For Quick Alerts
ALLOW NOTIFICATIONS  
For Daily Alerts

ಸೈನಸ್ ಸಮಸ್ಯೆಯ ಕಿರಿಕಿರಿ, ಇದಕ್ಕೆಲ್ಲಾ ಮನೆಮದ್ದೇ ಸರಿ

By manjula balaraj
|

ಸೈನಸ್ ಚಿಕ್ಕವರಿಂದ ಹಿಡಿದು ದೊಡ್ಡವರನ್ನೂ ಕಾಡುವ ರೋಗವಾಗಿದೆ. ಅಲರ್ಜಿ ಮತ್ತು ಸೋಂಕು ಇದಕ್ಕೆ ಮುಖ್ಯ ಕಾರಣವಾಗಿದ್ದು ಮೂಗು ಕಟ್ಟುವಿಕೆ ಸೈನಸ್ ಅನ್ನು ತೀವ್ರಗೊಳಿಸುತ್ತದೆ. ಇದರಿಂದ ಪೂರ್ಣ ಪ್ರಮಾಣದ ನಿವಾರಣೆಯನ್ನು ಪಡೆದುಕೊಳ್ಳಲು ಸಾಧ್ಯವಾಗದೇ ಹೋದರೂ ಕೆಲವೊಂದು ಮನೆಮದ್ದುಗಳನ್ನು ಪಾಲಿಸುವುದರಿಂದ ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದಾಗಿದೆ. ಸೈನಸ್ ನಿಮಗುಂಟು ಮಾಡುವ ಕಿರಿಕಿರಿಯನ್ನು ತಪ್ಪಿಸಲು ಕೆಲವೊಂದು ದೀರ್ಘ ಮತ್ತು ಅರೆಕಾಲಿಕ ಮದ್ದುಗಳನ್ನು ನಿಮಗೆ ತಯಾರಿಸಿಕೊಳ್ಳಬಹುದಾಗಿದೆ. ಸೈನಸ್ ಸಮಸ್ಯೆಯನ್ನು ಸರಳವಾಗಿ ಮೈನಸ್ ಮಾಡಿ!

ಅಜ್ಜಿ ಮದ್ದುಗಳು ಎಂದೇ ಕರೆಯಿಸಿಕೊಳ್ಳುವ ಅತ್ಯುತ್ತಮ ಮನೆಮದ್ದುಗಳು ಸೈನಸ್‌ನ ಕಿರಿಕಿರಿಯನ್ನು ನಿವಾರಣೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಆದಷ್ಟು ತಣ್ಣನೆಯ ಪಾನೀಯಗಳು ಮತ್ತು ಆಹಾರಗಳನ್ನು ವರ್ಜಿಸಿ ದೇಹವನ್ನು ಬಿಸಿಯಾಗಿರಿಸಿಕೊಳ್ಳುವುದೂ ಕೂಡ ನಿಮ್ಮನ್ನು ಸೈನಸ್‌ನಿಂದ ಕಾಪಾಡಲಿದೆ. ಹಾಗಿದ್ದರೆ ಇಂದಿನ ಲೇಖನದಲ್ಲಿ ಸೈನಸ್‌ನ ಕೆಲವೊಂದು ತೊಂದರೆಗಳನ್ನು ನಿಮಗೆ ನೀವೇ ನಿವಾರಿಸಿಕೊಳ್ಳುವುದು ಹೇಗೆ ಎಂಬುದನ್ನು ಅರಿತುಕೊಳ್ಳೋಣ. ಸೈನಸ್ ಗೆ ಸರಳವಾದ ಮನೆಮದ್ದು

ಸ್ಟೀಮ್

ಸ್ಟೀಮ್

ಸ್ಟೀಮ್ ತೆಗೆದುಕೊಳ್ಳುವುದು ಸೈನಸ್‌ನ ಹೆಚ್ಚಿನ ಸಮಸ್ಯೆಗಳನ್ನು ನಿವಾರಿಸುವಲ್ಲಿ ನಿಮಗೆ ಸಹಾಯ ಮಾಡಲಿದೆ. ಕಟ್ಟಿದ ಮೂಗನ್ನು ನಿವಾರಿಸಿ ತಲೆನೋವನ್ನು ನಿವಾರಿಸಿ ಆರಾಮವನ್ನುಂಟು ಮಾಡುತ್ತದೆ.

ಉಪ್ಪಿನ ಬಳಕೆ

ಉಪ್ಪಿನ ಬಳಕೆ

ಧೂಳು, ಕಲುಷಿತ ವಾತಾವರಣ ಮತ್ತು ಸುವಾಸನೆ ಕೂಡ ಸೈನಸ್‌ನ ಕಿರಿಕಿರಿಯನ್ನು ನಿಮ್ಮಲ್ಲಿ ಉಂಟುಮಾಡಬಹುದು. ಈ ಸಮಯದಲ್ಲಿ ಉಪ್ಪಿನ ದ್ರಾವಣ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲಿದೆ.

ಧೂಮಪಾನ

ಧೂಮಪಾನ

ಧೂಮಪಾನ ಮತ್ತು ಧೂಮಪಾನಿಗಳು ಸೇದಿ ಬಿಟ್ಟ ಹೊಗೆ ಕೂಡ ಸೈನಸ್ ಅನ್ನು ತೀವ್ರಗೊಳಿಸುತ್ತವೆ. ನೀವು ಧೂಮಪಾನಿಗಳಾಗಿದ್ದರೆ ಅದೂ ಸೈನಸ್‌ನಿಂದ ಬಳಲುವವರು ನೀವಾಗಿದ್ದಲ್ಲಿ ಇಂದೇ ನಿಮ್ಮ ಸೇವನೆಗೆ ತಿಲಾಂಜಲಿಯನ್ನಿಡಿ.

ಮೂಗಿನ ಸ್ಪ್ರೇ

ಮೂಗಿನ ಸ್ಪ್ರೇ

ಇಂದಿನ ವೈದ್ಯಕೀಯ ವಿಜ್ಞಾನ ಹೆಚ್ಚು ಮುಂದುವರಿದಿದೆ. ಮೂಗಿನ ಸ್ಪ್ರೇಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು ಸೈನಸ್‌ನಿಂದ ಉಂಟಾಗುವ ಮೂಗು ಕಟ್ಟುವಿಕೆಯನ್ನು ನಿವಾರಿಸುತ್ತದೆ. ಈ ಸ್ಪ್ರೇಯ ಒಂದೆರಡು ಹನಿ ಕಟ್ಟಿದ ಮೂಗನ್ನು ನಿವಾರಿಸಿ ಆರಾಮ ನೀಡುತ್ತದೆ.

ಅಲರ್ಜಿಗಳ ಬಗ್ಗೆ ಗಮನವಿರಲಿ

ಅಲರ್ಜಿಗಳ ಬಗ್ಗೆ ಗಮನವಿರಲಿ

ನಿಮಗೆ ಉಂಟಾಗುವ ಅಲರ್ಜಿಗಳ ಬಗ್ಗೆ ನಿಮಗೆ ಗೊತ್ತಿದ್ದಲ್ಲಿ ಸೈನಸ್‌ನ ಕೆಲವೊಂದು ಭೀಕರ ಪರಿಣಾಮಗಳಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಬಹುದಾಗಿದೆ. ಅಲರ್ಜಿಗಳು ಸೈನಸ್‌ಗೆ ಕಾರಣವಾಗಿದೆ ಎಂದಾದಲ್ಲಿ ಆದಷ್ಟು ಬೇಗ ಅದಕ್ಕೆ ತಕ್ಕುದಾದ ಆರೈಕೆಯನ್ನು ಪಡೆದುಕೊಳ್ಳಿ.

ತೂಕ ನಿಯಂತ್ರಣ

ತೂಕ ನಿಯಂತ್ರಣ

ಅಧಿಕ ತೂಕ ಕೂಡ ಸೈನಸ್‌ಗೆ ಕಾರಣವಾಗಲಿದೆ. ನಿಮ್ಮ ತೂಕ ನಿಯಂತ್ರಣದಲ್ಲಿದೆಯೇ ಎಂಬುದನ್ನು ಕಂಡುಕೊಳ್ಳಿ. ನಿಮ್ಮ ಪೌಷ್ಟಿಕ ತಜ್ಞರನ್ನು ಇಂದೇ ಭೇಟಿ ಮಾಡಿ ಹಾಗೂ ತೂಕ ನಿಖರವಾಗಿದೆಯೇ ಎಂಬುದನ್ನು ಕಂಡುಕೊಳ್ಳಿ.

ಶಸ್ತ್ರಚಿಕಿತ್ಸೆ

ಶಸ್ತ್ರಚಿಕಿತ್ಸೆ

ಮನೆಮದ್ದುಗಳು ಫಲಪ್ರದವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದಾದಲ್ಲಿ ಸೂಕ್ತವಾದ ಶಸ್ತ್ರಚಿಕಿತ್ಸೆಯ ಮೂಲಕ ಸೈನಸ್ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಿ.

English summary

Grandma Remedies To Clear Sinus Congestion

Sinus is a problem which is faced by a lot of people. The common causes include allergies and infections, but your congestion could also be caused by structural problems with your nose and sinuses. To get rid of this problem is rather difficult, but there are a handful of ways which you can follow to get rid of the uncomfortable feeling. Take a look at these tricks to help feel better:
X
Desktop Bottom Promotion