For Quick Alerts
ALLOW NOTIFICATIONS  
For Daily Alerts

ಡ್ರ್ಯಾಗನ್ ಹಣ್ಣಿನ ಹತ್ತು ಹಲವು ಲಾಭಗಳು

By Su.Ra
|

ಡ್ರ್ಯಾಗನ್ ಹಣ್ಣು .. ಹೆಚ್ಚಿನವ್ರಿಗೆ ಇದರ ಪರಿಚಯ ಇರಲಿಕ್ಕಿಲ್ಲ..ಯಾಕಂದ್ರೆ ಕನ್ನಡಿಗರಿಗೆ ತಿಳಿದಿರುವ ಪ್ರಾದೇಶಿಕ ಹಣ್ಣು ಇದಲ್ಲ. ಇದೊಂದು ವಿಶೇಷ ಹಣ್ಣು.. ನಮ್ಮಲ್ಲಿ ಬೆಳೆಯುವುದು ಕಡಿಮೆ. ಮರುಭೂಮಿಯಂತ ಪ್ರದೇಶಗಳಲ್ಲಿ ಬೆಳೆಯುವ ಹಣ್ಣು. ಅಮೇರಿಕಾ, ಮೆಕ್ಸಿಕೋದ ಮರುಭೂಮಿಗಳಲ್ಲಿ ಈ ಹಣ್ಣುಗಳನ್ನು ಹೆಚ್ಚಾಗಿ ಬೆಳೆಯಲಾಗುತ್ತೆ. ವಿದೇಶದ ಈ ಹಣ್ಣು ಇತ್ತೀಚೆಗೆ ಬೆಂಗಳೂರಿನ ಮಾರ್ಕೆಟ್‌ಗಳಲ್ಲೂ ಲಭ್ಯವಿದೆ. ಮಾಲ್‌ಗಳಲ್ಲಿ ಈ ಹಣ್ಣುಗಳನ್ನು ಮಾರಾಟಕ್ಕೆ ಇಡಲಾಗ್ತಾ ಇದ್ದು ಭಾರತದವ್ರಿಗೆ ಇದು ದುಬಾರಿ ಹಣ್ಣೇ ಸರಿ..

ದುಬಾರಿ ಆದ್ರೆ ಏನಂತೆ.. ಈ ಹಣ್ಣಿನ ಮಹತ್ವ ಅಪರಿಮಿತ. ಅದೇ ಕಾರಣಕ್ಕೆ ಹೆಚ್ಚಿನವ್ರಿಗೆ ಈ ಟೇಸ್ಟಿ ಫ್ರೂಟ್ ಇಷ್ಟವಾಗುತ್ತಾ ಇರೋದು..ಹಾಗಾದ್ರೆ ಯಾಕೆ ಈ ಹಣ್ಣು ಶ್ರೇಷ್ಟ ಅನ್ನಿಸಿಕೊಳ್ಳುತ್ತೆ. ಡ್ರ್ಯಾಗನ್ ಫ್ರೂಟ್ತಿ ನ್ನೋದ್ರಿಂದ ಆಗುವ ಲಾಭಗಳೇನು ಅನ್ನೋ ವಿವರ ಇಲ್ಲಿದೆ, ಮುಂದೆ ಓದಿ..

ಡ್ರ್ಯಾಗನ್ ಫ್ರೂಟ್

ಡ್ರ್ಯಾಗನ್ ಫ್ರೂಟ್

ನೋಡೋಕೆ ಮುಳ್ಳುಮುಳ್ಳಿನಂತೆ ಇರುತ್ತೆ. ಒಳಗಡೆಯ ತಿರುಳನ್ನು ತಿನ್ನಬೇಕು.. ಹಣ್ಣನ್ನ ಎರಡು ಭಾಗ ಮಾಡಿದ್ರೆ ಒಳಗಡೆಯ ತಿರುಳು ನೋಡೋಕೆ ಸೂಪರ್ ಆಗಿರುತ್ತೆ. ನೋಡೋಕೆ ಮಾತ್ರವಲ್ಲ ತಿನ್ನೋಕು ಸಖತ್ ಟೇಸ್ಟಿ.

ಉತ್ತಮ ಪ್ರಮಾಣದ ಕೊಲೆಸ್ಟ್ರಾಲ್‌

ಉತ್ತಮ ಪ್ರಮಾಣದ ಕೊಲೆಸ್ಟ್ರಾಲ್‌

ಡ್ರ್ಯಾಗನ್‌ ಫ್ರೂಟ್‌ನಲ್ಲಿ ಅತ್ಯಂತ ಕಡಿಮೆ ಪ್ರಮಾಣದ ಕೊಲೆಸ್ಟ್ರಾಲ್‌ ಇರುತ್ತೆ. ದೇಹ ತೂಕ ಇಳಿಸ್ಬೇಕು ಅಂದುಕೊಂಡಿರುವವರಿಗೆ ಡಯಟ್ ಮಾಡಲು ಹೇಳಿ ಮಾಡಿಸಿದ ಹಣ್ಣಿದು.. ಅಷ್ಟೇ ಅಲ್ಲ ಆರೋಗ್ಯಯುತವಾಗಿ ನಿಮ್ಮ ದೇಹದ ತೂಕವನ್ನು ನಿಯಂತ್ರಿಸಲು ಇದು ಸಹಕಾರಿ. ಅದೇ ಕಾರಣಕ್ಕೆ ಚೆರ್ರಿ ಹಣ್ಣಿಗಿಂತ ಇದು ಬೆಟರ್ ಆಗಿರುವ ಹಣ್ಣು ಅಂತ ಹೇಳಲಾಗುತ್ತೆ.

ಹೃದಯದ ಸ್ವಾಸ್ಥ್ಯ ಕಾಪಾಡುತ್ತೆ

ಹೃದಯದ ಸ್ವಾಸ್ಥ್ಯ ಕಾಪಾಡುತ್ತೆ

ಇತ್ತೀಚೆಗೆ ಹೆಚ್ಚಿನವ್ರಿರಲ್ಲಿ ಹೃದಯದ ಸಮಸ್ಯೆ ಕಾಡುತ್ತೆ. ಲೋ ಬಿಪಿ, ಹೈ ಬಿಪಿಯಂತ ಸಮಸ್ಯೆಗಳು ಸರ್ವೇಸಾಮಾನ್ಯವಾಗಿ ಬಿಟ್ಟಿದೆ. ಈ ಡ್ರ್ಯಾಗನ್‌ ಫ್ರೂಟಿಗೊಂದು ಸೂಪರ್‌ ಪವರ್‌ ಇದೆ. ಅದೇ ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್‌ನ್ನು ತೆಗೆದುಹಾಕುವ ಸಾಮರ್ಥ್ಯ.. ಅನ್‌ಸ್ಯಾಚುರೇಟೆಡ್‌ ಫ್ಯಾಟ್‌ ಅಂದ್ರೆ ಕರಗದ ಕೊಬ್ಬಿನ ಪ್ರಮಾಣವನ್ನು ತಗ್ಗಿಸಿ ಹಾರ್ಟ್‌ ಕಂಡೀಷನ್‌ ಅಂದ್ರೆ ಹೃದಯದ ಸ್ವಾಸ್ಥ್ಯ ಉತ್ತಮವಾಗಿರುವಂತೆ ನೋಡಿಕೊಳ್ಳುತ್ತೆ ಡ್ರ್ಯಾಗನ್ ಪ್ರೂಟ್

ಉತ್ತಮ ಫೈಬರ್‌ ಅಂಶವನ್ನು ಒಳಗೊಂಡಿರುತ್ತೆ

ಉತ್ತಮ ಫೈಬರ್‌ ಅಂಶವನ್ನು ಒಳಗೊಂಡಿರುತ್ತೆ

ನಿಮ್ಮ ಡೈಜೆಸ್ಟೀವ್‌ ಸಿಸ್ಟಮ್‌ನ್ನು ಕ್ಲೀನ್‌ ಮಾಡುವ ಸಾಮರ್ಥ್ಯವಿದೆ.. ಇದ್ರಲ್ಲಿ ಹೆಚ್ಚಿನ ಫೈಬರ್ ಅಂಶವಿರೋದ್ರಿಂದ ನಿಮ್ಮ ದೇಹದ ಕೆಟ್ಟ ಜೀರ್ಣಕ್ರಿಯೆ ಪ್ರಕ್ರಿಯೆಯನ್ನು ಉತ್ತಮಗೊಳಿಸಿ ಮಲಬದ್ಧತೆ ಸಮಸ್ಯೆಯನ್ನು ನಿವಾರಿಸುತ್ತೆ. ಅಷ್ಟೇ ಅಲ್ಲ ಇದ್ರಲ್ಲಿ ಉತ್ತಮ ಪ್ರೊಟೀನ್ ಅಂಶವಿರೋದ್ರಿಂದ ನಿಮ್ಮ ದೇಹ ಆರಾಮದಾಯಕವಾಗಿರುವಂತೆ ನೋಡಿಕೊಳ್ಳುತ್ತೆ.

ಡಯಾಬಿಟೀಸ್‌ ವಿರುದ್ಧ ಹೊರಾಡುತ್ತೆ

ಡಯಾಬಿಟೀಸ್‌ ವಿರುದ್ಧ ಹೊರಾಡುತ್ತೆ

ಹೆಚ್ಚು ಪ್ರಮಾಣದಲ್ಲಿರುವ ಫೈಬರ್‌ ಅಂಶದಿಂದಾಗಿ ನಿಮ್ಮ ದೇಹದ ಇನ್ಸುಲಿನ್ ಪ್ರಮಾಣವನ್ನು ನಿಯಂತ್ರಿಸುವಲ್ಲಿ ಇದು ಸಹಾಯ ಮಾಡುತ್ತೆ.. ಅತ್ಯಂತ ಸಿಹಿಯೂ ಅಲ್ಲದ ಈ ಹಣ್ಣಿನಿಂದಾಗಿ ನಿಮ್ಮ ಶುಗರ್‌ ಲೆವೆಲ್‌ ಕಂಟ್ರೋಲ್‌ ಆಗುತ್ತೆ. ಆದ್ರೆ ನಿಮ್ಮ ವೈದ್ಯರ ಬಳಿ ಒಮ್ಮೆ ಸಂಪರ್ಕಿಸಿ ಈ ಹಣ್ಣಿನ ಸೇವನೆ ನಿಮ್ಗೆಷ್ಟು ಶ್ರೇಷ್ಟ ಅನ್ನೋದನ್ನು ಪರೀಕ್ಷಿಸಿಕೊಳ್ಳಿ..

ತಾರುಣ್ಯವಂತರನ್ನಾಗಿ ಇರಿಸುತ್ತೆ

ತಾರುಣ್ಯವಂತರನ್ನಾಗಿ ಇರಿಸುತ್ತೆ

ಡ್ರ್ಯಾಗನ್‌ ಫ್ರೂಟ್‌ನಲ್ಲಿರುವ ಌಂಟಿ ಆಕ್ಸಿಡೆಂಟ್ ಗುಣದಿಂದಾಗಿ ನಿಮ್ಮ ಸ್ಕಿನ್‌ ಟೈಟ್‌ ಆಗಿ ಇರುವಂತೆ ನೋಡಿಕೊಳ್ಳುತ್ತೆ. ಅಂದ್ರೆ ವಯಸ್ಸಾದ ಮೇಲೆ ಉಂಟಾಗುವ ಚರ್ಮ ಜೋತುಬೀಳೋದು, ಸುಕ್ಕುಗಟ್ಟುವಂತ ಸಮಸ್ಯೆಯನ್ನು ಹತೋಟಿಯಲ್ಲಿಟ್ಟು ನೀವು ಹೆಚ್ಚು ವರ್ಷಗಳ ಕಾಲ ತಾರುಣ್ಯವಂತರಾಗಿ ಇರುವಂತೆ ನೋಡಿಕೊಳ್ಳುತ್ತೆ. ಫೇಸ್ ಮಾಸ್ಕ್‌ ಆಗಿ ಕೂಡ ಈ ಹಣ್ಣನ್ನ ಬಳಕೆ ಮಾಡ್ಬಹುದು..

ಬಿಳಿಕೂದಲಾಗುವುದನ್ನು ನಿಯಂತ್ರಿಸುತ್ತೆ

ಬಿಳಿಕೂದಲಾಗುವುದನ್ನು ನಿಯಂತ್ರಿಸುತ್ತೆ

ನಿಮ್ಮ ಸ್ಕ್ಯಾಲ್ಪ್‌ ಗೆ ಡ್ರ್ಯಾಗನ್‌ ಫ್ರೂಟ್‌ನಿಂದ ತಯಾರಿಸಿದ ಜ್ಯೂಸ್‌ನ್ನು ಆಗಾಗ ಅಪ್ಲೈ ಮಾಡಿಕೊಳ್ಳೋದ್ರಿಂದ ನಿಮ್ಮ ಕೂದಲು ಕಪ್ಪಾಗಿ , ಶೈನಿಯಾಗಿ ಇರುತ್ತೆ. ಇದೊಂದು ಬೆಸ್ಟ್‌ ಕಂಡೀಷನರ್‌ ಆಗಿ ನಿಮ್ಮ ಕೂದಲಿಗೆ ವರ್ಕ್ ಮಾಡುತ್ತೆ. ಕಲರಿಂಗ್ ಮಾಡಿ ಕೆಮಿಕಲ್್‌ಮಯಗೊಂಡಿರುವ ಕೂದಲನ್ನು ಮತ್ತೆ ಪುನಃ ಯಥಾಸ್ಥಿತಿಗೆ ಮರಳುವಂತೆ ಮಾಡಲು ಕೂಡ ಈ ಡ್ರ್ಯಾಗನ್‌ ಫ್ರೂಟ್ ಸಹಾಯ ಮಾಡಲಿದೆ... ಕೂದಲು ಚೆನ್ನಾಗಿ ಉಸಿರಾಡುವಂತೆ ಮಾಡಿ ಹೆಲ್ತಿಯಾಗಿರುವಂತೆ ನೋಡಿಕೊಳ್ಳುತ್ತೆ.

ಸನ್‌ ಬರ್ನ್‌ಗೂ ಪರಿಹಾರ ನೀಡಲಿದೆ

ಸನ್‌ ಬರ್ನ್‌ಗೂ ಪರಿಹಾರ ನೀಡಲಿದೆ

ಡ್ರ್ಯಾಗನ್‌ ಫ್ರೂಟ್ ಮತ್ತು ಸೌತೆ ಮತ್ತು ಒಂದೆರಡು ಹನಿ ಜೇನುತುಪ್ಪವನ್ನು ಮಿಕ್ಸ್ ಮಾಡಿ ನಿಮ್ಮ ಚರ್ಮದಲ್ಲಿ ಸನ್‌ ಬರ್ನ್‌ ಆಗಿರುವ ಜಾಗಕ್ಕೆ ಅಪ್ಲೈ ಮಾಡಿ.. ನಿಮ್ಮ ಚರ್ಮವನ್ನು ಮಾಯ್ಚರೈಸ್ ಮಾಡಿ. ಸನ್ ಬರ್ನ್ ಆಗಿರುವ ಜಾಗವನ್ನು ಸರಿಪಡಿಸುವ ಸಾಮರ್ಥ್ಯ ಡ್ರ್ಯಾಗನ್‌ ಫ್ರೂಟ್‌ಗಿದೆ.. ಒಟ್ಟಿನಲ್ಲಿ ವಿದೇಶದ ಹಣ್ಣಾದ್ರೂ ತಿನ್ನಲು ಟೇಸ್ಟಿಯಾಗಿರುವ ಈ ಹಣ್ಣು ಆರೋಗ್ಯದ ದೃಷ್ಟಿಯಿಂದಲೂ ಕೂಡ ಒಳ್ಳೆಯದು..

ಮುಖದ ಆಕ್ನೆ ಸಮಸ್ಯೆಗೂ ಪರಿಹಾರ

ಮುಖದ ಆಕ್ನೆ ಸಮಸ್ಯೆಗೂ ಪರಿಹಾರ

ಕೇವಲ ಟೀನೇಜ್‌ನವ್ರಿಗೆ ಮಾತ್ರ ಈ ಫ್ರೂಟ್ ಸಹಕಾರಿ ಅಂತ ಅಂದುಕೊಳ್ಳಬೇಡಿ. ಇದ್ರಲ್ಲಿ ಸಂಪದ್ಭರಿತವಾದ ವಿಟಮಿನ್‌ ಸಿ ಇರೋದ್ರಿಂದ ಬೆಸ್ಟ್‌ ಆಯಿಂಟ್‌ಮೆಂಟ್‌ ಆಗಿ ಇದು ಕೆಲ್ಸ ಮಾಡಲಿದೆ.. ಡ್ರ್ಯಾಗನ್‌ ಫ್ರೂಟ್‌ ಪೇಸ್ಟ್ ಮಾಡಿ, ಅದನ್ನು ನಿಮ್ಮ ಸ್ಕಿನ್‌ ನಲ್ಲಿ ಆಕ್ನೆ ಆಗಿರುವ ಜಾಗಕ್ಕೆ ಅಪ್ಲೈ ಮಾಡಿ ನೋಡಿ. ಕೆಲವೇ ದಿನದಲ್ಲಿ ರಿಸಲ್ಟ್ ಗೊತ್ತಾಗಲಿದೆ..

English summary

Health Benefits Of Dragon Fruit

Dragon what? No, this is not a medieval-times myth where knights save princesses from fire-breathing dragons and win the coveted dragon fruit from a magical tree. That said, real dragon fruit does contain some pretty magical benefits that can make you feel like a beautiful princess or a knight in shining armor.
Story first published: Monday, January 4, 2016, 19:10 [IST]
X
Desktop Bottom Promotion