For Quick Alerts
ALLOW NOTIFICATIONS  
For Daily Alerts

ಕಣ್ಣಿನ ದೃಷ್ಟಿಯೇ ಜೀವನದ ಬಹು ದೊಡ್ಡ ಆಸ್ತಿ

|

ನಮಗೆ ಅತ್ಯಂತ ಹತ್ತಿರದವರನ್ನು ಕಣ್ಣುಗಳಿಗೆ ಹೋಲಿಸಿ ಅವರು ನಮಗೆಷ್ಟು ಅಮೂಲ್ಯ ಎಂದು ಬಣ್ಣಿಸುವುದು ಸಾಮಾನ್ಯ. ಏಕೆಂದರೆ ನಮ್ಮ ಶರೀರದಲ್ಲಿ ಅತಿ ಸೂಕ್ಷ್ಮವಾದ ಮತ್ತು ಅಮೂಲ್ಯವಾದ ಅಂಗಗಳೆಂದರೆ ಕಣ್ಣುಗಳು. ದೇಹದ ಯಾವುದೇ ಭಾಗಕ್ಕೆ ಪೆಟ್ಟಾದರೂ ಸಹಿಸುವ ನಾವು ಕಣ್ಣುಗಳಿಗೆ ಯಾವುದೇ ತೊಂದರೆ ಸಹಿಸುವುದಿಲ್ಲ, ಆದರೆ ಬದಲಾಗುತ್ತಿರುವ ಜೀವನ ಶೈಲಿ, ಬಿಡುವಿಲ್ಲದ ಉದ್ಯೋಗ, ಹೆಚ್ಚು ಸಮಯ ಕಂಪ್ಯೂಟರ್ ಪರದೆಯನ್ನು ದಿಟ್ಟಿಸಿಕೊಂಡೇ ಕಾರ್ಯನಿರ್ವಹಿಸುವುದು ನಮ್ಮ ಪುಟ್ಟ ಆಸ್ತಿಗೆ ಶಾಪವಾಗಿ ಮಾರ್ಪಟ್ಟಿದೆ. ನಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಅವುಗಳನ್ನು ಬಳಲಿಸುತ್ತಿದ್ದೇವೆ. ನಮ್ಮ ದೇಹದಂತೆ ಕಣ್ಣುಗಳಿಗೂ ವಿಶ್ರಾಂತಿಯನ್ನು ನೀಡದೇ ಅವುಗಳಿಂದ ಕೆಲಸ ಮಾಡಿಸಿಕೊಳ್ಳುತ್ತಿದ್ದೇವೆ.

ಇದರ ಫಲಿತಾಂಶವೇ ಎಡೆಬಿಡದೇ ಕಾಡುವ ಕಣ್ಣುನೋವು ಮತ್ತು ದೃಷ್ಟಿಹೀನತೆ ಅಂತೆಯೇ ಕಣ್ಣಿಗೆ ಸಂಬಂಧಪಟ್ಟ ಇತರ ಸಮಸ್ಯೆಗಳು ನಿಮ್ಮನ್ನು ದಾಳಿಮಾಡಿ ಇನ್ನಷ್ಟು ಸಮಸ್ಯೆಗೆ ದಾರಿ ಮಾಡಿಕೊಡುತ್ತಿದೆ. ಕಣ್ಣು ಅತಿ ಸೂಕ್ಷ್ಮವಾಗಿದ್ದು ಅದಕ್ಕೆ ತಕ್ಕುದಾದ ಆರೈಕೆಯನ್ನು ಮಾಡಿದಾಗ ಮಾತ್ರವೇ ಸರಿಯಾಗಿ ಕೆಲಸ ಮಾಡುತ್ತದೆ. ಕತ್ತಲೆ ಕೊಠಡಿಯಲ್ಲಿ ಅರ್ಧಗಂಟೆಗಳ ಸಮಯ ವ್ಯಯಿಸುವುದು ಎಂದರೆ ನಮಗದು ಜೀವಹಿಂಡುವ ಶಿಕ್ಷೆಯಾಗಿ ಬಿಡುತ್ತದೆ, ಅದುವೇ ದೃಷ್ಟಿಹೀನರಾಗಿ ಜೀವನ ಪರ್ಯಂತೆ ಕಳೆಯುವುದು ಎಂದರೆ ಆ ನೋವು ಎಷ್ಟರಮಟ್ಟಿಗೆ ಹಿರಿದಾಗಿರುತ್ತದೆ ಅಲ್ಲವೇ? ಹಾಗಿದ್ದರೆ ನಿಮ್ಮ ಸುಂದರ ಕಣ್ಣುಗಳೆಂಬ ಅತಿಮುಖ್ಯ ಆಸ್ತಿಗಳನ್ನು ರಕ್ಷಿಸಿಕೊಳ್ಳುವುದು ಸಹಾಯಕವಾಗುವ ಕೆಲವೊಂದು ಪುಟ್ಟ ಹೆಜ್ಜೆಗಳನ್ನು ಇಂದಿನ ಲೇಖನದಲ್ಲಿ ನಿಮ್ಮ ಮುಂದಿಡುತ್ತಿದ್ದೇವೆ ಮುಂದೆ ಓದಿ....

ಉತ್ತಮ ದೃಷ್ಟಿಗಾಗಿ ಆಹಾರ

ಉತ್ತಮ ದೃಷ್ಟಿಗಾಗಿ ಆಹಾರ

ನಿಮ್ಮ ಕಣ್ಣುಗಳ ರಕ್ಷಣೆ ಎಂದರೆ ನೀವು ಏನು ತಿನ್ನುತ್ತೀರಿ ಎಂಬುದನ್ನು ಅವಲಂಬಿಸಿರುತ್ತದೆ. ನ್ಯೂಟ್ರೀನ್‎ಗಳಾದ ಒಮೇಗಾ 3 ಆಸಿಡ್, ಲ್ಯೂಟೀನ್, ಜಿಂಕ್ ಮತ್ತು ವಿಟಮಿನ್‎ಗಳನ್ನು ನೀವು ಸೇವಿಸುವ ಆಹಾರ ಒಳಗೊಂಡಿದೆಯೇ ಎಂಬುದನ್ನು ನೋಡಿ. ಹಸಿರು ಸೊಪ್ಪಿನ ತರಕಾರಿಗಳು, ಎಣ್ಣೆಯಂಶವುಳ್ಳ ಮೀನು, ಮೊಟ್ಟೆ, ನಟ್ಸ್, ಮಾಂಸಾಹಾರಿ ಆಹಾರಗಳನ್ನು ನೀವು ಸೇವಿಸಬೇಕು.

ಕಣ್ಣುಗಳಿಗೆ ನಯವಾದ ಮಸಾಜ್

ಕಣ್ಣುಗಳಿಗೆ ನಯವಾದ ಮಸಾಜ್

ಕಣ್ಣುರೆಪ್ಪೆಗಳಿಗೆ ಪ್ರತಿದಿನ ನಯವಾದ ಮಸಾಜ್ ಮಾಡುವುದು ಕಣ್ಣುಗಳ ಆರೋಗ್ಯಕ್ಕೆ ಉತ್ತಮವಾಗಿದೆ. ಇದರಿಂದ ಕಣ್ಣುರೆಪ್ಪೆ ಮತ್ತು ಕಣ್ಣಿನ ಒಳಗಣ ಸೂಕ್ಷ್ಮನರಗಳಲ್ಲಿ ರಕ್ತಸಂಚಾರ ಚುರುಕಾಗಿ ಕಣ್ಣಿನ ಸುತ್ತಲ ಸ್ನಾಯುಗಳನ್ನು ಸಡಿಲಗೊಳಿಸುತ್ತದೆ. ಜೊತೆಗೇ ಕಣ್ಣೀರಿನ ಗ್ರಂಥಿಗಳನ್ನೂ ಪ್ರಚೋದಿಸಿ ಕಣ್ಣುಗಳು ಸದಾ ತೇವವಾಗಿರುವಂತೆ ನೋಡಿಕೊಳ್ಳುತ್ತದೆ. ಈ ಮಸಾಜ್ ಮಾಡುವ ಬಗೆ ಹೀಗಿದೆ:

1) ಎರಡೂ ಕೈಗಳ ಹೆಬ್ಬೆರಳು ಮತ್ತು ತೋರುಬೆರಳುಗಳನ್ನು ಉಪಯೋಗಿಸಿ ಬಲ ಮತ್ತು ಎಡಕಣ್ಣುಗಳ ಮೇಲಿನ ರೆಪ್ಪೆ ಮತ್ತು ಹುಬ್ಬುಗಳ ಸ್ನಾಯುಗಳಿಗೆ ನಯವಾಗಿ ಮಸಾಜ್ ಮಾಡಿ. ಎರಡೂ ಮಸಾಜ್ ಏಕಕಾಲದಲ್ಲಿ ಸಮನಾಗಿರಬೇಕು. ಸುಮಾರು ಹತ್ತರಿಂದ ಇಪ್ಪತ್ತು ಸೆಕೆಂಡ್ ಇದಕ್ಕೆ ಸಾಕು.

2)ಈಗ ಕೆಳಗಿನ ರೆಪ್ಪೆಯನ್ನೂ ಕಣ್ಣಿನ ಕೆಳಗಣ ಭಾಗದ ಮೂಳೆಯನ್ನೂ ಹತ್ತರಿಂದ ಇಪ್ಪತ್ತು ಸೆಕೆಂಡ್ ಕಾಲ ನಯವಾಗಿ ಮಸಾಜ್ ಮಾಡಿ.

3) ಕಣ್ಣಿನ ಪಕ್ಕದ ಹಣೆಯ ಭಾಗ , ಕೆನ್ನೆಯ ಮೇಲ್ಭಾಗದ ಮೂಳೆ ಎದ್ದುನಿಂತಿರುವಲ್ಲಿ ಇನ್ನೂ ಇಪ್ಪತ್ತು ಸೆಕೆಂಡ್ ನಯವಾಗಿ ಮಸಾಜ್ ಮಾಡಿ. ಇದರಿಂದ ಕೆಲಸಮಯದಲ್ಲಿಯೇ ಕಣ್ಣಿನ ಶ್ರಮ ಮಾಯವಾಗುತ್ತದೆ.

ಧೂಮಪಾನ ತ್ಯಜಿಸುವುದು

ಧೂಮಪಾನ ತ್ಯಜಿಸುವುದು

ಧೂಮಪಾನ ಕಣ್ಣಿಗೆ ಸಂಬಂಧಿಸಿದ ಸಮಸ್ಯೆಗಳನ್ನು ತಂದೊಡ್ಡುವಲ್ಲಿ ಎತ್ತಿದ ಕೈಯಾಗಿದೆ. ಕಣ್ಣಿನ ನರಗಳಿಗೆ ಹಾನಿ, ಕಣ್ಣಿನ ಪೊರೆ ಮೊದಲಾದ ಸಮಸ್ಯೆಗಳನ್ನು ಧೂಮಪಾನ ತಂದೊಡ್ಡುತ್ತದೆ. ಧೂಮಪಾನ ತ್ಯಜಿಸುವುದಕ್ಕೆ ಒಮ್ಮೆ ನೀವು ಸಿದ್ಧರಾದಿರಿ ಎಂದಾದಲ್ಲಿ ನಂತರ ನಿಮ್ಮನ್ನು ತಡೆಯುವವರು ಯಾರೂ ಇಲ್ಲ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ.

ಸಮತೋಲಿತ ಆಹಾರ ಪದ್ಧತಿ

ಸಮತೋಲಿತ ಆಹಾರ ಪದ್ಧತಿ

ಸಮತೋಲಿತ ಆಹಾರ ಪದ್ಧತಿಯ ಮೂಲಕ ಆಹಾರ ಸೇವನೆ ಮಾಡುವುದು ಕೂಡ ನಿಮ್ಮ ಕಣ್ಣುಗಳ ರಕ್ಷಣೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ನಿಮ್ಮ ಅತಿಯಾದ ತೂಕ ಸ್ಥೂಲಕಾಯತೆಗೆ ಕಾರಣವಾಗಿ ಅದರಿಂದ ಉಂಟಾಗುವ ಮಧುಮೇಹದಂತಹ ಕಾಯಿಲೆಗೆ ಕಣ್ಣುಗಳು ಬೇಗನೇ ಬಲಿಯಾಗುವ ಸಾಧ್ಯತೆ ಇರುತ್ತದೆ.

ಕೊಂಚ ವಿರಾಮ

ಕೊಂಚ ವಿರಾಮ

ಸದಾ ಕಂಪ್ಯೂಟರ್ ಮುಂದೆ ಕೂತು ಮಾನಿಟರ್ ಕಡೆಗೇ ನೋಡುತ್ತಿರುವ ಬದಲು ನಿಮ್ಮ ದೃಷ್ಟಿಯನ್ನು ಬೇರೆಡೆಯೂ ಪ್ರತಿ ಹದಿನೈದು ನಿಮಿಷಗಳಿಗೊಮ್ಮೆ ಹೊರಳಿಸುತ್ತಿರಿ. (ನಿಮ್ಮ ಕುಟುಂಬದ ಚಿತ್ರ ಅಥವಾ ಮನೆದೇವರ ಪಟ ಯಾವುದೂ ಆಗಬಹುದು) ಬಳಿಕ ಸುಮಾರು ಹತ್ತು ಹದಿನೈದು ಅಡಿ ದೂರದಲ್ಲಿರುವ ವಸ್ತುವನ್ನು ಹತ್ತು ಸೆಕೆಂಡುಗಳ ಕಾಲ ದಿಟ್ಟಿಸಿ. ಇದು ಕಣ್ಣುಗಳಿಗೆ ಒಂದು ರೀತಿಯ ವ್ಯಾಯಾಮವೂ ಹೌದು. ಇದಕ್ಕಾಗಿ ಮೊದಲು ನಿಮ್ಮ ಮಾನಿಟರ್ ಗೆ ಸರಿಸಮಾನವಾದ ದೂರದಲ್ಲಿರುವ ವಸ್ತುವನ್ನು ಹತ್ತು ಸೆಕೆಂಡುಗಳ ಕಾಲ ದಿಟ್ಟಿಸಿ.

ನೈಸರ್ಗಿಕ ಚಿಕಿತ್ಸೆ

ನೈಸರ್ಗಿಕ ಚಿಕಿತ್ಸೆ

ವಾರದಲ್ಲಿ ದಿನಕ್ಕೆ ಎರಡುಬಾರಿಯಾದರೂ ಕಣ್ಣಿಗೆ ಬೇಕಾದ ರಕ್ಷಣೆಯನ್ನು ನೀವು ಮಾಡುವುದು ಅತೀ ಅಗತ್ಯವಾಗಿದೆ. ಸೌತೆಕಾಯಿಯನ್ನು ಕಣ್ಣಿಗೆ ಇಟ್ಟುಕೊಳ್ಳುವುದು ಕೂಡ ಕಣ್ಣಿಗೆ ಬೇಕಾದ ತಂಪನ್ನು ನೀಡುತ್ತದೆ. ಅಂತೆಯೇ ವಾರಕ್ಕೊಮ್ಮೆ ಎಣ್ಣೆ ಹಚ್ಚಿ ಸ್ನಾನ ಮಾಡುವುದರಿಂದ ಕೂಡ ಕಣ್ಣಿಗೆ ಬೇಕಾದ ಪೋಷಣೆ ದೊರಕುತ್ತದೆ.

ಕಂಪ್ಯೂಟರ್ ಪರದೆಯಿಂದ ಆಗಾಗ್ಗೆ ಕಣ್ಣನ್ನು ತಪ್ಪಿಸುತ್ತಿರಿ

ಕಂಪ್ಯೂಟರ್ ಪರದೆಯಿಂದ ಆಗಾಗ್ಗೆ ಕಣ್ಣನ್ನು ತಪ್ಪಿಸುತ್ತಿರಿ

ಹೆಚ್ಚು ಸಮಯ ನೀವು ಕಂಪ್ಯೂಟರ್ ಪರದೆಯನ್ನು ದಿಟ್ಟಿಸುತ್ತಿದ್ದೀರಿ ಎಂದಾದಲ್ಲಿ ಕಣ್ಣಿನ ಹಲವಾರು ಸಮಸ್ಯೆಗಳನ್ನು ನೀವು ಎದುರಿಸಬೇಕಾಗುತ್ತದೆ. ತಲೆನೋವು, ಮಂದದೃಷ್ಟಿ, ಅಂತರದಲ್ಲಿ ಕಾಣುವ ದೃಷ್ಟಿ ಸಮಸ್ಯೆ, ಕುತ್ತಿಗೆ, ಬೆನ್ನು ಮತ್ತು ಭುಜದ ನೋವು ಸರ್ವೇಸಾಮಾನ್ಯವಾಗಿಬಿಡುತ್ತದೆ.

ಸನ್ ಗ್ಲಾಸ್ ಬಳಕೆ

ಸನ್ ಗ್ಲಾಸ್ ಬಳಕೆ

ಸೂರ್ಯನ ಅಲ್ಟ್ರಾ ವೈಲೇಟ್ ಕಿರಣಗಳಿಂದ ನಿಮ್ಮ ಕಣ್ಣನ್ನು ರಕ್ಷಿಸಲು ಉತ್ತಮ ಗುಣಮಟ್ಟದ ಸನ್ ಗ್ಲಾಸ್ ನೆರವಾಗುತ್ತದೆ. ಹೆಚ್ಚಿನ ಯುವಿ ಕಿರಣಗಳು ಕೂಡ ಕಣ್ಣಿನ ಹಲವಾರು ಸಮಸ್ಯೆಗಳಿಗೆ ಕಾರಣವಾಗುತ್ತವೆ.

ಸೂರ್ಯನ ಬೆಳಕು

ಸೂರ್ಯನ ಬೆಳಕು

ಸೂರ್ಯನ ಕಿರಣಗಳು ಯಾವುದೇ ಅಡೆತಡೆಯಿಲ್ಲದಂತೆ ಬೀಳುವ ಸ್ಥಳವನ್ನು ಆಯ್ದುಕೊಂಡು ಮುಂಜಾನೆಯ ವಿಧಿಗಳ ಬಳಿಕ ಆಗಮಿಸಿ.

*ಕಣ್ಣುಗಳನ್ನು ಮುಚ್ಚಿಕೊಂಡು ಸೂರ್ಯನತ್ತ ನೆಟ್ಟ ನೇರವಾಗಿ ನೋಡಿ. (ಕಣ್ಣು ಬಿಡಬಾರದು

*ಕಣ್ಣು ಮುಚ್ಚಿಕೊಂಡಿದ್ದಂತೆಯೇ ಕಣ್ಣುಗುಡ್ಡೆಗಳನ್ನು ಮೇಲಿನಿಂದ ಕೆಳಕ್ಕೆ ಹಾಗೂ ಪಕ್ಕದಿಂದ ಪಕ್ಕಕ್ಕೆ, ವೃತ್ತಾಕಾರವಾಗಿ ತಿರುಗಿಸಿ. ಸ್ವಲ್ಪ ಸಮಯದ ನಂತರ ಮೊದಲು ಮಾಡಿದ್ದಕ್ಕೆ ವಿರುದ್ಧ ದಿಕ್ಕಿನಲ್ಲಿ ಕಣ್ಣುಗುಡ್ಡೆಗಳನ್ನು ಚಲಿಸಿ. ಬಳಿಕ ಕೊಂಚ ಆರಾಮ ನೀಡಿ.

English summary

Simple Rules To Help Keep Your Eyes Healthy

Do you eyes feel tired and sore by the end of the day? Modern life puts a lot of stress on our bodies and eyes are among the first things to suffer. But it doesn’t have to be this way. Learn simple things you can do for your eye health and your eyes will feel and look much better in only a few days.
X
Desktop Bottom Promotion