For Quick Alerts
ALLOW NOTIFICATIONS  
For Daily Alerts

ಊಟದ ನಂತರ ಸ್ನಾನ, ತೊಂದರೆಗೆ ಆಹ್ವಾನ!

By Manu
|

ಸಾಮಾನ್ಯವಾಗಿ ಕೆಲವೊಂದು ಸಂದರ್ಭಗಳಲ್ಲಿ ಊಟದ ಅಥವಾ ಅಹಾರ ಸೇವಿಸಿದ ನಂತರ ಸ್ನಾನ ಮಾಡಬೇಕಾದ ಪ್ರಸಂಗಗಳು ಎದುರಾಗುತ್ತದೆ. ಇದೊಂದು ಸಾಮಾನ್ಯ ವಿಷಯವಾಗಿದ್ದು, ಇದನ್ನು ಅನುಸರಿಸುವುದರಿಂದ ಯಾವುದೇ ತೊಂದರೆಯಿಲ್ಲ ಎಂದು ಅನೇಕರು ಭಾವಿಸಿದ್ದಾರೆ. ಕೆಲವರು ಇದನ್ನೇ ರೂಢಿಸಿಕೊಂಡಿರುತ್ತಾರೆ. ಇದರ ಪರಿಣಾಮಗಳ ಬಗ್ಗೆ ಹೆಚ್ಚು ಯೋಚಿಸದೆ ತಮಗಿಷ್ಟ ಬಂದಂತಹ ಕ್ರಮಗಳನ್ನು ಅನುಸರಿಸುತ್ತಿರುತ್ತಾರೆ.

ಊಟದ ನಂತರ ಸ್ನಾನ ಮಾಡಬಹುದೇ ಅಥವಾ ಬೇಡವೇ ಎಂಬುದು ಸಾಕಷ್ಟು ಜನರಿಗೆ ಅರಿವಿಲ್ಲ. ಇದರ ಬಗ್ಗೆ ಯಾರೂ ಅಷ್ಟಾಗಿ ಕಾಳಜಿ ವಹಿಸಿಲ್ಲ. ಇದೊಂದು ಸಹಜ ಪ್ರಕ್ರಿಯೆಯೆಂದು ಹೆಚ್ಚಿನವರು ಆಲಕ್ಷಕ್ಕೊಳಗಾಗುತ್ತಾರೆ. ಆದರೆ ಅಚ್ಚರಿಯ ಸಂಗತಿಯೆಂದರೆ, ಆಹಾರ ಸೇವಿಸಿದ ನಂತರ ಸ್ನಾನ ಮಾಡುವುದು ನಿಮ್ಮ ಆರೋಗ್ಯದ ದೃಷ್ಟಿಯಿಂದ ಹೆಚ್ಚು ಅಪಾಯಕಾರಿ.

Is It Not Good To Take Shower After You Eat?

ಹೌದು, ಇದಕ್ಕೆ ಅನೇಕ ಕಾರಣಗಳಿವೆ. ಕೆಲವರು ಈ ವಿಷಯವನ್ನು ನಂಬದೇ ಇದ್ದರೂ ಇದು ಸತ್ಯವೇ ಸರಿ. ಈ ನಿಟ್ಟಿನಲ್ಲಿ ಇದರ ಕಾರಣಗಳ ಬಗ್ಗೆ ನಿಮಗಾಗಿ ಈ ಲೇಖನದಲ್ಲಿ ವಿವರವಾಗಿ ನೀಡಲಾಗಿದೆ. ಮುಂದೆ ಓದಿ...

ಊಟದ ನಂತರ ಸ್ನಾನ ಮಾಡುವಿಕೆಯಿಂದ ರಕ್ತನಾಳಗಳು ಹಿಗ್ಗಿ, ಚರ್ಮಕ್ಕೆ ರಕ್ತ ಸಂಚಾರ ಹೆಚ್ಚುತ್ತದೆ. ಅರ್ಥಾತ್, ತಂಪಾದ ನೀರಿಗೆ ನಿಮ್ಮ ದೇಹವು ಪ್ರತಿಕ್ರಯಿಸಿ ರಾಸಾಯನಿಕ ಅಂಶವೊಂದು ನಿಮ್ಮ ದೇಹದಲ್ಲಿ ಉತ್ಪತ್ತಿಯಾಗುತ್ತದೆ. ಈ ರಾಸಾಯನಿಕ ಅಂಶವು ರಕ್ತ ನಾಳಗಳನ್ನು ಹಿಗ್ಗಿಸಿ ರಕ್ತವು ನರಗಳಿಗೆ ಮತ್ತು ಸಣ್ಣ ನರಗಳಿಗೆ ರಭಸದಿಂದ ಸಂಚರಿಸುವಂತೆ ಮಾಡುತ್ತದೆ.

ರಕ್ತ ಸಂಚಲನವು ಚರ್ಮದ ಒಳಗೆ ಹೆಚ್ಚುವುದು ಕ್ರಮವಾಗಿದ್ದು, ಅಧಿಕ ರಕ್ತ ಸಂಚಲನ ಉಂಟು ಮಾಡುವುದು ಪ್ರತಿಕ್ರಿಯೆಯಾಗಿದೆ. ಸ್ನಾನದ ಪ್ರಕ್ರಿಯೆಯಿಂದ ನಿಮ್ಮ ಚರ್ಮಕ್ಕೆ ಹೆಚ್ಚು ರಕ್ತವು ಸಂಚಲನಗೊಳ್ಳುತ್ತದೆ. ತಂಪನ್ನು ನಿಯಂತ್ರಿಸಲು ಅಧಿಕ ರಕ್ತವು ಚಲನೆಗೊಂಡು, ನಂತರ ಈ ಅಧಿಕ ರಕ್ತವು ನಿಮ್ಮ ಚರ್ಮದಲ್ಲಿ ಹಾಗೆಯೇ ಉಳಿಯಲು ಕಾರಣವಾಗುತ್ತದೆ. ಇದು ನಿಮಗೆ ಬೆಚ್ಚನೆಯ ಅನುಭವ ನೀಡುತ್ತದೆ.

ಆದರೂ ಸಹ, ಈ ಪ್ರತಿಕ್ರಿಯೆಯಿಂದ ನಿಮಗೆ ಜೀರ್ಣ ಕ್ರಿಯೆಗೆ ಅವಶ್ಯಕವಿರುವ ರಕ್ತವು ಚರ್ಮಕ್ಕೆ ತೆರೆಳುವುದರಿಂದ, ಸೇವಿಸಿದ ಆಹಾರ ಜೀರ್ಣವಾಗದೇ ಹೆಚ್ಚು ಕಾಲ ನಿಮ್ಮ ಹೊಟ್ಟೆಯಲ್ಲಿಯೇ ಅದೇ ಸ್ಥಿತಿಯಲ್ಲಿಯೇ ಇರುವಂತೆ ಮಾಡುತ್ತದೆ. ಇದರಿಂದ ನಿಮಗೆ ಜೀರ್ಣಕ್ರಿಯೆಯು ವಿಳಂಬವಾಗಿ ಅಡ್ಡಪರಿಣಾಮಗಳನ್ನು ಉಂಟುಮಾಡುತ್ತದೆ.

ಇದರ ಹೊರತಾಗಿ, ಜೀರ್ಣಕ್ರಿಯೆಗೆ ಹೆಚ್ಚಿನ ಪ್ರಮಾಣದ ರಕ್ತದ ಅವಶ್ಯಕತೆಯಿದ್ದು, ನೀವು ಬೆಚ್ಚನೆಯ ನೀರನ್ನು ಸ್ನಾನಕ್ಕೆ ಬಳಸಿದರೂ ಸಹ ನಿಮ್ಮ ದೇಹವನ್ನು ತಂಪುಗೊಳಿಸಲು ರಕ್ತದಿಂದ ಶಾಖವನ್ನು ಚರ್ಮಕ್ಕೆ ನೀಡುತ್ತದೆ. ಇದೊಂದು ಸಹಜ ಪ್ರಕ್ರಿಯೆಯಾಗಿದ್ದರೂ ಸಹ ಇದು ನಿಮ್ಮ ಜೀರ್ಣಕ್ರಿಯೆಯ ಮೇಲೆ ಪರಿಣಾಮ ಉಂಟುಮಾಡುವುದರಿಂದ ಊಟದ ನಂತರ ಸ್ನಾನ ಮಾಡುವ ಅಭ್ಯಾಸವನ್ನು ಅನುಸರಿಸದಿರಿ. ಇಲ್ಲದಿದ್ದರೆ ಅಪಾಯ ಖಚಿತ.

English summary

Is It Not Good To Take Shower After You Eat?

Obviously, most of you all know the answer to whether it is good to take a shower after a meal. However, not all know the reason behind it. There are several reasons that make it unhealthy to take a shower or bath after having a meal of after eating. Some are also of the opinion that belief is a myth.
Story first published: Monday, January 18, 2016, 20:19 [IST]
X
Desktop Bottom Promotion