Latest Updates
-
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ
'ತಣ್ಣೀರಿನ ಸ್ನಾನ' ನಿಜಕ್ಕೂ ಇದು ಆರೋಗ್ಯಕ್ಕೆ ಸೋಪಾನ....
ಹಿಂದಿನಿಂದಲೂ ಜನರು ಎರಡು ಬಗೆಯಲ್ಲಿ ಸ್ನಾನ ಮಾಡುತ್ತಾ ಬಂದಿದ್ದಾರೆ. ಅದರಲ್ಲಿ ಕೆಲವರು ಎಣ್ಣೆ ಹಚ್ಚಿಕೊಂಡು ಬಿಸಿ ನೀರಿನಲ್ಲಿ ಸ್ನಾನ ಮಾಡುವುದು. ಇನ್ನು ಕೆಲವರು ತಣ್ಣೀರಿನ ಸ್ನಾನ ಮಾಡುವುದು. ಎರಡಕ್ಕೂ ಅದರದ್ದೇ ಆದ ಕೆಲವೊಂದು ಪ್ರಾಮುಖ್ಯತೆಗಳಿವೆ. ಊಟದ ನಂತರ ಸ್ನಾನ, ತೊಂದರೆಗೆ ಆಹ್ವಾನ!
ದೇಹಕ್ಕೂ ಇದರಿಂದ ಲಾಭಗಳು ಇವೆ. ಅದರಲ್ಲೂ ತಣ್ಣೀರಿನಿಂದ ಸ್ನಾನ ಮಾಡುವುದರಿಂದ ದೇಹದ ಪ್ರತಿರೋಧಕ ಶಕ್ತಿ ಹೆಚ್ಚಳವಾಗಿ ಸಾಮಾನ್ಯವಾಗಿ ಕಾಡುವಂತಹ ಶೀತದಿಂದ ನಮ್ಮನ್ನು ರಕ್ಷಿಸುತ್ತದೆ. ಆದರೆ ಹೆಚ್ಚಿನ ಚಳಿಯಿರುವ ಹವಾಮಾನದಲ್ಲಿ ವಾಸಿಸುವವರು ತಣ್ಣೀರಿನ ಸ್ನಾನ ಮಾಡುವುದು ಬೇಡ. ಗರ್ಭಿಣಿಯರು ಬಿಸಿ ನೀರಿನಲ್ಲಿ ಸ್ನಾನ ಮಾಡಬಾರದೇ?
ಇನ್ನು ಹೆಚ್ಚಿನ ಉಷ್ಣತೆಯಿರುವ ಹವಾಮಾನದಲ್ಲಿ ತಣ್ಣೀರಿನ ಸ್ನಾನವನ್ನು ವಾರದಲ್ಲಿ ಒಂದು ಸಲವಾದರೂ ಮಾಡಿದರೆ ಅದರಿಂದ ಆರೋಗ್ಯಕ್ಕೆ ಒಳ್ಳೆಯದು. ಬೆಳಿಗ್ಗೆ ತಣ್ಣೀರಿನ ಸ್ನಾನ ಮಾಡುವುದರಿಂದ ಆಗುವ ಲಾಭಗಳ ಬಗ್ಗೆ ಈ ಲೇಖನದಲ್ಲಿ ತಿಳಿದುಕೊಳ್ಳುವ.... ವಾರದ ನಾಲ್ಕು ದಿನ ತಲೆ ಸ್ನಾನ ಮಾಡುವಂತಿಲ್ಲ! ಯಾಕೆ ಹೀಗೆ?

ಪ್ರತಿರೋಧಕ ಶಕ್ತಿಯನ್ನು ವೃದ್ಧಿಸುವುದು
ತಣ್ಣೀರಿನ ಸ್ನಾನ ಮಾಡುವ ಒಂದು ಲಾಭವೆಂದರೆ ಇದು ಪ್ರತಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ. ಬಿಸಿ ನೀರಿನ ಸ್ನಾನ ಮಾಡುವವರಿಗಿಂತ ತಣ್ಣೀರಿನ ಸ್ನಾನ ಮಾಡುವವರಲ್ಲಿ ಬಿಳಿ ರಕ್ತದ ಕಣಗಳ ವಿರುದ್ಧ ಹೋರಾಡುವ ವೈರಸ್ ಗಳ ಪ್ರಮಾಣವು ಹೆಚ್ಚಾಗುತ್ತದೆ.

ತೂಕ ಇಳಿಸಲು ಸಹಕಾರಿ
ಬಿಸಿ ನೀರಿನ ಟಬ್‌ನಲ್ಲಿ ದೇಹವನ್ನು ಮುಳುಗಿಸಿ ಇಡುವುದರಿಂದ ತೂಕ ಕಡಿಮೆ ಮಾಡಿಕೊಳ್ಳಬಹುದು ಎಂಬ ವಾದವಿದೆ. ಹೊಸ ಅಧ್ಯಯನಗಳ ಪ್ರಕಾರ ತಣ್ಣೀರಿನ ಸ್ನಾನ ಮಾಡುವುದರಿಂದ ತೂಕ ಕಳೆದುಕೊಳ್ಳಲು ಸಹಕಾರಿಯಾಗುವುದು. ಹೆಚ್ಚು ತಂಪಾಗಿರುವುದಕ್ಕೆ ಮೈಯನ್ನು ಒಡ್ಡಿಕೊಳ್ಳುವುದರಿಂದ ಕಂದು ಕೊಬ್ಬು ಹೆಚ್ಚಾಗುತ್ತದೆ. ಕಂದು ಕೊಬ್ಬು ಶಕ್ತಿಯನ್ನು ದಹಿಸುತ್ತದೆ.

ರಕ್ತ ಹೆಪ್ಪುಗಟ್ಟುವಂತಹ ಸಮಸ್ಯೆಗೆ....
ರಕ್ತ ಹೆಪ್ಪುಗಟ್ಟುವಂತಹ ಸಮಸ್ಯೆ ಇರುವವರು ನಿಯಮಿತವಾಗಿ ತಣ್ಣೀರಿನಲ್ಲಿ ಸ್ನಾನ ಮಾಡಿದರೆ ಒಳ್ಳೆಯದು. ತಣ್ಣೀರಿನ ಸ್ನಾನದ ಆರೋಗ್ಯಕರ ಲಾಭ ಇದಾಗಿದೆ. ಇದು ಅಂಗಾಂಗಗಳು ಹಾಗೂ ಚರ್ಮದ ರಕ್ತ ಸಂಚಲನವನ್ನು ಹೆಚ್ಚಿಸುತ್ತದೆ. ಆದರೆ ತುಂಬಾ ಚಳಿಗಾಲದಲ್ಲಿತಣ್ಣೀರಿನ ಸ್ನಾನ ಬೇಡ....

ಖಿನ್ನತೆಯಿಂದ ಮುಕ್ತಿ
ತಣ್ಣೀರಿನ ಸ್ನಾನ ಮಾಡುವುದರಿಂದ ಖಿನ್ನತೆಯನ್ನು ತಡೆಯಬಹುದು ಮತ್ತು ಅದರಿಂದ ಪರಿಹಾರ ಪಡೆಯಬಹುದು. ತಂಪಾದ ವಾತಾವರಣವು ಮೆದುಳನ್ನು ಉತ್ತೇಜಿಸಿ ತಂಪಾಗಿರಿಸುತ್ತದೆ. ತಣ್ಣೀರಿನ ಸ್ನಾನ ಮಾಡುವ ದೊಡ್ಡ ಆರೋಗ್ಯ ಲಾಭ ಇದಾಗಿದೆ.

ಶ್ವಾಸಕೋಶಕ್ಕೆ ಒಳ್ಳೆಯದು
ನಾವು ಕಠಿಣ ವ್ಯಾಯಾಮ ಮಾಡುವಾಗ ಶ್ವಾಸಕೋಶ ತೆರೆದುಕೊಳ್ಳುವಂತೆ ತಣ್ಣೀರಿನ ಸ್ನಾನ ಮಾಡುವ ವೇಳೆ ಕೂಡ ತೆರೆದುಕೊಳ್ಳುವುದು. ತಣ್ಣೀರಿನ ಸ್ನಾನ ಮಾಡುವುದರಿಂದ ನೀವು ಚೆನ್ನಾಗಿ ಉಸಿರಾಡಲು ಸಾಧ್ಯವಾಗುವುದು.

ಹಾರ್ಮೋನುಗಳಿಗಾಗಿ
ತಣ್ಣೀರಿನ ಸ್ನಾನ ಮಾಡುವುದರಿಂದ ಸಂತಾನೋತ್ಪತ್ತಿಯ ಅಂಗಾಂಗಗಳು ಬಲವನ್ನು ಪಡೆಯುತ್ತದೆ. ತಣ್ಣೀರಿನ ಸ್ನಾನದಿಂದ ಪುರುಷರಲ್ಲಿ ಟೆಸ್ಟೊಸ್ಟಿರಾನ್ ಉತ್ಪತ್ತಿ ಹೆಚ್ಚಾಗುತ್ತದೆ ಎಂದು ಅಧ್ಯಯನಗಳು ಹೇಳಿವೆ.

ಬಂಜೆತನ ನಿವಾರಣೆಗೆ
ಮೂರು ವಾರಗಳ ಕಾಲ ದಿನಾಲೂ ಬಿಸಿ ನೀರಿನ ಸ್ನಾನ ಮಾಡುವವರು ಮುಂದಿನ ಆರು ವಾರಗಳ ಕಾಲ ಬಂಜೆತನವನ್ನು ಎದುರಿಸುತ್ತಾರೆ ಎಂದು ಅಧ್ಯಯನಗಳು ಹೇಳಿವೆ. ಉತ್ತಮ ಫಲವತ್ತತೆಗಾಗಿ ತಣ್ಣೀರಿನ ಸ್ನಾನ ಮಾಡಿ. ಬೆಳಿಗ್ಗೆ ತಣ್ಣೀರಿನ ಸ್ನಾನ ಮಾಡುವ ಕೆಲವೊಂದು ಆರೋಗ್ಯ ಲಾಭಗಳು ಇದಾಗಿದೆ.



Click it and Unblock the Notifications
