For Quick Alerts
ALLOW NOTIFICATIONS  
For Daily Alerts

ಜಾಂಡೀಸ್ ರೋಗ: ವೈದ್ಯರಿಗೆ ಸವಾಲೆಸೆಯುವ ಹಳ್ಳಿ ಮದ್ದು!

By manu
|

ಕಣ್ಣುಗಳಲ್ಲಿ ಹಳದಿ ಬಣ್ಣ ತರಿಸುವ ಕಾಮಾಲೆ (ಜಾಂಡೀಸ್) ರೋಗ ಯಕೃತ್‪ನ (ಲಿವರ್) ವೈಫಲ್ಯವನ್ನು ತೋರುತ್ತದೆ. ಹಳೆಯ ಮತ್ತು ಸತ್ತ ಕೆಂಪು ರಕ್ತಕಣಗಳನ್ನು ಒಡೆಯಲು ನಮ್ಮ ಯಕೃತ್ ಬಿಲುರುಬಿನ್ (bilurubin) ಎಂಬ ಪೋಷಕಾಂಶವನ್ನು ಬಳಸುತ್ತದೆ. ಈ ಪೋಷಕಾಂಶ ಹಳದಿ ಬಣ್ಣದಲ್ಲಿದ್ದು ಹಳೆಯ ರಕ್ತಕಣಗಳನ್ನು ಒಡೆದ ಬಳಿಕ ಇದು ವಿಸರ್ಜನೆಗೊಳ್ಳುತ್ತದೆ.

ಒಂದು ವೇಳೆ ಈ ಬಿಲುರುಬಿನ್ ರಕ್ತಕಣಗಳನ್ನು ಒಡೆಯಲು ಶಕ್ತವಾಗದೇ ಇದ್ದರೆ ಈ ಹಳದಿ ದ್ರವ ರಕ್ತದ ಮೂಲಕ ದೇಹದಲ್ಲಿ ಹರಡಿ ಕಣ್ಣು, ಚರ್ಮ ಮತ್ತು ಬಾಯಿಯ ಒಳಭಾಗದಲ್ಲಿ ಹಳದಿ ಬಣ್ಣ ಉಂಟುಮಾಡುತ್ತದೆ. ಈ ಸ್ಥಿತಿ ಉಂಟಾಗಲು ಪಿತ್ತರಸ (bile) ದ ಪ್ರಮಾಣದಲ್ಲಿ ಹೆಚ್ಚಳವಾಗುವುದೂ ಕಾರಣವಾಗಿದೆ.

ಮಲೇರಿಯಾ, ಸಿರ್ರೋಸಿಸ್ ಮೊದಲಾದ ಯಕೃತ್ ಸಂಬಂಧಿತ ರೋಗಗಳೂ ಕಾಮಾಲೆಗೆ ಕಾರಣವಾಗಬಲ್ಲವು. ಕಾಮಾಲೆ ರೋಗಿಗಳು ಅತೀವ ಹೊಟ್ಟೆನೋವು, ತಲೆನೋವು, ಜ್ವರ, ವಾಕರಿಕೆ, ಹಸಿವಿಲ್ಲದಿರುವುದು, ವಾಂತಿ ಮತ್ತು ತೂಕ ಕಳೆದುಕೊಳ್ಳುವಿಕೆ ಮೊದಲಾದ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ನಾವು ನಿರ್ಲಕ್ಷ್ಯ ಮಾಡುವ ಜಾಂಡೀಸ್‌ನ ಲಕ್ಷಣಗಳಿವು!

ಕಾಮಾಲೆಗೆ ಔಷಧವೊಂದೇ ಪರಿಹಾರವಲ್ಲ. ಕಾಮಾಲೆ ಬಂದ ಬಳಿಕ ಸೂಕ್ತವಾದ ಪಥ್ಯವನ್ನು ಅನುಸರಿಸುವುದು ಒಂದು ಅಗತ್ಯಕ್ರಮವಾಗಿದೆ. ಇವರು ತಮ್ಮ ಆಹಾರದಲ್ಲಿ ಖಾರ ಮತ್ತು ಉಪ್ಪನ್ನು ಅನಿವಾರ್ಯವಾಗಿ ತ್ಯಜಿಸಬೇಕಾಗುತ್ತದೆ ಅಥವಾ ಇಲ್ಲವೇ ಇಲ್ಲವೆನ್ನಿಸುವಷ್ಟು ಪ್ರಮಾಣಕ್ಕೆ ಕಡಿಮೆಗೊಳಿಸಬೇಕಾಗುತ್ತದೆ. ಎಣ್ಣೆಯಿರುವ, ಕರಿದ, ಹುರಿದ ತಿಂಡಿಗಳಿಗೂ ವಿದಾಯ ಹೇಳಬೇಕಾಗುತ್ತದೆ. ಹಾಗಾದರೆ ಕಾಮಾಲೆ ರೋಗಿಗಳು ತಿನ್ನಬೇಕಾದುದಾದರೂ ಏನನ್ನು? ಯಾವ ಆಹಾರಗಳನ್ನು ಸೇವಿಸುವ ಮೂಲಕ ಹಸಿವು ತಣಿಸುವ ಜೊತೆಗೆ ಕಾಮಾಲೆ ಹತೋಟಿಗೆ ಬರುತ್ತದೆ? ಈ ದ್ವಂದ್ವವನ್ನು ನಿವಾರಿಸಲು ಕೆಳಗಿನ ಸ್ಲೈಡ್ ಶೋ ನಿಮ್ಮ ನೆರವಿಗೆ ಬರಲಿದೆ..

ಟೊಮೇಟೊ

ಟೊಮೇಟೊ

ಕಾಮಾಲೆ ರೋಗಿಗಳಿಗೆ ಟೊಮೇಟೊ ಒಂದು ಉತ್ತಮ ಆಹಾರವಾಗಿದೆ. ಇದರಲ್ಲಿರುವ ವಿವಿಧ ಆಂಟಿ ಆಕ್ಸಿಡೆಂಟುಗಳು ಮತ್ತು ಹೇರಳವಾದ ವಿಟಮಿನ್ ಸಿ ರೋಗವನ್ನು ಶೀಘ್ರವೇ ಹತೋಟಿಗೆ ತರಲು ನೆರವಾಗುತ್ತದೆ.

ಟೊಮೇಟೊ

ಟೊಮೇಟೊ

ಇದಕ್ಕಾಗಿ ಟೊಮೇಟೊ ಹಣ್ಣಿನ ಸಿಪ್ಪೆ ಮತ್ತು ಬೀಜಗಳನ್ನು ನಿವಾರಿಸಿದ ತಿರುಳನ್ನು ಮಿಕ್ಸಿಯಲ್ಲಿ ಚಿಟಿಕೆ ಉಪ್ಪು ಮತ್ತು ಚಿಟಿಕೆ ಕಾಳುಮೆಣಸಿನ ಪುಡಿ ಹಾಕಿ ಖಾಲಿ ಹೊಟ್ಟೆಯಲ್ಲಿ ಹನ್ನೆರಡು ದಿನ ಸತತವಾಗಿ ಕುಡಿಯುವುದರಿಂದ ಕಾಮಾಲೇ ಶೀಘ್ರವೇ ಹತೋಟಿಗೆ ಬರುತ್ತದೆ.

ನೆಲ್ಲಿಕಾಯಿ

ನೆಲ್ಲಿಕಾಯಿ

ನೆಲ್ಲಿಕಾಯಿಯಲ್ಲಿಯೂ ಆಂಟಿ ಆಕ್ಸಿಡೆಂಟುಗಳು ಮತ್ತು ವಿಟಮಿನ್ ಸಿ ಪ್ರಮಾಣ ಹೇರಳವಾಗಿದ್ದು ಕಾಮಾಲೆಗೆ ಉತ್ತಮವಾದ ಆಹಾರವಾಗಿದೆ. ಮುಂದೆ ಓದಿ

ನೆಲ್ಲಿಕಾಯಿ

ನೆಲ್ಲಿಕಾಯಿ

ಇದಕ್ಕಾಗಿ ಬೀಜ ನಿವಾರಿಸಿ ಕೊಂಚ ನೀರಿನಲ್ಲಿ ಚಿಟಿಕೆ ಉಪ್ಪು ಮತ್ತು ಕಾಳುಮೆಣಸಿನ ಪುಡಿಯನ್ನು ಸೇರಿಸಿ ಮಿಕ್ಸಿಯಲ್ಲಿ ಗೊಟಾಯಿಸಿ ಕುಡಿಯುವುದರಿಂದ ಉತ್ತಮ ಪರಿಣಾಮ ದೊರಕುತ್ತದೆ. ಇದು ಯಕೃತ್‌ನ ಜೀವಕೋಶಗಳನ್ನು ಬೆಳೆಸಿ ಹಳೆಯ ಶಕ್ತಿಯನ್ನು ಪಡೆಯಲು ನೆರವಾಗುತ್ತದೆ.

ಕಬ್ಬಿನ ಹಾಲು

ಕಬ್ಬಿನ ಹಾಲು

ಕಾಮಾಲೆಗೆ ಕಬ್ಬಿನ ಹಾಲು ಸಹಾ ಉತ್ತಮ ಆಹಾರವಾಗಿದೆ. ದಿನಕ್ಕೊಂದು ಲೋಟ ಕಬ್ಬಿನಹಾಲು ಕುಡಿಯುವುದರಿಂದ ಯಕೃತ್ ತನ್ನ ಹಿಂದಿನ ಸ್ಥಿತಿಯನ್ನು ಪಡೆಯಲು ನೆರವಾಗುತ್ತದೆ ಹಾಗೂ ಜೀರ್ಣಕ್ರಿಯೆಯೂ ಉತ್ತಮಗೊಳ್ಳುತ್ತದೆ.

ಲಿಂಬೆ ಹಣ್ಣಿನ ಜ್ಯೂಸ್

ಲಿಂಬೆ ಹಣ್ಣಿನ ಜ್ಯೂಸ್

ಲಿಂಬೆರಸದಲ್ಲಿರುವ ವಿಟಮಿನ್ ಸಿ ಮತ್ತು ಇತರ ಪೋಷಕಾಂಶಗಳು ಪಿತ್ತರಸ ವಿಪರೀತ ಪ್ರಮಾಣದಲ್ಲಿ ಉತ್ಪತ್ತಿಯಾಗುವುದನ್ನು ತಡೆಯುವ ಮೂಲಕ ಕಾಮಾಲೆ ಕಡಿಮೆಯಾಗಲು ಸಹಕರಿಸುತ್ತದೆ.ಮುಂದೆ ಓದಿ

ಲಿಂಬೆ ಹಣ್ಣಿನ ಜ್ಯೂಸ್

ಲಿಂಬೆ ಹಣ್ಣಿನ ಜ್ಯೂಸ್

ಲಿಂಬೆರಸ, ಉಪ್ಪು ಸೇರಿಸಿದ ನೀರನ್ನು ಪ್ರತಿದಿನ ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಸೇವಿಸುವುದರಿಂದ ಕಾಮಾಲೆ ಶೀಘ್ರವೇ ತಹಬಂದಿಗೆ ಬರುತ್ತದೆ.

ಕ್ಯಾರೆಟ್

ಕ್ಯಾರೆಟ್

ಕ್ಯಾರೆಟ್ಟುಗಳಲ್ಲಿ ಬೀಟಾ ಕ್ಯಾರೋಟೀನ್ ಎಂಬ ಪೋಷಕಾಂಶವಿದ್ದು ಯಕೃತ್‌ನ ಚೇತರಿಕೆಗೆ ನೆರವಾಗುತ್ತದೆ.

ಕ್ಯಾರೆಟ್

ಕ್ಯಾರೆಟ್

ಅಲ್ಲದೇ ಇದರಲ್ಲಿರುವ ವಿಟಮಿನ್ ಎ ಮತ್ತು ಸಿ ಹಾಗೂ ಅತಿ ಕಡಿಮೆ ಕೊಲೆಸ್ಟ್ರಾಲ್ ಯಕೃತ್‌ನಲ್ಲಿರುವ ವಿಷಕಾರಿ ವಸ್ತುಗಳನ್ನು ವಿಸರ್ಜಿಸಿ ಚೇತರಿಸಿಕೊಳ್ಳಲು ನೆರವು ನೀಡುತ್ತವೆ. ದಿನಕ್ಕೆ ಒಂದು ಅಥವಾ ಎರಡು ಕ್ಯಾರೆಟ್ಟುಗಳನ್ನು ಹಸಿಯಾಗಿಯೇ ತಿನ್ನುವುದು ಉತ್ತಮ.

ಮಜ್ಜಿಗೆ

ಮಜ್ಜಿಗೆ

ಮೊಸರಿನಿಂದ ಬೆಣ್ಣೆತೆಗೆದ ಉಳಿಯುವ ಮಜ್ಜಿಗೆಯಲ್ಲಿ ಉತ್ತಮ ಪ್ರಮಾಣದ ಕಬ್ಬಿಣ ಮತ್ತು ಕ್ಯಾಲ್ಸಿಯಂ ಇದೆ.

ಮಜ್ಜಿಗೆ

ಮಜ್ಜಿಗೆ

ಇದರಲ್ಲಿ ಕೊಬ್ಬಿನ ಅಂಶ ಇಲ್ಲದೇ ಇರುವುದರಿಂದ ಮಜ್ಜಿಗೆ ಸುಲಭವಾಗಿ ಜೀರ್ಣವಾಗುವ ಆಹಾರವಾಗಿದ್ದು ಯಕೃತ್ ಸ್ವಾಭಾವಿಕವಾಗಿ ತನ್ನ ಹಿಂದಿನ ಸಾಮರ್ಥ್ಯವನ್ನು ಪಡೆಯಲು ನೆರವು ನೀಡುತ್ತದೆ.

ದಾಳಿಂಬೆ

ದಾಳಿಂಬೆ

ದಾಳಿಂಬೆ ಹಣ್ಣಿನಲ್ಲಿಯೂ ವಿವಿಧ ಆಂಟಿ ಆಕ್ಸಿಡೆಂಟುಗಳು, ವಿವಿಧ ಪೋಷಕಾಂಶಗಳು ಹಾಗೂ ಉತ್ತಮ ಪ್ರಮಾಣದ ಸೋಡಿಯಂ ಇದ್ದು ಯಕೃತ್ ನ ಶೀಘ್ರ ಚೇತರಿಕೆಗೆ ನೆರವು ನೀಡುತ್ತದೆ.

ಬಾದಾಮಿ

ಬಾದಾಮಿ

ಪ್ರತಿದಿನ ಕೆಲವು ಬಾದಾಮಿಗಳನ್ನು ತಿನ್ನುತ್ತಾ ಬರುವುದರಿಂದ ಯಕೃತ್ ಉತ್ತಮವಾಗಿ ಕಾರ್ಯನಿರ್ವಹಿಸಲು ನೆರವು ನೀಡುತ್ತದೆ. ಇದರ ಸೇವನೆಯಿಂದ ಯಕೃತ್ ನ ವಿಷಕಾರಿ ವಸ್ತುಗಳನ್ನು ಹೊರಹಾಕಿ ಶಕ್ತಿಯನ್ನು ಹೆಚ್ಚಿಸಲು ನೆರವು ಸಿಗುತ್ತದೆ.

ನಿಮ್ಮಲ್ಲಿ ಇನ್ನಷ್ಟು ಮಾಹಿತಿ ಇದ್ದರೆ ನಮ್ಮೊಂದಿಗೆ ಹಂಚಿಕೊಳ್ಳಿ

ನಿಮ್ಮಲ್ಲಿ ಇನ್ನಷ್ಟು ಮಾಹಿತಿ ಇದ್ದರೆ ನಮ್ಮೊಂದಿಗೆ ಹಂಚಿಕೊಳ್ಳಿ

ಈ ಆಹಾರಗಳಿಗೂ ಹೊರತಾಗಿ ಕಾಮಾಲೆಯನ್ನು ಕಡಿಮೆಗೊಳಿಸುವ ಇನ್ನಾವುದೇ ಆಹಾರ ಅಥವಾ ಖಾದ್ಯ ನಿಮಗೆ ತಿಳಿದಿದ್ದರೆ ದಯವಿಟ್ಟು ಕೆಳಗೆ ನೀಡಿರುವ ಟಿಪ್ಪಣಿ ಸಮೂದಿಸಲು ಇರುವ ಸ್ಥಳದಲ್ಲಿ ನಮೂದಿಸಿ ಮಾಹಿತಿಯನ್ನು ಹಂಚಿಕೊಳ್ಳಿ. ಇದು ಇತರರಿಗೂ ಹಲವು ರೀತಿಯಲ್ಲಿ ಉಪಯುಕ್ತವಾಗಬಲ್ಲುದು.

English summary

Top Foods That Cure Jaundice

Jaundice is not a disease but rather a symptom of an underlying disease. The skin, mucous membranes and whites of the eyes turn yellow due excessive bilurubin production .One gets affected by jaundice when there is an increase in bile pigment. Jaundice can affect anyone regardless of age.
X
Desktop Bottom Promotion