For Quick Alerts
ALLOW NOTIFICATIONS  
For Daily Alerts

ಕೊಬ್ಬನ್ನು ಕರಗಿಸುವ ರಹಸ್ಯ- ಜಿಮ್ ಟ್ರೈನರ್‌ರಿಂದ ಬಹಿರಂಗ!

By Deepak M
|

ಸ್ಥೂಲಕಾಯ ಆವರಿಸಿದ ಹೆಚ್ಚಿನವರ ಚಿಂತೆಯ ವಿಷಯವೆಂದರೆ ಅವರ ಉಡುಪುಗಳು ಬಿಗಿಯಾಗುತ್ತಾ ಹೋಗುವುದು. ಅದರಲ್ಲೂ ವಿಶೇಷವಾಗಿ ಸೊಂಟದ ಸುತ್ತಳತೆ ವಿಸ್ತಾರವಾಗುತ್ತಾ ಹೋಗುವ ಮೂಲಕ ಕೆಲವರಿಗೆ ತಮ್ಮ ನೆಚ್ಚಿನ ಮಧ್ಯಪಾನಗಳಿಗೆ ವಿದಾಯ ಹೇಳಬೇಕಾದ ಬೇಸರ! ನಿಮ್ಮ ಹೊಟ್ಟೆಯ ಕೊಬ್ಬನ್ನು 10 ದಿನಗಳಲ್ಲೇ ಕರಗಿಸಿಕೊಳ್ಳಿ!

ಸಾಮಾನ್ಯವಾಗಿ ಸೊಂಟದ ಸುತ್ತಳತೆಯನ್ನು ಕಡಿಮೆ ಮಾಡಿಕೊಳ್ಳುವುದು ಎಲ್ಲರ ಕನಸು. ಹಾಗಾಗಿ ಇವೆಲ್ಲಾ ಸಮಸ್ಯೆಗಳಿಂದ ಪಾರಾಗಲು, ನಾವು ಮೊದಲು ನೋಡುವುದು ಕೊಬ್ಬನ್ನು ಕರಗಿಸುವ ವ್ಯಾಯಾಮವನ್ನು. ಆಗಲೂ ಅದು ನಮಗೆ ಬಗ್ಗಲಿಲ್ಲವಾದಲ್ಲಿ ಜಿಮ್‌ಗೆ ಹೋಗಿ ಅದನ್ನು ಕರಗಿಸಲು ಶ್ರಮಪಡುತ್ತೇವೆ. ಹೊಟ್ಟೆಯ ಕೊಬ್ಬನ್ನು ಕರಗಿಸುವ ಸಮರ್ಥ ವ್ಯಾಯಮಗಳು

ಒಂದು ವೇಳೆ ನಿಮಗೂ ಸೊಂಟದಲ್ಲಿ ಕೊಬ್ಬು ಇದ್ದು, ಆ ಹಠಮಾರಿ ಕೊಬ್ಬು ನಿಮ್ಮ ಸೊಂಟದಿಂದ ಖಾಲಿ ಮಾಡಲು ನಿರಾಕರಿಸುತ್ತಿದ್ದಲ್ಲಿ, ಚಿಂತಿಸಬೇಡಿ. ನಿಮ್ಮ ಸೊಂಟವನ್ನು ಸರಿಯಾದ ರೂಪದಲ್ಲಿ ಟೋನ್ ಮಾಡಲು ನೀವು ಏನು ಮಾಡಬೇಕು ಎಂಬ ಸಲಹೆಯನ್ನು ಸಹ ಅವರು ನೀಡುತ್ತಾರೆ. ಬನ್ನಿ ಅದು ಏನು ಎಂದು ನಾವು ಸಹ ತಿಳಿದುಕೊಂಡು ಬರೋಣ...

ಮೊದಲು ಕಾರ್ಡಿಯೊ ಮಷಿನ್ ಬಳಸಬೇಡಿ

ಮೊದಲು ಕಾರ್ಡಿಯೊ ಮಷಿನ್ ಬಳಸಬೇಡಿ

ಏಕಾಏಕಿ ಜಿಮ್‌ಗೆ ಹೋದ ಕೂಡಲೆ ಕಾರ್ಡಿಯ್ ಮಷಿನ್ ಬಳಸಬೇಡಿ. ಏಕೆಂದರೆ ನಿಮ್ಮ ದೇಹದ ತೂಕವು ಈಗಾಗಲೇ ಹೆಚ್ಚಾಗಿದೆ, ನೀವು ಮೊದಲೇ ಸುಸ್ತಾಗಿದ್ದೀರಿ. ಹಾಗಾಗಿ ಇದು ಬೇಡ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಮೊದಲು ಕಾರ್ಡಿಯೊ ಮಷಿನ್ ಬಳಸಬೇಡಿ

ಮೊದಲು ಕಾರ್ಡಿಯೊ ಮಷಿನ್ ಬಳಸಬೇಡಿ

ಅದರ ಬದಲಿಗೆ ಸ್ಟ್ರೆಚ್ಚಿಂಗ್ ಮತ್ತು ತೂಕ ಎತ್ತುವ ವ್ಯಾಯಾಮಗಳನ್ನು ಮೊದಲು ಮಾಡಿ. ತೂಕ ಎತ್ತಲು ಮತ್ತು ಸಣ್ಣ ಸ್ನಾಯುಗಳನ್ನು ಬೆಳೆಸಲು ಬೇಕಾದ ಶಕ್ತಿ ನಿಮ್ಮ ಬಳಿ ಹೆಚ್ಚಾಗಿರುತ್ತದೆ.

ಹೈ-ಇಂಟೆನ್ಸಿಟೀ ಇಂಟರ್‌ವಲ್ ಟ್ರೈನಿಂಗ್‌ಗೆ ಬದಲಾಗಿ

ಹೈ-ಇಂಟೆನ್ಸಿಟೀ ಇಂಟರ್‌ವಲ್ ಟ್ರೈನಿಂಗ್‌ಗೆ ಬದಲಾಗಿ

ಬಸ್ಕಿಗಳು ಮತ್ತು ಕ್ರಂಚಸ್ ನಿಮಗೆ ಸೊಂಟದ ಕೊಬ್ಬನ್ನು ಕರಗಿಸಲು ಯಾವುದೇ ರೀತಿಯಲ್ಲಿ ಸಹಾಯ ಮಾಡುವುದಿಲ್ಲ. ಅದಕ್ಕಾಗಿ ಹೈ-ಇಂಟೆನ್ಸಿಟೀ ಇಂಟರ್‌ವಲ್ ಟ್ರೈನಿಂಗ್‌‍ನಲ್ಲಿ ಭಾಗವಹಿಸಿ. ಇದರಿಂದ ಸೊಂಟದ ಕೊಬ್ಬನ್ನು ಶೀಘ್ರವಾಗಿ ಕರಗಿಸಬಹುದು.

ತೂಕ ಇಳಿಸಲು ಉಪವಾಸ ಮಾಡಬೇಡಿ

ತೂಕ ಇಳಿಸಲು ಉಪವಾಸ ಮಾಡಬೇಡಿ

ಉಪವಾಸ ಮಾಡಿದರೆ ತೂಕ ಕರಗುತ್ತದೆ ಎಂಬುದು ಸುಳ್ಳು. ಅದಕ್ಕಾಗಿ ಉಪವಾಸ ಬೇಡ. ಒಂದು ವೇಳೆ ಉಪವಾಸವಿದ್ದಲ್ಲಿ, ದೇಹವು ನೀವು ಹಸಿವಿನಿಂದ ಇದ್ದೀರಿ ಎಂದು ಕ್ಯಾಲೋರಿಗಳನ್ನು ಉಳಿಸಲು ಪ್ರಯತ್ನಿಸುತ್ತದೆ. ಅದರ ಬದಲಿಗೆ ಅವುಗಳನ್ನು ವ್ಯಯಿಸುವ ಕೆಲಸಗಳನ್ನು ಮಾಡಿ. ಕ್ಯಾಲೋರಿ ಇಲ್ಲದ ಅಥವಾ ಋಣಾತ್ಮಕ ಕ್ಯಾಲೋರಿ ಇರುವ ಆಹಾರವನ್ನು ಸೇವಿಸಿ.

ಓಡಿ

ಓಡಿ

ಒಂದು ವೇಳೆ ನಿಮಗೆ ದೊಡ್ಡ ಗಾತ್ರವಿದ್ದಲ್ಲಿ, ಹೈ-ಇಂಟೆನ್ಸಿಟೀ ಕಾರ್ಡಿಯೊವ್ಯಾಸ್ಕ್ಯಲರ್ ವ್ಯಾಯಾಮವು ನಿಮಗೆ ಉತ್ತಮ ರೀತಿಯಲ್ಲಿ ಸಹಾಯ ಮಾಡಬಲ್ಲದು. ಇದಕ್ಕಾಗಿ ಓಡುವುದು ಒಳ್ಳೆಯ ವ್ಯಾಯಾಮವಾಗಿರುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಓಡಿ

ಓಡಿ

ಇದು ಸೊಂಟದ ಕೊಬ್ಬನ್ನು ಶೀಘ್ರವಾಗಿ ಕರಗಿಸಲು ಸಹಾಯ ಮಾಡುತ್ತದೆ. ಇದಕ್ಕಾಗಿ 20 ಸೆಕೆಂಡ್ ಓಟವನ್ನು 30-40 ಸೆಕೆಂಡ್‍ಗಳ ಜಾಗಿಂಗ್ ನಂತರ ಮಾಡಿ. ಇದನ್ನು ನಿರಂತರವಾಗಿ 12 ಬಾರಿ ಮಾಡಿ.

ಸ್ವಲ್ಪ ಸಮಯವಾದರು ಸರಿ ವ್ಯಾಯಾಮ ಮಾಡಿ

ಸ್ವಲ್ಪ ಸಮಯವಾದರು ಸರಿ ವ್ಯಾಯಾಮ ಮಾಡಿ

ಕಷ್ಟಪಟ್ಟು ವ್ಯಾಯಾಮ ಮಾಡಲಿಲ್ಲವಾದಲ್ಲಿ ಪ್ರಯೋಜನ ಇಲ್ಲ ಎಂದು ನೀವು ಭಾವಿಸಬಹುದು. ಆದರೆ ಅದು ಮುಖ್ಯವಲ್ಲ, ನೀವು ವ್ಯಾಯಾಮ ಮಾಡಿದಿರಾ ಇಲ್ಲವೇ? ಎಂಬುದೇ ಮುಖ್ಯ. ಹತ್ತು ನಿಮಿಷ ವ್ಯಾಯಾಮ ಮಾಡಿದರೂ ನಿಮ್ಮ ದೇಹದಲ್ಲಿರುವ ಹಲವಾರು ಕ್ಯಾಲೋರಿಗಳು ಕರಗುತ್ತವೆ. ಬಸ್ಕಿ ಹೊಡೆಯುವುದು ಮತ್ತು ಪ್ಲಾಂಕ್‍ಗಳನ್ನು ಮಾಡುವುದು, ನಡೆಯುವುದು ಸಹ ನಿಮ್ಮ ದೇಹದಲ್ಲಿರುವ ಕೊಬ್ಬನ್ನು ಕರಗಿಸಲು ನಿಮಗೆ ಸಹಾಯ ಮಾಡುತ್ತದೆ.

English summary

Losing belly fat: secrets from a gym trainer

You have been hitting the gym for a long time, but that stubborn belly fat just won’t budge. Fitness Expert, tells you what could be going wrong and what you should do to tone that paunch. have a look
X
Desktop Bottom Promotion