳು ಲೈಂಗಿಕ ಚಟುವಟಿಕೆ ಕಡಿಮೆಯಾಗಿರುವುದಕ್ಕೆ ಸಂಪರ್ಕವನ್ನು ಪಡೆದುಕೊಂಡಿದ್ದು, ಹೃದಯ ಅಂಶಗಳು ಇದರ ಮೇಲೆ ಪ್ರಭಾವವನ್ನು ಬೀರಿಲ್ಲ ಎಂಬುದಾಗಿ ತಿಳಿಸಿದ್ದಾರೆ. ಹೆಚ್ಚುವರಿಯಾಗಿ, ಕಡಿಮೆ ಲೈಂಗಿಕ ಚಟುವಟಿಕೆಯನ್ನು ಹೊಂದಿರುವ ಮಹಿಳೆಯರು ಪರಿಧಮನಿ ಕಾಯಿಲೆಯನ್ನು ಹೊಂದಿರುವ ಸಾಧ್ಯತೆ ಇದೆ ಎಂಬುದಾಗಿ ಅಧ್ಯಯನಕಾರರು ತಿಳಿಸಿದ್ದಾರೆ.

ಮಹಿಳೆಯರಲ್ಲಿ ಮೆಟಬಾಲಿಕ್ ಸಿಂಡ್ರೋಮ್ ಹೃದಯ ಸಂಬಂಧಿ ಸಮಸ್ಯೆಗಳಿಗಿಂತಲೂ ಹೆಚ್ಚು ಪರಿಧಮನಿ ಕಾಯಿಲೆಗಳನ್ನು ಉಂಟುಮಾಡುವಂತಿರುತ್ತದೆ ಎಂಬುದಾಗಿ ಎಲಿಜಬೆತ್ ಬ್ಯಾರೆಟ್ ತಿಳಿಸಿದ್ದಾರೆ. ಕೆಲವೊಮ್ಮೆ ಹೃದಯ ರಕ್ತನಾಳಗಳು ಕಡಿಮೆ ಲೈಂಗಿಕ ಚಟುವಟಿಕೆಗಳಿಗೆ ಕಾರಣವಾಗಿದ್ದು, ಹೃದಯಾಘಾತ, ಕಡಿಮೆ ರಕ್ತಪರಿಚಲನೆ ಮತ್ತು ಪಾರ್ಶ್ವವಾಯು ಮೊದಲಾದ ರೋಗಗಳು ಈ ಹಿಂದೆ ಇದ್ದಲ್ಲಿ ಇದಕ್ಕೂ ಲೈಂಗಿಕ ಚಟುವಟಿಕೆಗಳಿಗೂ ಯಾವುದೇ ಸಂಬಂಧವಿಲ್ಲ ಎಂಬುದಾಗಿ ಅಧ್ಯಯನಕಾರರು ತಿಳಿಸಿದ್ದಾರೆ.

ಈಸ್ಟ್ರೋಜನ್ ಮಟ್ಟಗಳ ಇಳಿಕೆಯು ಲೈಂಗಿಕ ಹಾರ್ಮೋನುಗಳನ್ನು ಬಂಧಿಸುವ ಗ್ಲಾಬ್ಯುಲಿನ್ ಮತ್ತು ಟೆಸ್ಟೋಸ್ಟೆರಾನ್ ಅನ್ನು ಇಳಿಕೆ ಮಾಡುವ ಸಾಧ್ಯತೆ ಇದೆ ಇದರಿಂದಾಗಿ ಲೈಂಗಿಕ ಬಯಕೆ ಅಥವಾ ಚಟುವಟಿಕೆ ಎರಡೂ ಕಡಿಮೆಯಾಗುವ ಸಾಧ್ಯತೆ ಇರುತ್ತದೆ ಎಂಬುದಾಗಿ ಟ್ರಮ್ ಪೀಟರ್ ತಿಳಿಸಿದ್ದಾರೆ. ಋತುಚಕ್ರದಲ್ಲಿ ಏರುಪೇರು-ಮರೆಯದೇ ಈ ಟಿಪ್ಸ್ ಪಾಲಿಸಿ

ಈ ಹೊಸ ಅಧ್ಯಯನದಿಂದ ತಿಳಿದು ಬರುವ ಅಂಶವೆಂದರೆ ಲೈಂಗಿಕ ತೃಪ್ತಿ ಕಡಿಮೆಯಾಗುವ ಅಂಶದ ಮೇಲೆ ಮೆಟಬಾಲಿಕ್ ಸಿಂಡ್ರೋಮ್ ಪ್ರಭಾವವನ್ನು ಬೀರಿದ್ದು ಋತುಬಂಧಕ್ಕೊಳಗಾದ ಮಹಿಳೆಯರು ಈ ಸಮಸ್ಯೆಯನ್ನು ಎದುರಿಸಲಿದ್ದಾರೆ. ಕಡಿಮೆ ಲೈಂಗಿಕ ಚಟುವಟಿಕೆಯನ್ನು ಹೊಂದಿರುವ ಮಹಿಳೆಯರಲ್ಲಿ, ಪರಿಧಮನಿ ಕಾಯಿಲೆ ಕಂಡುಬಂದಿದ್ದು, ಹೃದಯಾಘಾತವಾಗಿದ್ದ ಮಹಿಳೆಯರಲ್ಲಿ, ಪರಿಧಮನಿ ಬೈಪಾಸ್ ಕಸಿ, ಗಂಟಲೂತ ಇರುವ ಸ್ತ್ರೀಯರಲ್ಲಿ ಕೂಡ ಲೈಂಗಿಕ ಚಟುವಟಿಕೆ ಕಡಿಮೆಯಾಗುತ್ತದೆ ಎಂಬುದಾಗಿ ವರದಿ ತಿಳಿಸಿದೆ.

(IANS ಪ್ರಕಟಿತ)

English summary

Sexual Desire To Be Lower In Post Menopausal Women: Study Proves

Postmenopausal women with metabolic syndrome report lower sexual activity, desire and sexual satisfaction, according to a new report. According to a new study published in The American Journal of Medicine, researchers looked at the role metabolic syndrome and cardiovascular disease play in postmenopausal women's sexual health.Sexual Desire
X
Desktop Bottom Promotion