For Quick Alerts
ALLOW NOTIFICATIONS  
For Daily Alerts

ದಣಿದ ಕಣ್ಣುಗಳಿಗೆ, ತ್ವರಿತ ಸಾಂತ್ವನ ನೀಡುವ ಮನೆಮದ್ದು

By Super
|

ನಮ್ಮ ದೇಹದ ಅತಿ ಸೂಕ್ಷ್ಮ ಅಂಗಗಳಲ್ಲಿ ಕಣ್ಣುಗಳು ಪ್ರಮುಖವಾಗಿವೆ. ಕಣ್ಣಿಗೆ ಹೆಚ್ಚಿನ ಕಾಳಜಿ ಮತ್ತು ಆರೈಕೆಯ ಅಗತ್ಯವಿದೆ. ಆದರೆ ಕೆಲವು ವಿಷಯಗಳ ಮೇಲೆ ನಮ್ಮ ಯಾವುದೇ ನಿಯಂತ್ರಣವಿಲ್ಲದ ಕಾರಣ ಕಣ್ಣುಗಳು ಹೆಚ್ಚು ಬಳಲುತ್ತವೆ. ಉದಾಹರಣೆಗೆ ಗಾಳಿಯಲ್ಲಿನ ಪ್ರದೂಷಣೆ, ಧೂಳು, ಉರಿ ತರಿಸುವ ಕಣಗಳು, ಹೊಗೆ ಪ್ರಖರ ಬೆಳಕು, ರಾತ್ರಿ ಹೊತ್ತು ರಾಚುವ ಮುಂದಿನ ವಾಹನಗಳ ಹೆಡ್ ಲೈಟುಗಳು ಇತ್ಯಾದಿ.

ಇನ್ನೂ ಕೆಲವು ನಮ್ಮ ಕೈಯಲ್ಲಿ ನಿಯಂತ್ರಣ ಇರುವಂತಹವು ಅಂದರೆ ಕಾಂಟ್ಯಾಕ್ಟ್ ಲೆನ್ಸ್ ಧರಿಸಿರುವ ಅವಧಿ, ಹೆಚ್ಚು ಹೊತ್ತು ಟೀವಿ ಕಂಪ್ಯೂಟರ್ ಪರದೆಗಳನ್ನು ವೀಕ್ಷಿಸುವುದು, ನಿದ್ದೆಯ ಕೊರತೆ, ನೀರಿನ ಪ್ರಮಾಣದಲ್ಲಿ ಕೊರತೆ, ಕೆಲವು ಔಷಧಿಗಳ ಅಡ್ಡಪರಿಣಾಮಗಳು, ಹೆಚ್ಚು ಹೊತ್ತು ಮೊಬೈಲು ಸ್ಕ್ರೀನ್ ಅನ್ನು ಹತ್ತಿರದಿಂದ ನೋಡುವುದು ಇತ್ಯಾದಿಗಳು ಕಣ್ಣಿಗೆ ಉರಿ ಮತ್ತು ಅತೀವ ದಣಿವನ್ನು ನೀಡುತ್ತವೆ.

ದಣಿದ ಕಣ್ಣುಗಳು ದೈಹಿಕವಾಗಿ ಕಿರಿಕಿರಿಯುಂಟು ಮಾಡುವುದು ಮಾತ್ರವಲ್ಲ ಮುಖದ ಸೌಂದರ್ಯವನ್ನೂ ಕುಗ್ಗಿಸುತ್ತವೆ. ದಣಿದ ಕಣ್ಣುಗಳಿಂದ ಎಲ್ಲೂ ಹೋಗಲು ಮನಸ್ಸಾಗದೇ ಪ್ರಮುಖ ಕಾರ್ಯಕ್ರಮಗಳಿಂದ ವಂಚಿತರಾಗಲೂ ಬಹುದು. ಇದು ಇಂದಿನ ದಿನಗಳಲ್ಲಿ ಹೆಚ್ಚು ಸಾಮಾನ್ಯವಾಗುತ್ತಾ ಹೋಗಿದೆ. ದಣಿದ ಕಣ್ಣುಗಳ ಕುರುಹುಗಳೆಂದರೆ ಕಣ್ಣುಗಳು ಭಾರವಾಗಿರುವುದು, ಒಣದಾಗಿರುವುದು, ಕೆಂಪಗಾಗಿರುವುದು, ಸತತವಾಗಿ ನೀರು ಹರಿಯುತ್ತಿರುವುದು, ಇದರೊಂದಿಗೆ ಕಾಡುವ ತಲೆನೋವು, ವ್ಯಾಕುಲತೆ ಇತ್ಯಾದಿಗಳು.

ಈ ತೊಂದರೆಗಳಿಗೆ ನಿಸರ್ಗ ಹಲವು ಮೂಲಿಕೆಗಳ ಮೂಲಕ ಶಮನವನ್ನು ನೀಡಿದೆ. ಅದರಲ್ಲೂ ಕೆಲವು ದಣಿದ ಕಣ್ಣುಗಳಿಗೆ ತಕ್ಷಣವೇ ಪರಿಹಾರ ನೀಡುವ ಕ್ಷಮತೆ ಹೊಂದಿವೆ. ಇಂತಹ ಕೆಲವು ನೈಸರ್ಗಿಕ ಗಿಡಮೂಲಿಕೆಗಳ ಬಗ್ಗೆ ಬೋಲ್ಡ್ ಸ್ಕೈ ತಂಡ ಹಲವು ಮಹತ್ವದ ಸಂಗತಿಗಳನ್ನು ಸಂಗ್ರಹಿಸಿದ್ದು ದಣಿದ ಕಣ್ಣುಗಳಿಗೆ ತಕ್ಷಣ ಉತ್ತಮ ಪರಿಹಾರ ನೀಡಲು ಉಪಯುಕ್ತ ಮಾಹಿತಿಗಳನ್ನು ಕೆಳಗಿನ ಸ್ಲೈಡ್ ಶೋ ಮೂಲಕ ಪ್ರಸ್ತುತಪಡಿಸಲು ಹರ್ಷಿಸುತ್ತಿದೆ...

ಸೌತೆಕಾಯಿ

ಸೌತೆಕಾಯಿ

ದಣಿದ ಮತ್ತು ಉರಿಯುವ ಕಣ್ಣುಗಳಿಗೆ ಎಳೆಯ ಸೌತೆಕಾಯಿ ಒಂದು ಅದ್ಭುತ ನೈಸರ್ಗಿಕ ಶಮನಕಾರಿಯಾಗಿದೆ. ಇದು ದಣಿದ ಕಣ್ಣುಗಳಿಗೆ ಆರಾಮ ನೀಡುವ ಜೊತೆಗೇ ಉರಿಯುವ ಕಣ್ಣುಗಳಿಗೆ ತಂಪನ್ನೂ ನೀಡುತ್ತದೆ. ಇದಕ್ಕಾಗಿ ಎರಡು ತೆಳುವಾದ ಎಳೆ ಸೌತೆಕಾಯಿಯ ಬಿಲ್ಲೆಗಳನ್ನು ಫ್ರಿಜ್ಜಿನಲ್ಲಿರಿಸಿ ತಣಿಸಿ. ದಣಿದ ಕಣ್ಣುಗಳ ಮೇಲೆ ಈ ಬಿಲ್ಲೆಗಳನ್ನಿರಿಸಿ ಕೊಂಚಕಾಲ ಹಾಗೇ ಬಿಡಿ. ಬಳಿಕ ನಿವಾರಿಸಿ.

ಹರಳೆಣ್ಣೆ

ಹರಳೆಣ್ಣೆ

ದಣಿದ ಕಣ್ಣುಗಳಿಗೆ ಹರಳೆಣ್ಣೆಯೂ ಉತ್ತಮ ಪರಿಹಾರ ನೀಡುತ್ತದೆ. ಇದಕ್ಕಾಗಿ ಒಂದು ಚಿಕ್ಕ ತೊಟ್ಟು ಹರಳೆಣ್ಣೆಯನ್ನು ಕಣ್ಣಿನೊಳಗೆ ಹಾಕಿ ಕಣ್ಣು ಮಿಟುಕಿಸಿ ಕೊಂಚ ಹೊತ್ತು ಮುಚ್ಚಿ ಇರಿಸಿ. ಬಳಿಕ ತಣ್ಣೀರಿನಿಂದ ಕಣ್ಣುಗಳನ್ನು ತೊಳೆದುಕೊಳ್ಳಿ. ಈ ವಿಧಾನ ಉರಿಯುವ ಕಣ್ಣುಗಳಿಗೆ ಅತ್ಯುತ್ತಮವಾದ ಪರಿಹಾರ ನೀಡುತ್ತದೆ.

ಅಡುಗೆ ಸೋಡಾ

ಅಡುಗೆ ಸೋಡಾ

ಕೊಂಚ ವಿಚಿತ್ರವೆನಿಸಿದರೂ ಕಣ್ಣುಗಳ ಸೋಂಕು ನಿವಾರಿಸಲು ಅಡುಗೆ ಸೋಡಾ ಸಕ್ಷಮವಾಗಿದೆ. ವಿಶೇಷವಾಗಿ ಧೂಳು, ಸೂಕ್ಷ್ಮಾಣುಗಳ ಮೂಲಕ ಸೋಂಕು ಉಂಟಾಗಿದ್ದು ಉರಿ, ಕೆಂಪಗಾಗಿರುವ ಕಣ್ಣುಗಳಿಗೆ ಇದು ಉತ್ತಮ ಪರಿಹಾರವಾಗಿದೆ. ಒಂದು ಲೋಟ ತಣ್ಣೀರಿಗೆ ಚಿಟಿಕೆಯಷ್ಟು ಅಡುಗೆ ಸೋಡಾ ಹಾಕಿ ಮಿಶ್ರಣ ಮಾಡಿ. ಈ ನೀರಿನಿಂದ ಕಣ್ಣನ್ನು ತೊಳೆದುಕೊಳ್ಳಿ. ಈ ನೀರು ಕಣ್ಣುಗಳ ಒಳಗೆ ಹೋಗುವಂತೆ ನೋಡಿಕೊಳ್ಳಿ. ಸಾಧ್ಯವಾದರೆ ಈ ನೀರಿನೊಳಗೆ ಕಣ್ಣನ್ನು ಮುಳುಗಿಸಿ ಮಿಟುಕಿಸಿ. ಈ ವಿಧಾನವನ್ನು ನಿಯಮಿತವಾಗಿ ಅನುಸರಿಸುತ್ತಿದ್ದರೆ ಕಣ್ಣುಗಳ ತುರಿಕೆಯೂ ನಿವಾರಣೆಯಾಗುತ್ತದೆ.

ಶಿರ್ಕಾ

ಶಿರ್ಕಾ

ಶಿರ್ಕಾ ಒಂದು ಉತ್ತಮ ಪ್ರತಿಜೀವಕ ಮತ್ತು ಬ್ಯಾಕ್ಟೀರಿಯಾನಿವಾರಕವಾಗಿದೆ. ಈ ಗುಣಗಳು ಕಣ್ಣಿನ ಯಾವುದೇ ಸೋಂಕುಗಳಿಗೆ ಉತ್ತಮ ಪರಿಹಾರ ನೀಡಬಲ್ಲವು. ಇದಕ್ಕಾಗಿ ಒಂದು ಲೋಟ ತಣ್ಣೀರಿಗೆ ಒಂದು ಚಿಕ್ಕ ಚಮಚದಷ್ಟು ಬಿಳಿಯ ಶಿರ್ಕಾ ಹಾಕಿ ಈ ನೀರಿನಿಂದ ಕಣ್ಣುಗಳನ್ನು ತೊಳೆದುಕೊಳ್ಳಿ.ನಿತ್ಯವೂ ಎರಡು ಬಾರಿ ಅನುಸರಿಸುವ ಮೂಲಕ ಕಣ್ಣುಗಳ ತುರಿಕೆಯೂ ಕಡಿಮೆಯಾಗುತ್ತದೆ.

ತಣ್ಣನೆಯ ಹಾಲು

ತಣ್ಣನೆಯ ಹಾಲು

ಹಾಲಿನಲ್ಲಿರುವ ಪೋಷಕಾಂಶಗಳು ಕಣ್ಣುಗಳ ತುರಿಕೆಯನ್ನು ನಿವಾರಿಸಲು ಸಮರ್ಥವಾಗಿವೆ. ಕೊಂಚ ಹಸಿಹಾಲನ್ನು ಫ್ರಿಜ್ಜಿನಲ್ಲಿಟ್ಟು ಸರಿಸುಮಾರು ಮಂಜುಗಡ್ಡೆಯಾಗುವಷ್ಟು ತಣಿಸಿ. ಈ ತಣ್ಣನೆಯ ಹಾಲಿನಲ್ಲಿ ಹತ್ತಿಯುಂಡೆಯೊಂದನ್ನು ಮುಳುಗಿಸಿ ಕಣ್ಣಿನ ಮೇಲೆ ಮತ್ತು ಕಣ್ಣಿನ ಸುತ್ತ ಇರುವ ಭಾಗವನ್ನು ಹೆಚ್ಚಿನ ಒತ್ತಡವಿಲ್ಲದೇ ಒರೆಸಿ. ಈ ವಿಧಾನದಿಂದ ಕಣ್ಣಿನ ತುರಿಕೆ ಮಾಯವಾಗುತ್ತದೆ.

ಹಸಿ ಆಲುಗಡ್ಡೆ

ಹಸಿ ಆಲುಗಡ್ಡೆ

ಕಣ್ಣುಗಳ ತುರಿಕೆಯ ನಿವಾರಣೆಗೆ ಉತ್ತಮವಾದ ಇನ್ನೊಂದು ವಿಧಾನವೆಂದರೆ ಹಸಿ ಆಲುಗಡ್ಡೆಯ ಬಳಕೆ. ಎರಡು ತೆಳುವಾಗಿ ಕತ್ತರಿಸಿದ ಆಲುಗಡ್ಡೆಯ ಬಿಲ್ಲೆಗಳನ್ನು ಮುಚ್ಚಿದ ಕಣ್ಣುಗಳ ಮೇಲಿರಿಸಿ ಕೊಂಚ ಹೊತ್ತಿನ ಬಳಿಕ ತಣ್ಣೀರಿನಿಂದ ತೊಳೆದುಕೊಂಡರೆ ದಣಿದ ಕಣ್ಣುಗಳಿಗೆ ಆರಾಮ ದೊರಕುತ್ತದೆ.

English summary

Quick Remedies For Tired And Itchy Eyes

Eyes are one of the sensitive body parts that require the right care. Proper care has to be taken to maintain a good eye health. However, pollution and environmental factors, use of contact lenses, watching television, lack of sleep, irritation, dehydration, medications and a prolonged use of computer and mobile can make the eyes tired. Therefore, in this article, we at Boldsky will be listing out some of the easy and effective methods to soothe tired and itchy eyes. Read on to know more about it.
X
Desktop Bottom Promotion