For Quick Alerts
ALLOW NOTIFICATIONS  
For Daily Alerts

ತೂಕ ಇಳಿಸುವಲ್ಲಿ ಜೇನುತುಪ್ಪ ಮಾಡಲಿದೆ ಕಮಾಲಿನ ಮೋಡಿ!

By Madhumati Hiremath
|

ನಮ್ಮ ಸೌಂದರ್ಯ ವರ್ಧನೆಯಲ್ಲಿ ಜೇನಿನ ಪಾತ್ರ ಏನು ಎಂಬುದು ನಮಗೆಲ್ಲಾ ತಿಳಿದಿದೆ. ಆದರೆ ನಮ್ಮ ದೇಹದ ತೂಕ ಇಳಿಸಿಕೊಳ್ಳುವಲ್ಲಿಯೂ ಜೇನು ಪರಿಣಾಮಕಾರಿ ಎನ್ನುವುದು ನಿಮಗೆ ತಿಳಿದಿದೆಯೇ? ಅಧ್ಯಯನಗಳು ತೋರಿಸಿಕೊಟ್ಟಿರುವ ಪ್ರಕಾರ, ರಾತ್ರಿ ಮಲಗುವುದಕ್ಕೆ ಮೊದಲು ಹಾಗೆಯೇ ಸುಮ್ಮನೆ ಒ೦ದು ಚಮಚ ಭರ್ತಿ ಜೇನುತುಪ್ಪವನ್ನು ತೆಗೆದುಕೊ೦ಡರೆ ಸರಿಸುಮಾರು ಮೂರು ವಾರಗಳಲ್ಲಿ ನಿಮ್ಮ ದೇಹದ ತೂಕವು, ನೀವು ನಿಮ್ಮ ಬಟ್ಟೆಗಳನ್ನು ಸಲೀಸಾಗಿ ಧರಿಸಿಕೊಳ್ಳಬಲ್ಲ ಮಟ್ಟದವರೆಗೆ ಕಡಿಮೆಯಾಗುತ್ತದೆ. ನ೦ಬಲು ಬಹಳ ಕಷ್ಟ ಅನಿಸುತ್ತದೆಯಲ್ಲವೇ? ತೂಕನಷ್ಟಕ್ಕೆ ಸ೦ಬ೦ಧಿಸಿದ ಹಾಗೆ ಜೇನುತುಪ್ಪವು ಬಹು ಪರಿಣಾಮಕಾರಿಯಾಗಿ ಅದು ಹೇಗೆ ಕೆಲಸ ಮಾಡಲು ಸಾಧ್ಯವಾಗುತ್ತದೆ ಎ೦ಬುದಕ್ಕೆ ವಿವರಣೆಯು ಇಲ್ಲಿದೆ.

ಹನಿ ಡಯಟ್
ಅಧ್ಯಾಯನ ಪ್ರಕಾರ ಕ್ರೀಡಾಪಟುಗಳು ಜೇನುತುಪ್ಪದಂತಹ ಶರ್ಕರ ಪಿಷ್ಟ (ಫ್ರಕ್ಟೋಸ್) ಭರಿತ ಆಹಾರಗಳನ್ನು ಹೆಚ್ಚಾಗಿ ಸೇವಿಸುತ್ತಾರೆ. ಕಾರಣ ಅದು ಅವರ ದೇಹದಲ್ಲಿನ ಕೊಬ್ಬನ್ನು ಕರಗಿಸುವದಲ್ಲದೇ ದೇಹಕ್ಕೆ ಹೆಚ್ಚಿನ ಶಕ್ತಿಯನ್ನು ತುಂಬುತ್ತದೆ. ದೇಹದ ಯಕೃತ್, ಸಕ್ಕರೆಯನ್ನು ಅಥವಾ ಗ್ಲುಕೋಸ್ ಅನ್ನು ಉತ್ಪತ್ತಿ ಮಾಡುವ೦ತಾಗಲು ಜೇನುತುಪ್ಪವು ಒ೦ದು ಇ೦ಧನದ ರೂಪದಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಗ್ಲುಕೋಸ್, ಮೆದುಳಿನಲ್ಲಿ ಸಕ್ಕರೆಯ ಮಟ್ಟವನ್ನು ಹೆಚ್ಚಿಸಿ ತನ್ಮೂಲಕ ಮೆದುಳು ಕೊಬ್ಬನ್ನು ದಹಿಸಿಬಿಡಬಲ್ಲ ಹಾರ್ಮೋನುಗಳನ್ನು ಸ್ರವಿಸುವ೦ತೆ ಮೆದುಳನ್ನು ಪ್ರಚೋದಿಸುತ್ತದೆ.

How to lose belly fat and maintain a healthy weight with honey

ಜೇನಿನ ಪಥ್ಯದ ಪ್ರಯೋಜನವನ್ನು ನೀವೂ ಪಡೆಯಬೇಕಿದ್ದರೆ, ದಿನವಿಡೀ ನೀವು ಬಳಸುವ ಸಕ್ಕರೆಗೆ ಬದಲಾಗಿ ಜೇನುತುಪ್ಪವನ್ನು ಬಳಸಿ. ಜೊತೆಗೆ ಪ್ರತಿ ರಾತ್ರಿ ಮಲಗುವ ಮುನ್ನ ಬಿಸಿ ನೀರಿನಲ್ಲಿ ಮೂರು ಚಮಚ ಜೀನುತುಪ್ಪವನ್ನು ಬೆರಸಿ ಸೇವಿಸಬೇಕು. ಇವುಗಳ ಜೊತೆ ವ್ಯಾಯಾಮವನ್ನೂ ಮಾಡಲೇಬೇಕು (ವಾರದಲ್ಲಿ ಮೂರು ಬಾರಿ ವ್ಯಾಯಾಮ ಮಾಡಲು ಪ್ರಯತ್ನಿಸಿ) ನಿಯಮಿತವಾಗಿ ಹೀಗೆ ಮಾಡಿದಲ್ಲಿ ನಿಮ್ಮ ತೂಕ ಭಾರೀ ಗಾತ್ರದಲ್ಲಿ ಇಳಿಮುಖವಾಗುವುದನ್ನು ಗಮನಿಸಬಹುದು. ಮೆದುಳಿನಲ್ಲಿ ಯಾಂತ್ರಿಕವಾಗಿ ಉಂಟಾಗುವ ಸಕ್ಕರೆಯ ಹಸಿವು ಈ ಜೇನುತುಪ್ಪ ಸೇವನೆಯಿಂದ ನಿಯಂತ್ರಣಗೊಳ್ಳುವುದು ಎಂದು ಅಧ್ಯಯನಗಳಿಂದ ಸಾಭೀತಾಗಿದೆ.

ಇದು ಹೇಗೆ ಕೆಲಸ ಮಾಡುತ್ತದೆ?
ನಮ್ಮಲ್ಲಿ ಹೆಚ್ಚಿನವರು ಸಕ್ಕರೆ ಮತ್ತು ಸಂಸ್ಕರಿಸಿದ ಆಹಾರ ಸೇವಿಸುವದರಿಂದ ನಮ್ಮ ತೂಕದಲ್ಲಿ ಏರಿಕೆ ಕಂಡುಬರುತ್ತದೆ. ನಂತರ ಅದನ್ನು ಇಳಿಸಿಕೊಳ್ಳಲು ಹರಸಾಹಸ ಪಡುತ್ತೇವೆ. ಅಂತವರು ಮಲಗುವ ಮೊದಲು ಜೇನುತುಪ್ಪವನ್ನು ಸೇವಿಸುವದರಿಂದ, ಜೇನು ವಿಶ್ರಾಂತ ದೇಹದಲ್ಲಿನ ಹೆಚ್ಚುವರಿ ಕೊಬ್ಬನ್ನು ಕರಗಿಸುವ ಕಾರ್ಯ ಮಾಡುತ್ತದೆ. ನೀವು ಒಂದು ಹೆಜ್ಜೆ ಮುಂದೆ ಹೋಗಿ ಜೇನುತುಪ್ಪವನ್ನು ನಿಮ್ಮ ಆಹಾರಕ್ರಮವಾಗಿಸಿ ಕೊಂಡಲ್ಲಿ, ಸಕ್ಕರೆ ಬದಲಿಗೆ ಜೇನುತುಪ್ಪವನ್ನು ಬಳಸಲು ಪ್ರಾರಂಭಿಸಿದಾಗ, ಹೆಚ್ಚು ಸಿಹಿ ಸೇವನೆಗೆ ಒತ್ತಾಯಿಸುವ ನಿಮ್ಮ ಮೆದುಳಿನ ಸೂಚನೆಗಳನ್ನು ಜೇನು ಮತ್ತೊಮ್ಮೆ ಸಮಸ್ಥಿತಿಗೆ ತರುತ್ತದೆ.

ಜೇನಿನ ಪಥ್ಯದ ಫಲಿತಾಂಶಗಳು ಗಮನಾರ್ಹ. ಆದರೆ ಈ ಪಥ್ಯವನ್ನು ಮಾಡಬೇಕಾದರೆ ಕೆಲವು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳುವ ಅಗತ್ಯವಿದೆ. ಅವೇನೆಂದರೆ, ಎಲ್ಲಾ ರೀತಿಯ ಸಕ್ಕರೆಗೆ ಬದಲಾಗಿ ಜೇನುತುಪ್ಪವನ್ನು ಬಳಸಿ. ನಿಮ್ಮ ಆಹಾರಕ್ರಮದಿಂದ ಸಕ್ಕರೆಯನ್ನು ಸಂಪೂರ್ಣವಾಗಿ ತೆಗೆದುಹಾಕಿ. ಕೃತಕ ಸಿಹಿ (ಶುಗರ್ ಲೆಸ್) ಗಳ ಮೇಲೆ ಕೂಡ ಕಡಿವಾಣ ಹಾಕುವುದು ಅಗತ್ಯ. ನಿಮ್ಮ ಚಹಾ, ಕಾಫಿ ಮತ್ತು ಪಾಯಸಗಳಿಗೆ ಸಂಸ್ಕರಿಸಿದ ಸಕ್ಕರೆ ಬದಲಾಗಿ ಜೇನು ಬಳಸಿ. ನೀವು ಏನೇ ಅಡುಗೆ ಮಾಡಿದರೂ ಅದರಲ್ಲಿ ಸಕ್ಕರೆ ಬಳಸದಂತೆ ಹಿಡಿತ ಸಾಧಿಸುವುದು ಅವಶ್ಯಕ.

ಜಂಕ್ ಖಾದ್ಯಗಳನ್ನು ವರ್ಜಿಸಿ
ಜಂಕ್ ಖಾದ್ಯಗಳು ಸಂಸ್ಕರಿಸಿದ ಆಹಾರಗಳಾಗಿದ್ದು ಅವುಗಳು ಯಾವುದೇ ಕ್ಯಾಲೋರಿಗಳನ್ನು ಹೊಂದಿರುವುದಿಲ್ಲ. ಜೇನು ಪಥ್ಯದ ಪ್ರಯೋಜನವನ್ನು ಸಂಪೂರ್ಣವಾಗಿ ಪಡೆಯಬೇಕಿದ್ದಲ್ಲಿ ಜಂಕ್ ಖಾದ್ಯಗಳನ್ನು ಸಂಪೂರ್ಣವಾಗಿ ತ್ಯಜಿಸಬೇಕಾಗುತ್ತದೆ. ಜೇನುತುಪ್ಪ ಸೇವಿಸಿ ತೂಕ ಕಡಿಮೆಗೊಳಿಸಿ!

ಪ್ರೋಟೀನ್ ಗಳನ್ನು ಸೇವಿಸಿ
ಹೆಚ್ಚು ಪ್ರೋಟೀನ್‌ಯುಕ್ತ ಹೊಂದಿರುವ ಆಶ್ರಯಿಸಿ. ನಿಮ್ಮ ಪ್ರತಿ ಊಟದಲ್ಲೂ ಪ್ರೋಟೀನ್ ಯುಕ್ತ ಆಹಾರಗಳನ್ನು ಸೇವಿಸುವಂತೆ ನೋಡಿಕೊಳ್ಳಿ. ಇದು ರಕ್ತದಲ್ಲಿನ ಸಕ್ಕರೆ ಏರಿಕೆಯನ್ನು ತಪ್ಪಿಸುವುದಲ್ಲದೆ ಹೊಟ್ಟೆ ತುಂಬಿರುವಂತೆ ನೋಡಿಕೊಳ್ಳುತ್ತದೆ.

ಹಣ್ಣುಗಳ ಬಗ್ಗೆ ಎಚ್ಚರಿಕೆ ವಹಿಸಿ
ಪಥ್ಯದಲ್ಲಿರುವವರಿಗೆ ಹಣ್ಣುಗಳು ಒಂದು ಅನುಕೂಲಕರ ಆಯ್ಕೆ. ಆದರೆ ನೆನಪಿರಲಿ , ಅನೇಕ ಹಣ್ಣುಗಳಲ್ಲಿ ಸಕ್ಕರೆ ಮಟ್ಟವು ಹೆಚ್ಚಿಗೆ ಇರುವದರಿಂದ ನಿಮ್ಮ ಜೇನು ಪಥ್ಯದ ಪರಿಣಾಮವನ್ನು ಕುಂಠಿತಗೊಳಿಸಬಹುದು . ಹಣ್ಣಿನ ಸೇವನೆಯನ್ನೇ ಕಡಿಮೆ ಮಾಡಿಕೊಳ್ಳಿ ಅಥವಾ ಕಡಿಮೆ ಕಾರ್ಬ್ ಗಳನ್ನು ಆಯ್ಕೆ ಮಾಡಿಕೊಳ್ಳಿ. ಉದಾಹರಣೆಗೆ ಆಲೂಗಡ್ಡೆ ಸೇವನೆಯನ್ನು ಬಿಟ್ಟುಬಿಡಿ, ಆಲೂಗಡ್ಡೆಯ ಯಾವುದೇ ಪದಾರ್ಥವು ನಿಮ್ಮ ದೇಹದ ಇನ್ಸುಲಿನ್ ಏರಿಕೆಗೆ ಕಾರಣವಾಗಬಹುದು. ಜೇನು ಪಥ್ಯ ಮಾಡುವವರು ಆಲೂಗಡ್ಡೆಯನ್ನು ಬಿಡಲೇಬೇಕು.

English summary

How to lose belly fat and maintain a healthy weight with honey

According to research, you could drop a dress size in about three weeks, simply by taking a spoonful of honey before bed. Sounds too good to be true? Here's why honey works well for weight loss. have a look
Story first published: Tuesday, January 6, 2015, 15:42 [IST]
X
Desktop Bottom Promotion