Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ನೈಸರ್ಗಿಕ ವಿಧಾನಗಳಿಂದ ಆತಂಕಕ್ಕೆ ಪರಿಹಾರ ಹೇಗೆ?
ಸಣ್ಣ ಪ್ರಮಾಣದ ಆತಂಕವು ಸಹಜವಾಗಿ ಗಂಡಸರು ಮತ್ತು ಹೆಂಗಸರು ಎಂಬ ಬೇಧ ಭಾವವಿಲ್ಲದೆ ಎಲ್ಲರನ್ನೂ ಕಾಡುತ್ತಾ ಇರುತ್ತದೆ. ಇದಕ್ಕೆ ಈಗ ಎಲ್ಲರನ್ನೂ ಕಾಡುವ ಒತ್ತಡವೇ ಪ್ರಮುಖ ಕಾರಣವಾಗಿರುತ್ತದೆ.
ಒಂದು ವೇಳೆ ಇದು ಮತ್ತೆ-ಮತ್ತೆ ಕಾಡಿದಾಗ ಮಾತ್ರ ಇದನ್ನು ಗಂಭೀರವಾಗಿ ಪರಿಗಣಿಸಿ. ವೆಬ್‌ಎಂಡಿ ಪ್ರಕಾರ ಕೆಲವೊಂದು ಔಷಧಿಗಳು ಮತ್ತು ಡ್ರಗ್ಸ್‌ನ ಅಡ್ಡ ಪರಿಣಾಮವಾಗಿ ಈ ಆತಂಕ ಕಾಣಿಸಿಕೊಳ್ಳುತ್ತದೆಯಂತೆ.
ಭಯ ಮತ್ತು ಚಿಂತೆಯು ಆತಂಕದ ಮೊದಲ ಲಕ್ಷಣಗಳಾಗಿರುತ್ತವೆ. ಬಹುಶಃ ನಿಮಗೆ ಆತಂಕವಾದಾಗ ಬಾಯಿ ಒಣಗುವಿಕೆ, ಬೆವರುವಿಕೆ ಮತ್ತು ಹೃದಯದ ಬಡಿತ ಹೆಚ್ಚಾಗುವಿಕೆ ಮುಂತಾದ ಸಮಸ್ಯೆಗಳು ಕಂಡು ಬರಬಹುದು. ಹೊಟ್ಟೆಯಲ್ಲಿ ಒಂದು ರೀತಿಯ ಸಂಕಟ ಆಗುವಂತಾಗುತ್ತದೆ. ಈ ಆತಂಕವು ನೀವು ಯಾವ ವಿಚಾರದ ಕುರಿತಾಗಿ ಆತಂಕಗೊಂಡಿದ್ದೀರಿ ಎಂಬ ಕುರಿತಾಗಿ ಆದರ ಸಮಯ ನಿರ್ಧಾರವಾಗುತ್ತದೆ. ಆತಂಕ ಪರಿಹಾರಕ್ಕೆ ಸಹಜ ಮಾರ್ಗಗಳು
ಒಂದು ವೇಳೆ ಯಾವುದಾದರು ಭಾಷಣ ಅಥವಾ ಪ್ರೆಸೆಂಟೇಶನ್ ಮಾಡುವ ಮುನ್ನ ಆತಂಕಗೊಂಡರೆ, ಅದು ಸ್ವಾಭಾವಿಕವಾಗಿ ಆ ಭಾಷಣ ಅಥವಾ ಪ್ರೆಸೆಂಟೇಶನ್ ಮುಗಿದ ತಕ್ಷಣ ಹೋಗಿ ಬಿಡುತ್ತದೆ. ಇಂತಹದೇ ಸನ್ನಿವೇಶಗಳು ಮತ್ತೆ ಮತ್ತೆ ನಿಮ್ಮನ್ನು ಕಾಡಿದಾಗ, ಸಂತೋಷಕರವಾದ ಜೀವನವನ್ನು ನಡೆಸಲು ನೀವು ಏನಾದರು ಪ್ರಯತ್ನ ಮಾಡಲೇ ಬೇಕಾಗಿರುತ್ತದೆ. ಪ್ರತಿದಿನ ನೀವು ಆತಂಕದ ಸಮಸ್ಯೆಗೆ ಗುರಿಯಾಗುತ್ತಿದ್ದಲ್ಲಿ, ಮಾನಸಿಕ ರೋಗ ತಙ್ಞರನ್ನು ಕಾಣಿ. ಒಂದು ವೇಳೆ ಸಾಮಾನ್ಯವಾದ ಆತಂಕವು ಕಾಣಿಸಿಕೊಂಡಾಗ ಅದನ್ನು ಸ್ವಾಭಾವಿಕ ಚಿಕಿತ್ಸೆಯ ಮೂಲಕ ಪರಿಹರಿಸಿಕೊಳ್ಳಿ.

ಉಸಿರಾಟದ ವ್ಯಾಯಾಮ ಮಾಡಿ
ಆತಂಕವು ಉಸಿರಾಟದ ವ್ಯಾಯಾಮದ ಮೂಲಕ ಪರಿಹರಿಸಿಕೊಳ್ಳಬಹುದು. ಆಳವಾದ ಉಸಿರಾಟ ದೇಹದ ಉದ್ವೇಗವನ್ನು ಕಡಿಮೆ ಮಾಡುತ್ತದೆ. ಒಂದು ಆರಾಮಕರವಾದ ಕುರ್ಚಿಯಲ್ಲಿ ಕುಳಿತುಕೊಂಡು ಮತ್ತು ಒಂದೊಂದೇ ಮೂಗಿನ ಹೊಳ್ಳೆಯಲ್ಲಿ ನಿಧಾನವಾಗಿ ಉಸಿರಾಡಲು ಆರಂಭಿಸಿ. ಉಸಿರಾಡುವಾಗ ಅಕ್ಕ ಪಕ್ಕದಲ್ಲಿ ನಡೆಯುವ ವಿಚಾರಗಳ ಬಗ್ಗೆ ಗಮನವಿಡಿ. ನಿಮ್ಮ ಶ್ವಾಸಕೋಶಗಳಲ್ಲಿ ತುಂಬಿಕೊಳ್ಳುವ ಗಾಳಿಯ ಬಗ್ಗೆ ಗಮನವಿಡಿ. ಈ ಉಸಿರಾಟವು ನಿಮ್ಮ ಆತಂಕವನ್ನು ಕಡಿಮೆ ಮಾಡುತ್ತದೆ.
ಚಾಮೊಮೈಲ್ ಟೀ ಸೇವಿಸಿ
ಅಧ್ಯಯನಗಳ ಪ್ರಕಾರ ಚಾಮೊಮೈಲ್ ಟೀಯು ಆತಂಕವನ್ನು ಕಡಿಮೆ ಮಾಡಲು ಸಹಕರಿಸುತ್ತದೆಯಂತೆ. ಚಾಮೊಮೈಲ್ ಟೀಯಲ್ಲಿ ಅಪಿಜೆನಿನ್, ಲುಟಿಯೊಲಿನ್ ಮತ್ತು ಬಿಸಾಬೊಲೊಲ್ ಎಂಬ ವಿಶ್ರಾಂತಿಯನ್ನು ನೀಡುವ ಅಂಶಗಳು ಇರುತ್ತವೆ. ಯಾರು ಈ ಟೀಯನ್ನು ಸೇವಿಸುತ್ತಾರೋ, ಅವರಿಗೆ ಉದ್ವೇಗ ಮತ್ತು ಆತಂಕದ ಮಟ್ಟಗಳು ಗಣನೀಯವಾಗಿ ಕಡಿಮೆಯಾಗುತ್ತದೆ. ಆತಂಕ ಅಥವಾ ಉದ್ವಿಗ್ನತೆಯನ್ನು ನಿಯಂತ್ರಿಸುವುದು ಹೇಗೆ?
ಲ್ಯಾವೆಂಡರನ್ನು ಮೂಸಿ ನೋಡಿ
ಲ್ಯಾವೆಂಡರನ್ನು ಮೂಸಿ ನೋಡುವುದರಿಂದ ಮನಸ್ಸು ನೆಮ್ಮದಿಯಾಗುತ್ತದೆ. ಲ್ಯಾವೆಂಡರ್ ಎಣ್ಣೆಯಿಂದ ಮಸಾಜ್ ಮಾಡಿಸಿಕೊಳ್ಳಿ. ನೀವು ಸ್ನಾನ ಮಾಡುವ ನೀರಿಗೆ ಲ್ಯಾವೆಂಡರ್ ಎಣ್ಣೆಯ ಕೆಲವು ಹನಿಗಳನ್ನು ಬೆರೆಸಿಕೊಳ್ಳಿ. ರಾತ್ರಿ ನಿದ್ದೆ ಚೆನ್ನಾಗಿ ಬರಲು ತಲೆ ದಿಂಬಿಗೆ ಕೆಲವು ಹನಿ ಲ್ಯಾವೆಂಡರ್ ಎಣ್ಣೆಯನ್ನು ಚಿಮುಕಿಸಿ.
ಯೋಗವನ್ನು ಮಾಡಿ
ಮೇಲ್ ಆನ್‌ಲೈನ್ ಪ್ರಕಾರ ಯೋಗವು ನಿಮ್ಮ ಮನಸ್ಸನ್ನು ಶಾಂತಗೊಳಿಸುತ್ತದೆ. ಇದು ನಿಮ್ಮ ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ. ಸಾಮಾನ್ಯವಾದ ಯೋಗಾಸನಗಳು ಸಹ ನಿಮ್ಮ ಆತಂಕವನ್ನು ದೂರ ಮಾಡುತ್ತವೆ ಎಂದು ತಿಳಿದುಬಂದಿದೆ.
ಸ್ನಾನ ಮಾಡುವ ನೀರಿಗೆ ಎಪ್ಸಂ ಉಪ್ಪನ್ನು ಬೆರೆಸಿ
ಎಪ್ಸಂ ಉಪ್ಪಿನಲ್ಲಿ ಮೆಗ್ನಿಶಿಯಂ ಅಂಶಗಳು ಇರುತ್ತವೆ. ಅದು ರಕ್ತದೊತ್ತಡವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ ಮತ್ತು ಒತ್ತಡವನ್ನು ನಿವಾರಿಸುತ್ತದೆ. ಎಪ್ಸಂ ಉಪ್ಪು ಆತಂಕವನ್ನು ಕಡಿಮೆ ಮಾಡಿ, ಮೂಡ್ ಅನ್ನು ಸರಿಪಡಿಸುತ್ತದೆ. ನಿಮ್ಮ ಮನಸ್ಸು ಮತ್ತಷ್ಟು ಪ್ರಶಾಂತಗೊಳ್ಳಲು ಸ್ನಾನ ಮಾಡುವಾಗ ನೀರಿಗೆ ಮತ್ತಷ್ಟು ಎಸೆನ್ಶಿಯಲ್ ಆಯಿಲ್ ಹನಿಗಳನ್ನು ಬೆರೆಸಿಕೊಳ್ಳಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
