For Quick Alerts
ALLOW NOTIFICATIONS  
For Daily Alerts

ಆಪಲ್ ಸಿಡೆರ್ ವಿನೆಗರ್- ಕಿಡ್ನಿ ಕಲ್ಲಿನ ಸಮಸ್ಯೆಗೆ ರಾಮಬಾಣ

By Deepu
|

ಮೂತ್ರಪಿಂಡದಲ್ಲಿ ಕಲ್ಲುಗಳು (ಕಿಡ್ನಿ ಸ್ಟೋನ್‌)ಸೇರಿಕೊಳ್ಳುವುದು ಎಂದರೆ, ಅದರಲ್ಲಿ ಖನಿಜಾಂಶ ಮತ್ತು ಆಮ್ಲದ ಕಲ್ಲುಗಳು ಸೇರಿಕೊಳ್ಳುವುದು ಎಂದರ್ಥ. ಇವುಗಳು ಕಾಣಿಸಿಕೊಂಡರೆ ಅದನ್ನು ಹೊಂದಿರುವವರಿಗೆ ಮಾತ್ರ ಗೊತ್ತು ಅದು ಅದೆಂತಹ ವೇದನೆಯನ್ನು ನೀಡುತ್ತದೆ ಎಂದು. ಎಂತಹ ಗಟ್ಟಿ ಆಳನ್ನು ಸಹ ಮೆತ್ತಗೆ ಮಾಡಿಬಿಡುವಂತಹ, ಜೀವವನ್ನು ಹಿಂಡಿ ಹಾಕುವಂತಹ ಅಸಾಧ್ಯ ವೇದನೆಯನ್ನು ಈ ಕಲ್ಲುಗಳು ನೀಡುತ್ತದೆ.

ಹಾಗೆಂದು ಈ ಕಲ್ಲುಗಳು ಮೂತ್ರಪಿಂಡಕ್ಕೆ ಯಾವುದೇ ಹಾನಿಯನ್ನು ಮಾಡುವುದಿಲ್ಲವಾದರು, ಇವುಗಳನ್ನು ನಿರ್ಮೂಲ ಮಾಡದಿದ್ದರೆ, ಮೂತ್ರ ಸರಾಗವಾಗಿ ಹರಿದು ಬರಲು ಇರುವ ನಾಳವನ್ನು ಇದು ಮುಚ್ಚಿ ಬಿಡುತ್ತವೆ. ಆಗ ಈ ಕಲ್ಲುಗಳನ್ನು ತೆಗೆಯಲು ಶಸ್ತ್ರ ಚಿಕಿತ್ಸೆಯೊಂದೆ ಉಳಿದಿರುವ ಮಾರ್ಗವಾಗಿರುತ್ತದೆ. ಇವುಗಳನ್ನು ಕರಗಿಸಲು ಹಲವಾರು ಮನೆ ಮದ್ದುಗಳು ಸಹ ಇವೆ. ತಂಪು ಪಾನೀಯ ಕುಡಿದರೆ ಕಿಡ್ನಿ ಹಾಳಾಗುವುದೇ?

ಅದರಲ್ಲಿ ಆಪಲ್ ಸೈಡರ್ ವಿನೆಗರ್‌ಗೆ ಅಗ್ರ ಸ್ಥಾನವನ್ನು ನೀಡಬಹುದು. ಇದು ಮೂತ್ರಪಿಂಡದಲ್ಲಿರುವ ಕಲ್ಲುಗಳನ್ನು ಪರಿಣಾಮಕಾರಿಯಾಗಿ ನಿವಾರಿಸು ಗುಣಗಳನ್ನು ಪಡೆದಿರುತ್ತದೆ. ಮೂತ್ರಪಿಂಡದಲ್ಲಿ ಕಂಡು ಬರುವ ಕಲ್ಲುಗಳನ್ನು ನಿವಾರಿಸಲು ಆಪಲ್ ಸೈಡರ್ ವಿನೆಗರ್ ಅನ್ನು ಬಳಸಿಕೊಳ್ಳಲು ಹಲವಾರು ಮಾರ್ಗಗಳು ಇವೆ. ಹಾಗಾಗಿ ಇಂದು ಬೋಲ್ಡ್‌ಸ್ಕೈ ನಿಮಗಾಗಿ ಮೂತ್ರಪಿಂಡದಲ್ಲಿರುವ ಕಲ್ಲುಗಳನ್ನು ನಿವಾರಿಸಲು ಆಪಲ್‌ ಸೈಡರ್ ವಿನೆಗರ್ ಅನ್ನು ಹೇಗೆ ಬಳಸಿಕೊಳ್ಳಬಹುದು ಎಂದು ತಿಳಿಸಿಕೊಡುತ್ತಿದೆ. ಮುಂದೆ ಓದಿ.... ಕಿಡ್ನಿ ಕಲ್ಲಿನ ಸಮಸ್ಯೆಗೆ ಗಿಡಮೂಲಿಕೆಗಳ ನಲ್ಮೆಯ ಆರೈಕೆ

ವಿನೆಗರ್ ಮತ್ತು ನೀರು

ವಿನೆಗರ್ ಮತ್ತು ನೀರು

ಇದು ಮೂತ್ರಪಿಂಡದಲ್ಲಿರುವ ಕಲ್ಲುಗಳನ್ನು ನಿವಾರಿಸಿಕೊಳ್ಳಲು ಇರುವ ಅತ್ಯುತ್ತಮ ವಿಧಾನವಾಗಿದೆ. ಎರಡು ಚಮಚ ವಿನೆಗರ್‌ಗೆ ಎಂಟು ಔನ್ಸ್ ನೀರನ್ನು ಬೆರೆಸಿಕೊಳ್ಳಿ. ಈ ಮಿಶ್ರಣವನ್ನು ದಿನವೂ ಸೇವಿಸುತ್ತಿದ್ದರೆ, ನಿಮ್ಮ ಮೂತ್ರಪಿಂಡದಲ್ಲಿರುವ ಕಲ್ಲುಗಳು ನಿವಾರಣೆಯಾಗುತ್ತವೆ. ಇದರ ಜೊತೆಗೆ ಸಾಧ್ಯವಾದಷ್ಟು ನೀರನ್ನು ಸೇವಿಸಿ, ಇದು ನಿಮ್ಮ ದೇಹದಲ್ಲಿರುವ ಟಾಕ್ಸಿನ್‌ಗಳನ್ನು ಹೊರಹಾಕುತ್ತದೆ.

ವಿನೆಗರ್, ನೀರು ಮತ್ತು ಬೇಕಿಂಗ್ ಸೋಡಾ

ವಿನೆಗರ್, ನೀರು ಮತ್ತು ಬೇಕಿಂಗ್ ಸೋಡಾ

ವಿನೆಗರ್ ಅನ್ನು ಬೇಕಿಂಗ್ ಸೋಡಾದ ಜೊತೆಗೆ ಬೆರೆಸಿದಾಗ ಮೂತ್ರಪಿಂಡದಲ್ಲಿರುವ ಕಲ್ಲುಗಳನ್ನು ನಿವಾರಿಸಲು ಅತ್ಯುತ್ತಮ ಔಷಧಿಯಾಗುತ್ತದೆ. ಸೋಡಾದಲ್ಲಿರುವ ಆಲ್ಕಾಲೈಜಿಂಗ್ ಪರಿಣಾಮವು ದೇಹದಲ್ಲಿರುವ ಆಮ್ಲವನ್ನು ತೆಗೆದು ಹಾಕುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ವಿನೆಗರ್, ನೀರು ಮತ್ತು ಬೇಕಿಂಗ್ ಸೋಡಾ

ವಿನೆಗರ್, ನೀರು ಮತ್ತು ಬೇಕಿಂಗ್ ಸೋಡಾ

ಎರಡು ಚಮಚ ವಿನೆಗರ್‌ಗೆ ಅರ್ಧ ಚಮಚ ಬೇಕಿಂಗ್ ಸೋಡಾವನ್ನು ಸೇರಿಸಿಕೊಂಡು ಒಂದು ಲೋಟ ನೀರಿನಲ್ಲಿ ಬೆರೆಸಿಕೊಳ್ಳಿ. ಈ ಮಿಶ್ರಣವನ್ನು ದಿನಕ್ಕೆ ಮೂರು ಬಾರಿ ಸೇವಿಸಿ, ಉತ್ತಮ ಫಲಿತಾಂಶವನ್ನು ಪಡೆಯಿರಿ.

ವಿನೆಗರ್ ಮತ್ತು ಜೇನು ತುಪ್ಪ

ವಿನೆಗರ್ ಮತ್ತು ಜೇನು ತುಪ್ಪ

ಜೇನು ತುಪ್ಪದಲ್ಲಿರುವ ಆಂಟಿಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರ ನಿವಾರಕ ಅಂಶಗಳು ಮೂತ್ರಪಿಂಡದಲ್ಲಿರುವ ಕಲ್ಲುಗಳನ್ನು ಕರಗಿಸಲು ನೆರವಾಗುತ್ತವೆ. ಜೇನು ತುಪ್ಪವು ಈ ಪಾನೀಯದ ರುಚಿಯನ್ನು ಸಹ ಹೆಚ್ಚಿಸುತ್ತದೆ. ಈ ಪಾನೀಯವನ್ನು ತಯಾರಿಸಿಕೊಳ್ಳಲು, ಒಂದು ಸ್ಪೂನ್ ವಿನೆಗರ್ ಜೊತೆಗೆ ಎರಡು ಸ್ಪೂನ್ ಜೇನು ತುಪ್ಪವನ್ನು ಬೆರೆಸಿಕೊಳ್ಳಿ.

ವಿನೆಗರ್, ಆಲೀವ್ ಎಣ್ಣೆ, ನಿಂಬೆ ರಸ ಮತ್ತು ನೀರು

ವಿನೆಗರ್, ಆಲೀವ್ ಎಣ್ಣೆ, ನಿಂಬೆ ರಸ ಮತ್ತು ನೀರು

ಲಿಂಬೆ ಹಣ್ಣಿನಲ್ಲಿರುವ ಆಮ್ಲೀಯ ಗುಣಗಳು ಮೂತ್ರದಲ್ಲಿರುವ ಆಮ್ಲದ ಗುಣಗಳನ್ನು ಕಡಿಮೆ ಮಾಡುತ್ತದೆ. ಇದು ಮೂತ್ರಪಿಂಡದಲ್ಲಿ ಕಲ್ಲುಗಳು ಬೆಳವಣಿಗೆಯಾಗುವುದನ್ನು ತಡೆಯುತ್ತದೆ. ಜೊತೆಗೆ ಇದು ಮೂತ್ರಪಿಂಡದಲ್ಲಿ ಬ್ಯಾಕ್ಟೀರಿಯಾವು ಸಹ ಬೆಳೆಯುವುದನ್ನು ತಡೆಯುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ವಿನೆಗರ್, ಆಲೀವ್ ಎಣ್ಣೆ, ನಿಂಬೆ ರಸ ಮತ್ತು ನೀರು

ವಿನೆಗರ್, ಆಲೀವ್ ಎಣ್ಣೆ, ನಿಂಬೆ ರಸ ಮತ್ತು ನೀರು

ವಿನೆಗರ್, ಆಲೀವ್ ಎಣ್ಣೆ, ನಿಂಬೆ ರಸಗಳನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ಒಂದು ಲೋಟ ನೀರಿಗೆ ಬೆರೆಸಿಕೊಳ್ಳಿ. ಮೂತ್ರಪಿಂಡದಲ್ಲಿರುವ ಕಲ್ಲುಗಳನ್ನು ನಿವಾರಿಸಿಕೊಳ್ಳಲು ಈ ಮಿಶ್ರಣವನ್ನು ಸೇವಿಸಿ.

English summary

Apple Cider Vinegar for Kidney Stones Treatment

Kidney stones are the deposits made of minerals and acid salts. They cause extreme pain and are unlikely to cause any damage to the kidney. However, there are chances of kidney stones blocking the urinary tract, if the stones are not cleared from the tract. Surgery is not the only way to remove kidney stones, they can be dissolved using home remedies too. There are several home remedies that help in dissolving kidney stones.
Story first published: Monday, February 15, 2016, 15:46 [IST]
X
Desktop Bottom Promotion