For Quick Alerts
ALLOW NOTIFICATIONS  
For Daily Alerts

ಆಪಲ್ ಸೈಡರ್ ವಿನೆಗರ್‌ನ ಹತ್ತಾರು ಅನುಕೂಲಗಳು...

By Super
|

ಸೇಬಿನ ಶಿರ್ಕಾ ಅಥವಾ ಆಪಲ್ ಸೈಡರ್ ವಿನೆಗರ್ (apple cider vinegar) ನ ಉಪಯೋಗ ಏನೆಂದು ಕೇಳಿದರೆ ಸಾಧಾರಣವಾಗಿ ಶಿರ್ಕಾ ಉಪಯೋಗಿಸುವ ಬದಲಿಗೆ ಇದನ್ನು ಉಪಯೋಗಿಸುವುದನ್ನೇ ಉದಾಹರಿಸುತ್ತಾರೆ. ಆದರೆ ವಾಸ್ತವವಾಗಿ ಇದರಲ್ಲಿ ಹುಳಿರುಚಿ ನೀಡುವುದಕ್ಕಿಂತಲೂ ಹೆಚ್ಚಾಗಿ ಆರೋಗ್ಯವೃದ್ಧಿ ಗುಣಗಳಿವೆ. ಆಪಲ್ ಸೈಡರ್ ವಿನೆಗರ್ ಎಂಬ ಸೌಂದರ್ಯದ ಗಣಿ...

ವಿಶೇಷವಾಗಿ ಬಿಕ್ಕಳಿಗೆ, ಶೀತ ಮತ್ತು ಸಂಧಿವಾತದಿಂದ ಬಳಲುತ್ತಿರುವವರಿಗೆ ಶಮನ, ಅಸ್ತಮಾದಿಂದ ಬಳಲುತ್ತಿರುವವರ ಶ್ವಾಸ ನಿರಾಳಗೊಳಿಸುವುದು ಮೊದಲಾದವು ಇದರ ಅಪಾರವಾದ ಆರೋಗ್ಯಕರ ಪ್ರಯೋಜನಗಳು. ಆದರೆ ಇವುಗಳಲ್ಲಿ ಯಾವೊಂದು ವಿಧಾನವನ್ನು ಅನುಸರಿಸಬೇಕಾದರೂ ನಿಮ್ಮ ಕುಟುಂಬ ವೈದ್ಯರ ಸಲಹೆ ಪಡೆದು ಅಂತೆಯೇ ಮುಂದುವರೆಯುವುದು ಸೂಕ್ತ. ಬನ್ನಿ ಇದರ ಆರೋಗ್ಯಕರ ಗುಣಗಳಲ್ಲಿ ಪ್ರಮುಖವಾದವುಗಳನ್ನು ನೋಡೋಣ...

ಏನಿದು ಆಪಲ್ ಸೈಡರ್ ವಿನೆಗರ್?

ಏನಿದು ಆಪಲ್ ಸೈಡರ್ ವಿನೆಗರ್?

ಆಪಲ್ ಸೈಡರ್ ವಿನೆಗರ್ (ಆಪಲ್ ಸೈಡರ್ ವಿನೆಗರ್ ) ಸೇಬುಗಳನ್ನು ಹುಳಿಬರಿಸಿ ತಯಾರಿಸಲಾಗುವ ಒಂದು ಕಂದು ಬಣ್ಣದ ದ್ರವ. ಆಪಲ್ ಸೈಡರ್ ವಿನೆಗರ್ ಅನ್ನು ಹಲವಾರು ರೋಗಗಳನ್ನು ಗುಣಪಡಿಸಲು ಮತ್ತು ಸೋಂಕುಗಳಾದ ಸೈನುಟಿಸ್ (ಮೂಗಿನ ಸೈನಸ್ ನ ಉದ್ರೇಕ) ಜ್ವರ, ಮತ್ತು ಫ್ಲೂ ಮೊದಲಾದವುಗಳನ್ನು ಗುಣಪಡಿಸಲು ಸಾವಿರಾರು ವರ್ಷಗಳ ಹಿಂದಿನಿಂದ ಬಳಸಲಾಗುತ್ತಿದೆ. ಪ್ರತಿದಿನ ಆಪಲ್ ಸೈಡರ್ ವಿನೆಗರ್ ಕುಡಿಯುವುದರಿಂದ ಜೀರ್ಣಕ್ರಿಯೆ ಸುಧಾರಿಸಲು ಮತ್ತು ಖಿನ್ನತೆ, ಆಯಾಸ, ಸಂಧಿವಾತದಂತಹ ಅನೇಕ ದೀರ್ಘಕಾಲದ ಕಾಯಿಲೆಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ ಅಷ್ಟೇ ಅಲ್ಲದೆ, ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಇದು ಸಹಾಯಕ

ಸಂಧಿವಾತದಿಂದ ಬಳಲುತ್ತಿರುವವರಿಗೆ...

ಸಂಧಿವಾತದಿಂದ ಬಳಲುತ್ತಿರುವವರಿಗೆ...

ಸಂಧಿವಾತದಿಂದ ಬಳಲುತ್ತಿರುವರು ಈ ವಿಧಾನವನ್ನು ಪ್ರಯತ್ನಿಸಬಹುದು. ಐದು ಚಮಚ ಸೇಬಿನ ಶಿರ್ಕಾ ಮತ್ತು ಐದು ಚಮಚ ಜೇನುತುಪ್ಪವನ್ನು ಮಿಶ್ರಣ ಮಾಡಿ ಈ ಮಿಶ್ರಣವನ್ನು ನೋವಿರುವ ಮೂಳೆಗಂಟುಗಳ ಮೇಲೆ ಹಚ್ಚಿ ಒಣಗಿಸಿ ಕೊಂಚ ಕಾಲದ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಬೇಕು.

ಸಂಧಿವಾತದಿಂದ ಬಳಲುತ್ತಿರುವವರಿಗೆ...

ಸಂಧಿವಾತದಿಂದ ಬಳಲುತ್ತಿರುವವರಿಗೆ...

ಇನ್ನು ಒಂದು ಲೋಟ ತಣ್ಣೀರಿನಲ್ಲಿ ಎರಡು ಚಮಚ ಜೇನು ಮತ್ತು ಎರಡು ಚಮಚ ಸೇಬಿನ ಶಿರ್ಕಾ ಸೇರಿಸಿ ಮಿಶ್ರಣ ಮಾಡಿ. ಈ ನೀರನ್ನು ದಿನದಲ್ಲಿ ಎರಡರಿಂದ ಮೂರು ಬಾರಿ ಕುಡಿಯಿರಿ. ಇದರ ಜೊತೆಗೇ ಸೇಬಿನ ಶಿರ್ಕಾ ಸೇರಿಸಿದ ನೀರಿನಲ್ಲಿ ನೋವಿರುವ ಗಂಟುಗಳಿರುವ ಭಾಗವನ್ನು ಐದರಿಂದ ಏಳು ನಿಮಿಷ ಮುಳುಗಿರುವಂತೆ ಮಾಡಿದಾಗಲೂ ನೋವು ಕಡಿಮೆಯಾಗುತ್ತದೆ. ಪರ್ಯಾಯವಾಗಿ ಕೊಂಚ ಸೇಬಿನ ಶಿರ್ಕಾ ಸೇರಿಸಿದ ನೀರಿನಲ್ಲಿ ಬಟ್ಟೆ ಅಥವಾ ಹತ್ತಿಯ ದೊಡ್ಡ ಉಂಡೆಯನ್ನು ಮುಳುಗಿಸಿ ನೋವಿರುವ ಭಾಗದ ಮೇಲೆ ಇಟ್ಟು ಇದರ ಮೇಲೆ ಒಣ ಬಟ್ಟೆಯೊಂದನ್ನು ಇಟ್ಟು ಕೊಂಚ ಕಾಲ ಹಾಗೇ ಬಿಡಿ. ಕೊಂಚ ಹೊತ್ತಿನ ಬಳಿಕ ನಿವಾರಿಸಿ ತಣ್ಣೀರಿನಿಂದ ತೊಳೆದುಕೊಂಡು ಬಟ್ಟೆಯಿಂದ ಒರೆಸಿಕೊಳ್ಳಿ.

ಮೂಗಿನಲ್ಲಿ ರಕ್ತ ಬರುತ್ತಿದ್ದರೆ

ಮೂಗಿನಲ್ಲಿ ರಕ್ತ ಬರುತ್ತಿದ್ದರೆ

ಬೇಸಿಗೆಯಲ್ಲಿ ಮೂಗಿನ ಒಳಭಾಗದ ಸೂಕ್ಷ್ಮ ಚರ್ಮ ಹರಿದು ರಕ್ತ ಒಸರುವ ಸಮಸ್ಯೆ ಸಾಮಾನ್ಯವಾಗಿದೆ. ಇದಕ್ಕಾಗಿ ಒಂದು ಚಿಕ್ಕ ಲೋಟ ನೀರಿಗೆ ಎರಡು ಚಮಚ ಸೇಬಿನ ಶಿರ್ಕಾ ಸೇರಿಸಿ ದಿನಕ್ಕೆ ಎರಡು ಬಾರಿ ಕುಡಿಯುತ್ತಾ ಬನ್ನಿ. ಇದರಿಂದ ದೇಹದ ನೈಸರ್ಗಿಕ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಹಾಗೂ ಮೂಗಿನಲ್ಲಿ ರಕ್ತ ಬರುವುದು ಕಡಿಮೆಯಾಗುತ್ತದೆ.

ದಣಿದ ಕಣ್ಣುಗಳಿಗೆ

ದಣಿದ ಕಣ್ಣುಗಳಿಗೆ

ಒಂದು ಲೋಟ ತಣ್ಣೀರಿಗೆ ಎರಡು ಚಮಚ ಜೇನು ಮತ್ತು ಎರಡು ಚಮಚ ಸೇಬಿನ ಶಿರ್ಕಾ ಸೇರಿಸಿ ಕುಡಿಯಿರಿ. ಇದರಿಂದ ದಣಿದ ಕಣ್ಣುಗಳಿಗೆ ಆರಾಮ ದೊರಕುತ್ತದೆ.

ಬಿಕ್ಕಳಿಕೆ ಕಡಿಮೆಗೊಳಿಸಲು

ಬಿಕ್ಕಳಿಕೆ ಕಡಿಮೆಗೊಳಿಸಲು

ಸೇಬಿನ ಶಿರ್ಕಾದ ಹುಳಿಯಾದ ರುಚಿ ಮತ್ತು ಕೊಂಚ ಕ್ಷಾರೀಯ ಗುಣ ಗಂಟಲಿನಲ್ಲಿರುವ ನರಗಳನ್ನು ಪ್ರಚೋದಿಸುವ ಮೂಲಕ ಬಿಕ್ಕಳಿಕೆಯನ್ನು ನಿವಾರಿಸಲು ನೆರವಾಗುತ್ತದೆ. ಬಿಕ್ಕಳಿಕೆ ಇದ್ದಾಗ ಕೇವಲ ಒಂದು ಚಿಕ್ಕ ಚಮಚ ಸೇಬಿನ ಶಿರ್ಕಾವನ್ನು ನೇರವಾಗಿ ಗಂಟಲಿನಲ್ಲಿ ಸುರಿದುಕೊಳ್ಳಿ. ಬಿಕ್ಕಳಿಕೆ ಮಾಯವಾಗುತ್ತದೆ.

ಆಯಾಸ ಪರಿಹಾರಕ್ಕೆ

ಆಯಾಸ ಪರಿಹಾರಕ್ಕೆ

ಒಂದು ಕಪ್ ನಲ್ಲಿ ಹತ್ತು ಚಮಚ ಜೇನು ಮತ್ತ್ತುಐದು ಚಮಚ ಸೇಬಿನ ಶಿರ್ಕಾ ಸೇರಿಸಿ ಕಲಕಿ ಬಾಟಲಿಯಲ್ಲಿ ಸಂಗ್ರಹಿಸಿ. ರಾತ್ರಿ ಮಲಗುವ ಮುನ್ನ ಕೊಂಚ ಪ್ರಮಾಣವನ್ನು ಸೇವಿಸಿ ಮಲಗುವ ಮೂಲಕ ದಿನದ ಆಯಾಸವೆಲ್ಲಾ ಪರಿಹಾರವಾಗುತ್ತದೆ.

ಅಸ್ತಮಾ ನಿವಾರಣೆಗೆ

ಅಸ್ತಮಾ ನಿವಾರಣೆಗೆ

ಒಂದು ಲೋಟ ನೀರಿಗೆ ಒಂದು ಚಮಚ ಸೇಬಿನ ಶಿರ್ಕಾ ಸೇರಿಸಿ ಕಲಕಿ. ಈ ನೀರನ್ನು ಪ್ರತಿ ಅರ್ಧಘಂಟೆಗೊಂದು ಬಾರಿ ಚಿಕ್ಕ ಪ್ರಮಾಣದಲ್ಲಿ ಗುಟುಕು ಗುಟುಕಾಗಿ ಹೀರುತ್ತಾ ಇರಿ. ಇದರಿಂದ ಅಸ್ತಮಾದ ತೊಂದರೆ ನಿಧಾನವಾಗಿ ಕಡಿಮೆಯಾಗುತ್ತಾ ಬರುತ್ತದೆ.

ಗಾಯಗಳು ಶೀಘ್ರವಾಗಿ ಮಾಗಲು

ಗಾಯಗಳು ಶೀಘ್ರವಾಗಿ ಮಾಗಲು

ಕೆಲವೊಮ್ಮೆ ಗಾಯಗಳು ಬೇಗನೇ ಮಾಗುವುದೇ ಇಲ್ಲ. ಇದನ್ನು ಬೇಗನೇ ಮಾಗುವಂತೆ ಮಾಡಲು ಒಂದು ಲೋಟ ನೀರಿಗೆ ಎರಡು ಚಮಚ ಸೇಬಿನ ಶಿರ್ಕಾ ಸೇರಿಸಿ ದಿನಕ್ಕೆರಡು ಬಾರಿ ಊಟದ ಜೊತೆಗೆ ಸೇವಿಸಿ.

ಚರ್ಮದ ತುರಿಕೆಗೆ..

ಚರ್ಮದ ತುರಿಕೆಗೆ..

ಎಕ್ಸಿಮಾ ಎಂಬ ಚರ್ಮರೋಗವಿದ್ದು ತುರಿಕೆ ಅಪಾರವಾಗಿದ್ದರೆ ಒಂದು ಕಪ್ ನೀರಿನಲ್ಲಿ ಕೆಲವು ಚಮಚ ಸೇಬಿನ ಶಿರ್ಕಾ ಸೇರಿಸಿ ರೋಗ ಆವರಿಸಿದ ಚರ್ಮದ ಭಾಗದ ಮೇಲೆ ಹಚ್ಚಿಕೊಳ್ಳಿ. ಇದರ ಜೊತೆಗೇ ಒಂದು ಲೋಟ ನೀರಿನಲಿ ಮೂರು ಚಮಚ ಸೇಬಿನ ಶಿರ್ಕಾ ಸೇರಿಸಿ ದಿನಕ್ಕೆರಡು ಬಾರಿ ಕುಡಿಯಿರಿ. ಇವೆರಡೂ ವಿಧಾನಗಳನ್ನು ಅನುಸರಿಸುವ ಮೂಲಕ ಚರ್ಮದ ತೊಂದರೆ ಶೀಘ್ರವಾಗಿ ಕಡಿಮೆಯಾಗುತ್ತದೆ.

English summary

Other Healing Uses Of Apple Cider Vinegar

Most of us don't know the other side of apple cider vinegar. Yes, it has some healing properties too. It can cure hiccups, cold and also helps people suffering from arthritis and asthma in some ways. Here are some remedies. But before trying them, discuss with your doctor first to be on the safer side.
X
Desktop Bottom Promotion