For Quick Alerts
ALLOW NOTIFICATIONS  
For Daily Alerts

ಜ್ವರದ ಲಸಿಕೆಯಿಂದ ಹೃದಯಾಘಾತ-ಪಾರ್ಶ್ವವಾಯು ನಿಯಂತ್ರಣಕ್ಕೆ!

By Jaya subramanya
|

ಜ್ವರಕ್ಕೆ ತೆಗೆದುಕೊಳ್ಳುವ ಲಸಿಕೆಯು ಎರಡನೇ ವಿಧ ಡಯಾಬಿಟೀಸ್ (ಟೈಪ್ 2 ಡಯಾಬಿಟೀಸ್) ಇರುವ ಜನರಲ್ಲಿ ಪಾರ್ಶ್ವವಾಯು ಮತ್ತು ಹೃದಯಾಘಾತದಂತಹ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ ಎಂಬುದಾಗಿ ಹೊಸ ಸಂಶೋಧನೆಯೊಂದು ತಿಳಿಸಿದೆ. ಜ್ವರ ಋತುವಿನಲ್ಲಿ ಲಸಿಕೆಯನ್ನು ಪಡೆದ ರೋಗಿಗಳಲ್ಲಿ 24 ಶೇಕಡಾದಷ್ಟು ಮರಣ ಪ್ರಮಾಣವು ಲಸಿಕೆಯನ್ನು ಪಡೆಯದವರಿಗೆ ಹೋಲಿಸಿದಾಗ ಕಡಿಮೆ ಇದೆ.

ಹೆಚ್ಚಿನ ಜ್ವರದ ಕಾರಣದಿಂದ ಉಂಟಾಗುವ ಮರಣಗಳು ಟೈಪ್ 2 ಡಯಾಬಿಟೀಸ್‎ನಂತಹ ಆರೋಗ್ಯ ಪರಿಸ್ಥಿತಿಗಳಂತಹ ಪೂರ್ವ ಅಸ್ತಿತ್ವದ ಜನರಲ್ಲಿ ಉಂಟಾಗುತ್ತಿದೆ. ಎಂಬುದಾಗಿ ಇಂಪೀರಿಯಲ್ ಕಾಲೇಜು ಲಂಡನ್‎ನ ಈಸ್ಟರ್ ವೇಮಸ್ ತಿಳಿಸಿದ್ದಾರೆ.

ಲಸಿಕೆಯು ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಿಗೆ ಗಣನೀಯ ಪ್ರಯೋಜನಗಳನ್ನು ಉಂಟುಮಾಡುತ್ತಿದೆ. ಇದು ಹೆಚ್ಚು ಗಂಭೀರ ರೋಗಗಳಾದ ಹೃದಯಾಘಾತ, ಪಾರ್ಶ್ವವಾಯು, ಗಂಭೀರ ಅಪಾಯಗಳನ್ನು ನಿವಾರಿಸುವುದು ಮಾತ್ರವಲ್ಲದೆ, ಜ್ವರದ ಋತುಮಾನಲ್ಲಿ ಉಂಟಾಗುವ ಮರಣವನ್ನು ಕಡಿಮೆ ಮಾಡಲಿದೆ. ಎಂಬುದಾಗಿ ವೇಮಸ್ ಸೂಚಿಸಿದ್ದಾರೆ.

Flu Vaccine May Cut Heart Failure Risk In Diabetes Patients: Finds Research

ಟೈಪ್ 2 ಮಧುಮೇಹವು ರಕ್ತದ ಸಕ್ಕರೆಯನ್ನು ಸರಿಯಾದ ಪ್ರಮಾಣದಲ್ಲಿ ನಿಯಂತ್ರಿಸಲು ಸಾಧ್ಯವಾಗದವರಲ್ಲಿ ಕಂಡುಬರುತ್ತದೆ. ಹೃದಯ ರೋಗ ಮತ್ತು ಪಾರ್ಶ್ವವಾಯುವನ್ನು ಒಳಗೊಂಡಿರುವ ಹೃದಯ ರೋಗವನ್ನು ಅಭಿವೃದ್ಧಿಪಡಿಸುವ ಅಪಾಯವನ್ನು ಎದುರಿಸಬೇಕಾಗುತ್ತದೆ, ಹೆಚ್ಚುವರಿ ರಕ್ತದ ಸಕ್ಕರೆ ಪ್ರಮಾಣವು ರಕ್ತನಾಳಗಳನ್ನು ಹಾನಿ ಮಾಡುತ್ತದೆ. ಇಷ್ಟಲ್ಲದೆ, ಜ್ವರದ ಸೋಂಕು ಹೃದಯಾಘಾತವನ್ನು ಹೆಚ್ಚಿಸುವ ಅಪಾಯವಿರುತ್ತದೆ ಅಥವಾ ಹೃದಯ ರೋಗ ಇರುವವರಲ್ಲಿ ಪಾರ್ಶ್ವವಾಯುವಿನಂತ ಅಪಾಯ ಕೂಡ ಇರುತ್ತದೆ.

2003 ಮತ್ತು 2010 ರ ನಡುವೆ ಟೈಪ್ 2 ಡಯಾಬಿಟೀಸ್ ಇರುವ 124,503 ಬ್ರಿಟೀಷ್ ಜನರಲ್ಲಿ ತಂಡವು ಅಧ್ಯಯನವನ್ನು ನಡೆಸಿದೆ. ಹೆಚ್ಚು ಕಡಿಮೆ 65 ಶೇಕಡಾದಷ್ಟು ರೋಗಿಗಳು ಫ್ಲು ಲಸಿಕೆಯನ್ನು ಪಡೆದುಕೊಂಡಿದ್ದಾರೆ. ಲಸಿಕೆಯನ್ನು ಪಡೆಯದೇ ಇರುವ ರೋಗಿಗಳಿಗೆ ಹೋಲಿಸಿದಾಗ, ಪಾರ್ಶ್ವವಾಯುಗಾಗಿ ಆಸ್ಪತ್ರೆಯಲ್ಲಿ ದಾಖಲಾದವರಲ್ಲಿ 30 ಶೇಕಡಾ ಇಳಿಕೆಯಾಗಿದೆ, ಹೃದಯಾಘಾತ ದಾಖಲಾತಿಗಳಲ್ಲಿ 22 ಶೇಕಡಾ ಇಳಿಕೆಯಾಗಿದೆ ಮತ್ತು ನ್ಯುಮೋನಿಯಾ ಅಥವಾ ಇನ್ಫ್ಲುಯೆಂಜಾ ದಾಖಲಾತಿಗಳಲ್ಲಿ 15 ಶೇಕಡಾ ಇಳಿಕೆಯಾಗಿದೆ. ಇಷ್ಟಲ್ಲದೆ ಲಸಿಕೆಯನ್ನು ಪಡೆಯದವರಿಗಿಂತ ಲಸಿಕೆಯನ್ನು ಪಡೆದ ಜನರಲ್ಲಿ 24 ಶೇಕಡಾದಷ್ಟು ಮರಣ ಸಂಖ್ಯೆ ಕಡಿಮೆಯಾಗಿದೆ. ಎಂಬುದು ನಿಯತಕಾಲಿಕೆಯೊಂದರಲ್ಲಿ ಪ್ರಕಟವಾಗಿದೆ.

(ಐಎಎನ್ಎಸ್ ವರದಿ)

English summary

Flu Vaccine May Cut Heart Failure Risk In Diabetes Patients: Finds Research

Flu vaccine may reduce the likelihood of being hospitalised with stroke and heart failure in people with type 2 diabetes, a new research has found. The study also found that patients who received the influenza vaccination had a 24 per cent lower death rate in the flu season compared to patients who were not vaccinated.
Story first published: Thursday, July 28, 2016, 19:53 [IST]
X
Desktop Bottom Promotion