For Quick Alerts
ALLOW NOTIFICATIONS  
For Daily Alerts

ಸರ್ವ ಕೆಡುಕುಗಳ ಮೂಲ ಮದ್ಯಪಾನದಿಂದ ಮುಕ್ತಿ ಹೇಗೆ?

By Super
|

ಜಗತ್ತಿನಲ್ಲಿ ಅತ್ಯಂತ ಅತ್ಯಂತ ಅಪಾಯಕಾರಿಯಾದ ಪದಗಳು ಯಾವುದು ಎಂದು ಗೊತ್ತೇ? "ಒಂದು ಸಲ ಪ್ರಯತ್ನಿಸು, ಚೆನ್ನಾಗಿಲ್ಲ ಎನ್ನಿಸಿದರೆ ಬಿಟ್ಟು ಬಿಡು" ಈ ಜಗತ್ತಿನಲ್ಲಿರುವ ಎಲ್ಲಾ ದೇಶಗಳ ಜನತೆಗೆ ಏಕಸಮಾನವಾಗಿ ಈ ವಾಕ್ಯ ಅನ್ವಯವಾಗುತ್ತದೆ. ಏಕೆಂದರೆ ಶೇ. 99.99ರಷ್ಟು ಜನರು ಇದೇ ವಾಕ್ಯದಿಂದ ಪ್ರಭಾವಿತರಾಗಿ ವ್ಯಸನಕ ಕೂಪಕ್ಕೆ ಧುಮುಕಿದ್ದಾರೆ. ಇವರನ್ನು ಕೂಪಕ್ಕೆ ಧುಮುಕಿಸಲು ಹಲವರ ಸ್ವಾರ್ಥವೂ ಇದೆ. ಉದಾಹರಣೆಗೆ ಸುಮಾರು ಸ್ವಾತಂತ್ರಪೂರ್ವದಲ್ಲಿ ಭಾರತದಲ್ಲಿ ಕಾಫಿ ಎಂಬ ಪದ ಕೇವಲ ಬ್ರಿಟಿಷರ ಪೇಯ ಎಂದೇ ಪರಿಗಣಿಸಲ್ಪಡುತ್ತಿತ್ತು.

ಭಾರತೀಯರು ಕಷಾಯ ಮಾಡಿಕೊಂಡು ಕುಡಿಯುತ್ತಿದ್ದರು. ಭಾರತದ ಗುಡ್ಡಬೆಟ್ಟಗಳು ಕಾಫಿ ಬೆಳೆಗೆ ಸೂಕ್ತ ಎಂದರಿತ ಬ್ರಿಟಿಷರು ಇಲ್ಲಿನ ಬೆಟ್ಟಗುಡ್ಡಗಳನ್ನು ಕಡಿಮೆ ಬೆಲೆಗೆ ಖರೀದಿಸಿ, ಅಲ್ಲಿನ ಸ್ಥಳೀಯರನ್ನೇ ಕಾರ್ಮಿಕ (ಗುಲಾಮ)ರನ್ನಾಗಿಸಿ ಕಾಫಿ ಬೆಳೆದರು. ಆದರೆ ಇಷ್ಟೊಂದು ಆಗಾಧವಾದ ಪ್ರಮಾಣದ ಕಾಫಿಯನ್ನು ಮಾರದೇ ಲಾಭ ಎಲ್ಲಿಂದ? ಅದಕ್ಕಾಗಿ ಭಾರತೀಯರಿಗೆ ಕಾಫಿ ಕುಡಿಯುವ ಚಟ ಹತ್ತಿಸಬೇಕಿತ್ತು. ಇದಕ್ಕಾಗಿ ಅವರು ಬಳಸಿದ ತಂತ್ರವೂ ಇದೇ ವಾಕ್ಯದ ಪ್ರಯೋಗ. ಪಿಜ್ಜಾ ಸೇವನೆಯು ಆರೋಗ್ಯಕ್ಕೆ ಪೂರಕವೇ ಇಲ್ಲಾ ಮಾರಕವೇ?

ಸುಮಾರು ಐದು ವರ್ಷಗಳ ಕಾಲ ಸತತವಾಗಿ ಬೆಳ್ಳಂಬೆಳಿಗ್ಗೆ ಬಿಸಿಬಿಸಿ ಕಾಫಿಯನ್ನು ನಗರದಿಂದ ಹಳ್ಳಿಯವರೆಗೆ ಪಟ್ಟಣದಲ್ಲಿ ಬೆನ್ನಿಗೆ ಚಿಕ್ಕ ಭರಣಿಯಂತಹ ಪಾತ್ರೆಯಲ್ಲಿ ಕಾಫಿಯನ್ನು ತುಂಬಿಸಿಕೊಂಡು ಕಾರ್ಯಕರ್ತರು ಉಚಿತವಾಗಿ ಹಂಚಿದರು. ಎಲ್ಲರಿಗೂ ಹೇಳಿದ್ದು ಇದೇ "ಬಿಸಿಬಿಸಿ ಕಾಫಿ, ಉಚಿತ, ಒಮ್ಮೆ ಪ್ರಯತ್ನಿಸಿ ನೋಡಿ, ಚೆನ್ನಾಗಿಲ್ಲ ಅನ್ನಿಸಿದರೆ ಬಿಟ್ಟುಬಿಡಿ" ಇದರ ಪರಿಣಾಮ ಇಂದು ಯಾವ ಮಟ್ಟಕ್ಕೆ ಬೆಳೆದಿದೆ ಎನ್ನುವುದು

ಇತಿಹಾಸ. ಕಾಫಿಯ ಭರದಲ್ಲಿ ಕಷಾಯ ಈಗ ಕೇವಲ ಗ್ರಂಥಕೋಶದ ಒಂದು ಪದವಾಗಿ ಉಳಿದಿದೆ. ಧೂಮಪಾನ, ಮದ್ಯಪಾನದಂತಹ ಚಟಗಳೂ ಸ್ನೇಹಿತರಿಂದ ಅಥವಾ ನಿಕಟವರ್ತಿಗಳಿಂದ ನೀಡಿದ ಇದೇ ವಾಕ್ಯದ ಪ್ರಲೋಭನೆಗಳೇ ಆಗಿವೆ. ಒಮ್ಮೆ ಈ ಚಟಕ್ಕೆ ಬಿದ್ದವರು ಹೊರಬರುವುದು ಕಷ್ಟ. ಸುಗಂಧವನ್ನು ಬೀರುವ 'ಅಗರಬತ್ತಿ' ಹಿಂದೆ ಅಡಗಿರುವ ಕರಾಳ ಸತ್ಯ

ವೈಜ್ಞಾನಿಕ ಸತ್ಯಾಸತ್ಯತೆ

ವೈಜ್ಞಾನಿಕ ಸತ್ಯಾಸತ್ಯತೆ

ವೈಜ್ಞಾನಿಕವಾಗಿ ಹೇಳಬೇಕೆಂದರೆ ಮೊತ್ತ ಮೊದಲ ಬಾರಿ ಮದ್ಯ ಕುಡಿದಾಗ ರಕ್ತದಲ್ಲಿ ಸೇರುವ ಆಲ್ಕೋಹಾಲ್ ಮೆದುಳನ್ನು ಸೇರಿ ಮೆದುಳಿನಲ್ಲಿರುವ ರಾಸಾಯನಿಕಗಳ ಮೇಲೆ ಪ್ರಭಾವ ಬೀರುತ್ತದೆ. ಇದನ್ನು ತಡೆಯಲು ನಮ್ಮ ಮೆದುಳು ಇದಕ್ಕೆ ಪ್ರತಿರೋಧವಾಗಿ ಇನ್ನೊಂದು ರಾಸಾಯನಿಕವನ್ನು ತಯಾರಿಸುತ್ತದೆ. (Tetrahydroisoquinoline)ಅಥವಾ THIQ ಎಂಬ ಹೃಸ್ವರೂಪದ ಈ ರಾಸಾಯನಿಕ ಶಾಶ್ವತವಾಗಿ ನಮ್ಮ ಮೆದುಳಿನಲ್ಲಿ ಉಳಿದುಬಿಡುತ್ತದೆ. ಈ ರಾಸಾಯನಿಕವೇ ಪ್ರತಿಬಾರಿಯೂ ಮದ್ಯ ಅಥವಾ ಧೂಮದ ಚಟಕ್ಕೆ ಮನವನ್ನು ಓಲೈಸುತ್ತದೆ.

ವೈಜ್ಞಾನಿಕ ಸತ್ಯಾಸತ್ಯತೆ

ವೈಜ್ಞಾನಿಕ ಸತ್ಯಾಸತ್ಯತೆ

ಒಮ್ಮೆ ಚಟಕ್ಕೆ ಬಿದ್ದವರು ಇದರಿಂದ ಹೊರಬರಲು ಮಾನಸಿಕವಾಗಿ ಅತ್ಯಂತ ಹೆಚ್ಚು ಕಷ್ಟಪಡಬೇಕಾಗುತ್ತದೆ. ಪ್ರಾರಂಭದಲ್ಲಿ ತಿಂಗಳಿಗೊಂದು, ವಾರಕ್ಕೊಂದರಂತೆ ಪ್ರಾರಂಭವದ ಚಟ ವ್ಯಸನಕ್ಕೆ ತಿರುಗಲು ಹೆಚ್ಚು ಕಾಲಬೇಕಾಗಿಲ್ಲ. ಆದರೆ ಹಿಂದಿರುಗಿ ಬರುವುದು ಮಾತ್ರ ತುಂಬಾ ತುಂಬಾ ಕಷ್ಟ. ಆದರೆ ಅಸಾಧ್ಯವೇನೂ ಅಲ್ಲ. ಇದಕ್ಕಾಗಿ ಬೇಕಾಗಿರುವುದು ಒಂದೇ ಒಂದು ಅಸ್ತ್ರ-ಅದೇ ದೃಢ ಸಂಕಲ್ಪ. ಇನ್ನುಳಿದುದನ್ನು ನಿಮ್ಮ ಕುಟುಂಬ ವೈದ್ಯರು ಅಥವಾ ಮದ್ಯವ್ಯಸನ ನಿರ್ಮೂಲನಾ ಸಂಸ್ಥೆಗಳ ಕಾರ್ಯಕರ್ತರು ನೀಡುವ ಸಲಹೆಗಳನ್ನು ಪಾಲಿಸುವುದರಿಂದ ಖಂಡಿತಾ ಹೊರಬರಬಹುದು.

ಒಮ್ಮಿಂದ ಒಮ್ಮೆಲೇ ಮದ್ಯಪಾನದಿಂದ ಹೊರಬರಲು ಕಷ್ಟ

ಒಮ್ಮಿಂದ ಒಮ್ಮೆಲೇ ಮದ್ಯಪಾನದಿಂದ ಹೊರಬರಲು ಕಷ್ಟ

ಯಾವುದೇ ವ್ಯಸನದಿಂದ ಒಮ್ಮೆಲೇ ಹೊರಬರುವುರು ಅತ್ಯಂತ ಅಪಾಯಕರ. ಇದು ವ್ಯಸನಕ್ಕೆ ಇನ್ನಷ್ಟು ಆಳವಾಗಿ ದೂಡುತ್ತದೆ. ನಾನು ಯಾವಾಗ ಬೇಕಾದರೂ ಬಿಡಬಲ್ಲೆ, ಯಾವಾಗ ಬೇಕಾದರೂ ಪ್ರಾರಂಭಿಬಲ್ಲೆ ಎಂಬ ಸಾಮರ್ಥ್ಯವನ್ನು ಹೊಂದಿರುವ ತಪ್ಪು ಗ್ರಹಿಕೆಯನ್ನೂ ಉಂಟುಮಾಡುತ್ತದೆ. ಇದಕ್ಕಾಗಿ ದೇಹ ನೈಸರ್ಗಿಕವಾಗಿ ಮತ್ತು ಹಂತಹಂತವಾಗಿ ವ್ಯಸನದಿಂದ ಹೊರಬರುವುದು ಅಗತ್ಯ. ಎಷ್ಟು ಮಟ್ಟಿಗೆ ವ್ಯಸನ ನಿಮ್ಮನ್ನು ವ್ಯಾಪಿಸಿದೆ ಎಂಬ ಮಾಹಿತಿಗಳನ್ನು ಪಡೆದ ಬಳಿಕ ವೈದ್ಯರು ಇದಕ್ಕೆ ಸೂಕ್ತವಾದ ಚಿಕಿತ್ಸೆಯನ್ನು ನೀಡಬಲ್ಲರು. ಆ ಪ್ರಕಾರ ನಿಧಾನವಾಗಿ ಮತ್ತು ಹಂತಹಂತವಾಗಿ ನಿಮ್ಮ ವ್ಯಸನದ ಪ್ರಮಾಣವನ್ನು ಇಳಿಸುತ್ತಾ ಬರಬೇಕು.

ಒಂದು ಪೆಗ್ ಬದಲು ಒಂದು ಗ್ಲಾಸ್ ಜ್ಯೂಸ್ ಕುಡಿಯಿರಿ

ಒಂದು ಪೆಗ್ ಬದಲು ಒಂದು ಗ್ಲಾಸ್ ಜ್ಯೂಸ್ ಕುಡಿಯಿರಿ

ಉದಾಹರಣೆಗೆ ವ್ಯಸನಿ ದಿನಕ್ಕೆ ಒಂದು ಪೆಗ್ ಮದ್ಯ ಕುಡಿಯುವ ಅಭ್ಯಾಸವುಳ್ಳವರಾದರೆ ಮುಂದಿನ ವಾರದಿಂದ ಪ್ರತಿ ಎರಡು ದಿನಕ್ಕೊಮ್ಮೆ ಒಂದು ಪೆಗ್ ಮತ್ತು ನಡುವಿನ ದಿನಗಳಲ್ಲಿ ಒಂದು ಪೆಗ್ ನಷ್ಟೇ ಪ್ರಮಾಣದ ಹಣ್ಣಿನ ಜ್ಯೂಸ್ ಕುಡಿಯುವುದು, ಮುಂದಿನ ವಾರ ಮೂರು ದಿನಕ್ಕೊಮ್ಮೆ ಒಂದು ಪೆಗ್ ಮತ್ತು ನಡುವಿನ ಎರಡು ದಿನಗಳಲ್ಲಿ ಜ್ಯೂಸ್ ಕುಡಿಯುವುದು, ಇದೇ ಪ್ರಕಾರ ನಿಧಾನವಾಗಿ ಹಂತಹಂತವಾಗಿ ಕಡಿಮೆ ಮಾಡುತ್ತಾ ಬರಬೇಕು. ಇಂದು ಮದ್ಯ ಮತ್ತು ಧೂಮವ್ಯಸನದಿಂದ ಹೊರಬರಲು ನೆರವಾಗುವ ಪಟ್ಟಿಗಳೂ ಮೆಡಿಕಲ್ ಅಂಗಡಿಗಳಲ್ಲಿ ಸಿಗುತ್ತಿದೆ.

ದೃಢಸಂಕಲ್ಪ ಅತ್ಯಗತ್ಯ

ದೃಢಸಂಕಲ್ಪ ಅತ್ಯಗತ್ಯ

ಯಾವುದೇ ಕಾರಣಕ್ಕೆ, ಎಷ್ಟೇ ಪ್ರಾಣಸ್ನೇಹಿತರಿರಲಿ ಒಂದೇ ಒಂದು ಎಂದು ಬಲವಂತ ಮಾಡಿದರೂ (ಈ ತರಹ ಬಲವಂತ ಮಾಡುವವರು ಪ್ರಾಣಸ್ನೇಹಿತರು ಹೇಗಾಗುತ್ತಾರೆ?) ನಿಮ್ಮ ದೃಢಸಂಕಲ್ಪವನ್ನು ಬದಲಿಸಬಾರದು. ಈಗ ಸಮಾಜ ಬದಲಾಗಿದೆ, ನಿಮ್ಮ ದೃಢಸಂಕಲ್ಪವನ್ನು ಬಿಚ್ಚುಮನಸ್ಸಿನಿಂದ ಪ್ರಕಟಿಸಿ. ಎಲ್ಲರೂ ನಿಮ್ಮ ನಿರ್ಧಾರವನ್ನು ಖಂಡಿತಾ ಸ್ವಾಗತಿಸುತ್ತಾರೆ. ನಿಮ್ಮ ದೃಢಸಂಕಲ್ಪವನ್ನು ಹೆಚ್ಚಿಸಲು ಕೆಲವು ಆಪ್ತ ಸಲಹೆಗಳನ್ನು ಬೋಲ್ಡ್ ಸ್ಕೈ ತಂಡ ಈ ಮೂಲಕ ನೀಡುತ್ತಿದೆ. ಯುವಜನರೇ ನೆನಪಿಡಿ: ಆರೋಗ್ಯಕ್ಕೆ ಮಾರಕ ಎಂದು ಯಾವುದಿದೆಯೋ ಅದನ್ನು ಪ್ರಯತ್ನಿಸಲೇ ಹೋಗಬೇಡಿ.

ಜ್ಯೂಸ್ ಹೆಚ್ಚು ಕುಡಿಯಿರಿ

ಜ್ಯೂಸ್ ಹೆಚ್ಚು ಕುಡಿಯಿರಿ

ಮೆದುಳಿನಲ್ಲಿರುವ ರಾಸಾಯನಿಕದ ಪ್ರಭಾವದಿಂದ ಯಾವಾಗ ಮದ್ಯ ಕುಡಿಯುವ ಮನಸ್ಸಾಯಿತೋ ಆಗೆಲ್ಲಾ ಜ್ಯೂಸ್ ಕುಡಿಯುವತ್ತ ಒಲವು ತೋರಿಸಿ. ಇದೇ ನಿನಗೆ ಈ ದಿನದ ಮದ್ಯ ಎಂದು ನಿಮ್ಮ ಮನಸ್ಸಿಗೆ ಜೋರು ಮಾಡಿ. ನಿಮ್ಮ ವೈದ್ಯರು ನೀಡುವ ವೇಳಾಪಟ್ಟಿಯನ್ನು ಸರ್ವಥಾ ಅನುಸರಿಸಿರಿ. ಅಪ್ಪಿತಪ್ಪಿಯೂ ಆ ವೇಳಾಪಟ್ಟಿಯಿಂದ ಹೊರಬರಬೇಡಿ. ಒಂದು ಸಮೀಕ್ಷೆಯ ಪ್ರಕಾರ ಹತ್ತು ದಿನ ಸತತವಾಗಿ ಜ್ಯೂಸ್ ಒಂದನ್ನೇ ಕುಡಿದರೆ ಹನ್ನೊಂದನೇ ದಿನ ಮದ್ಯ ಕುಡಿಯುವ ಬದಲು ಜ್ಯೂಸ್ ಕುಡಿಯುವ ಮನಸ್ಸಾಗುತ್ತದೆ, ವ್ಯಸನ ದೂರಾಗುತ್ತದೆ. ಆದರೆ ಇದು ಅಪಾಯಕರ ಸಲಹೆ! ಏಕೆಂದರೆ ಹನ್ನೊಂದರ ನಂತರ ಹನ್ನೆರಡನೆಯ ದಿನ ನಿಮ್ಮ ಹಳೆಯ ಸ್ನೇಹಿತ ಬಂದು 'ಬಾರಲೇ, ಒಂದೊಂದೇ ದರಾಮು ಹಾಕುವಾ' ಎಂದು ಕರೆದಾಗ 'ಬೇಡ' ಎನ್ನಲು ನಿಮ್ಮ ದೃಢ ಸಂಕಲ್ಪದ ಅಗತ್ಯವಿದೆ, ಈ ಕೆಲಸವನ್ನು ಜ್ಯೂಸ್ ಮಾತ್ರ ಮಾಡಲಾರದು.

ಕೆಲಸ ಮತ್ತು ಹವ್ಯಾಸದಲ್ಲಿ ಹೆಚ್ಚು ತೊಡಗಿಸಿಕೊಳ್ಳಿ

ಕೆಲಸ ಮತ್ತು ಹವ್ಯಾಸದಲ್ಲಿ ಹೆಚ್ಚು ತೊಡಗಿಸಿಕೊಳ್ಳಿ

ಸಾಮಾನ್ಯವಾಗಿ ಮೆದುಳಿನ ರಾಸಾಯನಿಕ ನಿಮ್ಮ ಬಿಡುವಿನ ಯೋಚನೆಯಲ್ಲಿಯೇ ತನ್ನ ಕೆಲಸ ಮಾಡುತ್ತದೆ. ಹಾಗಾಗಿ ಹೆಚ್ಚಿನವರು ಕೆಲಸದಿಂದ ಹಿಂದಿರುಗಿದ ಬಳಿಕವೇ ಮನಸ್ಸಿನಲ್ಲಿದ್ದ ತಮ್ಮ ವ್ಯಸನಗಳ ಬಯಕೆಗೆ ಆಯಾಮ ನೀಡುತ್ತಾರೆ. ಬದಲಿಗೆ ನಿಮ್ಮ ಕೆಲಸ ಮತ್ತು ಹವ್ಯಾಸಗಳಲ್ಲಿ ನಿಮ್ಮನ್ನು ಮನಃಪೂರ್ವಕವಾಗಿ ತೊಡಗಿಸಿಕೊಂಡು ಸಾಕಷ್ಟು ನಿದ್ದೆಯ ಸಾರ್ಥಕತೆ ಅನುಭವಿಸಿ. ಮದ್ಯದ ಯೋಚನೆಯೇ ಬಾರದಿರುವಷ್ಟು ನಿಮ್ಮನ್ನು ತೊಡಗಿಸಿಕೊಳ್ಳಿ. ನಿಮ್ಮ ಹವ್ಯಾಸಕ್ಕೆ ಅಡ್ಡಿಯಾಗಬಹುದಾದ ಯಾವುದೇ ಪ್ರಲೋಭನೆಯನ್ನು ನಿಸ್ಸಂಕೋಚವಾಗಿ ತಿರಸ್ಕರಿಸಿ. ಕೆಲವೊಮ್ಮೆ ಈ ಪ್ರಲೋಭನೆಗಳು ಲಾಭಕರ ಎಂದು ಕಾಣಿಸುತ್ತದೆ.

ಕೆಲಸ ಮತ್ತು ಹವ್ಯಾಸದಲ್ಲಿ ಹೆಚ್ಚು ತೊಡಗಿಸಿಕೊಳ್ಳಿ

ಕೆಲಸ ಮತ್ತು ಹವ್ಯಾಸದಲ್ಲಿ ಹೆಚ್ಚು ತೊಡಗಿಸಿಕೊಳ್ಳಿ

ಉದಾಹರಣೆಗೆ ಮದ್ಯದ ಚಟವಿರುವ ಸ್ನೇಹಿತರು ಅಂದು ನಗರಕ್ಕೆ ಹೋಗುವವರಿದ್ದು ಅವರ ಕಾರಿನಲ್ಲಿ ಸ್ಥಳವಿದೆ, ಹಾಗೂ ನಿಮಗೂ ಯಾವುದೋ ಕೆಲಸಕ್ಕೆ ಹೋಗಬೇಕಾಗಿದೆ. ಅವರೊಂದಿಗೆ ಹೋದರೆ ಬಸ್ಸಿಗೆ ನೀಡಬೇಕಾದ ಮತ್ತು ಅಲ್ಲಿಂದ ರಿಕ್ಷಾ, ಮತ್ತಿತರ ಖರ್ಚು ಉಳಿತಾಯವಾಗುತ್ತದೆ ಎಂದು ಯೋಚನೆ ಮಾಡುತ್ತೀರಿ. ಆದರೆ ಈ ಲಾಭ ಬಹುದೊಡ್ಡ ನಷ್ಟಕ್ಕೆ ಕಾರಣವಾಗಬಹುದು. ಅವರೊಂದಿಗೆ ಹೋದಾಗ, ಅವರು ದಾರಿ ಮಧ್ಯೆ ಮದ್ಯ ಕುಡಿಯಲು ಅವಸರಿಸಿದರೆ ನಿಮಗೆ ಬೇಡ ಎನ್ನಲಾಗುವುದಿಲ್ಲ. ಈ ಮುಲಾಜಿಗೆ ಕಟ್ಟು ಬೀಳುವ ಬದಲು ಬಸ್ಸಿನಲ್ಲಿ ಹೋಗಿ ದುಬಾರಿ ಖರ್ಚಾದರೂ ಪರವಾಗಿಲ್ಲ, ನನ್ನ ಆರೋಗ್ಯ ಮತ್ತು ಮುಖ್ಯವಾಗಿ ನನ್ನ ದೃಢಸಂಕಲ್ಪ ನನ್ನ ಆಸ್ತಿ ಎಂದು ಮನಸ್ಸಿಗೆ ಗಟ್ಟಿಯಾಗಿ ಹೇಳಿಕೊಳ್ಳಿ.

ದ್ರಾಕ್ಷಿಯನ್ನು ಪರ್ಯಾಯ ಆಹಾರವನ್ನಾಗಿ ಸೇವಿಸಿ

ದ್ರಾಕ್ಷಿಯನ್ನು ಪರ್ಯಾಯ ಆಹಾರವನ್ನಾಗಿ ಸೇವಿಸಿ

ಕೊಳೆತ ಮೇಲೆಯೇ ದ್ರಾಕ್ಷಾರಸದಲ್ಲಿ ಆಲ್ಕೋಹಾಲ್ ಉತ್ಪತ್ತಿಯಾಗುವುದರಿಂದ ದ್ರಾಕ್ಷಿ ಹಣ್ಣನ್ನು ಹಸಿಯಾಗಿ ತಿನ್ನುವುದು ಆರೋಗ್ಯಕ್ಕೆ ಉತ್ತಮ. ಇದಕ್ಕಾಗಿ ನಿಮ್ಮ ನಿತ್ಯದ ಆಹಾರದೊಂದಿಗೆ ದ್ರಾಕ್ಷಿಹಣ್ಣನ್ನು ನಿಯಮಿತವಾಗಿ ಸೇವಿಸುವುದರಿಂದ ರಕ್ತದಲ್ಲಿ ಹಲವು ಪೋಷಕಾಂಶಗಳು ಲಭ್ಯವಾಗಿ ಮದ್ಯವನ್ನು ಬಯಸುವ ಬಯಕೆ ಕಡಿಮೆಯಾಗುತ್ತದೆ.ಇದಕ್ಕಾಗಿ ದಿನಕ್ಕೆ ಮೂರೂ ಹೊತ್ತು ದ್ರಾಕ್ಷಿಯನ್ನು ನಿಮ್ಮ ಆಹಾರದೊಂದಿಗೆ ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿ. ಒಂದು ಸಮೀಕ್ಷೆಯ ಪ್ರಕಾರ ಸುಮಾರು ಕೇವಲ ದ್ರಾಕ್ಷಿಯನ್ನೇ ಆಹಾರವನ್ನು ಸ್ವೀಕರಿಸಿದವರಲ್ಲಿ ಇಪ್ಪತ್ತೈದು ದಿನಗಳಲ್ಲಿ ನಿಮ್ಮ ಮದ್ಯ ಕುಡಿಯುವ ಬಯಕೆ ಸಂಪೂರ್ಣವಾಗಿ ಕೊನೆಗೊಳ್ಳುತ್ತದೆ. ಆದರೆ ಈ ಸಲಹೆಯನ್ನು ಸರ್ವಥಾ ಪಾಲಿಸುವ ಮೊದಲು ನಿಮ್ಮ ಕುಟುಂಬ ವೈದ್ಯರನ್ನು ಭೇಟಿಯಾಗಿ ಅವರ ಮಾರ್ಗದರ್ಶನವನ್ನು ಅನುಸರಿಸಿ.

ಖರ್ಜೂರ

ಖರ್ಜೂರ

ಮದ್ಯಕ್ಕೆ ಪ್ರಬಲ ಪ್ರತಿರೋಧವನ್ನು ಒಡ್ಡುತ್ತಾ ಬಂದಿರುವ ಅತ್ಯಂತ ಪುರಾತನ ಆಹಾರವೆಂದರೆ ಖರ್ಜೂರ. ಮರುಳುಗಾಡಿನ ಒಣಫಲವಾದ ಖರ್ಜೂರ ಉತ್ತಮ ಪೋಷಕಾಂಶಗಳ ಆಗರವಾಗಿದೆ. ಯಾವಾಗ ಮದ್ಯ ಕುಡಿಯುವ ಮನಸ್ಸಾಯಿತೋ ಆಗೆಲ್ಲಾ ಖರ್ಜೂರವನ್ನು ನಯವಾಗಿ ಅರೆದು ನೀರಿನೊಂದಿಗೆ ಗೊಟಾಯಿಸಿ ದಿನಕ್ಕೆ ಎರಡು ಅಥವಾ ಮೂರು ಬಾರಿ ಕುಡಿಯುವುದರಿಂದ ಉತ್ತಮ ಪರಿಣಾಮ ದೊರಕುತ್ತದೆ. ಆದರೆ ಸತತವಾಗಿ ಸುಮಾರು ಒಂದು ತಿಂಗಳು ಎಡೆಬಿಡದೇ ಸೇವಿಸುವುದು ಅಗತ್ಯ. ಇದರ ಬಣ್ಣವೂ ಮದ್ಯದ ಬಣ್ಣವನ್ನೇ ಹೋಲುವುದರಿಂದ ಮನಸ್ಸನ್ನು ಹತೋಟಿಗೆ ತರುವುದು ಸುಲಭವಾಗಿದೆ.

ಹಾಗಲಕಾಯಿ

ಹಾಗಲಕಾಯಿ

ಮದ್ಯಪಾನದಿಂದ ನಿಮ್ಮ ಮೂತ್ರಪಿಂಡಗಳು ನಾಶವಾಗುವ ಹಂತದಲ್ಲಿವೆ, ಇನ್ನು ಕುಡಿದರೆ ಮೂತ್ರಪಿಂಡಗಳು ವಿಫಲವಾಗಬಹುದು ಎಂಬ ಹಂತಕ್ಕೆ ಬಂದವರಿಗೆ ಹಾಗಲಕಾಯಿ ಉತ್ತಮವಾದ ಪರ್ಯಾಯವಾಗಿದೆ. ಇದಕ್ಕಾಗಿ ಪ್ರತಿದಿನ ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಹಾಗಲಕಾಯಿಯಿಂದ ಮಾಡಿದ ಜ್ಯೂಸ್ ಕುಡಿಯಿರಿ. ಇದು ಅತ್ಯಂತ ಕಹಿಯಾಗಿರುತ್ತದೆ ಸರಿ, ಆದರೂ ಇಷ್ಟು ವರ್ಷ ಮದ್ಯಪಾನದ ಮೂಲಕ ಅನುಭವಿಸಿದ ಸಿಹಿಯನ್ನು ಸರಿಯಾಗಿಸಲು ಕೊಂಚ ಕಹಿಯೂ ಯುಗಾದಿಯ ಹೊಸವರ್ಷದಂತೆ ಹೊಸಜೀವನವನ್ನು ನೀಡಲು ಅಗತ್ಯ ಎಂದು ಮನವನ್ನು ಗಟ್ಟಿಯಾಗಿಸಿ ಮೂಗು ಮುಚ್ಚಿಕೊಂಡು ಕುಡಿದುಬಿಡಿ. ಸಾಧ್ಯವಾದರೆ ಕೊಂಚ ಮಜ್ಜಿಗೆಯನ್ನೂ ಸೇರಿಸಬಹುದು. ಆದರೆ ಬೆಲ್ಲ ಸಕ್ಕರೆ ಮಾತ್ರ ಸೇರಿಸಲೇಬೇಡಿ.

ಕ್ಯಾರೆಟ್ ಜ್ಯೂಸ್

ಕ್ಯಾರೆಟ್ ಜ್ಯೂಸ್

ಒಂದು ವೇಳೆ ನೀವು ಮಧುಮೇಹಿಗಳಲ್ಲದಿದ್ದಲ್ಲಿ ಕ್ಯಾರೆಟ್ ಜ್ಯೂಸ್ ಸಹಾ ಮದ್ಯಪಾನದಿಂದ ವಿಮುಖರಾಗಲು ಉತ್ತಮ ಪರ್ಯಾಯವಾಗಿದೆ. ಇದಕ್ಕಾಗಿ ಪ್ರತಿದಿನ ಕ್ಯಾರೆಟ್ಟುಗಳನ್ನು ಮಿಕ್ಸಿಯಲ್ಲಿ ನೀರಿನೊಂದಿಗೆ ಗೊಟಾಯಿಸಿ ಮಾಡಿದ ಒಂದು ಲೋಟ ಜ್ಯೂಸ್ ಪ್ರತಿದಿನ ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಮತ್ತು ದಿನತ ಇತರ ಹೊತ್ತಿನಲ್ಲಿ ಅರ್ಧ ಲೋಟ ಕುಡಿಯಿರಿ. ಇದರಿಂದ ದೇಹದ ರೋಗನಿರೋಧಕ ಶಕ್ತಿಯೂ ಹೆಚ್ಚುತ್ತದೆ ಹಾಗೂ ಆರೋಗ್ಯವೂ ಉತ್ತಮಗೊಳ್ಳುತ್ತದೆ.

ನಿತ್ಯದ ಚಟುವಟಿಕೆಗಳನ್ನು ಬದಲಿಸಿ

ನಿತ್ಯದ ಚಟುವಟಿಕೆಗಳನ್ನು ಬದಲಿಸಿ

ಮನಸ್ಸನ್ನು ಮದ್ಯಪಾನದೆಡೆ ಹೊರಳಿಸಲು ತಮ್ಮದೇ ವ್ಯಾಖ್ಯಾನ ನೀಡುತ್ತಾರೆ. ಹೆಚ್ಚಿನವರು ಇದಕ್ಕೆ ನೀಡುವ ಕಾರಣ 'ಟೆನ್ಷನ್' ಅಥವಾ ಒತ್ತಡ. ಆದರೆ ಇದು THIQ ರಾಸಾಯನದ ಪ್ರಭಾವವೇ ಹೊರತು ಬೇರೇನೂ ಅಲ್ಲ. ಗಾಂಧೀಜಿಯವರಿಗೆ ಅಂದು ಭಾರತಕ್ಕೆ ಸ್ವಾತಂತ್ರ ದೊರಕಿಸಿಕೊಡುವುದರ ಜೊತೆ ದೇಶ ಇಬ್ಭಾಗವಾಗಿ ಹೋಗುವುದನ್ನು ಅನಿವಾರ್ಯವಾಗಿ ನೋಡುವ ಟೆನ್ಷನ್ ಇತ್ತು. ಆದರೆ ಅವರು ಮದ್ಯಪಾನಕ್ಕೆ ಮಣಿದ್ದಿದ್ದರೇ? ಇಲ್ಲ, ಬದಲಿಗೆ ಅದನ್ನು ಎದುರಿಸಿದರು. ಈ ಮನಸ್ಸಿನ ದೃಢತೆ ನಮ್ಮಲ್ಲೂ ಇದೆ, ಆದರೆ ನಾವು ಅದನ್ನು ಉಪಯೋಗಿಸುತ್ತಿಲ್ಲ. ನಿಮ್ಮ ಮನಸ್ಸಿನ ದೃಢತೆಯನ್ನು ಬದಲಿಸುವ ನಿಟ್ಟಿನಲ್ಲಿ ಹಲವು ಬದಲಾವಣೆಗಳು ಅಗತ್ಯ. ನಿಮ್ಮ ಮನಸ್ಸು ಹೊರಳಿಸಲು ಯಾವ ಕಾರಣಗಳಿವೆ ಎಂಬ ವಿಷಯವನ್ನು ಗಮನಿಸಿ. ಪ್ರಮುಖವಾಗಿ ಕಣ್ಣಿಗೆ ಕಾಣುವಂತಿರುವ ಮದ್ಯದ ಬಾಟಲಿ, ಕಂಪನಿ ಬೇಡುವ ಸ್ನೇಹಿತರು ಮೊದಲಾದವು.

ನಿತ್ಯದ ಚಟುವಟಿಕೆಗಳನ್ನು ಬದಲಿಸಿ

ನಿತ್ಯದ ಚಟುವಟಿಕೆಗಳನ್ನು ಬದಲಿಸಿ

ಪ್ರತಿಯೊಬ್ಬರಿಗೂ ಈ ವಿಷಯಗಳು ಬೇರೆಬೇರೆಯಾಗಿರಬಹುದು. ನೂರಕ್ಕೆ ತೊಂಭತ್ತು ಭಾಗ ಮದ್ಯಪಾನಿಗಳಾದ ಸ್ನೇಹಿತರು ನೀಡುವ ಆಹ್ವಾನ. ನಿಮ್ಮ ಮನಸ್ಸನ್ನು ದೃಢಗೊಳಿಸಿ, ಯಾವುದೇ ಮುಲಾಜಿಲ್ಲದೇ 'ಇಲ್ಲ' ಎಂದು ಹೇಳಿ. ಯಾವುದೇ ನಷ್ಟವಾದರೂ ಅದಕ್ಕಿಂತ ನಿಮ್ಮ ಮನಸ್ಸಿಗೆ ಈಗ ಸಿಕ್ಕಿರುವ ನೆಮ್ಮದಿಗೆ ಅದು ಸಮನಲ್ಲ. ಇದಕ್ಕಾಗಿ ನಿಮ್ಮ ನಿತ್ಯದ ಚಟುವಟಿಕೆಗಳನ್ನು ಬದಲಿಸಿ. ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯಿರಿ, ಸಂಜೆ ಹೊತ್ತು ಅವರ ಹೋಂ ವರ್ಕ್ ನಲ್ಲಿ ಭಾಗಿಯಾಗಿ, ಹಿರಿಯರೊಡನೆ ಕುಳಿತು ಸಮಾಲೋಚಿಸಿ, ಮದ್ಯಪಾನಕ್ಕೆ ಆಹ್ವಾನ ನೀಡುವ ಸಮಾನ್ಯವಾದ ಸಮಯದಲ್ಲಿ ಆ ಸ್ಥಳದಲ್ಲಿರದೇ ಬೇರೆಡೆ ಹೋಗಿ. ಆ ಸಮಯದಲ್ಲಿ ಮಗ್ನರಾಗಿರಲು ಯಾವುದಾದರೊಂದು ಚಟುವಟಿಕೆಯನ್ನು ಪ್ರಾರಂಭಿಸಿ.

ದೃಢಸಂಕಲ್ಪವನ್ನು ಎಂದೂ ಕಳೆದುಕೊಳ್ಳಬೇಡಿ

ದೃಢಸಂಕಲ್ಪವನ್ನು ಎಂದೂ ಕಳೆದುಕೊಳ್ಳಬೇಡಿ

ಸಾಧ್ಯವಾದರೆ ನಿಮ್ಮ ಉದ್ಯೋಗಕ್ಕೆ ಪೂರಕವಾದ ಅಥವಾ ನಿಮ್ಮ ಮನಸ್ಸಿನಲ್ಲಿ ಹಿಂದೆಂದೋ ಇದ್ದು ಕಾರಣಾಂತರಗಳಿಂದ ಸಾಧ್ಯವಾಗದಿದ್ದ ವಿಷಯದ ಕಲಿಕೆಗೆ ಈ ಸಮಯವನ್ನು ಮೀಸಲಿಡಿ. ಒಟ್ಟಾರೆ ನಿಮ್ಮ ದೃಢಸಂಕಲ್ಪವನ್ನು ಎಂದೂ ಕಳೆದುಕೊಳ್ಳಬೇಡಿ. ಇದೇ ನಿಮ್ಮ ಅತ್ಯಂತ ಬೆಲೆಬಾಳುವ ಆಸ್ತಿ. ಮದ್ಯದ ಕ್ಷಣಿಕ ಅಮಲಿಗಾಗಿ ಈ ಆಸ್ತಿಯನ್ನು ಎಂದಿಗೂ ಕಳೆದುಕೊಳ್ಳಬೇಡಿ.

English summary

Useful Home Remedies to stop drinking Alcohol

Alcoholism is probably the worst disease one can ever have. However it cannot be termed as a disease because it is more of an addiction for people. If you have decided to kick the bad habit of drinking alcohol then let us tell you, it is not as difficult as it seems.
X
Desktop Bottom Promotion