For Quick Alerts
ALLOW NOTIFICATIONS  
For Daily Alerts

ಮೂಲೆ ಸೇರಿದ ತಾಮ್ರದ ಪಾತ್ರೆಯ ಆರೋಗ್ಯದ ಮಹಾತ್ಮೆ

By Deepak
|

ಹಿಂದಿನ ಕಾಲದ ಒಂದು ನಂಬಿಕೆಯ ಪ್ರಕಾರ ತಾಮ್ರದ ಪಾತ್ರೆಯಲ್ಲಿ ನೀರನ್ನು ಕುಡಿಯುವುದರಿಂದ ಆರೋಗ್ಯಕರವಾಗಿರಬಹುದಂತೆ. ಅದಕ್ಕಾಗಿಯೇ ಇರಬೇಕು ನಿಮ್ಮ ಅಜ್ಜ - ಅಜ್ಜಿಯರು ತಾಮ್ರದ ಚೊಂಬು ಅಥವಾ "ಲೋಟ"ದಲ್ಲಿ ನೀರನ್ನು ಕುಡಿಯುವುದನ್ನು ನೀವು ಸಹ ನೋಡಬಹುದು. ಸುಮಾರು ಜನ ತಾಮ್ರದ ಜಗ್‍ಗಳಲ್ಲಿ ನೀರನ್ನು ಸಂಗ್ರಹಿಸಿಕೊಂಡು ಸೇವಿಸುತ್ತಿರುತ್ತಾರೆ. ಆದರೆ ಈ ಆಚರಣೆಯ ಹಿಂದೆ ಯಾವುದಾದರು ವೈಜ್ಞಾನಿಕ ಕಾರಣಗಳು ಅಡಗಿವೆಯೇ? ಬನ್ನಿ ಒಮ್ಮೆ ಪರಿಶೀಲಿಸೋಣ.

ತಾಮ್ರದ ಚೊಂಬಿನಲ್ಲಿ ನೀರನ್ನು ಕುಡಿಯುವುದ ಆಯುರ್ವೇದದ ಹಿನ್ನೆಲೆಯಿಂದ ಬಂದಿರುವ ಆಚರಣೆಯಾಗಿದೆ. ಪ್ರಾಚೀನ ಆಯುರ್ವೇದ ವಿಜ್ಞಾನದ ಪ್ರಕಾರ ದೇಹದಲ್ಲಿರುವ ಕಫ, ಪಿತ್ತ ಮತ್ತು ವಾತ ಈ ಮೂರು ಬಗೆಯ ದೋಷಗಳನ್ನು ತಾಮ್ರವು ಸಮತೋಲನದಲ್ಲಿಡುವ ಗುಣವನ್ನು ಒಳಗೊಂಡಿದೆಯಂತೆ. ಈ ದೇಹಕ್ಕೆ ಮಾರಕವಾಗಿರುವ ದೋಷಗಳನ್ನು ಹದ್ದು ಬಸ್ತಿನಲ್ಲಿಡಲು ನೀವು ತಾಮ್ರದ ತಂಬಿಗೆ ಅಥವಾ ಚೊಂಬಿನಲ್ಲಿರುವ ನೀರನ್ನು ಸೇವಿಸಬೇಕಂತೆ.

ವೈಜ್ಞಾನಿಕ ದೃಷ್ಟಿಕೋನದ ಪ್ರಕಾರ ನಮ್ಮ ದೇಹಕ್ಕೆ ತಾಮ್ರದ ಅಗತ್ಯವಿದೆ. ಇದರ ಹೊರತಾಗಿ, ತಾಮ್ರದಲ್ಲಿ ಎಲೆಕ್ಟ್ರೋಲೈಟ್‍ಗಳು ಇವೆ. ಇವು ನೀರು ಹಾಳಾಗುವುದನ್ನು ತಡೆಯುತ್ತವೆ. ಹಾಗಾಗಿ ತಾಮ್ರದ ಪಾತ್ರೆಯಲ್ಲಿ ಇಟ್ಟ ನೀರು ತನ್ನ ತಾಜಾತನವನ್ನು ಕಾಪಾಡಿಕೊಳ್ಳುತ್ತದೆ. ಇದರ ಜೊತೆಗೆ ತಾಮ್ರದಿಂದ ನಮಗೆ ದೊರೆಯುವ ಆರೋಗ್ಯಕಾರಿ ಲಾಭಗಳ ಕುರಿತಾಗಿ ಮುಂದೆ ನೀಡಿದ್ದೇವೆ ಓದಿಕೊಳ್ಳಿ.

ಸಂಧಿವಾತ ಮತ್ತು ಊತ ಕೀಲುಗಳ ಶಮನ

ಸಂಧಿವಾತ ಮತ್ತು ಊತ ಕೀಲುಗಳ ಶಮನ

ಸಂಧಿವಾತ ಮತ್ತು ಊತ ಕೀಲುಗಳ ಶಮನ ತಾಮ್ರದಲ್ಲಿ ಉರಿಯೂತ ವಿರೋಧಿ ಗುಣಗಳು ಹೆಚ್ಚಾಗಿವೆ. ಈ ವಿಶೇಷ ಗುಣದಿಂದ ಗಂಟುಗಳಲ್ಲಿ ಸಂಧಿವಾತ ಮತ್ತು ರೂಮಟಾಯ್ಡ್ ಆರ್ಥ್ರೈಟಿಸ್ ನಿಂದ ಉಂಟಾಗುವ ಸೆಳೆತ, ನೋವನ್ನು ಕಡಿಮೆ ಮಾಡುತ್ತದೆ. ತಾಮ್ರದ ಪಾತ್ರೆಯಲ್ಲಿ ಶೇಖರಿಸಿರುವ ನೀರನ್ನು ಕುಡಿದರೆ ಸೆಳೆತ, ನೋವನ್ನು ಕಡಿಮೆ ಮಾಡಬಹುದು

ತೂಕ ಇಳಿಸಲು

ತೂಕ ಇಳಿಸಲು

ತೂಕ ಇಳಿಸಲು ನೀವು ಅನುಸರಿಸುತ್ತಿರುವ ಆಹಾರಕ್ರಮವು ಕೆಲಸ ಮಾಡುತ್ತಿಲ್ಲವೆಂದಾದರೆ ಆಗ ನೀವು ತಾಮ್ರದ ಪಾತ್ರೆಯಲ್ಲಿ ಶೇಖರಿಟ್ಟಿಸಿರುವ ನೀರನ್ನು ನಿಯಮಿತವಾಗಿ ಕುಡಿಯಲು ಪ್ರಯತ್ನಿಸಿ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ತೂಕ ಇಳಿಸಲು

ತೂಕ ಇಳಿಸಲು

ನಿಮ್ಮ ಜೀರ್ಣಕ್ರಿಯೆಯು ಸರಿಯಾಗಿ ಕಾರ್ಯನಿರ್ವಹಿಸುವಂತೆ ಮಾಡುವುದಲ್ಲದೆ ತಾಮ್ರವು ನಿಮ್ಮ ದೇಹದಲ್ಲಿನ ಕೊಬ್ಬನ್ನು ಕರಗಿಸಿ ಅದು ತುಂಬಾ ಪರಿಣಾಮಕಾರಿಯಾಗಿ ಹೊರಹಾಕುತ್ತದೆ. ನಿಮ್ಮ ದೇಹಕ್ಕೆ ಬೇಕಾಗಿರುವುದನ್ನು ಮಾತ್ರ ಉಳಿಸಿ, ಬಾಕಿಯಿರುವುದನ್ನು ಹೊರಹಾಕುತ್ತದೆ.

ಹೃದಯದ ಆರೋಗ್ಯ ಮತ್ತು ಅಧಿಕ ರಕ್ತದೊತ್ತಡ ತಡೆಯುತ್ತದೆ

ಹೃದಯದ ಆರೋಗ್ಯ ಮತ್ತು ಅಧಿಕ ರಕ್ತದೊತ್ತಡ ತಡೆಯುತ್ತದೆ

ಅಮೆರಿಕಾ ಕ್ಯಾನ್ಸರ್ ಸೊಸೈಟಿಯ ಪ್ರಕಾರ ತಾಮ್ರದಲ್ಲಿ ರಕ್ತದೊತ್ತಡ ಹೃದಯ ಬಡಿತ ನಿಯಂತ್ರಿಸುವ ಮತ್ತು ಕೊಲೆಸ್ಟ್ರಾಲ್ ಟ್ರೈಗ್ಲಿಸರೈಡ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದು ಲೋಳೆಯ ಕ್ರೋಢೀಕರಣ ತಡೆಗಟ್ಟಲು ಸಹಕಾರಿ ಮತ್ತು ರಕ್ತನಾಳಗಳು ಹಿಗ್ಗುವಂತೆ ಮಾಡಿ ಹೃದಯಕ್ಕೆ ರಕ್ತವು ಸರಿಯಾಗಿ ಪೂರೈಕೆಯಾಗುವಂತೆ ಮಾಡುತ್ತದೆ. ಅತ್ಯುತ್ತಮ ಫಲಿತಾಂಶಕ್ಕಾಗಿ ತಾಮ್ರದ ಪಾತ್ರೆಯಲ್ಲಿ ಶೇಖರಿಸಿಟ್ಟಿರುವ ನೀರನ್ನು ಕುಡಿಯಿರಿ.

ಮೆದುಳು ಸರಿಯಾಗಿ ಕಾರ್ಯ ನಿರ್ವಯಿಸಲು

ಮೆದುಳು ಸರಿಯಾಗಿ ಕಾರ್ಯ ನಿರ್ವಯಿಸಲು

ಮೆದುಳಿನಲ್ಲಿರುವ ನರಗಳ ನಡುವೆ ರಕ್ಷಣೆಗೆಂದು ಮೈಯೆಲಿನ್ ಕೋಶಗಳಿಂದ ಕೂಡಿರುತ್ತದೆ. ತಾಮ್ರವು ಲಿಪಿಡ್‍ಗಳ ಸಂಶ್ಲೇಷಣೆಗಳ ಜೊತೆಗೂಡಿ ಮೈಯೆಲಿನ್ ಕೋಶಗಳನ್ನು ಸೃಷ್ಟಿಸುವ ಕಾರ್ಯವನ್ನು ಸುಗಮಗೊಳಿಸುತ್ತದೆ. ಇದಲ್ಲದೆ ತಾಮ್ರವು ಸೆಳೆತ ಮತ್ತು ರೋಗಗಳಿಗೆ ಗುರಿಯಾಗುವ ಪ್ರಕ್ರಿಯೆಯನ್ನು ತಡೆಯುತ್ತದೆ.

ನೀರಿನಲ್ಲಿರುವ ಬ್ಯಾಕ್ಟೀರಿಯಾವನ್ನು ಕೊಲ್ಲುತ್ತದೆ

ನೀರಿನಲ್ಲಿರುವ ಬ್ಯಾಕ್ಟೀರಿಯಾವನ್ನು ಕೊಲ್ಲುತ್ತದೆ

ತಾಮ್ರವನ್ನು ಸ್ವಭಾವದಲ್ಲಿ ಒಲಿಗೊಡೈನಾಮಿಕ್ ಎನ್ನಲಾಗುತ್ತದೆ ಮತ್ತು ಇದು ಬ್ಯಾಕ್ಟೀರಿಯಾವನ್ನು ತುಂಬಾ ಪರಿಣಾಮಕಾರಿಯಾಗಿ ಕೊಲ್ಲುತ್ತದೆ. ಇದರಿಂದಾಗಿ ಸಾಮಾನ್ಯ ನೀರಿನಿಂದ ಬರುವ ಭೇದಿ, ಕಾಮಾಲೆ, ಜ್ವರಗಳನ್ನು ತಡೆಯುತ್ತದೆ. ನೀರು ಕಲುಷಿತವಾಗಿದೆಯೆಂದು ನಿಮಗನಿಸಿದರೆ ಆಗ ಅದನ್ನು ಕುಡಿಯುವ ಮೊದಲು ತಾಮ್ರದ ಪಾತ್ರೆಯಲ್ಲಿಡಿ ಮತ್ತು ಇದರ ಬಳಿಕ ಆರೋಗ್ಯಕರ ಮತ್ತು ಸ್ವಚ್ಛ ನೀರನ್ನು ಕುಡಿಯಿರಿ.

ಥೈರಾಯ್ಡ್ ಸಮಸ್ಯೆಗೆ

ಥೈರಾಯ್ಡ್ ಸಮಸ್ಯೆಗೆ

ಥೈರಾಯ್ಡ್ ಕಾಯಿಲೆ ಎದುರಿಸುವ ಹೆಚ್ಚಿನ ಜನರಲ್ಲಿ ಕಾಣಿಸುವ ಸಾಮಾನ್ಯ ಸಮಸ್ಯೆಯೆಂದರೆ ಅವರ ದೇಹದಲ್ಲಿ ತಾಮ್ರದ ಮಟ್ಟ ತುಂಬಾ ಕಡಿಮೆಯಿರುತ್ತದೆ. ತಾಮ್ರದ ಕೊರತೆಯಿಂದಾಗಿ ಗ್ರಂಥಿಗಳ ಕಾರ್ಯಕ್ಕೆ ತೊಂದರೆಯಾಗಬಹುದು. ತಾಮ್ರದ ಪಾತ್ರೆಯಲ್ಲಿ ಶೇಖರಿಸಿಟ್ಟಿರುವ ನೀರನ್ನು ಕುಡಿದರೆ ಈ ಸಮಸ್ಯೆ ನಿವಾರಣೆಯಾಗಿ, ಥೈರಾಯ್ಡ್ ಗ್ರಂಥಿಗಳು ಸರಿಯಾಗಿ ಕಾರ್ಯನಿರ್ವಹಿಸುತ್ತದೆ.

English summary

Reasons To Try a Copper Water Vessel in Kannada

We usually drink water from a glass, porcelain or steel cup on a daily basis. B However, have you ever thought of drinking water from a copper cup? If no, start drinking your water from a copper cup daily, as copper has immense health benefits associated with it.
X
Desktop Bottom Promotion