For Quick Alerts
ALLOW NOTIFICATIONS  
For Daily Alerts

ಇಂತಹ ಹಣ್ಣಿನ ಜ್ಯೂಸ್‌ನೊಂದಿಗೆ ಮಾತ್ರೆಗಳನ್ನು ಸೇವಿಸಬೇಡಿ!

By manu
|

ಆರೋಗ್ಯಕ್ಕಾಗಿ ಮಾತ್ರೆಗಳನ್ನು ನಿತ್ಯವೂ ತಿನ್ನುವುದು ಕೆಲವರಿಗೆ ಅನಿವಾರ್ಯವಾಗಿರುತ್ತದೆ. ಪ್ರತಿ ಊಟದ ಬಳಿಕವೂ ತಿನ್ನಲು ವೈದ್ಯರು ಬಣ್ಣಬಣ್ಣದ ಗುಳಿಗೆಗಳನ್ನು ನೀಡಿದ್ದು ತಪ್ಪದೇ ಸೇವಿಸಬೇಕಾಗಿರುತ್ತದೆ. ಕೆಲವರು ಈ ಮಾತ್ರೆಗಳನ್ನು ಬೆಳಗ್ಗಿನ ಉಪಾಹಾರದ ಸಮಯದಲ್ಲಿ ನೀರಿನ ಬದಲು ಹಣ್ಣಿನ ರಸದೊಂದಿಗೆ ಸೇವಿಸುವುದನ್ನು ಅಭ್ಯಾಸ ಮಾಡಿಕೊಂಡಿರುತ್ತಾರೆ. ಈ ಏಳು ಹಣ್ಣುಗಳ ಜ್ಯೂಸ್ ಆರೋಗ್ಯಕ್ಕೆ ಬಹಳ ಒಳ್ಳೆಯದು

ಆದರೆ ಈ ಅಭ್ಯಾಸದಿಂದ ವ್ಯತಿರಿಕ್ತ ಪರಿಣಾಮ ಉಂಟಾಗಬಹುದು. ಈ ಬಗ್ಗೆ ನಡೆದ ಸಂಶೋಧನೆಯಲ್ಲಿ ಹಲವಾರು ಹಣ್ಣಿನ ರಸಗಳ ಪರಿಣಾಮವನ್ನು ಅಭ್ಯಸಿಸಿ ಒಟ್ಟು ಐದು ಬಗೆಯ ಹಣ್ಣುಗಳ ರಸವನ್ನು ಔಷಧಿಗಳ ಜೊತೆಗೆ ಸೇವಿಸುವುದು ಮಾರಕ ಎಂಬ ಅಭಿಪ್ರಾಯಕ್ಕೆ ಬರಲಾಗಿದೆ. ನೀರು ಮತ್ತು ಹಣ್ಣಿನ ಜ್ಯೂಸ್-ಇವೆರಡರಲ್ಲಿ ಯಾರು ಹಿತವರು?

ಏಕೆಂದರೆ ಈ ಹಣ್ಣುಗಳ ರಸಗಳೇ ನಮ್ಮ ಜೀರ್ಣಾಂಗಗಳಲ್ಲಿ ಕರಗಿನ ಬಳಿಕ ಔಷಧಿಯ ಕೆಲಸ ಮಾಡುತ್ತಿದ್ದು ಮಾತ್ರೆಯ ರಾಸಾಯನಿಕಗಳು ಇದರೊಂದಿಗೆ ಸೇರಿದಾಗ ಎರಡೂ ದ್ರವಗಳು ಸಂಯೋಜನೆಗೊಂಡು ಬೇರೆಯೇ ರಾಸಾಯನಿಕವಾಗಿ ಅಗತ್ಯವಾದ ಪರಿಣಾಮವನ್ನು ಒದಗಿಸುವ ಬದಲು ಬೇರೆಯೇ ಪರಿಣಾಮವನ್ನು ಒದಗಿಸಬಹುದು. ಬನ್ನಿ, ಈ ಐದು ಜ್ಯೂಸ್‌ಗಳು ಯಾವುವು ಎಂಬುದನ್ನು ವಿವರಿಸಿದ್ದೇವೆ ಮುಂದೆ ಓದಿ...

ಕ್ಯ್ರಾನ್ಬೆರಿ ಹಣ್ಣಿನ ರಸ

ಕ್ಯ್ರಾನ್ಬೆರಿ ಹಣ್ಣಿನ ರಸ

ಒಂದು ವೇಳೆ ನೀವು ಸೇವಿಸುವ ಔಷಧಿಗಳಲ್ಲಿ warfarin ಎಂಬ ರಾಸಾಯನಿಕ ಇದೆಯೋ ಗಮನಿಸಿ. ಇದು ರಕ್ತ ಹೆಪ್ಪುಗಟ್ಟಿಸುವುದನ್ನು ತಡೆಯುವ ರಾಸಾಯನಿಕವಾಗಿದ್ದು ವಿಶೇಷವಾಗಿ ಹೃದಯಸ್ತಂಭನದ ಸಾಧ್ಯತೆ ಇರುವ ರೋಗಿಗಳಿಗೆ ನೀಡಲಾಗುತ್ತದೆ. ಒಂದು ವೇಳೆ ಈ ಔಷಧಿಯೊಂದಿಗೆ ಕ್ಯ್ರಾನ್ಬೆರಿ ಹಣ್ಣಿನ ರಸವನ್ನು ಸೇರಿಸಿದರೆ ರಾಸಾಯನಿಕದ ಪ್ರಭಾವ ಕುಂಠಿತವಾಗುತ್ತದೆ. ಕ್ಯ್ರಾನ್ಬೆರಿ ಹಣ್ಣಿನ ರಸದಲ್ಲಿರುವ ಫ್ಲೇವನಾಯ್ಡುಗಳು ಮತ್ತು ಪೋಷಕಾಂಶಗಳು ಈ ವಾರ್ಫಾರಿನ್ ರಾಸಾಯನಿಕದ ಕಾರ್ಯವೈಖರಿಯನ್ನೇ ಬದಲಿಸುತ್ತವೆ. ರಕ್ತ ಹೆಪ್ಪುಗಟ್ಟಿಸುವುದನ್ನು ತಡೆಯುವ ಬದಲು ಹೆಚ್ಚು ಪ್ರೋತ್ಸಾಹಿಸುವ ಸಂಭವ ಇರುವ ಕಾರಣ ರೋಗಿಯ ಹೃದಯದ ತೊಂದರೆಯ ಸಾಧ್ಯತೆಗಳು ಹೆಚ್ಚುತ್ತವೆ.

ಸೇಬು ಹಣ್ಣಿನ ರಸ

ಸೇಬು ಹಣ್ಣಿನ ರಸ

ಇತ್ತೀಚಿನವರೆಗೂ ಚಕ್ಕೋತ ಅಥವಾ grapefruit ಹಣ್ಣಿನ ರಸವೇ ಮಾತ್ರೆಗಳ ಪರಿಣಾಮವನ್ನು ಬದಲಿಸುತ್ತದೆ ಎಂದು ತಿಳಿದುಕೊಳ್ಳಲಾಗಿತ್ತು. ಆದರೆ ಈಗ ಸೇಬಿನ ರಸಕ್ಕೂ ಈ ದುರ್ಬುದ್ಧಿ ಇದೆ ಎಂದು ಗೊತ್ತಾಗಿದೆ. ವಿಶೇಷವಾಗಿ ವಾರ್ಫಾರಿನ್ ಔಷಧಿಯನ್ನು ಸೇವಿಸುವ ರೋಗಿಗಳು ಸೇಬಿನ ರಸವನ್ನೂ ಸೇವಿಸಿದಾಗ ಔಷಧಿಯ ಪರಿಣಾಮ ಆಗದೇ ಇರುವುದು ಕಂಡುಬಂದಿದೆ. ಅದರಲ್ಲೂ ಕ್ಯಾನ್ಸರ್ ನ ಚಿಕಿತ್ಸೆಯಾದ ಖೀಮೋಥೆರಪಿ ಅಥವಾ ಅಟೆನಲಾಲ್ (Atenolol) ಎಂಬ ಅಧಿಕ ರಕ್ತದೊತ್ತಡ ಕಡಿಮೆ ಮಾಡುವ ಔಷಧಿಯನ್ನು ಸೇವಿಸುತ್ತಿದ್ದರೆ ಚಕ್ಕೋತ ಅಥವಾ ಸೇಬಿನ ರಸವನ್ನು ಕುಡಿಯದೇ ಇರುವಂತೆ ನೋಡಿಕೊಳ್ಳಿ.

ಅನಾನಸ್ ರಸ

ಅನಾನಸ್ ರಸ

ಒಂದು ವೇಳೆ ನೀವು ರಕ್ತವನ್ನು ತಿಳಿಗೊಳಿಸುವ ಔಷಧಿಗಳನ್ನು ಸೇವಿಸುತ್ತಿದ್ದರೆ ಅನಾನಸ್ ನಿಮಗಲ್ಲ. ಏಕೆಂದರೆ ಇದರಲ್ಲಿರುವ ಬ್ರೊಮಿಲೈನ್ ಎಂಬ ಪೋಷಕಾಂಶ ಈ ಔಷಧಿಯ ಪರಿಣಾಮವನ್ನು ಕಡಿಮೆ ಮಾಡುತ್ತದೆ. ಇದರ ಜೊತೆಗೇ ಬ್ರೋಮಿಲೈನ್ ಆಂಟಿ ಬಯಾಟಿಕ್ ಮತ್ತು ನೋವು ನಿವಾರಕ ಔಷಧಿಗಳೊಂದಿಗೂ ಸಂಯೋಜನೆಗೊಂಡು ಇವುಗಳ ಕ್ಷಮತೆಯನ್ನು ಉಡುಗಿಸುತ್ತದೆ. ಒಂದು ವೇಳೆ ರೋಗಿಗೆ ಖಿನ್ನತೆ ಕಡಿಮೆ ಮಾಡಲು benzodiazepine ಎಂಬ ಔಷಧಿಯನ್ನು ನೀಡುತ್ತಿದ್ದರೆ ಅನಾನಾಸನ್ನು ಸರ್ವಥಾ ನೀಡಬಾರದು.

ಕಿತ್ತಳೆ ರಸ

ಕಿತ್ತಳೆ ರಸ

ಕಿತ್ತಳೆ ರಸವನ್ನು ವಿಶೇಷವಾಗಿ ರೋಗಿಗಳಿಗೆ ಶೀಘ್ರವಾಗಿ ಗುಣಮುಖರಾಗಲು ಹಾರೈಸಿ ನೀಡಲಾಗುತ್ತದೆ. ಮುಂದಿನ ಬಾರಿ ಈ ಯೋಚನೆ ಬಂದರೆ ಕೊಂಚ ತಾಳುವುದು ಉತ್ತಮ. ಏಕೆಂದರೆ ಈ ಹಣ್ಣಿನಲ್ಲಿರುವ ಹೆಚ್ಚಿನ ಪ್ರಮಾಣದ ಸಿಟ್ರಸ್ ಆಮ್ಲ ಹಲವಾರು ಔಷಧಿಗಳನ್ನು ಕರಗಿಸಿಕೊಳ್ಳಬಲ್ಲ ಕ್ಷಮತೆ ಹೊಂದಿದ್ದು ರೋಗಿ ಶೀಘ್ರವಾಗಿ ಗುಣಮುಖರಾಗುವ ಬದಲು ಇನ್ನಷ್ಟು ಹೆಚ್ಚು ಕಾಲ ಹಾಸಿಗೆ ಹಿಡಿಯುವಂತಾಗ ಬಹುದು. ಅಲ್ಲದೇ ಕ್ಯಾನ್ಸರ್‌ಗೆ ಕಾರಣವಾಗಬಲ್ಲ ಬೀಟಾ ಕಣಗಳನ್ನು ತಡೆಯುವ ಸಾಮರ್ಥವಿರುವ ಔಷಧಿಗಳಿಗೂ ಈ ಕಿತ್ತಳೆರಸ ಅಡ್ಡಗಾಲು ಹಾಕುತ್ತದೆ. ಆದ್ದರಿಂದ ವೈದ್ಯರ ಅನುಮತಿಯ ಹೊರತು ಕಿತ್ತಳೆ ರಸದ ಸೇವನೆ ಸಲ್ಲದು.

ಚಕ್ಕೋತ (grapefruit)

ಚಕ್ಕೋತ (grapefruit)

ಒಂದು ವೇಳೆ ರೋಗಿ ಸೇವಿಸುವ ಔಷಧಿಗಳಲ್ಲಿ simvastatin, atorvastatin, pravastati, cyclosporine, buspirone, Cordarone, Nexterone, amiodarone, fexofenadine ಎಂಬ ರಾಸಾಯನಿಕಗಳಿವೆಯೇ ಗಮನಿಸಿ. ಇದ್ದರೆ ಚಕ್ಕೋತ ಸಹಿತ ಯಾವುದೇ ಲಿಂಬೆಜಾತಿಯ ಹಣ್ಣಿನ ರಸದ ಸೇವನೆ ಬೇಡ. ಅಷ್ಟಕ್ಕೂ ಔಷಧಿ ಸೇವಿಸುವ ಅವಧಿಯಲ್ಲಿ ಚಕ್ಕೋತದ ಸಹವಾಸವೇ ಬೇಡ.

English summary

Five Fruit juices you should not have with medicines

However, if you have a habit of taking your medicines during breakfast along with some fruit juices, it could lead to a medicine reaction. Studies have found that taking your medicines with these five fruit juices can change how your medicine works and prove to be counter-productive as it reduces the effectiveness of drugs.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more