For Quick Alerts
ALLOW NOTIFICATIONS  
For Daily Alerts

ಸಡನ್ ಆಗಿ ಕಣ್ಣಿಗೆ ಗಾಯವಾದರೆ- ಪ್ರಥಮ ಚಿಕಿತ್ಸೆ ಹೀಗಿರಲಿ

By Manu
|

ಕಣ್ಣಿದ್ದರೆ ಇಡೀ ಪ್ರಪಂಚವೇ ಬೆಳಕು. ಅದೇ ಕಣ್ಣಿಲ್ಲವೆಂದಾದರೆ ಕತ್ತಲೂ ಆವರಿಸಿದಂತೆ. ದೇಹದಲ್ಲಿರುವ ಅತೀ ಸೂಕ್ಷ್ಮ ಅಂಗಗಳಲ್ಲಿ ಕಣ್ಣು ಮೊದಲನೇಯದ್ದಾಗಿದೆ. ಕಣ್ಣನ್ನು ತುಂಬಾ ಎಚ್ಚರಿಕೆಯಿಂದ ಕಾಪಾಡಿಕೊಳ್ಳುವುದು ಅಗತ್ಯ. ಆದರೆ ಅಪಾಯವೆನ್ನುವುದು ಹೇಳಿಕೇಳಿ ಬರುವುದಿಲ್ಲ. ಕಣ್ಣಿಗೂ ಕೆಲವೊಂದು ಸಲ ಗಾಯಗಳಾಗಬಹುದು. ಆದರೆ ಇಂತಹ ಸಮಯದಲ್ಲಿ ನಮಗೆ ಕೆಲವೊಂದು ಪ್ರಥಮ ಚಿಕಿತ್ಸೆಗಳು ತಿಳಿದಿದ್ದರೆ ಅದರಿಂದ ಮುಂದೆ ಆಗಬಹುದಾದ ದೊಡ್ಡ ಅಪಾಯವನ್ನು ತಡೆಯಬಹುದಾಗಿದೆ.

First aid for various types of eye injuries

ಕಣ್ಣಿಗೆ ಸಣ್ಣ ಗಾಯವಾದರೂ ಅದನ್ನು ಕಡೆಗಣಿಸಿದರೆ ಮುಂದೆ ದೃಷ್ಟಿಯೇ ಕಳಕೊಳ್ಳುವಂತಹ ಸಂದರ್ಭ ಬರಬಹುದು. ವೆಲ್ಡರ್ ಮತ್ತು ಗ್ರೈಡಿಂಗ್ ಮೆಷಿನ್‌ಗಳಲ್ಲಿ ಕೆಲಸ ಮಾಡುವಂತವರಿಗೆ ಇಂತಹ ಅಪಾಯಗಳು ಹೆಚ್ಚು. ಇದನ್ನು ತಡೆಯಲು ಯಾವಾಗಲೂ ಕಣ್ಣಿಗೆ ಗ್ಲಾಸ್ ಹಾಕಿಕೊಂಡೇ ಕೆಲಸ ಮಾಡಬೇಕು. ಇದರಿಂದ ಬರುವಂತಹ ಅಪಾಯವನ್ನು ತಡೆಗಟ್ಟಬಹುದಾಗಿದೆ.

ಕಣ್ಣಿಗೆ ಗಾಯವಾದಾಗ ಯಾವ ರೀತಿಯ ಪ್ರಥಮ ಚಿಕಿತ್ಸೆ ನೀಡಬಹುದು ಎನ್ನುವ ಬಗ್ಗೆ ಆರೋಗ್ಯ ತಜ್ಞರು ಕೆಲವೊಂದು ಮಾಹಿತಿಗಳನ್ನು ನೀಡಿದ್ದಾರೆ. ಇದನ್ನು ತಿಳಿದುಕೊಂಡು ಮುಂದುವರಿದರೆ ದೊಡ್ಡ ಅಪಾಯವನ್ನು ತಡೆಯಬಹುದು. ನೆನಪಿರಲಿ ಮಧುಮೇಹ ಕಣ್ಣನ್ನೂ ಬಾಧಿಸುತ್ತದೆ!

First aid for various types of eye injuries

ಕಣ್ಣಿಗೆ ಗಾಯವಾದಾಗ ಕಂಡುಬರುವ ಸಾಮಾನ್ಯ ಲಕ್ಷಣಗಳು

*ನೋವು

*ದೃಷ್ಟಿ ಮಂದುವಾಗುವುದು

*ನೀರು ಬರುವುದು

*ಕಣ್ಣು ತೆರೆಯಲು ಕಷ್ಟವಾಗುವುದು

First aid for various types of eye injuries

ಬಾಹ್ಯ ವಸ್ತುಗಳು ಕಣ್ಣು ಸೇರುವುದರಿಂದ ಆಗುವ ತೊಂದರೆಗಳು

ಬಾಹ್ಯ ವಸ್ತುಗಳಾದ ಕಸ, ಕಬ್ಬಿಣದ ಚೂರು ಅಥವಾ ಗಾಜಿನ ಚೂರು ಕಣ್ಣನ್ನು ಸೇರಿದಾಗ ಏನು ಮಾಡಬೇಕು?

•ಕಣ್ಣನ್ನು ತಿಕ್ಕಬೇಡಿ

•ಕಣ್ಣಿನ ಬಿಳಿಯ ಭಾಗದಲ್ಲಿ ಯಾವುದೇ ಕಸ ಕಾಣುತ್ತಿದೆಯಾ ಎಂದು ನೋಡಿ.

•ಕಸ ಕಂಡರೆ ಮೇಲಿನ ರೆಪ್ಪೆಯನ್ನು ಕೆಳಗೆ ಮಾಡಿಕೊಂಡು ಸತತವಾಗಿ ಕಣ್ಣು ಮುಚ್ಚಿರಿ ಮತ್ತು ತೆರೆಯಿರಿ.

•ಕಸ ಹೊರಗೆ ಬರಲು ತಂಪಾದ ನೀರಿನಿಂದ ಕಣ್ಣನ್ನು ತೊಳೆಯಿರಿ.

First aid for various types of eye injuries

•ಪಿನ್, ಉಗುರು ಮತ್ತು ಬೆರಳನ್ನು ಕಸ ತೆಗೆಯಲು ಬಳಸಬೇಡಿ.

•ಇದರಿಂದ ಯಾವುದೇ ಪ್ರಯೋಜವಾಗದಿದ್ದರೆ ಕಣ್ಣಿಗೆ ಬ್ಯಾಂಡೇಜ್ ಹಾಕಿಕೊಂಡು ನೇರವಾಗಿ ವೈದ್ಯರ ಬಳಿ ಹೋಗಿ.

•ಕಣ್ಣಿನ ಕಪ್ಪು ಭಾಗದಲ್ಲಿ ಕಸ ಕುಳಿತ್ತಿದ್ದರೆ ನೇರವಾಗಿ ವೈದ್ಯರ ಬಳಿಗೆ ತೆರಳಿ ಅದನ್ನು ತೆಗೆಸಿಕೊಳ್ಳಿ. ದಣಿದ ಕಣ್ಣುಗಳಿಗೆ, ತ್ವರಿತ ಸಾಂತ್ವನ ನೀಡುವ ಮನೆಮದ್ದು

ರಾಸಾಯನಿಕಗಳ ಪ್ರವೇಶ

*ಮನೆಯಲ್ಲಿ ಅಥವಾ ಬೇರೆ ಕಡೆ ಕೆಲಸ ಮಾಡುವಾಗ ಯಾವುದಾದರೂ ರಾಸಾಯನಿಕ ಕಣ್ಣಿನೊಳಗೆ ಸೇರಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ಇಂತಹ ಸಮಯದಲ್ಲಿ ತುಂಬಾ ತಾಳ್ಮೆ ವಹಿಸಬೇಕು ಮತ್ತು ಕಣ್ಣು ಮುಚ್ಚಬಾರದು.

*ಕಣ್ಣು ಮುಚ್ಚಿದರೆ ರಾಸಾಯನಿಕವು ಮತ್ತಷ್ಟು ಹಾನಿಯುಂಟು ಮಾಡುವ ಸಾಧ್ಯತೆಯಿದೆ.

*ರಾಸಾಯನಿಕ ಬಿದ್ದ ತಕ್ಷಣ ಕಣ್ಣು ಮುಚ್ಚದೆ ಸುಮಾರು 15ರಿಂದ 30 ನಿಮಿಷ ಕಾಲ ಕಣ್ಣನ್ನು ತೊಳೆಯುತ್ತಾ ಇರಿ.

*ಈ ರೀತಿಯಾದಾಗ ವೈದ್ಯಕೀಯ ನೆರವು ಪಡೆಯಿರಿ.

*ಕಣ್ಣನ್ನು ಉಜ್ಜಿಕೊಳ್ಳಬೇಡಿ ಮತ್ತು ಬ್ಯಾಂಡೇಜ್ ಹಾಕಬೇಡಿ. ಕಣ್ಣಿನ ದೃಷ್ಟಿ ಸಾಮರ್ಥ್ಯ ಕಾಪಾಡಲು ಆಯುರ್ವೇದ ಟಿಪ್ಸ್

First aid for various types of eye injuries

ಕಣ್ಣಿಗೆ ಏನಾದರೂ ಬಡಿದಾಗ

*ಮಕ್ಕಳು ಆಟವಾಡುತ್ತಿರುವಾಗ ಕಣ್ಣಿಗೆ ಚೆಂಡು ಬಂದು ಬಡಿಯುವುದು ಸಾಮಾನ್ಯ ಮತ್ತು ಗಾಳಿಯಲ್ಲಿ ಏನಾದರೂ ಬಂದು ದೊಡ್ಡವರ ಕಣ್ಣಿಗೆ ಬಡಿಯಬಹುದು.

*ಈ ರೀತಿಯಾದಾಗ ಲಘುವಾಗಿ ಕಣ್ಣನ್ನು ತಂಪಾದ ಬಟ್ಟೆಯಿಂದ ಒತ್ತಿಕೊಳ್ಳಿ.

*ಮರುದಿನ ಬಿಸಿ ನೀರಿನಲ್ಲಿ ಬಟ್ಟೆಯನ್ನು ಅದ್ದಿ ಕಣ್ಣಿಗೆ ಒತ್ತಿಕೊಳ್ಳಬಹುದು.

*ಕಣ್ಣು ತೆರೆಯಲು ಕಷ್ಟವಾಗುತ್ತಿದ್ದರೆ, ದೃಷ್ಟಿ ಸರಿಯಾಗಿರದಿದ್ದರೆ ಅಥವಾ ನೋವಿದ್ದರೆ ವೈದ್ಯರನ್ನು ತಕ್ಷಣ ಭೇಟಿಯಾಗಿ ಚಿಕಿತ್ಸೆ ಪಡೆಯಿರಿ.

English summary

First aid for various types of eye injuries

Injuries are always sudden and being equipped with first aid techniques comes handy at all times. Eye injuries can be very critical as eyes are delicate and sensitive. If not attended to correctly and in time, a simple eye injury can also lead to vision loss.
Story first published: Monday, July 11, 2016, 17:01 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more