For Quick Alerts
ALLOW NOTIFICATIONS  
For Daily Alerts

ಅಧ್ಯಯನ ವರದಿ: ವಿಟಮಿನ್ ಡಿ ಕೊರತೆ- ಕಿಡ್ನಿ ಸಮಸ್ಯೆಗೆ ಮುಕ್ತ ಆಹ್ವಾನ!

By Deepak M
|

ನಮ್ಮ ದೇಹದಲ್ಲಿ ವಿಟಮಿನ್ ಡಿ ಕೊರತೆ ಉಂಟಾದರೆ ಗಂಭೀರ ಪ್ರಮಾಣದ ಮೂತ್ರಪಿಂಡದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಅದರಲ್ಲೂ ಮಕ್ಕಳಲ್ಲಿ ಈ ಸಮಸ್ಯೆ ಇನ್ನೂ ಗಂಭೀರವಾಗಿ ಕಾಣಿಸಿಕೊಳ್ಳುತ್ತವೆ ಎಂದು ಒಂದು ಹೊಸ ಅಧ್ಯಯನವೊಂದು ತಿಳಿಸಿದೆ. ಗಂಭೀರವಾದ ಮೂತ್ರಪಿಂಡದ ಸಮಸ್ಯೆಯನ್ನು(ಸಿಕೆಡಿ) ಹೊಂದಿರುವ ಮಕ್ಕಳಲ್ಲಿ ವಿಟಮಿನ್ ಡಿ ಕೊರತೆಯು ಸಾಮಾನ್ಯವಾಗಿ ಕಂಡು ಬರುತ್ತದೆ. ಈ ಸಮಸ್ಯೆಯು ದೀರ್ಘಾವಧಿ ಕಂಡು ಬಂದರೆ ಮೂತ್ರಪಿಂಡಗಳ ವೈಫಲ್ಯವಾಗುವ ಸಾಧ್ಯತೆ ಹೆಚ್ಚಿರುತ್ತದೆ.

ಸಿಕೆಡಿ ಇರುವ ಮಕ್ಕಳಲ್ಲಿ ವಿಟಮಿನ್ ಡಿ ಕೊರತೆಯು ಮಾರ್ಪಾಡು ಮಾಡಬಹುದಾದ ಮತ್ತು ಮಾರ್ಪಾಡು ಮಾಡಲಾಗದ ಅಂಶಗಳ ಜೊತೆಗೆ ಸಂಬಂಧವನ್ನು ಹೊಂದಿದೆ ಎಂದು ಅಧ್ಯಯನಕಾರರು ಗುರುತಿಸಿದ್ದಾರೆ.

Increase In Vitamin D Levels To Cut Kidney Problems: Study Proves

ಅಧ್ಯಯನದ ಪ್ರಕಾರ ವಿಟಮಿನ್ ಡಿಯಿಂದ ನರಳುತ್ತಿರುವ ಮಕ್ಕಳು ಗ್ಲೊಮೆರುಲೊಫಥಿಯಂತ ಅಪಸಾಮಾನ್ಯಗಳಿಂದ ಬಳಲುತ್ತಿರುತ್ತಾರೆ ಎಂದು ತಿಳಿದು ಬಂದಿದೆ. ಇದು ನೆಫ್ರಾನ್‌ಗಳ ಮೇಲೆ ಪರಿಣಾಮ ಬೀರುವ ಕಾಯಿಲೆಗಳ ಸಮೂಹವಾಗಿರುತ್ತದೆ. ಕಿಡ್ನಿ ವೈಫಲ್ಯ: ಪ್ರತಿಯೊಬ್ಬರೂ ತಿಳಿಯಬೇಕಾದ ಸತ್ಯಾಸತ್ಯತೆ

ವಿಟಮಿನ್ ಡಿ ಮಟ್ಟವು ಚಳಿಗಾಲದ ಸಮಯದಲ್ಲಿ ಕಡಿಮೆಯಾಗುತ್ತದೆ ಎಂದು ಹೇಳಲಾಗುತ್ತದೆ. "ವಿಟಮಿನ್ ಡಿಯನ್ನು ನಿಯಂತ್ರಿಸುವ ವಂಶವಾಹಿಗಳ ಸಾಮಾನ್ಯ ರೂಪಾಂತರಗಳಿಗಿಂತ ಹೆಚ್ಚಾಗಿ ವಿಟಮಿನ್ ಡಿ ಮಟ್ಟವು ಋತುಗಳಿಂದ, ಕಾಯಿಲೆಗಳ ವಿಧಗಳಿಂದ ಮತ್ತು ಪೂರಕ ಪೋಷಕಾಂಶಗಳಿಂದ ನೇರ ಪ್ರಭಾವಕ್ಕೆ ಒಳಗಾಗುತ್ತದೆ" ಎಂದು ಹೇಡೆಲ್‌ಬರ್ಗ್ ವಿಶ್ವವಿದ್ಯಾನಿಲಯ ಜರ್ಮನಿಯ ಅಂಕೆ ಡೊಯೊನ್ ತಿಳಿಸಿದ್ದಾರೆ.

ವಿಟಮಿನ್ ಡಿ ಕೊರತೆಯು ಆಸ್ಟಿಯೋಪೊರೊಸಿಸ್, ಕ್ಯಾನ್ಸರ್, ಹೃದ್ರೋಗ ಮತ್ತು ರೋಗ ನಿರೋಧಕ ಡಿಸಾರ್ಡರ್‌ಗಳು ಬರುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ ಎಂದು ಅಧ್ಯಯನಗಳು ತಿಳಿಸಿವೆ. ವಿಟಮಿನ್ ಡಿ ಮಾತ್ರೆಗಳನ್ನು ಸೇವಿಸಿದ ಮೂತ್ರ ಪಿಂಡ ಸಮಸ್ಯೆಗಳಿಂದ ಬಳಲುತ್ತಿರುವ ಮಕ್ಕಳಲ್ಲಿ, ವಿಟಮಿನ್ ಡಿ ಪ್ರಮಾಣವು ಮಾತ್ರೆ ಸೇವಿಸದೆ ಇದ್ದ ಮಕ್ಕಳಿಗಿಂತ ಎರಡು ಪಟ್ಟು ಇತ್ತು ಎಂದು ತಿಳಿದು ಬಂದಿದೆ. ಕಿಡ್ನಿ ಕಾಳಜಿ: ಸ್ವಲ್ಪ ಯಾಮಾರಿದರೂ, ಜೀವಕ್ಕೆ ಸಂಚಕಾರ!

ಡೊಯೊನ್‌ರವರ ಪ್ರಕಾರ "ಮಾತ್ರೆಗಳನ್ನು ನೀಡುವ ವಿಧಾನವನ್ನು ಅಧ್ಯಯನಗಳ ಆಧಾರದ ಮೇಲೆ ಮತ್ತೆ ಬದಲಾಯಿಸಬೇಕಾಗುತ್ತದೆ. ಮೂತ್ರಪಿಂಡಗಳ ವೈಫಲ್ಯದಿಂದ ಬಳಲುವ ಮಕ್ಕಳಿಗೆ ವಿಟಮಿನ್ ಡಿ ಕೊರತೆಗಾಗಿ ಹೇಗೆ ಚಿಕಿತ್ಸೆಯನ್ನು ನೀಡಬೇಕೆಂದು ಸ್ಪಷ್ಟ ಮಾರ್ಗದರ್ಶನಗಳನ್ನು ನೀಡಬೇಕಾಗುತ್ತದೆಯಂತೆ". ಕಿಡ್ನಿ ಕಲ್ಲಿನ ಸಮಸ್ಯೆಗೆ ಗಿಡಮೂಲಿಕೆಗಳ ನಲ್ಮೆಯ ಆರೈಕೆ

ಈ ತಂಡವು 12 ಯೂರೋಪಿಯನ್ ದೇಶಗಳಲ್ಲಿ ಮೂತ್ರ ಪಿಂಡದ ಕಾಯಿಲೆಗಳಿಂದ ಬಳಲುತ್ತಿರುವ 500 ಮಕ್ಕಳನ್ನು ವಿಶ್ಲೇಷಣೆ ಮಾಡಿತು. ಈ ಅಧ್ಯಯನದಲ್ಲಿ ಬಂದ ಫಲಿತಾಂಶಗಳನ್ನು ಕ್ಲಿನಿಕಲ್ ಜರ್ನಲ್ ಆಫ್ ದಿ ಅಮೆರಿಕನ್ ಸೊಸೈಟಿ ಆಫ್ ನೆಫ್ರಾಲಜಿ (ಸಿಜೆ‍ಎ‍ಎಸ್‌ಎನ್) ಯಲ್ಲಿ ಪ್ರಕಟಿಸಲಾಗಿದೆ. ಇದರಿಂದ ವೈದ್ಯರಿಗೆ ರೋಗಿಗಳ ಆರೋಗ್ಯವನ್ನು ಕಾಪಾಡಲು ಸಹಕಾರಿಯಾಗುತ್ತದೆ ಎಂದು ಅಧ್ಯಯನಕಾರರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

(ಐಎ‍ಎನ್‍ಎ ಇಂದ)

English summary

Increase In Vitamin D Levels To Cut Kidney Problems: Study Proves

A deficiency in the amount of vitamin D in the body may lead to a high risk of chronic kidney diseases, especially in children, says a new study. Vitamin D deficiency has been found common in children with chronic kidney disease (CKD), wherein the longstanding disease of the kidneys leads to renal failure.
X
Desktop Bottom Promotion