For Quick Alerts
ALLOW NOTIFICATIONS  
For Daily Alerts

ಎಂಟು ಗಂಟೆಗಳ ಸುಖನಿದ್ರೆಯಲ್ಲಿದೆ ಆರೋಗ್ಯದ ಗುಟ್ಟು

By Deepu
|

ನಿಸರ್ಗ ನಮಗೆ ಹಗಲು ರಾತ್ರಿಗಳನ್ನು ಕೊಟ್ಟಿರುವುದು ಹಗಲು ಕೆಲಸ ಮಾಡಲೆಂದು ಹಾಗೂ ರಾತ್ರಿ ವಿಶ್ರಮಿಸಲೆಂದು ಎಂದು ಎಲ್ಲಾ ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ. ಆದರೆ ಇಂದು ನಾವೇನು ಮಾಡುತ್ತಿದ್ದೇವೆ?

ನಮ್ಮ ಇಂದಿನ ದೈನಂದಿನ ಕೆಲಸಗಳಿಗೆ ದಿನದ ಇಪ್ಪತ್ತನಾಲ್ಕು ಗಂಟೆಗಳೂ ಕಡಿಮೆಯೇ. ಆಫೀಸ್ ಅಥವಾ ನಮ್ಮ ದೈನಿಂದಿನ ಕಾರ್ಯ ಮುಗಿಸಿ ಮನೆಗೆ ಬಂದ ಬಳಿಕ ವಿರಾಮದ ಬದಲು ನಮ್ಮ ಚಟುವಟಿಕೆಗಳು ಬದಲಾಗುತ್ತಾ ಹೋಗುತ್ತವೆ. ಅದರಲ್ಲೂ ಆಧುನಿಕ ಉಪಕರಣಗಳು ಎಲ್ಲರ ಕೈಯಲ್ಲಿ ಆಟಿಕೆಯಾಗಿ ಬಂದ ಮೇಲಂತೂ ನಮ್ಮ ರಾತ್ರಿಯ ಸಮಯವನ್ನೆಲ್ಲಾ ಕಬಳಿಸಿ ನಿದ್ದೆ ಮಾಡಬೇಕಾದ ಹೊತ್ತಿನಲ್ಲಿ ಜಾಗೃತಿಯಿಂದಿರುವಂತಾಗುತ್ತದೆ.

ಅಂತೂ ಬಲವಂತವಾಗಿ ತಡರಾತ್ರಿ ಮಲಗಿದ ಬಳಿಕ ಬೆಳಿಗ್ಗೆ ಬೇಗ ಏಳಲೂ ಸೋಮಾರಿತನವಾಗಿ ತಡವಾಗಿ ಏಳುವುದು, ಎದ್ದಬಳಿಕವೂ ಮಂಪರು ಆವರಿಸಿದ್ದು ಯಾವುದೇ ವ್ಯಾಯಮವಿಲ್ಲದೇ, ಬೆಳಗ್ಗಿನ ಸೂರ್ಯನ ಕಿರಣಗಳ ಶಕ್ತಿಯಿಲ್ಲದೆ, ಮುಂಜಾನೆಯ ತಾಜಾ ಹವೆಯ ಪುಳಕವಿಲ್ಲದೇ ತರಾತುರಿಯಲ್ಲಿ ಆಫೀಸ್‌ಗೆ ಧಾವಿಸಿದ ಬಳಿಕವೂ ಕೃತಕವಾದ ಉತ್ಸಾಹ ತೋರುವುದು, ಇವೆಲ್ಲವೂ ಸಾಮಾನ್ಯವಾಗಿ ಬಿಟ್ಟಿದೆ, ಆದರೆ ಇದರಿಂದ ಆರೋಗ್ಯದ ಮೇಲೆ ಆಗುವ ಪರಿಣಾಮ ಅಷ್ಟಿಷ್ಟಲ್ಲ.

ಹೌದು, ವೈದ್ಯಕೀಯ ಶಾಸ್ತ್ರ ಹೇಳುವಂತೆ ನೀವು ಆರೋಗ್ಯವಾಗಿರಬೇಕು ಎಂದಾದಲ್ಲಿ ಸಾಕಷ್ಟು ನಿದ್ರೆಯನ್ನು ಮಾಡಲೇಬೇಕು. ಅದರಲ್ಲೂ ಸರಾಸರಿ 8 ಗಂಟೆಗಳ ನಿದ್ರೆ ನಿಮ್ಮನ್ನು ಫಿಟ್ ಆಗಿ ಮಾಡುವುದಲ್ಲದೆ ಒತ್ತಡರಹಿತನ್ನಾಗಿಸುವ ದಿವ್ಯೌಷಧವಾಗಿ ಮಾರ್ಪಟ್ಟಿದೆ. ನೀವು ಸರಿಯಾದ ಸಮಯದಲ್ಲಿ ಸಾಕಷ್ಟು ನಿದ್ದೆಯನ್ನು ಮಾಡಿದ್ದೀರಿ ಎಂದಾದಲ್ಲಿ ದೈನಂದಿನ ಆರೋಗ್ಯ ಅತ್ಯುತ್ತಮವಾಗಿರುತ್ತದೆ ಮತ್ತು ಎಲ್ಲಾ ಕೆಲಸಗಳನ್ನು ಚಟುವಟಿಕೆಯಿಂದ ನಿರ್ವಹಿಸುವ ನಿಪುಣತೆ ನಿಮ್ಮದಾಗುತ್ತದೆ. ಅದಕ್ಕೆಂದೇ ಇಂದಿನ ಲೇಖನದಲ್ಲಿ 8 ಗಂಟೆಗಳ ಕಾಲ ನಿದ್ರೆ ಮಾಡುವುದರಿಂದ ಉಂಟಾಗುವ ಪ್ರಯೋಜನಗಳನ್ನು ತಿಳಿಸಲಿದ್ದೇವೆ. ಎಂಟು ಗಂಟೆಗಳ ನಿದ್ರೆ ನಿಮ್ಮ ನಿತ್ಯದ ಜೀವನದ ಸಂಜೀವಿನಿ ಎಂದೆನಿಸಿದ್ದು ಅದು ಹೇಗೆ ಎಂಬುದನ್ನು ಕೆಳಗಿನ ಸ್ಲೈಡರ್‎ನಿಂದ ತಿಳಿದುಕೊಳ್ಳೋಣ...

ಮುಂಜಾನೆಯ ವ್ಯಾಯಮ

ಮುಂಜಾನೆಯ ವ್ಯಾಯಮ

ನಿಮ್ಮ ದೈನಂದಿನ ಕೆಲಸವನ್ನು ಆರಂಭಿಸುವ ಮೊದಲು ಬೆಳಗ್ಗಿನ ದೈಹಿಕ ಕಸರತ್ತು ಅತ್ಯಪೂರ್ಣವಾದುದು. ಬೆಳಗ್ಗಿನ ದೈಹಿಕ ವ್ಯಾಯಮ ನಿಮಗೆ ರಾತ್ರಿ ವೇಳೆಯಲ್ಲಿ ಸುಖ ನಿದ್ರೆಯನ್ನು ಲಭಿಸುವಂತೆ ಮಾಡುತ್ತದೆ. ರಕ್ತದೊತ್ತಡದಲ್ಲಿರುವ ನಿರ್ದಿಷ್ಟ ಹಾರ್ಮೋನ್‎ಗಳ ನಿಯಂತ್ರಣಕ್ಕೆ ಸಹಾಯ ಮಾಡುವ ಬೆಳಗ್ಗಿನ ವ್ಯಾಯಾಮ ರಾತ್ರಿಯ ನಿದ್ದೆಗೆ ನಿಮಗೆ ಸಹಕಾರಿಯಾಗಿದೆ. ಆದ್ದರಿಂದ ಎಷ್ಟೇ ಕಷ್ಟವಾದರೂ ಮುಂಜಾನೆ ಎದ್ದು ವ್ಯಾಯಾಮವನ್ನು ಮಾಡಿ ನಂತರ ಪರಿಣಾಮವನ್ನು ಸ್ವತಃ ನೀವೇ ಅನುಭವಿಸಿ.

ಸಾಕಷ್ಟು ಒಮೇಗಾ - 3 ಎಸ್

ಸಾಕಷ್ಟು ಒಮೇಗಾ - 3 ಎಸ್

ಸಾಕಷ್ಟು ಕೊಬ್ಬಿನ ಆಸಿಡ್‎ಗಳು ನಿಮ್ಮ ಮೂಡ್ ಅಂತೆಯೇ ಹೃದಯವನ್ನು ಸ್ವಾಸ್ಥ್ಯದಿಂದಿರಿಸುವ ಅಂಶಗಳಾಗಿವೆ. ಹೆಚ್ಚುವರಿ ಒಮೇಗಾ - 3ಎಸ್ ಅನ್ನು ಹೊಂದಿರುವವರು ಉತ್ತಮವಾಗಿ ನಿದ್ರಿಸಲಿದ್ದು ನಿದ್ದೆಯ ಹಾರ್ಮೋನುಗಳ ಹೆಚ್ಚುವರಿ ಉತ್ಪಾದನೆಯ ಸಾಮರ್ಥ್ಯವನ್ನು ಹೊಂದಿರುತ್ತಾರೆ.

ಕಾಫಿ ಪರಿಣಾಮ

ಕಾಫಿ ಪರಿಣಾಮ

ಬೆಳಗ್ಗಿನ ಸಮಯದಲ್ಲಿ ಒಂದೆರಡು ಕಪ್ ಕಾಫಿ ಕುಡಿಯುವುದರಿಂದ ರಾತ್ರಿಯ ನಿದ್ರೆಗೆ ಅಷ್ಟೇನೂ ತೊಡಕುಂಟಾಗುವುದಿಲ್ಲ. ಆದರೆ ಕಾಫಿ ಸೇವನೆಯನ್ನು ನೀವು ಅಗತ್ಯಕ್ಕಿಂತ ಹೆಚ್ಚಾಗಿಯೇ ಮಾಡುತ್ತಿದ್ದೀರಿ ಎಂದಾದಲ್ಲಿ ನಿಮ್ಮ ರಾತ್ರಿಯ ನಿದ್ರೆಯನ್ನು ಇದು ಕಬಳಿಸುವುದು ಖಂಡಿತ. ರಾತ್ರಿ 10 ಗಂಟೆಗೆ ನೀವು ನಿದ್ರೆ ಮಾಡಬೇಕು ಎಂಬ ಯೋಜನೆಯನ್ನು ಮಾಡಿದ್ದೀರಿ ಎಂದಾದಲ್ಲಿ ಸಂಜೆ 4 ಗಂಟೆಗೆ ಸೇವಿಸುವ ಕಾಫಿಯನ್ನು ತ್ಯಜಿಸಿ.

ಒತ್ತಡವನ್ನು ಎದುರಿಸುವ ಸಾಮರ್ಥ್ಯ

ಒತ್ತಡವನ್ನು ಎದುರಿಸುವ ಸಾಮರ್ಥ್ಯ

ನೀವು ಚೆನ್ನಾಗಿ ನಿದ್ದೆ ಮಾಡುವವರು ಎಂದಾದಲ್ಲಿ ಒತ್ತಡವನ್ನು ನಿವಾರಣೆ ಮಾಡಿಕೊಳ್ಳುವ ಸಾಮರ್ಥ್ಯ ತನ್ನಿಂದ ತಾನೇ ನಿಮ್ಮಲ್ಲಿ ಹುಟ್ಟಿಕೊಳ್ಳುತ್ತದೆ. ಸಾಕಷ್ಟು ನಿದ್ರೆ ಕೂಡ ಒತ್ತಡವನ್ನು ನಿವಾರಣೆ ಮಾಡಿಕೊಳ್ಳುವ ಪರಿಪೂರ್ಣ ವಿಧಾನವಾಗಿದ್ದು ಎಂಟು ಗಂಟೆಗಳಷ್ಟು ಸಮಯ ನಿದ್ದೆ ಮಾಡುವವರಲ್ಲಿ ಒತ್ತಡ ನಿವಾರಣೆ ಅಧಿಕವಾಗಿರುತ್ತದೆಯಂತೆ ಎಂಬುದು ಅಧ್ಯಯನಗಳಿಂದ ತಿಳಿದು ಬಂದ ಮಾಹಿತಿಯಾಗಿದೆ. ವ್ಯಾಯಾಮ, ಸರಿಯಾದ ಸಮಯಕ್ಕೆ ಆಹಾರ ಸೇವನೆ, ಓದುವುದು, ಧ್ಯಾನ ಅಥವಾ ಯೋಗ ಒತ್ತಡವನ್ನು ದೂರೀಕರಿಸುವ ಪ್ರಮುಖ ಮಾಧ್ಯಮಗಳಾಗಿದೆ.

ಸರಿಯಾದ ಸಮಯಕ್ಕೆ ಆಹಾರ ಸೇವನೆ

ಸರಿಯಾದ ಸಮಯಕ್ಕೆ ಆಹಾರ ಸೇವನೆ

ಮಧ್ಯರಾತ್ರಿಯ ಆಹಾರ ಸೇವನೆಯಿಂದ ನಿಮ್ಮ ದೇಹದಲ್ಲಿ ಅನಗತ್ಯ ಬೊಜ್ಜು ಸೇರಿಕೊಳ್ಳುವುದು ಖಂಡಿತ. ಕೊಬ್ಬಿನ ಆಹಾರ ಪದಾರ್ಥಗಳನ್ನು ಸೇವಿಸುವುದು ರಾತ್ರಿಯ ನಿಮ್ಮ ನಿದ್ರೆಗೆ ಅಡ್ಡಿಯನ್ನುಂಟು ಮಾಡುವುದು ಖಂಡಿತವಾದ್ದರಿಂದ ಆದಷ್ಟು ಆರೋಗ್ಯಪೂರ್ಣವಾಗಿರುವ ಆಹಾರಗಳನ್ನು ಸೇವಿಸಿ. ನಿದ್ರೆಯ ವೇಳೆಯಲ್ಲಿ ನಿಮಗೆ ಹಸಿವಾಗುತ್ತಿದೆ ಎಂದಾದಲ್ಲಿ ವಾಲ್‎ನಟ್‎ಗಳು, ಚೆರ್ರಿ, ಅಥವಾ ಗ್ರೀಕ್ ಯೋಗರ್ಟ್‎ಗಳನ್ನು ಸೇವಿಸಿ.

ಮದ್ಯ ಸೇವನೆ

ಮದ್ಯ ಸೇವನೆ

ನಿದ್ರೆಯ ವೇಳೆಯಲ್ಲಿ ಮದ್ಯವನ್ನು ಸೇವಿಸುವುದೂ ಕೂಡ ನಿಮ್ಮ ರಾತ್ರಿಯ ನಿದ್ರೆಗೆ ಅಡ್ಡಿಯನ್ನುಂಟು ಮಾಡಬಹುದು. ಕಾಫಿಯಂತೆಯೇ ಆಲ್ಕೋಹಾಲ್ ಕೂಡ ನಿದ್ರೆಗೆ ತೊಡಕನ್ನು ಉಂಟುಮಾಡುವುದರಿಂದ ನೀವು ನಿದ್ರಿಸುವ 4-6 ಗಂಟೆಗಳ ಮೊದಲು ಸೇವನೆಯನ್ನು ತ್ಯಜಿಸಿ. ಇದರಿಂದ ಸುಖ ನಿದ್ರೆ ನಿಮಗೆ ಪ್ರಾಪ್ತಿಯಾಗುತ್ತದೆ.

ನಿಮ್ಮ ಮಲಗುವ ಕೋಣೆ

ನಿಮ್ಮ ಮಲಗುವ ಕೋಣೆ

ಉತ್ತಮ ನಿದ್ರೆಗಾಗಿ ನೀವು ಮಲಗುವ ಕೋಣೆ ಕೂಡ ಪ್ರಶಾಂತವಾಗಿರಬೇಕು. ಮೃದುವಾದ ದಿಂಬು, ಬೆಚ್ಚನೆಯ ಹೊದಿಕೆ, ಪ್ರಶಾಂತಮಯವಾದ ಕೋಣೆ ಹೀಗೆ ನೀವು ನಿದ್ರಿಸುವ ಕೊಠಡಿ ಶಾಂತವಾಗಿದ್ದರೆ ಸ್ವರ್ಗ ಸಮಾನ ನಿದ್ದೆಗೆ ಬೇರೇನು ಅವಶ್ಯಕತೆಯಿಲ್ಲ. ಕೊಠಡಿಯ ತಾಪಮಾನ ನಿದ್ರೆಗೆ ಸೂಕ್ತವಾಗಿರಬೇಕು ಮತ್ತು ಬೆಳಗ್ಗಿನ ಜಾವದಲ್ಲಿ ಚಟುವಟಿಕೆಯಿಂದಿರಲು ಇದು ತಕ್ಕುದಾಗಿರುತ್ತದೆ.

ಸೂಕ್ತ ಸಮಯದಲ್ಲಿ ಸೂಕ್ತ ನಿದ್ರೆ

ಸೂಕ್ತ ಸಮಯದಲ್ಲಿ ಸೂಕ್ತ ನಿದ್ರೆ

ಸರಿಯಾದ ಸಮಯದಲ್ಲಿ ನಿದ್ರಿಸುವುದು ಬೆಳಗ್ಗೆ ಕ್ಲಪ್ತ ಸಮಯಕ್ಕೆ ನೀವು ಏಳುವಂತೆ ಮಾಡುತ್ತದೆ. ಆರೋಗ್ಯಯುತ ನಿದ್ರೆ ನಿಮ್ಮದಾದಾಗ ಬೆಳಗ್ಗಿನ ಜಾವದಲ್ಲಿ ಸರಿಯಾದ ಸಮಯದಲ್ಲಿ ಏಳಲು ನಿಮಗೆ ಅನುಕೂಲವಾಗುತ್ತದೆ. ಮುಂದಿನ ಬಾರಿಯೂ ಅದೇ ಸಮಯದಲ್ಲಿ ನಿದ್ರೆ ನಿಮ್ಮನ್ನು ಆವರಿಸಿಕೊಳ್ಳುತ್ತದೆ ಮತ್ತು ಬೆಳಗ್ಗಿನ ಜಾವದಲ್ಲಿ ಸರಿಯಾದ ಹೊತ್ತಿಗೆ ಏಳಲು ನಿಮಗೆ ಅನುಕೂಲವಾಗುತ್ತದೆ.

ಸ್ಮಾರ್ಟ್‎ಫೋನ್ ಬಳಕೆ ನಿಲ್ಲಿಸಿ

ಸ್ಮಾರ್ಟ್‎ಫೋನ್ ಬಳಕೆ ನಿಲ್ಲಿಸಿ

ನಿದ್ರೆ ಮಾಡುವ ಸಮಯದಲ್ಲಿ ಆದಷ್ಟು ಇಲೆಕ್ಟ್ರಾನಿಕ್ ಉಪಕರಣಗಳ ಬಳಕೆಯನ್ನು ನಿಲ್ಲಿಸಿ. ಸ್ಮಾರ್ಟ್‎ಫೋನ್, ಟ್ಯಾಬ್ಲೇಟ್, ಕಂಪ್ಯೂಟರ್‎ನಲ್ಲಿ ಕೆಲಸ ಮಾಡುವುದು, ಸಿನಿಮಾಗಳನ್ನು ವೀಕ್ಷಿಸುವುದೂ ಕೂಡ ರಾತ್ರಿಯ ನಿದ್ರೆಗೆ ತೊಡಕನ್ನುಂಟು ಮಾಡುತ್ತದೆ. ರಾತ್ರಿ ವೇಳೆಯಲ್ಲಿ ನಿದ್ರಿಸುವ ಸಮಯದಲ್ಲಿ ಆದಷ್ಟು ಈ ಚಟುವಟಿಕೆಗಳನ್ನು ಬದಿಗೊತ್ತಿ ಸುಖ ನಿದ್ರೆಯನ್ನು ಮಾಡಿ.

English summary

Why Eight Hours of Sleep is better for health?

Sleep makes you feel better, but its importance goes way beyond just boosting your mood or banishing under-eye circles. Adequate sleep is a key part of a healthy lifestyle, and can benefit your heart, weight, mind, and more.
X
Desktop Bottom Promotion